Search
  • Follow NativePlanet
Share
» »ಮಸಾಲೆ, ಚಪ್ಪಲಿಗೆ ಮಾತ್ರವಲ್ಲ, ಈ ಕಾರಣಗಳಿಗೂ ಕೊಲ್ಲಾಪುರ ಭಾಳ ಫೇಮಸ್..!

ಮಸಾಲೆ, ಚಪ್ಪಲಿಗೆ ಮಾತ್ರವಲ್ಲ, ಈ ಕಾರಣಗಳಿಗೂ ಕೊಲ್ಲಾಪುರ ಭಾಳ ಫೇಮಸ್..!

ಸಾಮಾನ್ಯವಾಗಿ ಕೊಲ್ಲಾಪುರ ಅಥವಾ ಕೊಲ್ಹಾಪುರದ ಹೆಸರನ್ನು ನೀವೆಲ್ಲರೂ ಕೇಳಿರುತ್ತೀರಿ. ಕೊಲ್ಲಾಪುರ ಮಹಾರಾಷ್ಟ್ರದ ಒಂದು ನಗರ. ಪುಣೆಯಿಂದ 230 ಕಿಮೀ ದೂರದಲ್ಲಿರುವ ಈ ನಗರವು ಮರಾಠರ ಕಾಲದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅಷ್ಟೇ ಅಲ್ಲ, ಪ್ರಾಚೀನ ದೇವಾಲಯಗಳು ಮತ್ತು ಅರಮನೆಗಳಿಗೆ ನೆಲೆಯಾಗಿದೆ. ಇದನ್ನು ಮಸಾಲೆಗಳ ರಾಜಧಾನಿ ಎಂದೂ ಕರೆಯುತ್ತಾರೆ. ಅಂದಹಾಗೆ ಈ ನಗರದ ಇತಿಹಾಸವು ತುಂಬಾ ಆಸಕ್ತಿದಾಯಕವಾಗಿದೆ.

ಪ್ರಾಚೀನ ಕಾಲದಲ್ಲಿ ಈ ನಗರವನ್ನು ಅನೇಕ ಇತರ ಹೆಸರುಗಳಿಂದ ಕರೆಯಲಾಗುತ್ತಿತ್ತು. ಒಂದು ಕಾಲದಲ್ಲಿ ಇದು ಅಂಬಾಬಾಯಿ ಎಂಬ ಹೆಸರಿನಿಂದಲೂ ಜನರಲ್ಲಿ ಜನಪ್ರಿಯವಾಗಿತ್ತು. ಆದರೆ ಈ ನಗರಕ್ಕೆ ಕೊಲ್ಲಾಪುರ ಎಂಬ ಹೆಸರು ಹೇಗೆ ಬಂತು ಎಂದು ನೀವು ಎಂದಾದರೂ ಕೇಳಿದ್ದೀರಾ? ಹಾಗಾದರೆ ಕೊಲ್ಲಾಪುರಕ್ಕೆ ಕೊಲ್ಲಾಪುರ ಎಂಬ ಹೆಸರು ಹೇಗೆ ಮತ್ತು ಇದು ಯಾವ ಕಾರಣಕ್ಕಾಗಿ ಪ್ರಸಿದ್ಧಿ ಪಡೆದಿದೆ ಎಂದು ನೋಡೋಣ.

ಕೊಲ್ಲಾಪುರ ಎಂಬ ಹೆಸರು ಏಕೆ ಬಂತು?

ಕೊಲ್ಲಾಪುರ ಎಂಬ ಹೆಸರು ಏಕೆ ಬಂತು?

