Search
  • Follow NativePlanet
Share
» »ಕೋದಂಡರಾಮ ದೇವಾಲಯ; ಕಳ್ಳರು ನಿರ್ಮಿಸಿದ ದೇವಾಲಯವಿದು!

ಕೋದಂಡರಾಮ ದೇವಾಲಯ; ಕಳ್ಳರು ನಿರ್ಮಿಸಿದ ದೇವಾಲಯವಿದು!

By Manjula Balaraj Tantry

ಆಂಧ್ರಪ್ರದೇಶವು ತನ್ನಲ್ಲಿಯ ಪ್ರಾಚೀನ ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ತನ್ನಲ್ಲಿ ಹೊಂದಿರುವುದರಿಂದ ಭಾರತದ ಆಧ್ಯಾತ್ಮಿಕ ರಾಜ್ಯವೆನ್ನುವ ಖ್ಯಾತಿಯನ್ನು ಕೂಡಾ ಪಡೆದಿದೆ. ಆದುದರಿಂದ ಈ ಸುಂದರ ರಾಜ್ಯವು ದೇವಾಲಯಗಳು ಮತ್ತು ಆಧ್ಯಾತ್ಮಿಕ ತಾಣಗಳಿಂದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಕಲಿಯಲು ಬಯಸುವ ಹಿಂದೂ ಭಕ್ತರಿಂದ ಮತ್ತು ಕೂತೂಹಲವುಳ್ಳ ಪ್ರವಾಸಿಗರಿಂದ ಹೆಚ್ಚಾಗಿ ಭೇಟಿಕೊಡಲ್ಪಡುತ್ತದೆ.

ಅಂತಹದೇ ಸ್ಥಳಗಳಲ್ಲಿ ಒಂದಾದ ಕಡಪ ಜಿಲ್ಲೆಯ ವೋಂತಿಮಿಟ್ಟದಲ್ಲಿರುವ ಕೋದಂಡರಾಮ ದೇವಾಲಯವೂ ಕೂಡಾ ಒಂದಾಗಿದೆ ಇದೊಂದು ಪ್ರಮುಖ ಹಿಂದೂ ಅದರಲ್ಲೂ ವೈಷ್ಣವ ಪಂಥದವರಿಗೆ ಒಂದು ಮುಖ್ಯವಾದ ಯಾತ್ರಿಸ್ಥಳವೆಂದು ಪರಿಗಣಿಸ್ಪಡುತ್ತದೆ.

ಬಿಯರ್ ಯೋಗಾ, ಬಿರಿಯಾನಿ ಯೋಗಾ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿಬಿಯರ್ ಯೋಗಾ, ಬಿರಿಯಾನಿ ಯೋಗಾ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಈ ಪ್ರಾಚೀನ ದೇವಾಲಯದ ರಚನೆ ಮತ್ತು ಅಸ್ತಿತ್ವದ ಬಗ್ಗೆ ಅನೇಕ ದಂತಕಥೆಗಳಿವೆ. ಆದುದರಿಂದ ಆಂಧ್ರಪ್ರದೇಶದ ವೋಂತಿಮಿಟ್ಟದಲ್ಲಿರುವ ಕೋದಂಡರಾಮ ದೇವಾಲಯಕ್ಕೆ ಭೇಟಿ ನೀಡಿ ಇಲ್ಲಿಯ ಸುಂದರವಾದ ವಾಸ್ತುಶಿಲ್ಪ ಮತ್ತು ಇತಿಹಾಸದ ಅನ್ವೇಷಣೆ ಮಾಡಿದರೆ ಹೇಗಿರಬಹುದು? ಈ ಪ್ರಾಚೀನ ದೇವಾಲಯಗಳ ಬಗ್ಗೆ ತಿಳಿಯಲು ಕೆಳಗಿನ ವಿವರಣೆ ಗಮನಿಸಿ

