Search
  • Follow NativePlanet
Share
» »ಈ ಕೋಟೆಯಲ್ಲಿ ಗೋಡೆಯಿಂದ ರಕ್ತ ಸುರಿಯುತ್ತಂತೆ !

ಈ ಕೋಟೆಯಲ್ಲಿ ಗೋಡೆಯಿಂದ ರಕ್ತ ಸುರಿಯುತ್ತಂತೆ !

ಬಿಹಾರದಲ್ಲಿರುವ ಈ ಕೋಟೆ ರೋಹ್‌ತಾಸ್ ಜಿಲ್ಲೆಯಲ್ಲಿರುವ ಒಂದು ಕೋಟೆಯಾಗಿದೆ. ಇದನ್ನು ಭಾರತದ ಪ್ರಾಚೀನ ಕೋಟೆಯೆಂದೇ ಹೇಳಲಾಗುತ್ತದೆ. ಈ ಕೋಟೆಯ ನಿರ್ಮಾಣದ ಕಥೆ ತುಂಬಾ ಹಳೆಯದು. ತ್ರೇತಾ ಯುಗದಲ್ಲಿ ಅಯೋಧ್ಯರ ಸೂರ್ಯವಂಶಿ ರಾಜ ಹರಿಶ್ಚಂದ್ರನ ಮಗ ರೋಹಿತಾಕ್ಷ ಈ ಕೋಟೆಯನ್ನು ನಿರ್ಮಿಸಿದನು. ಇದು ಇತರ ಕೋಟೆಗಳಂತೆ ಭವ್ಯವಾಗಿದೆ. ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಕೆಲವು ಲಕ್ಷಣಗಳು ಈ ಕೋಟೆಯಲ್ಲಿದೆ. ಇದು ಜಲಪಾತಕ್ಕೂ ಹೆಸರುವಾಸಿಯಾಗಿದೆ.

ರೋಹತಾಸ್ ಕೋಟೆಯ ನಿರ್ಮಾಣ

ರೋಹತಾಸ್ ಕೋಟೆಯ ನಿರ್ಮಾಣ

Pc:Omar mukhtar

ತ್ರೇತಾ ಯುಗದಲ್ಲಿ ಅಯೋಧ್ಯರ ಸೂರ್ಯವಂಶಿ ರಾಜ ಹರಿಶ್ಚಂದ್ರೆನ ಮಗ ರೋಹಿತಾಕ್ಷ ಈ ಕೋಟೆಯನ್ನು ನಿರ್ಮಿಸಿದನು.

ಮುಸಲ್ಮಾನರೂ ಕೂಡಾ ಈ ಕೋಟೆಯನ್ನು ಆಳಿದ್ದಾರೆ

ಮುಸಲ್ಮಾನರೂ ಕೂಡಾ ಈ ಕೋಟೆಯನ್ನು ಆಳಿದ್ದಾರೆ

Pc:Virajsingh

ಹಲವು ವರ್ಷಗಳ ವರೆಗೆ ಈ ಕೋಟೆ ಹಿಂದೂಗಳ ಅಧೀನದಲ್ಲಿತ್ತು. ಆದರೆ 16ನೇ ಶತಮಾನದಲ್ಲಿ ಮುಸಲ್ಮಾನರು ಈ ಕೋಟೆಯನ್ನು ವಶಪಡಿಸಿಕೊಂಡು ತಮ್ಮ ಆಳ್ವಿಕೆ ನಡೆಸಿದರು ಎನ್ನಲಾಗುತ್ತದೆ.

ಬ್ರಿಟಿಷರ ವಿರುದ್ಧ ಇಲ್ಲಿಂದಲೇ ಹೋರಾಟಮಾಡಲಾಗಿತ್ತು

ಬ್ರಿಟಿಷರ ವಿರುದ್ಧ ಇಲ್ಲಿಂದಲೇ ಹೋರಾಟಮಾಡಲಾಗಿತ್ತು

Pc:Wellcome Images

ಇತಿಹಾಸಕಾರರ ಪ್ರಕಾರ ಸ್ವತಂತ್ರ ಸಂಗ್ರಾಮದ ಮೊದಲ ಯುದ್ಧದ (1857) ಸಮಯದಲ್ಲಿ ಅಮರ್‌ಸಿಂಗ್ ಇಲ್ಲಿಂದಲೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದನು.

