Search
  • Follow NativePlanet
Share
» »ಇಲ್ಲಿನ ಮಹಾಲಕ್ಷ್ಮೀಯನ್ನು ಪೂಜಿಸಿದ್ರೆ ಸಿರಿವಂತರಾಗ್ತಾರಂತೆ !

ಇಲ್ಲಿನ ಮಹಾಲಕ್ಷ್ಮೀಯನ್ನು ಪೂಜಿಸಿದ್ರೆ ಸಿರಿವಂತರಾಗ್ತಾರಂತೆ !

ಮಹಾಲಕ್ಷ್ಮೀ, ಹೆಸರೇ ಸೂಚಿಸುವಂತೆ ಐಶ್ವರ್ಯದ ದೇವತೆ. ಮಹಾಲಕ್ಷ್ಮೀಯನ್ನು ಪೂಜಿಸಿದರೆ ಮನೆಯು ಸದಾ ಧನ, ಸಂಪತ್ತಿನಿಂದ ಕೂಡಿರುತ್ತದೆ ಎನ್ನುತ್ತಾರೆ. ಅಂತಹದ್ದೇ ಒಂದು ಮಹಾಲಕ್ಷ್ಮೀ ದೇವಾಲಯದ ಬಗ್ಗೆ ಇಂದು ನಾವು ತಿಳಿಸಲಿದ್ದೇವೆ. ಈ ಮಹಾಲಕ್ಷ್ಮೀಯನ್ನು ಪೂಜಿಸಿದಲ್ಲಿ ಶ್ರೀಮಂತರಾಗುತ್ತಾರಂತೆ.

ಎಲ್ಲಿದೆ ಈ ದೇವಾಲಯ ?

ಎಲ್ಲಿದೆ ಈ ದೇವಾಲಯ ?

ಗೋರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಕರ್ನಾಟಕದ ತುಮಕೂರು ಜಿಲ್ಲೆಯ ಮಹಾಲಕ್ಷ್ಮಿ ದೇವಿಗೆ ಅರ್ಪಿತವಾದ ದೇವಾಲಯವಾಗಿದೆ. ಗೋರವನಹಳ್ಳಿಯಲ್ಲಿನ ದೇವರಾದ ಮರಿಕಂಬ ಮತ್ತು ಮಂಚಲಾ ನಾಗಪ್ಪ ದೇವತೆಗಳನ್ನೂ ಈ ದೇವಸ್ಥಾನವು ಹೊಂದಿದೆ. ಗೋರವಾನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನವು ಹಸಿರು ಸುತ್ತಲೂ ಇದೆ.

ಬೆಂಗಳೂರಲ್ಲೂ ರಜನಿಕಾಂತ್ , ಅಮಿತಾಬ್‌ ಬಚ್ಚನ್ ಸಿನಿಮಾ ಶೂಟಿಂಗ್ ಆಗಿದೆ ಗೊತ್ತಾ?ಬೆಂಗಳೂರಲ್ಲೂ ರಜನಿಕಾಂತ್ , ಅಮಿತಾಬ್‌ ಬಚ್ಚನ್ ಸಿನಿಮಾ ಶೂಟಿಂಗ್ ಆಗಿದೆ ಗೊತ್ತಾ?

ದೇವಸ್ಥಾನದ ಇತಿಹಾಸ

ದೇವಸ್ಥಾನದ ಇತಿಹಾಸ

ಅಬ್ಬಯ್ಯ ಎನ್ನುವ ಬಡ ವ್ಯಕ್ತಿಯು ಮನೆಯಲ್ಲಿ ಮಹಾಲಕ್ಷ್ಮೀಯನ್ನು ಪೂಜಿಸಲು ಆರಂಭಿಸಿದನು. ಆ ನಂತರದಿಂದ ಆತ ಶ್ರೀಮಂತನಾದನು. ಚಾರಿಟಿಯನ್ನು ಪ್ರಾರಂಭಿಸಿದನು. ಆತ ತನ್ನ ಮನೆಯ ಹೆಸರನ್ನು ಲಕ್ಷ್ಮೀ ನಿವಾಸ ಎಂದು ಇಟ್ಟಿದ್ದಾನೆ.
ನಂತರ ಅಬ್ಬಯ್ಯನ ಸಹೋದರ ತೋಡಪ್ಪ ಅಬ್ಬಯ್ಯನ ಚಾರಿಟಿ ಕೆಲಸದಲ್ಲಿ ಕೈ ಜೋಡಿಸಿದನು.

ನಿರ್ಲಕ್ಷ್ಯಕ್ಕೆ ಒಳಗಾದ ದೇವಾಲಯ

ನಿರ್ಲಕ್ಷ್ಯಕ್ಕೆ ಒಳಗಾದ ದೇವಾಲಯ

ಅಬ್ಬಯ್ಯನ ಸಾವಿನ ನಂತರ ತೋಡಪ್ಪ ಲಕ್ಷ್ಮೀಯ ಪೂಜೆಯನ್ನು ಮುಂದುವರಿಸಿದನು.. ಒಂದು ದಿನ ತೋಡಪ್ಪರ ಕನಸಿನಲ್ಲಿ ಬಂದ ಲಕ್ಷ್ಮೀಯು ತನಗೆ ದೇವಸ್ಥಾನವನ್ನು ಕಟ್ಟಿಸುವಂತೆ ಆದೇಶ ನೀಡುತ್ತಾಳೆ. ಆಕೆಯ ಆದೇಶದಂತೆ ತೋಡಪ್ಪ ದೇವಸ್ಥಾನವನ್ನು ನಿರ್ಮಿಸುತ್ತಾನೆ. ತೋಡಪ್ಪನ ನಂತರ ಚೌಡಯ್ಯ ಪೂಜೆಯನ್ನು ಪ್ರಾರಂಭಿಸುತ್ತಾನೆ. ಆದರೆ ೧೯೧೦ರಲ್ಲಿ ಈ ದೇವಸ್ಥಾನವು ನಿರ್ಲಕ್ಷ್ಯಕ್ಕೆ ಒಳಪಟ್ಟಿತು.