ಕೊಲ್ಹಾಸುರನು ದೇವಿ ಮಹಾಲಕ್ಷ್ಮಿಯಿಂದ ಕೊಲ್ಲಲ್ಪಟ್ಟ ರಾಕ್ಷಸ. ಪೌರಾಣಿಕ ಕಥೆಗಳ ಪ್ರಕಾರ, ಕೊಲ್ಹಾಸುರ ಎಂಬ ರಾಕ್ಷಸನು ಈ ನಗರದಲ್ಲಿ ವಾಸಿಸುತ್ತಿದ್ದನು. ಆತನ ದುಷ್ಕೃತ್ಯಗಳಿಂದ ಇಲ್ಲಿ ವಾಸಿಸುವ ಜನರು ತೊಂದರೆಗೀಡಾಗಿದ್ದರು. ಜನರು ಮಹಾಲಕ್ಷ್ಮಿ ದೇವಿಯ ಬಳಿ ರಾಕ್ಷಸನ ದುಷ್ಕೃತ್ಯಗಳಿಂದ ತಮ್ಮನ್ನು ರಕ್ಷಿಸುವಂತೆ ಪ್ರಾರ್ಥಿಸಿದರು. ಈ ಪ್ರಾರ್ಥನೆಯ ನಂತರ, ಕೊಲ್ಹಾಸುರ ರಾಕ್ಷಸ ಮತ್ತು ಮಹಾಲಕ್ಷ್ಮಿ ದೇವಿಯ ನಡುವೆ 9 ದಿನಗಳವರೆಗೆ ಯುದ್ಧವು ಮುಂದುವರೆಯಿತು. ಇದರಲ್ಲಿ ಕೊಲ್ಹಾಸುರ ರಾಕ್ಷಸನು ಸೋತನು. ನಂತರ ಈ ನಗರವನ್ನು ತನ್ನ ಹೆಸರಿನಿಂದ ಕರೆಯಬೇಕೆಂದು ತಾಯಿಯನ್ನು ಬೇಡಿಕೊಂಡನು. ಅಂದಿನಿಂದ ಈ ನಗರದ ಹೆಸರನ್ನು ಕೊಲ್ಹಾಸೂರದಿಂದ ಕೊಲ್ಹಾಪುರ ಅಥವಾ ಕೊಲ್ಲಾಪುರ ಎಂದು ಬದಲಾಯಿಸಲಾಯಿತು.

ಕೊಲ್ಲಾಪುರ ಚಪ್ಪಲಿಗಳಿಗೂ ಹೆಸರುವಾಸಿ

ಕೊಲ್ಲಾಪುರ ಚಪ್ಪಲಿಗಳಿಗೂ ಹೆಸರುವಾಸಿ

ಕೊಲ್ಲಾಪುರವು ತನ್ನ ಕರಕುಶಲ ವಸ್ತುಗಳಿಂದಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಅದರಲ್ಲೂ ಕೊಲ್ಲಾಪುರಿ ಚಪ್ಪಲಿಗಳು ಬಹಳ ಪ್ರಸಿದ್ಧವಾಗಿವೆ. ಬಹಳ ಸಿಂಪಲ್ ಆಗಿರುವ ಈ ಚಪ್ಪಲಿಗಳ ಗುಣಮಟ್ಟ ಚೆನ್ನಾಗಿದೆ. ವಿಶಿಷ್ಟ ವಿನ್ಯಾಸದಲ್ಲಿರುವ ಈ ಚಪ್ಪಲಿಗಳನ್ನು ಕುಶಲಕರ್ಮಿಗಳು ಕೈಯಿಂದ ತಯಾರಿಸುತ್ತಾರೆ. ಇವುಗಳಲ್ಲದೆ ಕೊಲ್ಲಾಪುರದ ಆಭರಣಗಳು ಮತ್ತು ಸೀರೆಗಳು ಸಹ ಬಹಳ ಜನಪ್ರಿಯವಾಗಿವೆ. ನೀವು ಕೊಲ್ಲಾಪುರಕ್ಕೆ ಹೋದರೆ, ಈ ವಸ್ತುಗಳನ್ನು ಖರೀದಿಸುವುದನ್ನು ಮರೆಯದಿರಿ. ಒಂದು ವೇಳೆ ಹಾಗೆ ಬಂದರೆ ನಿಮ್ಮ ಕೊಲ್ಲಾಪುರ ಪ್ರವಾಸವು ಅಪೂರ್ಣವಾದೀತು.

ರಂಕಲಾ ಉತ್ಸವ

ರಂಕಲಾ ಉತ್ಸವ

ಕೊಲ್ಲಾಪುರವು ಮತ್ತೊಂದು ಸಾಂಸ್ಕೃತಿಕ ಹಬ್ಬವಾದ ರಂಕಾಲ ಉತ್ಸವಕ್ಕೆ ಹೆಸರುವಾಸಿಯಾಗಿದೆ. ಇದನ್ನು ಮಹಾನಗರ ಪಾಲಿಕೆ ಆಯೋಜಿಸುತ್ತದೆ. ಈ ಹಬ್ಬವು ಈ ಪ್ರದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ವೀಕ್ಷಿಸಲು ಅವಕಾಶವನ್ನು ನೀಡುತ್ತದೆ. ಈ ಐದು ದಿನಗಳ ಈವೆಂಟ್‌ನಲ್ಲಿ ನೇರ ಪ್ರದರ್ಶನಗಳು, ಸಂಗೀತ ಕಚೇರಿಗಳಂತಹ ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಈ ಕಾರಣಗಳಿಗಾಗಿಯೂ ಪ್ರಸಿದ್ಧ

