Search
  • Follow NativePlanet
Share
» »ಮುಂಚಿತವಾಗಿ ಟಿಕೇಟ್ ಬುಕ್ಕಿಂಗ್ ಮಾಡುವಾಗ ರೈಲ್ವೆ ಇಲಾಖೆಯ ಈ ರೂಲ್ಸ್‌ ನೆನಪಿಟ್ಟುಕೊಳ್ಳಿ

ಮುಂಚಿತವಾಗಿ ಟಿಕೇಟ್ ಬುಕ್ಕಿಂಗ್ ಮಾಡುವಾಗ ರೈಲ್ವೆ ಇಲಾಖೆಯ ಈ ರೂಲ್ಸ್‌ ನೆನಪಿಟ್ಟುಕೊಳ್ಳಿ

ಹೆಚ್ಚಿನವರು ರೈಲಿನಲ್ಲಿ ಓಡಾಡುವುದನ್ನು ಇಷ್ಟಪಡುತ್ತಾರೆ. ರೈಲಿನಲ್ಲಿ ಓಡಾಡುವಾಗ ಟಿಕೇಟ್ ಮುಂಚಿತವಾಗಿ ಬುಕ್ ಮಾಡಿರುವುದು ಒಳ್ಳೆಯದು. ಬಹಳಷ್ಟು ಜನರಿಗೆ ರೈಲಿನ ನಿಯಮಗಳ ಬಗ್ಗೆ ಅರಿವಿರುವುದಿಲ್ಲ. ಹಾಗಾಗಿ ಇಂದು ನಾವು ರೈಲಿನ ಕೆಲವು ನಿಯಮಗಳ ಬಗ್ಗೆ ತಿಳಿಸಲಿದ್ದೇವೆ. ಇದು ರೈಲಿನಲ್ಲಿ ಓಡಾಡುವ ಪ್ರತಿಯೊಬ್ಬ ಪ್ರಯಾಣಿಕನಿಗೂ ತಿಳಿದಿರಲೇ ಬೇಕು.

ಒಂದು ಪಿಎನ್‌ಆರ್‌ನಲ್ಲಿ ಕೇವಲ ಆರು ಮಂದಿ

ಒಂದು ಪಿಎನ್‌ಆರ್‌ನಲ್ಲಿ ಕೇವಲ ಆರು ಮಂದಿ

ಇಂಡಿಯನ್ ರೈಲ್ವೆ ನಿಯಮದ ಪ್ರಕಾರ ಒಂದು ಪಿಎನ್‌ಆರ್‌ನಲ್ಲಿ ಕೇವಲ ಆರು ಮಂದಿಗೆ ಮಾತ್ರವೇ ಟಿಕೇಟ್ ಬುಕ್ ಮಾಡಬಹುದು. ಅದರಲ್ಲೂ ಆ ಎಲ್ಲಾ ವ್ಯಕ್ತಿಗಳು ಒಂದೇ ಡೆಸ್ಟಿನೇಶನ್‌ನಿಂದ ಒಂದೇ ಸ್ಥಳಕ್ಕೆ ಪ್ರಯಾಣ ಮಾಡುತ್ತಿದ್ದರೆ ಮಾತ್ರ. ಒಂದು ತಿಂಗಳಲ್ಲಿ ವ್ಯಕ್ತಿಯು 6 ಬೇರೆ ಬೇರೆ ಟಿಕೇಟ್ ಬುಕ್ ಮಾಡಬಹುದು.

ಇಲ್ಲಿ ಜಾತ್ರೆ ದಿನ ಬೆತ್ತಲಾಗಿ ಹೋದ್ರೇನೆ ಉತ್ಸವ ಸಂಪೂರ್ಣವಾಗೋದಂತೆ !ಇಲ್ಲಿ ಜಾತ್ರೆ ದಿನ ಬೆತ್ತಲಾಗಿ ಹೋದ್ರೇನೆ ಉತ್ಸವ ಸಂಪೂರ್ಣವಾಗೋದಂತೆ !

