Search
  • Follow NativePlanet
Share
» »ಕೋಲಾರದ ಈ ಗರುಡನ ದರ್ಶನ ಪಡೆದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ!

ಕೋಲಾರದ ಈ ಗರುಡನ ದರ್ಶನ ಪಡೆದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ!

ಕೋಲಾರ ಜಿಲ್ಲೆಯಲ್ಲಿರುವ ಗರುಡ ದೇವಸ್ಥಾನವು ಒಂದು ಮಹಿಮಾನ್ವಿತ ದೇವಸ್ಥಾನವಾಗಿದ್ದು, ಸಾಕಷ್ಟು ಸಂಖ್ಯೆಯ ಭಕ್ತರು ಇಲ್ಲಿಗೆ ಬರುತ್ತಾರೆ. ಒಂದು ಕೈಯಲ್ಲಿ ನಾರಾಯಣ ಇನ್ನೊಂದು ಕೈಯಲ್ಲಿ ಲಕ್ಷ್ಮೀಯನ್ನು ಕಾಣಬಹುದು. ಇಲ್ಲಿನ ಗರುಡ ದೇವನ ದರ್ಶನ ಮಾಡಿದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

ಈ ದೇವಾಲಯವು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಲ್ಲಿದೆ ಕೊಲಾದೇವಿ ದೇವಸ್ಥಾನ . ಮುಳಬಾಗಿಲಿನಿಂದ 14 ಕಿ.ಮಿ ದೂರದಲ್ಲಿದೆ. ವಿಷ್ಣುವಿನ ಆಜ್ಞೆಯಂತೆ ಜಟಾಯು ಗರುಡನಾಗಿ ಈ ಸ್ಥಳದಲ್ಲಿ ನೆಲೆಸಿದ್ದಾನೆ. ಇಲ್ಲಿನ ಗರುಡನ ದರ್ಶನದಿಂದ ಅದೃಷ್ಟ ಪ್ರಾಪ್ತಿಯಾಗುತ್ತಂತೆ .

ಜಯಚಾಮರಾಜೇಂದ್ರ ಒಡೆಯರು ಇಲ್ಲಿ ಬಂದು ಪ್ರಾರ್ಥಿಸಿದ ನಂತರ ಶ್ರೀಕಂಠದತ್ತ ಒಡೆಯರ್ ಜನಿಸಿದ್ರಂತೆ!ಜಯಚಾಮರಾಜೇಂದ್ರ ಒಡೆಯರು ಇಲ್ಲಿ ಬಂದು ಪ್ರಾರ್ಥಿಸಿದ ನಂತರ ಶ್ರೀಕಂಠದತ್ತ ಒಡೆಯರ್ ಜನಿಸಿದ್ರಂತೆ!

ಜಟಾಯುವಿನ ರೆಕ್ಕೆ ಬಿದ್ದ ಜಾಗ

ಜಟಾಯುವಿನ ರೆಕ್ಕೆ ಬಿದ್ದ ಜಾಗ

ರಾವಣನ ಸೀತಾಪಹರಣ ಸಂದರ್ಭದಲ್ಲಿ ರಾವಣ ಕತ್ತರಿಸಿದ ಜಟಾಯುವಿನ ರೆಕ್ಕೆ ಬಿದ್ದ ಜಾಗ ಇದಾಗಿದೆ ಎನ್ನಲಾಗುತ್ತದೆ. ರಾವಣ ಜಟಾಯುವನ್ನು ಕೊಲ್ಲಲ್ಪಟ್ಟ ಸ್ಥಳ ಇದಾಗಿದ್ದು ಇದನ್ನು ಕೊಲಾದೇವಿ ಎನ್ನಲಾಗುತ್ತದೆ.

ಸರ್ಪದೋಷ ನಿವಾರಣೆ

ಸರ್ಪದೋಷ ನಿವಾರಣೆ

ಸಾವಿರ ವರ್ಷ ಹಿಂದಿನ ದೇವಸ್ಥಾನ ಇದಾಗಿದೆ. ಎಂಟು ರೀತಿಯ ಸರ್ಪದೋಷ ನಿವಾರಣೆಯಾಗುತ್ತದೆ. ಸಂತಾನ ಭಾಗ್ಯ, ಕಲ್ಯಾಣ ಭಾಗ್ಯ, ರೋಗಗಳು ಗುಣವಾಗುತ್ತವಂತೆ. ಮಾಟ ಮಂತ್ರ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ.

ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ !ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ !

ಬ್ರಹ್ಮರಥೋತ್ಸವ

ಬ್ರಹ್ಮರಥೋತ್ಸವ

ಗರುಡನ ದರ್ಶನ ಪಡೆದ್ರೆ ಬೇಡಿದ್ದನ್ನು ನೀಡುತ್ತಾರೆ ಎನ್ನಲಾಗುತ್ತದೆ. ದ್ರಾವಿಡ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಪ್ರತಿವರ್ಷ ಕೊನೆಯ ಶ್ರಾವಣ ಶನಿವಾರದಂದು ಕೊಲಾದೇವಿ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ.

ಬ್ರಹ್ಮಾಸ್ತ್ರವನ್ನು ಹೊಂದಿರುವ ಹನುಮ

ಬ್ರಹ್ಮಾಸ್ತ್ರವನ್ನು ಹೊಂದಿರುವ ಹನುಮ

ಇಲ್ಲಿ ಆಂಜನೇಯನೂ ಇದ್ದಾನೆ. ಇಲ್ಲಿನ ಆಂಜನೇಯ ಬಹಳ ವಿಶೇಷವಾಗಿದೆ. ಬೇರೆಲ್ಲೂ ಇಂತಹ ಆಂಜನೇಯ ಕಾಣಸಿಗೋದಿಲ್ಲ. ಕಾರಣ, ಆಂಜನೇಯ ಹಲ್ಲು ಹಾಗೂ ಕೈಯಲ್ಲಿ ಬ್ರಹ್ಮಾಸ್ತ್ರವನ್ನು ಹೊಂದಿದ್ದಾನೆ.

ವಿಶೇಷ ಪೂಜೆ

ವಿಶೇಷ ಪೂಜೆ

ಪ್ರತಿ ಶನಿವಾರ ಹಾಗೂ ಭಾನುವಾರ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿಗೆ ಬಂದಿರುವ ಭಕ್ತರಲ್ಲಿ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ. ನೆರೆ ರಾಜ್ಯದ ಭಕ್ತರೂ ಇಲ್ಲಿನ ಗರುಡನ ದರ್ಶನ ಪಡೆಯಲು ಬರುತ್ತಾರೆ.

ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ ನರಸಿಂಹನ ದರ್ಶನ ಪಡೆದಿದ್ದೀರಾ?ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ ನರಸಿಂಹನ ದರ್ಶನ ಪಡೆದಿದ್ದೀರಾ?

ತಲುಪುವುದು ಹೇಗೆ ?

ತಲುಪುವುದು ಹೇಗೆ ?

ಬೆಂಗಳೂರಿನಿಂದ ಕೋಲಾರಕ್ಕೆ ಸುಮಾರು 75 ಕಿ.ಮೀ ದೂರವಿದೆ. ಕೊಲಾದೇವಿ ಮುಲಾಬಾಗಿಲುವಿನಿಂದ ಸುಮಾರು 14 ಕಿ.ಮೀ. ದೂರದಲ್ಲಿದೆ
ರಸ್ತೆಯ ಮೂಲಕ: ಬೆಂಗಳೂರಿನಿಂದ ಗರುಡ ಸ್ವಾಮಿ ದೇವಸ್ಥಾನವನ್ನು ತಲುಪಲು, ನೀವು NH4 ಮೂಲಕ ಪ್ರಯಾಣಿಸಬೇಕು ಮತ್ತು ಕೋಲಾರವನ್ನು ದಾಟಬೇಕಾಗುತ್ತದೆ. ನಂತರ ಮುಡಿಯನೂರು ಕ್ರಾಸ್ ತಲುಪಲು ಮತ್ತು ನಂತರ ಕೊಲಾದೇವಿ ಕಡೆಗೆ ತೆಗೆದುಕೊಳ್ಳಬಹುದು.
ರೈಲು ಮೂಲಕ: ಬೆಂಗಳೂರಿನಿಂದ ಕೋಲಾರಕ್ಕೆ ಹಲವಾರು ರೈಲುಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X