ಈ ದೇವಸ್ಥಾನದಲ್ಲಿ ಸ್ಟ್ಯಾಂಪ್ ಪೇಪರ್‌ನಲ್ಲಿ ತಮ್ಮ ಬೇಡಿಕೆಯನ್ನು ಬರೆತ್ತಾರಂತೆ ಜನ ಈ ದೇವಸ್ಥಾನದಲ್ಲಿ ಸ್ಟ್ಯಾಂಪ್ ಪೇಪರ್‌ನಲ್ಲಿ ತಮ್ಮ ಬೇಡಿಕೆಯನ್ನು ಬರೆತ್ತಾರಂತೆ ಜನ

ಮಹಾಲಕ್ಷ್ಮೀ ದರ್ಶನಕ್ಕೆ ಭಕ್ತರು ಸಾಲು ನಿಲ್ಲುತ್ತಾರೆ

ಮಹಾಲಕ್ಷ್ಮೀ ದರ್ಶನಕ್ಕೆ ಭಕ್ತರು ಸಾಲು ನಿಲ್ಲುತ್ತಾರೆ

೧೯೨೫ರಲ್ಲಿ ಕಮಲಮ್ಮ ಗೊರವನಹಳ್ಳಿಯಲ್ಲಿರುವ ನಿರ್ಲಕ್ಷ್ಯಕ್ಕೆ ಒಳಗಾಗಿರುವ ದೇವಸ್ಥಾನವನ್ನು ಕಂಡು ಪೂಜೆಯನ್ನು ಮತ್ತೆ ಮುಂದುವರಿಸಿದಳು. ಆದರೆ ಆಕೆ ಆ ಊರನ್ನು ಬಿಟ್ಟ ನಂತರ ಆ ದೇವಸ್ಥಾನ ಮತ್ತೆ ನಿರ್ಲಕ್ಷ್ಯಕ್ಕೆ ಒಳಗಾಯಿತು. ೧೯೫೨ರಲ್ಲಿ ಕಮಲಮ್ಮ ಮತ್ತೆ ಗೊರವನಹಳ್ಳಿಗೆ ಬಂದು ನೆಲೆಸಿದಳು. ಮೊದಲಿನಂತೆಯೇ ಪೂಜೆಯನ್ನು ಪ್ರಾರಂಭಿಸಿದಳು. ಜನರು ದೇವರ ದರ್ಶನ್ಕಾಗಿ ಸಾಲಾಗಿ ನಿಂತುಕೊಳ್ಳುತ್ತಿದ್ದರು. ಹೀಗೆ ಜನರ ಬಾಯಿಯಿಂದ ಬಾಯಿಗೆ ಈ ವಿಷ್ಯ ತಲುಪಿ ದೇವಸ್ಥಾನವು ಪ್ರಸಿದ್ಧಿ ಹೊಂದಿತು.

ಲಕ್ಷ್ಮದೀಪೋತ್ಸವ

ಲಕ್ಷ್ಮದೀಪೋತ್ಸವ

ಮಂಗಳವಾರ ಹಾಗೂ ಶುಕ್ರವಾರ ಈ ದೇವಸ್ಥಾನಕ್ಕೆ ಅನೇಕ ಭಕ್ತರು ಆಗಮಿಸುತ್ತಾರೆ. ಕಾರ್ತೀಕ ಮಾಸದಂದು ಲಕ್ಷ್ಮದೀಪೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಶಿವಗಂಗೆ

ಶಿವಗಂಗೆ

ಗೊರವನಹಳ್ಳಿಯ ಸಮೀಪವಿರುವ ಪ್ರೇಕ್ಷಣೀಯ ತಾಣವೆಂದರೆ ಶಿವಗಂಗೆ ಬೆಟ್ಟ. ಇದು ಗೊರವನ ಹಳ್ಳಿಯಿಂದ ಸುಮಾರು ೪೦ ಕಿ.ಮೀ ದೂರದಲ್ಲಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ಜನರು ತೆರಾ ಜಲಾಶಯದ ಸುತ್ತಲೂ ಹೋಗುತ್ತಾರೆ. ತೇರಾ ಜಲಾಶಯವನ್ನು ಸುವರ್ಣಮುಕಿ ನದಿಗೆ ನಿರ್ಮಿಸಲಾಗಿದೆ ಮತ್ತು ಇದು ಗೋರವಾನಹಳ್ಳಿಯ ಆಕರ್ಷಣೆಗಳಲ್ಲಿ ಒಂದಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಗೊರವನಹಳ್ಳಿಯು ಬೆಂಗಳೂರಿನಿಂದ ೮೦ ಕಿ.ಮೀ ದೂರದಲ್ಲಿದೆ. ತುಮಕೂರಿನಿಂದ ೩೦ ಕಿ.ಮೀ ಊರದಲ್ಲಿದೆ. ಬೆಂಗಳುರಿನಿಂದ ಗೊರವನಗಳ್ಳಿಗೆ ಲೋಕಲ್ ಬಸ್‌ಗಳಿವೆ. ಸಮೀಪದ ರೈಲು ನಿಲ್ದಾಣವೆಂದರೆ ತುಮಕೂರು ರೈಲು ನಿಲ್ದಾಣ. ಸಮೀಪದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ಏರ್‌ಪೋರ್ಟ್ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X