1. ಕೋದಂಡರಾಮ ದೇವಾಲಯಕ್ಕೆ ಭೇಟಿ ಕೊಡಲು ಸೂಕ್ತ ಸಮಯ

1. ಕೋದಂಡರಾಮ ದೇವಾಲಯಕ್ಕೆ ಭೇಟಿ ಕೊಡಲು ಸೂಕ್ತ ಸಮಯ

Trulyajays

ಕೋದಂಡರಾಮ ದೇವಾಲಯದ ಸುತ್ತಮುತ್ತಲಿನ ಪ್ರದೇಶವು ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನವನ್ನು ಹೊಂದಿರುವುದರಿಂದ ಸಾಮ್ಯಾನ್ಯವಾಗಿ ಪ್ರವಾಸಿಗರಿಂದ ಹೆಚ್ಚಾಗಿ ಭೇಟಿಕೊಡಲ್ಪಡುವುದಿಲ್ಲ. ಆದರೂ ಇಲ್ಲಿಗೆ ವರ್ಷವಿಡೀ ನೂರಾರು ಜನ ಹಿಂದೂ ಭಕ್ತರು ದಿನಂಪ್ರತಿ ಭೇಟಿ ಕೊಡುತ್ತಲೇ ಇರುತ್ತಾರೆ.
ನೀವು ಕೋದಂಡರಾಮ ದೇವಾಲಯದ ತಪ್ಪಲಿನಲ್ಲಿ ಅದರ ಸುತ್ತಮುತ್ತಲಿನ ಸೌಂದರ್ಯವನ್ನು ಮತ್ತು ಅಲ್ಲಿಯ ಪರಿಸರವನ್ನು ತಂಪಾಗಿ ಮತ್ತು ಆಹ್ಲಾದಕರವಾಗಿ, ಅನುಭವಿಸಬೇಕೆಂದಿದ್ದಲ್ಲಿ , ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಫ಼ೆಬ್ರವರಿ ತಿಂಗಳಿನ ಕೊನೆಯವರೆಗೆ.

2. ಈ ಸ್ಥಳದ ಬಗ್ಗೆ ಮತ್ತು ಅದರ ರಚನೆಯ ಕುರಿತಾದ ಸಣ್ಣ ಮಾಹಿತಿ

2. ಈ ಸ್ಥಳದ ಬಗ್ಗೆ ಮತ್ತು ಅದರ ರಚನೆಯ ಕುರಿತಾದ ಸಣ್ಣ ಮಾಹಿತಿ

Sriniketana

ಸುಂದರವಾದ ಹಸಿರು ಬೆಟ್ಟಗಳು ಮತ್ತು ಪ್ರಶಾಂತವಾದ ಆಧ್ಯಾತ್ಮಿಕ ಸ್ಥಳದಿಂದ ಆವೃತವಾದ ರಾಮದೇವರಿಗೆ ಅರ್ಪಿತವಾದ ಮೋಂತಿಮಿಟ್ಟ ಪಟ್ಟಣದಲ್ಲಿ ಕೋದಂಡರಾಮ ದೇವಾಲಯವು ನೆಲೆಸಿದೆ. ಮತ್ತು ಇದನ್ನು ಚೋಳರ ಆಳ್ವಿಕೆಯ ಅವಧಿಯಲ್ಲಿ ಮತ್ತು 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ತಮ್ಮ ಜೀವನಕ್ಕಾಗಿ ದಾರಿಹೋಕರನ್ನು ಮತ್ತು ಸ್ಥಳೀಯರನ್ನು ಲೂಟಿ ಮಾಡುತ್ತಿದ್ದ ವೋಂಟುಡು ಮತ್ತು ಮಿಟ್ಟುಡು ಎಂಬ ಇಬ್ಬರು ಕಳ್ಳರಿಂದ ಈ ದೇವಾಲಯದ ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ.

ಈ ಇಬ್ಬರು ಕಳ್ಳರಿಗೂ ರಾಮದೇವರು ಒಮ್ಮೆ ಕನಸಿನಲ್ಲಿ ಬಂದು ಕಳ್ಳತನದ ದುರಾಭ್ಯಾಸವನ್ನು ಬಿಟ್ಟು ತಮಗೆ ಅರ್ಪಿತವಾದ ಒಂದು ದೇವಾಲಯವನ್ನು ನಿರ್ಮಾಣ ಮಾಡಬೇಕೆಂದು ಸೂಚಿಸಿದರು ಅವರ ಆದೇಶದ ಮೇರೆಗೆ ಈ ಕಳ್ಳರು ದೇವಾಲಯವನ್ನು ನಿರ್ಮಿಸಿ ರಾಮದೇವರ ಪರಮಭಕ್ತರಾದರೆಂದು ಹೇಳಲಾಗುತ್ತದೆ.

