Search
  • Follow NativePlanet
Share
» »ಅಂಜನಾಸುತ ಆಂಜನೇಯನ ಕಿಷ್ಕಿಂಧೆ

ಅಂಜನಾಸುತ ಆಂಜನೇಯನ ಕಿಷ್ಕಿಂಧೆ

By Vijay

ಇಂದು ಯಾವುದೆ ಮಕ್ಕಳಿಗೆ ಒಮ್ಮೆ ಕೇಳಿ ಬಿಡಿ ಸೂಪರ್ ಹೀರೊಗಳು ಗೊತ್ತೆ ಅಂತ...ಥಟಕ್ಕನೆ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಹಿ ಮ್ಯಾನ್, ಹಲ್ಕ್ ಹೀಗೆ ಒಂದಾದ ಮೇಲೊಂದರಂತೆ ಹೆಸರುಗಳು ಅವರ ಬಾಯಿಯಿಂದ ಲಬಕ್ಕನೆ ಹೊರಬರುತ್ತವೆ. ಅದೆ ನಮ್ಮ ಹಿಂದೂ ಸಂಸ್ಕೃತಿಯ ಸೂಪರ್ ಮ್ಯಾನ್ ಯಾರೆಂದು ಕೇಳಿದರೆ ಸ್ವಲ್ಪ ತಡವರಿಕೆ ಉಂಟಾಗುತ್ತದೆ.

ಧೈರ್ಯ ನೀಡುವ, ಭಯ ನಿವಾರಿಸುವ, ದುಷ್ಟ ಶಕ್ತಿಗಳನ್ನು ದೂರವಿಡುವ ರಾಮನ ಪರಮ ಭಕ್ತ ಆಂಜನೇಯನೂ ಸಹ ಒಬ್ಬ ನಾವು ಪ್ರೀತಿಯಿಂದ ಕರೆಯಬಹುದಾದ ಭಾರತದ ಸೂಪರ್ ಮ್ಯಾನ್ ಎಂದೆ ಹೇಳಬಹುದು. ರಾಮಾಯಣದ ಪ್ರಮುಖ ಪಾತ್ರಗಳಲೊಬ್ಬನಾಗಿ ಕಂಡುಬರುವ ಆಂಜನೇಯನು ಹಿಂದೂಗಳು ನಡೆದುಕೊಳ್ಳುವ ಪ್ರಮುಖ ದೇವರುಗಳಲ್ಲಿ ಒಬ್ಬನು.

ವಿಶೇಷ ಲೇಖನ : ಕೊಂಪೆ ಕೊಂಪೆಯಲ್ಲೂ ಹಂಪಿಯ ವೈಭವ

ಅಂಜನಾಸುತ ಆಂಜನೇಯನ ಕಿಷ್ಕಿಂಧೆ

ಚಿತ್ರಕೃಪೆ: Ravi Varma Press

ಹನುಮನು ತೋರಿದ ಭಕ್ತಿ ಹಾಗೂ ಸಾಹಸಗಳ ಕಥೆಗಳನ್ನು ಸವಿವರವಾಗಿ ನಾವು ಇಂದು ರಾಮಾಯಣದಲ್ಲಿ ಕಾಣಬಹುದಾಗಿದೆ. ಕೇಸರಿ ಹಾಗೂ ಅಂಜನಾ ದಂಪತಿಗಳಿಗೆ ಜನಸಿದ ಹನುಮನು ಶಿವನ ಪ್ರತಿರೂಪವೆ ಎಂದು ನಂಬಲಾಗಿದೆ. ನಮ್ಮ ಸೂಪರ್ ಹೀರೊ ಹನುಮನು ಜನಿಸಿದ್ದು ಕಿಷ್ಕಿಂಧೆ ಎಂಬ ಪ್ರದೇಶದಲ್ಲಿ.