 ಒರಿಜಿನಲ್ ಐಡಿ

ಒರಿಜಿನಲ್ ಐಡಿ

ಒಂದೇ ಪಿಎನ್‌ಆರ್‌ನಲ್ಲಿ ಬುಕ್ ಮಾಡಿರುವ ಟಿಕೇಟ್‌ಗಳಲ್ಲಿ ಪ್ರಯಾಣಿಸುವವರಿಗೆ ಒಬ್ಬರು ತಮ್ಮ ಒರಿಜಿನಲ್ ಐಡಿ ಹಿಡಿದಿಟ್ಟುಕೊಳ್ಳಬೇಕು. ಇದನ್ನು ಟಿಕೇಟ್ ಚೆಕ್‌ ಮಾಡುವವರಿಗೆ ತೋರಿಸಬೇಕು. ಒಂದು ವೇಳೆ ಒರಿಜಿನಲ್ ಐಡಿ ಕೊಂಡೊಯ್ಯದಿದ್ದರೆ ಆ ಟಿಕೇಟ್‌ನಲ್ಲಿ ಪ್ರಯಾಣಿಸುವ ಎಲ್ಲಾ ವ್ಯಕ್ತಿಗಳು ಟಿಕೇಟ್ ರಹಿತ ಪ್ರಯಾಣ ಮಾಡುತ್ತಿದ್ದಾರೆಂದು ಪರಿಗಣಿಸಲಾಗುವುದು. ದಂಡ ತೆರಬೇಕಾಗುತ್ತದೆ.

ಬುಕ್ಕಿಂಗ್‌ ಮಾಡಬಹುದು

ಬುಕ್ಕಿಂಗ್‌ ಮಾಡಬಹುದು

0.25 ಗಂಟೆಯಿಂದ ರಾತ್ರಿ 11:45ರ ವರೆಗೆ ಆನ್‌ಲೈನ್‌ ಟಿಕೇಟ್ ಬುಕ್ಕಿಂಗ್‌ ಮಾಡಬಹುದು. ಭಾನುವಾರವೂ ಆನ್‌ಲೈನ್ ಬುಕ್ಕಿಂಗ್ ಮಾಡಬಹುದಾಗಿದೆ.

ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?

ತತ್ಕಾಲ್ ಟಿಕೇಟ್‌

ತತ್ಕಾಲ್ ಟಿಕೇಟ್‌

ತತ್ಕಾಲ್ ಟಿಕೇಟ್‌ನ ಪ್ರಯೋಜನ ಫಸ್ಟ್‌ ಎಸಿ ಬಿಟ್ಟು ಉಳಿದೆಲ್ಲಾ ಕ್ಲಾಸ್‌ಗಳಲ್ಲಿ ಅನ್ವಯವಾಗುತ್ತದೆ. ಇನ್ನೂ ಲೇಡಿಸ್ ಕೋಟಾದ ಪ್ರಯೋಜನ ಸ್ಲೀಪರ್ ಕ್ಲಾಸ್ ಹಾಗೂ ಸೆಕೆಂಡ್ ಸೀಟಿಂಗ್‌ನಲ್ಲಿ ಉಪಲಬ್ದವಿದೆ.

120 ದಿನ ಮುಂಚಿತವಾಗಿ ಮುಂಗಡ ಬುಕ್ಕಿಂಗ್

120 ದಿನ ಮುಂಚಿತವಾಗಿ ಮುಂಗಡ ಬುಕ್ಕಿಂಗ್

120 ದಿನಕ್ಕೆ ಮುಂಚಿತವಾಗಿ ಮುಂಗಡ ಬುಕ್ಕಿಂಗ್ ಮಾಡಬಹುದು. ಈ ರೂಲ್ಸ್‌ ಎಲ್ಲಾ ಕ್ಲಾಸ್‌ಗಳಿಗೆ ಅನ್ವಯವಾಗುತ್ತದೆ.