ಆ ನಂತರದಿಂದ ಈ ದೇವಾಲಯವು ಹಿಂದೂ ಭಕ್ತರಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು ಮತ್ತು ಇಂದು ಪ್ರತೀವರ್ಷ ಸಾವಿರಾರು ಪ್ರವಾಸಿಗರಿಂದ ಭೇಟಿಕೊಡಲ್ಪಡುತ್ತದೆ ಮತ್ತು ಇದು ರಾಷ್ಟ್ರೀಯ ಪ್ರಾಮುಖ್ಯತೆ ಇರುವ ಸ್ಮಾರಕವೂ ಹೌದು .

3. ಕೊದಂಡರಾಮ ದೇವಾಲಯದ ಬಗ್ಗೆ ವಿಶೇಷವೇನು?

3. ಕೊದಂಡರಾಮ ದೇವಾಲಯದ ಬಗ್ಗೆ ವಿಶೇಷವೇನು?

Joshri

ವಾಸ್ತುಶಿಲ್ಪ ಸೌಂದರ್ಯತೆ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿರುವ ಕೋದಂಡರಾಮ ದೇವಾಲಯವು ಪ್ರವಾಸಿಗರಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ದ್ರಾವಿಡ ಶೈಲಿಯಲ್ಲಿರುವ ಮೇರುಶಿಲ್ಪವಾಗಿರುವ ಇದು ಒಂದು ಆಯತಾಕಾರದ ಅಂಗಳ, ಮೂರು ಗೋಪುರಗಳು ಮತ್ತು ಮಂಟಪ ಎಂದು ಕರೆಯಲ್ಪಡುವ ಭವ್ಯ ಸಭಾಂಗಣಗಳನ್ನು ಹೊಂದಿರುವ ರಚನೆಯಾಗಿದೆ.

ಈ ಮಂಟಪವನ್ನು 32 ಸ್ತಂಭಗಳ ಆಧಾರದಿಂದ ನಿರ್ಮಿತವಾಗಿದೆ ಮತ್ತು ಹಲವಾರು ಸುಂದರ ಮಾದರಿಗಳು ಮತ್ತು ಅಪರೂಪದ ವಿನ್ಯಾಸಗಳಿಂದ ಇದರ ಸಂಕೀರ್ಣವು ಅಲಂಕೃತವಾಗಿದೆ. ನೀವು ವಾಸ್ತು ಶಿಲ್ಪ ಮತ್ತು ಇತಿಹಾಸವನ್ನು ಪ್ರೀತಿಸುವವರಾದಲ್ಲಿ ಆಂಧ್ರಪ್ರದೇಶದ ಕೋದಂಡರಾಮ ದೇವಾಲಯವು ನಿಮಗೆ ಸೂಕ್ತವಾದ ತಾಣವಾಗಿದೆ.