ಅಂಜನಾಸುತ ಆಂಜನೇಯನ ಕಿಷ್ಕಿಂಧೆ

ಚಿತ್ರಕೃಪೆ: ವೀಕಿಪಿಡಿಯ ಆಂಜನೇಯ ಬೆಟ್ಟ

ವಿಜಯನಗರ ಸಾಮ್ರಾಜ್ಯದ ವೈಭವಯುತ ರಾಜಧಾನಿಯಾಗಿ ಮೆರೆದಿದ್ದ ಇಂದಿನ ಹಂಪಿಯಲ್ಲಿ ಹರಿದಿರುವ ತುಂಗಭದ್ರಾ ನದಿಯ ಸುತ್ತಮುತ್ತಲಿನ ಪ್ರದೇಶಗಳೆ, ಹಿಂದೆ ಕಿಷ್ಕಿಂಧೆಯಾಗಿತ್ತು ಎಂದು ತಜ್ಞ ಇತಿಹಾಸಕಾರರ ಪ್ರಕಾರ ಹೇಳಲಾಗಿದೆ. ಈ ತುಂಗ ಭದ್ರ ನದಿಯನ್ನೆ ಹಿಂದೆ ಪಂಪ ಸರೋವರ ಎನ್ನಲಾಗಿತ್ತು.

ಅಂಜನಾಸುತ ಆಂಜನೇಯನ ಕಿಷ್ಕಿಂಧೆ

ಚಿತ್ರಕೃಪೆ: Daniel Hauptstein ಆಂಜನೇಯ ದೇವಸ್ಥಾನ

ರಾಮಾಯಣದ ಸಂದರ್ಭದಲ್ಲಿ ಅಂದರೆ ತ್ರೇತಾ ಯುಗದಲ್ಲಿ ಈ ಒಟ್ಟಾರೆ ಪ್ರದೇಶವೆ ದಂಡಕಾರಣ್ಯದಲ್ಲಿತ್ತು ಎನ್ನಲಾಗಿದೆ. ಆದ್ದರಿಂದ ಈ ಒಂದು ಅರಣ್ಯ ಪ್ರದೇಶವು ವಾನರ (ಕೋತಿ) ಗಳ ಸಾಮ್ರಾಜ್ಯವಾಗಿ ಬಿಂಬಿತವಾಗಿತ್ತು. ಮುಂದೆ ದ್ವಾಪರ ಯುಗದಲ್ಲಿ ಪಾಂಡವರೂ ಕೂಡ ಈ ಸ್ಥಳಕ್ಕೆ ಭೇಟಿ ನೀಡಿದ್ದರೆನ್ನಲಾಗಿದೆ.

ಅಂಜನಾಸುತ ಆಂಜನೇಯನ ಕಿಷ್ಕಿಂಧೆ

ಚಿತ್ರಕೃಪೆ: Moogsi ಪಂಪ ಸರೋವರ

ಇಂದಿನ ಹಂಪಿಯ ಸುತ್ತಮುತ್ತಲಿನ ಪ್ರದೇಶವು ಅಂದಿನ ಕಿಷ್ಕಿಂಧೆಯನ್ನು ಪ್ರತಿನಿಧಿಸುತ್ತದೆ. ರಾಮಾಯಣದ ಪ್ರಕಾರ ಹೋಗುವದಾದರೆ, ಅಂಜನಾದ್ರಿ ಬೆಟ್ಟದ ಸಾಲುಗಳನ್ನು ಹಣುಮಂತ ದೇವರ ಹುಟ್ಟು ಸ್ಥಳವೆಂದು ನಂಬಲಾಗಿದೆ. ಇದರ ಮೇಲೆ ಸುಂದರವಾದ ಆಂಜನೇಯನ ದೇವಾಲಯವನ್ನು ಕಟ್ಟಲಾಗಿದ್ದು ಇದನ್ನು ವಾನರ ದೇವನಾದ ಹಣುಮಂತನಿಗೆ ಸಮರ್ಪಿಸಲಾಗಿದೆ.

ಇನ್ನು ಹಂಪಿಗೆ ತೆರಳಲು ಕರ್ನಾಟಕದ ಹಲವು ನಗರಗಳಿಂದ ಬಸ್ಸುಗಳು ಹಾಗೂ ರೈಲಿನ ಸೌಕರ್ಯ ಉತ್ತಮವಾಗಿದೆ. ತಲುಪುವ ವಿವಿಧ ಆಯ್ಕೆಗಳ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X