Search
  • Follow NativePlanet
Share
» »ದಾವಣಗೆರೆಯಲ್ಲಿರುವ ಈ ಕೆರೆಯನ್ನು ಸೂಳೆಕೆರೆ ಅಂತಾರೆ ಯಾಕೆ ಗೊತ್ತಾ?

ದಾವಣಗೆರೆಯಲ್ಲಿರುವ ಈ ಕೆರೆಯನ್ನು ಸೂಳೆಕೆರೆ ಅಂತಾರೆ ಯಾಕೆ ಗೊತ್ತಾ?

ಸೂಳೆಕೆರೆ ಹೆಸರು ಕೇಳಲು ಒಂಥರಾ ವಿಚಿತ್ರವಾಗಿದೆ. ದಾವಣಗೆರೆ ನಗರ ಕೇಂದ್ರದಿಂದ 40 ಕಿ.ಮೀ ಹಾಗೂ ಚೆನ್ನಗಿರಿಯಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಕೆರೆಗೆ ಶಾಂತಿ ಸಾಗರ ಎಂಬ ಹೆಸರನ್ನಿಡಲಾಗಿದ್ದರೂ ಸಹ ಬಹುತೇಕ ಜನರಲ್ಲಿ ಇದು ಸೂಳೆಕೆರೆ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ.

ಈ ಹೆಸರು ಬರಲು ಕಾರಣವೇನು?

ಈ ಹೆಸರು ಬರಲು ಕಾರಣವೇನು?

PC: Siddarth.P.Raj

ಕೆರೆಗೆ ಈ ಹೆಸರು ಬರಲು ಒಂದು ದಂತಕಥೆಯು ಚಾಲ್ತಿಯಲ್ಲಿದೆ. ಅದರ ಪ್ರಕಾರ, ಹಿಂದೆ ಈ ಪ್ರದೇಶವನ್ನಾಳುತ್ತಿದ್ದ ಅರಸ ವಿಕ್ರಮರಾಯ ಹಾಗೂ ನೂತನದೇವಿ ದಂಪತಿಗಳಿಗೆ ಯಾವುದೇ ಸಂತಾನವಿರಲಿಲ್ಲ. ಹೀಗಾಗಿ ರಾಜ ಬಿಲಹಳ್ಳಿಯ ಗೌಡನೊಬ್ಬನ ಮಗನನ್ನು ದತ್ತು ಪಡೆದಿದ್ದ ಹಾಗೂ ಆತ ರಾಗಿ ರಾಯನಾಗಿ ಹೆಸರುಗಳಿಸಿದ್ದ.

ಕೆರೆ ನಿರ್ಮಿಸಿದ ಶಾಂತವ್ವ

ಕೆರೆ ನಿರ್ಮಿಸಿದ ಶಾಂತವ್ವ

PC: Siddarth.P.Raj
ಹೀಗಿರುವಾಗ, ದೈವ ಭಕ್ತನಾಗಿದ್ದ ಅರಸನಿಗೆ ಬಹಳ ಸಮಯದ ನಂತರ ಹೆಣ್ಣು ಸಂತಾನವಾಯಿತು. ಇದರಿಂದ ಸಂತಸಗೊಂಡ ಅವನು ಆಕೆಗೆ ಶಾಂತವ್ವೆ ಎಂಬ ಹೆಸರನ್ನಿಟ್ಟು ಬೆಳೆಸಿದ. ಶಾಂತವ್ವೆಯು ಬೆಳೆಯುತ್ತ ತನ್ನ ರಾಜ್ಯದಲ್ಲಿ ನೀರಿನ ಬವಣೆಯಿದ್ದದ್ದನ್ನು ಕಂಡು ಕೆರೆ ಯೊಂದನ್ನು ನಿರ್ಮಿಸಿದಳು.

ಸೂಳೆ ಕೆರೆ

ಸೂಳೆ ಕೆರೆ

PC: Siddarth.P.Raj

ದುರದೃಷ್ಟವಶಾತ್ ಆ ಕೆರೆಯು ಅತಿ ವಿಶಾಲವಾಗಿ ರೂಪಗೊಂಡು ಶಾಂತವ್ವೆಯ ತಂದೆಯ ರಾಜ್ಯವನ್ನೇ ಮುಳುಗಿಸಿ ಅಪಾರ ಪ್ರಮಾಣ ಜೀವಹಾನಿಯಾಯಿತು. ಇದರಿಂದ ತನ್ನ ಮಗಳ ಮೇಲೆ ಕೋಪಗೊಂಡ ರಾಜ ಆಕೆಗೆ ಸೂಳೆ ಎಂದು ಶಪಿಸಿದನಂತೆ. ಹಾಗಾಗಿ ಕೆರೆಯು ನಂತರದ ಸಮಯದಲ್ಲಿ ಸೂಳೆ ಕೆರೆ ಎಂದೇ ಕರೆಯಲ್ಪಟ್ಟಿತು ಎನ್ನಲಾಗುತ್ತದೆ.

