Search
  • Follow NativePlanet
Share
» »ನಿಮ್ಮ ಆಸೆ ಈಡೇರಿದ್ರೆ ಇಲ್ಲಿನ ಮರಕ್ಕೆ ವಾಚ್‌ ಕಟ್ಟಬೇಕಂತೆ

ನಿಮ್ಮ ಆಸೆ ಈಡೇರಿದ್ರೆ ಇಲ್ಲಿನ ಮರಕ್ಕೆ ವಾಚ್‌ ಕಟ್ಟಬೇಕಂತೆ

ನಮ್ಮ ದೇಶದಲ್ಲಿ ಹೆಚ್ಚಿನವರು ತಮ್ಮ ಮನಸ್ಸಿನ ಕೋರಿಕೆ ಈಡೇರಬೇಕಾದರೆ ದೇವರಿಗೆ ಹರಕೆ ಹೇಳಿ ಬಿಡ್ತಾರೆ. ಹರಕೆ ತೀರಿಸುವ ಬಗೆಯೂ ನಾವು ಯಾವ ದೇವಸ್ಥಾನಕ್ಕೆ ಹರಕೆ ಹೇಳಿದ್ದೇವೆಯೋ ಅದನ್ನೇ ಅರ್ಪಿಸಬೇಕಾಗುತ್ತದೆ. ದೇವರಿಗೆ ಹರಕೆ ಹೇಳುವಾಗ ಏನೆಲ್ಲಾ ಹೇಳ್ತೇವೆ ಅಲ್ವಾ? ಕೆಲವು ದೇವಸ್ಥಾನಗಳಲ್ಲಿ ಎಣ್ಣೆ ಹರಕೆ ನೀಡಿದ್ರೆ, ಕೆಲವು ದೇವಸ್ಥಾನದಲ್ಲಿ ತೆಂಗಿನಕಾಯಿ, ಇನ್ನೂ ಕೆಲವು ಕಡೆ ಗಂಟೆ, ಸೀರೆ ಹೀಗೆ ಏನೆಲ್ಲಾ ಹರಕೆಯನ್ನಾಗಿ ನೀಡುತ್ತಾರೆ. ಇಲ್ಲೊಂದು ದೇವಸ್ಥಾನದಲ್ಲಿ ಗಡಿಯಾರವನ್ನು ಹರಕೆಯಾಗಿ ನೀಡ್ತಾರಂತೆ.

ಎಲ್ಲಿದೆ ಈ ದೇವಸ್ಥಾನ?

ಎಲ್ಲಿದೆ ಈ ದೇವಸ್ಥಾನ?

ಉತ್ತರ ಪ್ರದೇಶದ ಜೋನ್‌ಪುರ್ ಜಿಲ್ಲೆಯಲ್ಲಿ ಬ್ರಹ್ಮ ಬಾಬಾ ಎನ್ನುವ ವಿಶೇಷ ದೇವಸ್ಥಾನವಿದೆ. ಇದೊಂದು ಸಣ್ಣ ದೇವಸ್ಥಾನವಾಗಿದ್ದು, ಹಿಂದೂ, ಮುಸಲ್ಮಾನ್‌, ಕೈಸ್ತರು, ಸಿಖ್‌ರು ಈ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.

ದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿ

ಗಡಿಯಾರ ಅರ್ಪಿಸುತ್ತಾರೆ

ಗಡಿಯಾರ ಅರ್ಪಿಸುತ್ತಾರೆ

ಇಲ್ಲಿಗೆ ಬರುವ ಭಕ್ತರು ತಮ್ಮ ಕೋರಿಕೆಯನ್ನು ದೇವರ ಮುಂದೆ ಇಡುತ್ತಾರೆ. ಅದು ಪೂರ್ಣಗೊಂಡ ಮೇಲೆ ದೇವರಿಗೆ ಹರಕೆಯನ್ನು ಸಲ್ಲಿಸುತ್ತಾರೆ. ಇಲ್ಲಿ ಹರಕೆಯ ರೂಪದಲ್ಲಿ ಗಡಿಯಾರವನ್ನು ನೀಡಲಾಗುತ್ತದೆ.

ಮರದಲ್ಲಿ ನೇತಾಡುತ್ತಿರುವ ಗಡಿಯಾರಗಳು

ಮರದಲ್ಲಿ ನೇತಾಡುತ್ತಿರುವ ಗಡಿಯಾರಗಳು

ಈ ದೇವಸ್ಥಾನದ ಆವರಣದಲ್ಲಿರುವ ಮರದಲ್ಲಿ ನೀವು ಸಾವಿರಾರು ಗಡಿಯಾರಗಳನ್ನು ನೋಡಬಹುದು. ಭಕ್ತರು ತಮ್ಮ ಕೋರಿಕೆ ಈಡೇರಿದ ನಂತರ ಈ ದೇವಸ್ಥಾನಕ್ಕೆ ಬಂದು ಗಡಿಯಾರವನ್ನು ಮರಕ್ಕೆ ಕಟ್ಟುತ್ತಾರೆ.