ಈ ಕಾರಣಗಳಿಗಾಗಿಯೂ ಪ್ರಸಿದ್ಧ

ಮಹಾಲಕ್ಷ್ಮಿ ದೇವಾಲಯ: ಇದು ಶಕ್ತಿಪೀಠ. ದಂತಕಥೆಗಳ ಪ್ರಕಾರ, ಅದೃಷ್ಟದ ದೇವತೆ ಲಕ್ಷ್ಮಿ ಈ ದೇವಾಲಯದಲ್ಲಿ ನೆಲೆಸಿದ್ದಾಳೆ.

ಜ್ಯೋತಿಬಾ ದೇವಾಲಯ

ಜ್ಯೋತಿಬಾ ದೇವಾಲಯ

ಜ್ಯೋತಿಬಾ ದೇವಾಲಯವು ಕೊಲ್ಲಾಪುರದ ಬಳಿಯ ವಾಡಿ ರತ್ನಗಿರಿಯಲ್ಲಿದೆ. ಈ ದೇವಾಲಯವು ತುಂಬಾ ಸುಂದರವಾದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಕೊಲ್ಲಾಪುರದಿಂದ ವಾಯುವ್ಯಕ್ಕೆ ಸುಮಾರು 18 ಕಿಮೀ ದೂರದಲ್ಲಿದೆ. ಆದ್ದರಿಂದ ನೀವು ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನ ಮತ್ತು ಜ್ಯೋತಿಬಾ ದೇವಸ್ಥಾನವನ್ನು ಒಂದೇ ದಿನದಲ್ಲಿ ಸುಲಭವಾಗಿ ಭೇಟಿ ಕೊಡಬಹುದು. ಚೈತ್ರ ಮತ್ತು ವೈಶಾಖದ ತಿಂಗಳ ಹುಣ್ಣಿಮೆಯ ರಾತ್ರಿ ವಾರ್ಷಿಕ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಲಕ್ಷಾಂತರ ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಕೊಲ್ಲಾಪುರ ಆಹಾರ

ಕೊಲ್ಲಾಪುರ ಆಹಾರ

ಕೊಲ್ಲಾಪುರ ಆಹಾರಕ್ಕಾಗಿಯೂ ಜನಪ್ರಿಯತೆ ಗಳಿಸಿದೆ. ಇದು ಆಹಾರ ಪ್ರಿಯರ ಪರಿಪೂರ್ಣ ತಾಣವಾಗಿದೆ. ಕೇವಲ ಸಸ್ಯಾಹಾರ ಮಾತ್ರವಲ್ಲದೆ ಮಾಂಸಾಹಾರವನ್ನು ತಯಾರಿಸುವ ಕಲೆಯನ್ನು ನಗರವು ಕರಗತ ಮಾಡಿಕೊಂಡಿದೆ. ನೀವು ಮಾಂಸಾಹಾರಿಗಳಾಗಿದ್ದರೆ ಖಂಡಿತವಾಗಿ ತಂಬರ ಮತ್ತು ಪಂಢರ ರಸವನ್ನು ಸವಿಯಿರಿ. ಸಸ್ಯಾಹಾರಿಗಳು ಖಾಸ್‌ಬಾಗ್ ಮೈದಾನ, ಕೊಲ್ಹಾಪುರಿ ಭೇಲ್, ಮಿಸಾಲ್-ಪಾವ್ ಮತ್ತು ವಡಾ-ಪಾವ್‌ನಲ್ಲಿ ರಾಜಾ ಭೇಲ್, ಶಾಮ್ ಚಾ ವಡಾವನ್ನು ಸವಿಯಬಹುದು. ಸೂರ್ಯಾಸ್ತದ ನಂತರ, ರಂಕಲಾ ಸರೋವರದ ದಡದಲ್ಲಿರುವ ಚೌಪಾಟಿಯಲ್ಲಿರುವ ಅನೇಕ ಆಹಾರ ಮಳಿಗೆಗಳಿಗೆ ಭೇಟಿ ನೀಡುವ ಮೂಲಕ ವಿವಿಧ ಭಕ್ಷ್ಯಗಳನ್ನು ಪ್ರಯತ್ನಿಸಬಹುದು.