 ಶಾಂತಿ ಸಾಗರ

ಶಾಂತಿ ಸಾಗರ

PC: Siddarth.P.Raj
ಈ ಕೆರೆಯ ಹೆಸರು ಬಳಸಯೋಗ್ಯವಲ್ಲದ ಕಾರಣದಿಂದಾಗಿ ಇದನ್ನು ಶಾಂತಿ ಸಾಗರ ಎಂದು ಮರುನಾಮಕರಣ ಮಾಡಲಾಗಿದೆ. ಆದರೂ ಸಹ ಸಾಕಷ್ಟು ಜನರು ಇದರ ಮೊದಲಿನ ಹೆಸರಿನಿಂದಲೇ ಇದನ್ನು ಗುರುತಿಸುತ್ತಾರೆ.

ದೊಡ್ಡ ಕೆರೆ

ದೊಡ್ಡ ಕೆರೆ

PC: Siddarth.P.Raj
ಇತಿಹಾಸಕಾರರ ಪ್ರಕಾರ ಈ ಕೆರೆಯು ಸುಮಾರು 11 ಅಥವಾ 12 ನೇಯ ಶತಮಾನದಲ್ಲಿ ನಿರ್ಮಾಣಗೊಂಡಿದ್ದಾಗಿರಬಹುದೆಂದು ಹೇಳಲಾಗಿದೆ. ಹೀಗಾಗಿ 800 ಕ್ಕೂ ಅಧಿಕ ವರ್ಷಗಳ ಭವ್ಯ ಇತಿಹಾಸವನ್ನು ಈ ಕೆರೆ ಹೊಂದಿದೆ ಎಂದು ಹೇಳಬಹುದು. ಇದು ಏಷಿಯಾದಲ್ಲೇ ಅತಿ ದೊಡ್ಡ ಕೆರೆಗಳ ಪೈಕಿ ಒಂದಾಗಿದೆ ಹಾಗೂ ಕರ್ನಾಟಕದ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಯನ್ನೂ ಸಹ ಪಡೆದಿದೆ.

ಕೆರೆಯ ವಿಸ್ತೀರ್ಣವೆಷ್ಟು?

ಕೆರೆಯ ವಿಸ್ತೀರ್ಣವೆಷ್ಟು?

ಏನಿಲ್ಲವೆಂದರೂ ಈ ಕೆರೆಯ ಸುತ್ತಳತೆಯೆ ಸುಮಾರು 40 ಕಿ.ಮೀ ಗಳಷ್ಟು ಉದ್ದವಿದೆ. ಆರುವರೆ ಸಾವಿರ ಎಕರೆಗಿಂತಲೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಈ ಕೆರೆಯ ನೀರು ಆವರಿಸಿದ್ದು ಸುಮಾರು ನಾಲ್ಕುವರೆ ಸಾವಿರ ಎಕರೆಗಳಷ್ಟು ನೀರಾವರಿ ಭೂಮಿ ಹಾಗೂ 50 ಹಳ್ಳಿಗಳಿಗೆ ನೀರಿನ ಮೂಲವಾಗಿದೆ.

ಹರಿದ್ರಾ ನದಿ

ಹರಿದ್ರಾ ನದಿ

ಈ ಕೆರೆಯು 20 ಚದರ ಮೈಲುಗಳಷ್ಟು ವಿವಿಧ ನೀರಿನ ಮೂಲಗಲಿಂದ ಒಳಹರಿವು ಪಡೆಯುತ್ತದೆ ಹಾಗೂ ಅವುಗಳಲ್ಲಿ ತುಂಗಭದ್ರಾ ನದಿಯ ಉಪನದಿಯಾದ ಹರಿದ್ರಾ ಪ್ರಮುಖವಾಗಿದೆ.

ಸಿದ್ಧೇಶ್ವರ ದೇವಾಲಯ

ಸಿದ್ಧೇಶ್ವರ ದೇವಾಲಯ

ಶಾಂತಿ ಸಾಗರದ ಒಡ್ಡಿನ ಉತ್ತರ ದಿಕ್ಕಿನಲ್ಲಿ ಒಂದು ಚಿಕ್ಕ ಗುಡ್ಡವೊಂದಿದ್ದು ಅದರ ಮೇಲೆ ಸಿದ್ಧೇಶ್ವರನಿಗೆ ಮುಡಿಪಾದ ದೇವಾಲಯವಿದೆ. ಈ ದೇವಾಲಯವನ್ನು ಕಲ್ಲಿನ ದ್ವಾರದ ಮೂಲಕ ಪ್ರವೇಶಿಸಬಹುದಾಗಿದೆ.ದಾವಣಗೆರೆಯಿಂದ ಅಥವಾ ಚೆನ್ನಗಿರಿಯಿಂದ ಸುಲಭವಾಗಿ ಈ ಕೆರೆಗೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X