28 ಮೈಲುಗಳಲ್ಲಿ ವಿಸ್ತರಿಸಿ

28 ಮೈಲುಗಳಲ್ಲಿ ವಿಸ್ತರಿಸಿ

Pc:Mariyosh

ಭಾರತದ ಇತರ ಕೋಟೆಗಳಂತೆ ಈ ಕೋಟೆಯೂ ಕೂಡಾ 28ಮೈಲು ವಿಸ್ತೀರ್ಣದಲ್ಲಿ ನಿರ್ಮಿತವಾಗಿದೆ. ಇದರಲ್ಲಿ ಸುಮಾರು 83 ಬಾಗಿಲುಗಳಿವೆ. ಅದರಲ್ಲಿ ಮುಖ್ಯವಾದದ್ದೆಂದರೆ ನಾಲ್ಕು ಬಾಗಿಲುಗಳು ಘೋರ್ಘಾಟ್, ರಾಜ್ಘಾಟ್, ಕಥೌಟಿಯಾ ಘಾಟ್ ಮತ್ತು ಮೂರಾ ಘಾಟ್. ಪ್ರವೇಶ ದ್ವಾರದಲ್ಲಿ ನಿರ್ಮಿಸಲಾಗಿರುವ ಆನೆ. ಬಾಗಿಲು ಬಳಿ ಇರುವ ಗೋಪುರ ಹಾಗೂ ಗೋಡೆಯ ಮೇಲೆ ಇರುವ ಚಿತ್ರಗಳು ಅದ್ಭುತವಾಗಿದೆ. ರಂಗ ಮಹಲ್, ಪಂಚ್ ಮಹಲ್, ಗಾಜಿನ ಮಹಲ್ , ರಾಣಿಯ ಮಹಲ್ ಹಾಗೂ ಮಾನ್‌ಸಿಂಗ್‌ನ ಕಚೇರಿ ಈಗಲೂ ಕಾಣಸಿಗುತ್ತದೆ.

ಕೋಟೆಯ ಗೋಡೆಯಿಂದ ಸುರಿಯುತ್ತಿತ್ತು ರಕ್ತ

ಕೋಟೆಯ ಗೋಡೆಯಿಂದ ಸುರಿಯುತ್ತಿತ್ತು ರಕ್ತ

Pc:wikimedia

200ಫೀಟ್ ಎತ್ತರದ ಗೋಡೆಯಿಂದ ರಕ್ತ ಸುರಿಯುತ್ತಿತ್ತು. ಸುಮಾರು 200 ವರ್ಷಗಳ ಹಿಂದೆ ಪ್ರಾನ್ಸಿಸ್‌ನ ಇತಿಹಾಸಕಾರ ಬುಕಾನನ್ ರೋಹತಾಸ್ ಕೋಟೆಯ ಯಾತ್ರೆ ಮಾಡಿದ್ದನು. ಆಗ ಗೋಡೆಯಿಂದ ರಕ್ತ ಸುರಿಯುವುದರ ಬಗ್ಗೆ ಚರ್ಚೆ ಮಾಡಿದ್ದರು. ಕೋಟೆಯ ಗೋಡೆಯಿಂದ ರಕ್ತ ಸುರಿಯುತ್ತಿತ್ತಂತೆ. ರಕ್ತ ಸುರಿಯುತ್ತದೆ ಎನ್ನುವ ಮಾತನ್ನು ಅಲ್ಲಿನ ಸ್ಥಳೀಯರು ಕೂಡಾ ಒಪ್ಪುತ್ತಾರೆ. ಆ ಕೋಟೆಯಿಂದ ಕೆಲವು ದಿನಗಳಿಂದ ಕೂಗುವ ಸದ್ದೂ ಕೇಳಿಸುತ್ತಿತ್ತು ಎನ್ನುತ್ತಿದ್ದರು ಸ್ಥಳೀಯರು.

Read more about: travel bihar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X