200 ರೂ.ಗೆ ಕೊಡೈಕೆನಾಲ್‌ನಲ್ಲಿ ವಸತಿ, 20ರೂ.ಗೆ ಚಿಕನ್ ಫ್ರೈ200 ರೂ.ಗೆ ಕೊಡೈಕೆನಾಲ್‌ನಲ್ಲಿ ವಸತಿ, 20ರೂ.ಗೆ ಚಿಕನ್ ಫ್ರೈ

 ಸಮಯದಲ್ಲಿ ಬದಲಾವಣೆ

ಸಮಯದಲ್ಲಿ ಬದಲಾವಣೆ

ಟಿಕೇಟ್‌ಗಳಲ್ಲಿ ನೀಡಲಾಗಿರುವ ಸಮಯ ಕೇವಲ ಸಾಂಕೇತಿಕವಾಗಿದೆ. ಅದರಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಹಾಗಾಗಿ ರೈಲ್ವೆ ಸ್ಟೇಶನ್‌ಗೆ ಹೋಗುವ ಮೊದಲು ಸಮಯವನ್ನು ಕನ್ಫರ್ಮ್ ಮಾಡಿಕೊಳ್ಳಿ.

 ಆನ್‌ಲೈನ್‌ ಟಿಕೇಟ್‌

ಆನ್‌ಲೈನ್‌ ಟಿಕೇಟ್‌

ಆನ್‌ಲೈನ್‌ ಟಿಕೇಟ್‌ನ್ನು ರೈಲು ಹೊರಡುವ 30 ನಿಮಿಷಗಳ ಮೊದಲಿನವರೆಗೆ ಬುಕ್ ಮಾಡಬಹುದು.

ಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆ

 ರಿಸರ್ವೇಶನ್‌ ಫೀಸ್

ರಿಸರ್ವೇಶನ್‌ ಫೀಸ್

ಎಲ್ಲಾ ರೈಲುಗಳಿಗೆ ರಿಸರ್ವೇಶನ್‌ ಫೀಸ್ ಬೇರೆ ಬೇರೆಯಾಗಿರುತ್ತದೆ. ಕ್ಲಾಸ್‌ಗೆ ಅನುಗುಣವಾಗಿ ಶುಲ್ಕ ನಿಗಧಿಗೊಳಿಸಲಾಗಿರುತ್ತದೆ.

ಸೀಟನ್ನು ಬೇರೆಯವರಿಗೆ ನೀಡುವ ಹಕ್ಕು

ಸೀಟನ್ನು ಬೇರೆಯವರಿಗೆ ನೀಡುವ ಹಕ್ಕು

ಒಂದು ವೇಳೆ ಪ್ರಯಾಣಿಕರು ಹತ್ತಬೇಕಾದ ಸ್ಟೇಶನ್‌ನಿಂದ ಹತ್ತಿಲ್ಲವೆಂದಾದಲ್ಲಿ ಆ ಸೀಟನ್ನು ಬೇರೆಯವರಿಗೆ ನೀಡುವ ಹಕ್ಕು ಟಿಸಿಗೆ ಇದೆ. ಒಂದು ವೇಳೆ ಯಾತ್ರಿ ಯಾವುದೋ ಬೇರೆ ಸ್ಟೇಶನ್‌ನಿಂದ ಹತ್ತುವುದಾದರೆ ಅದರ ಸೂಚನೆಯನ್ನು ಮುಂಚಿತವಾಗಿ ನೀಡಬೇಕು.

ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ ನರಸಿಂಹನ ದರ್ಶನ ಪಡೆದಿದ್ದೀರಾ?ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ ನರಸಿಂಹನ ದರ್ಶನ ಪಡೆದಿದ್ದೀರಾ?

ಟಿಕೇಟ್ ಬೇರೆಯವರಿಗೆ ನೀಡುವಂತಿಲ್ಲ

ಟಿಕೇಟ್ ಬೇರೆಯವರಿಗೆ ನೀಡುವಂತಿಲ್ಲ

ಬುಕ್ ಮಾಡಿರುವ ಟಿಕೇಟನ್ನು ಬೇರೆ ವ್ಯಕ್ತಿಗೆ ನೀಡಲಾಗುವುದಿಲ್ಲ. ಒಂದು ವೇಳೆ ಹಾಗೇ ಮಾಡಿದಲ್ಲಿ ನಿಯಮಕ್ಕನುಗುಣವಾಗಿ ವಿಚಾರಭೆ ನಡೆಸಲಾಗುವುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X