ದಂಗಲ್ ನೋಡಲೇಬೇಕು…

ದಂಗಲ್ ನೋಡಲೇಬೇಕು…

ಖಂಡಿತ, ನೀವು ದಂಗಲ್ ವೀಕ್ಷಿಸಲು ಇಷ್ಟಪಡುತ್ತೀರೋ ಇಲ್ಲವೋ, ಆದರೆ ನೀವು ಖಂಡಿತವಾಗಿಯೂ ಕೊಲ್ಲಾಪುರದ ದಂಗಲ್ ಅನ್ನು ನೋಡಲೇಬೇಕು. ಇದು ಮಹಾರಾಷ್ಟ್ರದ ಗುರುತು. ಕೊಲ್ಲಾಪುರವು ಭಾರತೀಯ ಕುಸ್ತಿಯ ಕೇಂದ್ರವಾಗಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕುಸ್ತಿ ಪಂದ್ಯಗಳು ನಡೆಯುವ ಹಲವಾರು ಅಖಾಡಗಳಿವೆ. ಮಹಾಲಕ್ಷ್ಮಿ ದೇವಸ್ಥಾನದ ಬಳಿ ಇರುವ ಮೋತಿಬಾಗ್ ಅಖಾರಾ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.

ಕೊಲ್ಲಾಪುರಿ ಮಸಾಲೆ

ಕೊಲ್ಲಾಪುರಿ ಮಸಾಲೆ

ನೀವಿಲ್ಲಿಗೆ ಬಂದಾಗ ಖಂಡಿತವಾಗಿ ಮಸಾಲೆಗಳನ್ನು ತೆಗೆದುಕೊಳ್ಳಬೇಕು. ಇಲ್ಲಿ ಸಾಂಬಾರ ಪದಾರ್ಥಗಳ ರುಚಿ ಬೇರೆಯದ್ದೇ ಆಗಿದೆ ಎನ್ನುತ್ತಾರೆ. ರುಚಿಯು ಸಾಸ್‌ನಿಂದ ಗ್ರೇವಿಗೆ ಬದಲಾಗುತ್ತದೆ. ಬಹುತೇಕರು ಮಸಲೆ ವಿಚಾರ ಬಂದರೆ ಕೊಲ್ಲಾಪುರದ ಉದಾಹರಣೆ ತೆಗೆದುಕೊಳ್ಳುತ್ತಾರೆ. ಆಲೂಗಡ್ಡೆ, ಬಟಾಣಿ ಮತ್ತು ಇತರ ಮೊಗ್ಗುಗಳ ಮಸಾಲೆಯುಕ್ತ ಆಹಾರ ಕೂಡ ಜನಪ್ರಿಯ ಆಹಾರವಾಗಿದೆ. ಮಹಾರಾಷ್ಟ್ರದಲ್ಲಿ ಪ್ರಸಿದ್ಧ ಮಿಸಾಲ್ ಕಂಡುಬರುವುದು ಇಲ್ಲಿ ಮಾತ್ರ.

ಚಿಕ್ಕ ಪಟ್ಟಣ ಪನ್ಹಾಲಾ

ಚಿಕ್ಕ ಪಟ್ಟಣ ಪನ್ಹಾಲಾ

ಪನ್ಹಾಲಾ ಮಹಾರಾಷ್ಟ್ರದ ಅತ್ಯಂತ ಚಿಕ್ಕ ಪಟ್ಟಣವಾಗಿದ್ದು, ಕೊಲ್ಲಾಪುರದಿಂದ ಸುಮಾರು 20 ಕಿಮೀ ದೂರದಲ್ಲಿದೆ. ಇಲ್ಲಿರುವ ಸ್ಥಳೀಯ ಕಲೆ ಮತ್ತು ನೀರಿನ ಟ್ಯಾಂಕ್ ಈ ಸ್ಥಳದ ವಿಶೇಷತೆಯಾಗಿದೆ. ಛತ್ರಪತಿ ಶಿವಾಜಿ ತನ್ನ ಜೀವನದ ಸುಮಾರು ಐದು ವರ್ಷಗಳನ್ನು ಇಲ್ಲಿ ಕಳೆದರು ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X