ಬ್ರಹ್ಮಶ್ರೀ ನಾರಾಯಣ ಗುರುಗಳು ಹುಟ್ಟಿದ್ದೇಲ್ಲಿ, ಮೋಕ್ಷ ಪಡೆದಿದ್ದೇಲ್ಲಿ?ಬ್ರಹ್ಮಶ್ರೀ ನಾರಾಯಣ ಗುರುಗಳು ಹುಟ್ಟಿದ್ದೇಲ್ಲಿ, ಮೋಕ್ಷ ಪಡೆದಿದ್ದೇಲ್ಲಿ?

ಹಿಂದಿನಿಂದಲೂ ನಡೆದುಕೊಂಡು ಬಂದಿದೆ

ಹಿಂದಿನಿಂದಲೂ ನಡೆದುಕೊಂಡು ಬಂದಿದೆ

ಗಡಿಯಾರ, ವಾಚ್ ನೀಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಒಮ್ಮೆ ಒಬ್ಬ ವ್ಯಕ್ತಿಯು ತಾನು ಡ್ರೈವರ್ ಆಗಬೇಕು, ವಾಹನವನ್ನು ಚಲಾಯಿಸುವ ಕಲೆಯನ್ನು ತನಗೆ ಕರುಣಿಸು ಎಂದು ಬೇಡಿಕೊಂಡನಂತೆ ಅಂದಿನಿಂದ ಆತ ವಾಹನ ಚಲಾಯಿಸಲಾರಂಭಿಸಿದನಂತೆ. ದೇವರಿಗೆ ಕೃತಜ್ಞತಾ ಪೂರ್ವಕವಾಗಿ ತನ್ನ ಕೈಯಲ್ಲಿದ್ದ ವಾಚ್‌ನ್ನು ನೀಡಿದನಂತೆ. ಅಂದಿನಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.

ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ

ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ

ನೀವು ಒಂದು ವೇಳೆ ಇಂತಹ ದೇವಸ್ಥಾನಕ್ಕೆ ಭೇಟಿ ನೀಡಿಲ್ಲವೆಂದಾದರೆ ನೀವೂ ಕೂಡ ನಿಮ್ಮ ಕೋರಿಕೆಯನ್ನು ಇಲ್ಲಿನ ದೇವರ ಮುಂದೆ ಇಟ್ಟು ನೋಡಿ. ಬ್ರಹ್ಮ ಬಾಬಾ ಮಂದಿರಕ್ಕೆ ಪ್ರತಿ ತಿಂಗಳು ನೂರಾರು ಭಕ್ತರು ತಮ್ಮ ಬೇಡಿಕೆಯ ಜೊತೆ ಬರುತ್ತಾರೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನ ನಗರಿಯಲ್ಲಿ ಆಚರಿಸಿದ್ರೆ ಹೇಗೆ?ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನ ನಗರಿಯಲ್ಲಿ ಆಚರಿಸಿದ್ರೆ ಹೇಗೆ?

ಕಳ್ಳತನ ಮೋಡೋದಿಲ್ಲ

ಕಳ್ಳತನ ಮೋಡೋದಿಲ್ಲ

ಈ ಮರದ ಸುತ್ತಲೂ ಯಾವುದೇ ಬೇಲಿ ಹಾಕಲಾಗಿಲ್ಲ, ಯಾವುದೇ ಕಾವಲುಗಾರರೂ ಇಲ್ಲ. ಯಾರೂ ಕೂಡಾ ಇಲ್ಲಿನ ಗಡಿಯಾರವನ್ನು ಕದಿಯುವ ದುಸ್ಸಾಹಸಕ್ಕೆ ಕೈ ಹಾಕೋದಿಲ್ಲ. ಊರಿನ ಜನರೇ ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದಾರೆ. ಇಲ್ಲಿ ಯಾವುದೇ ಪೂಜಾರಿಯಾಗಲಿ ಅಥವಾ ಯಾವುದೇ ಟ್ರಸ್ಟ್‌ ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿಲ್ಲ..

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಇಲ್ಲಿ ಬೇಸಿಗೆಗಾಲದಲ್ಲಿ ಬಹಳ ಬಿಸಿಲು ಇರುತ್ತದೆ. ಹಾಗಾಗಿ ನೀವು ಅಕ್ಟೋಬರ್‌ನಿಂದ ಫೇಬ್ರವರಿ ನಡುವೆ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಈ ಸಂದರ್ಭದಲ್ಲಿ ಅಲ್ಲಿನ ವಾತಾವರಣವು ತಂಪಾಗಿರುತ್ತದೆ. ನೀವು ಆರಾಮವಾಗಿ ಮಂದಿರದ ದರ್ಶನ ಮಾಡಬಹುದು. ಜೊತೆಗೆ ಸುತ್ತಮುತ್ತಲಿನ ಪ್ರದೇಶವನ್ನು ಸುತ್ತಾಡಬಹುದು..

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X