4. ಇಲ್ಲಿಗೆ ಹತ್ತಿರದಲ್ಲಿರುವ ಆಸಕ್ತಿದಾಯಕ ಸ್ಥಳಗಳು

4. ಇಲ್ಲಿಗೆ ಹತ್ತಿರದಲ್ಲಿರುವ ಆಸಕ್ತಿದಾಯಕ ಸ್ಥಳಗಳು

Kashyap Kondamudi

ಕೋದಂಡರಾಮ ದೇವಾಲಯದ ಪ್ರದೇಶವು ಪ್ರಕೃತಿ ಪ್ರೇಮಿಗಳಿಗೆ ಒಂದು ಉತ್ತಮವಾದ ಅನುಭವವನ್ನು ಕೊಡುತ್ತದೆ ಇದರ ಹೊರತಾಗಿಯೂ ಇಲ್ಲಿಗೆ ಹಿಂದೂ ಭಕ್ತರು ಮತ್ತು ಇತಿಹಾಸಪ್ರೀಯರು ಇಲ್ಲಿ ಬೆಟ್ಟಗಳು ಮತ್ತು ಕಾಡುಗಳ ರೂಪದಲ್ಲಿರುವ ತಾಜಾತನದ ಅನುಭವಕ್ಕಾಗಿ ಭೇಟಿಕೊಡುತ್ತಾರೆ. ಗುಡ್ಡಗಾಡು ಪ್ರದೇಶಗಳ ಉಪಸ್ಥಿತಿಯ ಕಾರಣದಿಂದಾಗಿ, ನೀವು ವೋಂಟಿಮಿಟ್ಟಾ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗ್ ಮಾಡಬಹುದು.

ಈ ದೇವಾಲಯದ ಆವರಣದಲ್ಲಿ ರಾಮತೀರ್ಥಂ ಮತ್ತು ಲಕ್ಷ್ಮಣ ತೀರ್ಥಂ ಎಂಬ ಎರಡು ಸಣ್ಣ ಕೆರೆಗಳಿವೆ. ಶಾಂತಚಿತ್ತ ವನ್ನು ಪಡೆಯಲು ಇವು ಪರಿಪೂರ್ಣ ಸ್ಥಳಗಳು. ಇವುಗಳ ಜೊತೆಗೆ ನೀವು ಇಲ್ಲಿಗೆ ಹತ್ತಿರವಿರುವ ಸ್ಥಳಗಳಿಗೂ ಭೇಟಿ ಕೊಡಬಹುದಾಗಿದೆ ಅವುಗಳಲ್ಲಿ ಚಿಂತಕುಂಟ ಗುಹೆಗಳು, ಬ್ರಹ್ಮಂ ಸಾಗರ ಜಲಾಶಯ ಮತ್ತು ಗಂದೀಕೋಟಾ ಪ್ರಮುಖವಾದವುಗಳು.

5. ಕೋದಂಡರಾಮ ದೇವಾಲಯವನ್ನು ತಲುಪುವುದು ಹೇಗೆ?

5. ಕೋದಂಡರಾಮ ದೇವಾಲಯವನ್ನು ತಲುಪುವುದು ಹೇಗೆ?

Sriniketana

ವಾಯುಮಾರ್ಗ: ದೇವಸ್ಥಾನದ ಸಮೀಪವಿರುವ ಪ್ರಮುಖ ವಾಣಿಜ್ಯ ವಿಮಾನ ನಿಲ್ದಾಣವು ತಿರುಪತಿಯಲ್ಲಿ ದ್ದು ಇದು 110 ಕಿ.ಮೀ ದೂರದಲ್ಲಿದೆ. ನೀವು ಒಮ್ಮೆ ವಿಮಾನ ನಿಲ್ದಾಣವನ್ನು ತಲುಪಿದ ನಂತರ ಅಲ್ಲಿಂದ ಟ್ಯಾಕ್ಸಿ ನೇರವಾಗಿ ಬಸ್ಸಿನ ಮೂಲಕ ಕೋದಂಡರಾಮ ದೇವಾಲಯವು ನೆಲೆಸಿರುವ ವೊಂತಿಮಿಟ್ಟಾಗೆ ಪ್ರಯಾಣ ಮಾಡಬಹುದಾಗಿದೆ.

ರೈಲು ಮೂಲಕ : ರೈಲು ಮೂಲಕ: 25 ಕಿ.ಮೀ ದೂರದಲ್ಲಿ ಕಡಪಾದಲ್ಲಿ ಹತ್ತಿರದ ರೈಲು ನಿಲ್ದಾಣವಿದೆ. ಈ ನಿಲ್ದಾಣದಿಂದ ನಿಮ್ಮ ಗಮ್ಯಸ್ಥಾನವನ್ನು ತಲುಪಲು ನಿಮಗೆ 40 ನಿಮಿಷಗಳ ಸರಾಸರಿ ಸಮಯವನ್ನು ತೆಗೆದುಕೊಳ್ಳುತ್ತದೆ.

ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ವೋಂತಿಮಿಟ್ಟಾದಲ್ಲಿರುವ ಕೋದಂಡರಾಮ ದೇವಾಲಯವನ್ನು ರಸ್ತೆ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X