Search
  • Follow NativePlanet
Share
» »ಮಿಥುನ ಶಿಲ್ಪಕಲೆಗಳಿಂದ ಪ್ರಚೋದಿಸುವ ಖಜುರಾಹೊ!

ಮಿಥುನ ಶಿಲ್ಪಕಲೆಗಳಿಂದ ಪ್ರಚೋದಿಸುವ ಖಜುರಾಹೊ!

By Vijay

ಭಾರತವು ಮೊದಲಿನಿಂದಲೂ ಶಿಲ್ಪಕಲೆಗೆ ಜಗತ್ತಿನಲ್ಲೆ ಅತಿ ಹೆಚ್ಚು ಪ್ರಸಿದ್ಧಿ ಪಡೆದ ದೇಶವಾಗಿದೆ. ಯಾವುದೆ ರೀತಿಯ ಆಧುನಿಕ ಉಪಕರಣಗಳಿಲ್ಲದೆಯೆ ಅತ್ಯಂತ ನೈಪುಣ್ಯತೆಯಿಂದ, ಸೂಕ್ಷ್ಮತೆಗಳನ್ನೂ ಸಹ ಹೊಂದಿರುವ ಕರಾರುವಕ್ಕಾದ ಅದ್ಭುತ ಶಿಲ್ಪಕಲಾಕೃತಿಗಳು ಇಂದು ದೇಶದ ಸಾಕಷ್ಟು ಐತಿಹಾಸಿಕ ದೇವಾಲಯ ರಚನೆಗಳಲ್ಲಿ ಕಾಣಬಹುದಾಗಿದೆ.

ಹೊಯ್ಸಳಲಿರಲಿ, ಕದಂಬರಿರಲಿ, ಚಾಲುಕ್ಯರಿರಲಿ, ಚೋಳರಿರಲಿ, ಗಂಗರಿರಲಿ, ಕಾಕತೀಯರಿರಲಿ ಅಥವಾ ಮುಘಲರಿರಲಿ ಪ್ರತಿಯೊಬ್ಬರೂ ತಮ್ಮದೆ ಆದ ವಿಶೇಷ ಕೊಡುಗೆಗಳನ್ನು ತಮ್ಮ ಗುರುತನ್ನು ಸೂಚಿಸುವ ತಮ್ಮದೆ ಆದ ವಿಶಿಷ್ಟ ಕಲಾತ್ಮಕತೆಯ ಕುರುಹುಗಳ ಮೂಲಕ ನಮಗೆ ನೀಡಿದ್ದಾರೆ.

ಬಳ್ಳಿಗಾವಿಯ ಶೃಂಗಾರಕಲೆ

ಸಾಮಾನ್ಯವಾಗಿ ಬಹುತೇಕ ಪುರಾತನ ಐತಿಹಾಸಿಕ ದೇವಾಲಯಗಳಲ್ಲಿ, ದೇವ, ದೇವತೆಯರ, ಪುರಾಣ ಪುಣ್ಯ ಕಥೆಗಳ ಪ್ರಸಂಗಗಳನ್ನು ಬಿಂಬಿಸುವ, ತ್ರಿಮೂರ್ತಿಗಳ ದರ್ಶನ ಮಾಡಬಹುದಾದ ಅನೇಕ ಅದ್ಭುತ ಶಿಲ್ಪಕಲೆಗಳನ್ನು ಕಾಣಬಹುದು. ಆದರೆ ಅವುಗಳಲ್ಲಿ ಕೆಲವು ದೇವಾಲಯಗಳು ಅತ್ಯಂತ ರೋಮಾಂಚನಗೊಳಿಸುವ, ಜಗತ್ತೆ ನಿಬ್ಬೆರಗಾಗಿ ನೋಡುವಂತಹ ಕೆಲವು ಶೃಂಗಾರ ರಸ ಪುಟಿದುಕ್ಕಿಸುವಂತೆ ಮಾಡುವ ವಿಶಿಷ್ಟ ಮಿಥುನ ಶಿಲ್ಪಕಲಾಕೃತಿಗಳಿಂದ ಸಾಕಷ್ಟು ಗಮನ ಸೆಳೆದಿವೆ. ಅದರಲ್ಲಿ ಮುಖ್ಯವಾಗಿದೆ ಖಜುರಾಹೊ ದೇವಾಲಯ ರಚನೆಗಳ ಸಂಕೀರ್ಣ.

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಭಾರತದ ಮಧ್ಯ ಪ್ರದೇಶ ರಾಜ್ಯದಲ್ಲಿರುವ ಖಜುರಾಹೊ ಒಂದು ನಗರ ಪ್ರದೇಶವಾಗಿದ್ದು ತನ್ನಲ್ಲಿರುವ ಅತಿ ವಿಶಿಷ್ಟ ಹಾಗೂ ಅದ್ಭುತವಾದ ಶಿಲ್ಪಕಲೆಗಳನ್ನು ಹೊಂದಿರುವ ಪುರಾತನ ದೇವಾಲಯ ರಚನೆಗಳಿಂದಾಗಿ ಜಗತ್ತಿನಲ್ಲೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Jean-Pierre Dalbéra

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ದೇವಾಲಯಗಳು ವಿಶೇಷವಾಗಿ ತಮ್ಮ ಮಿಥುನ ಶಿಲ್ಪಕಲಾಕೃತಿಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೆ ಹೆಚ್ಚು ಗಮನಸೆಳೆದಿವೆ. ಯುನೆಸ್ಕೊದಿಂದ ವಿಶ್ವಪಾರಂಪರಿಕ ತಾಣದ ಮಾನ್ಯತೆಯನ್ನೂ ಸಹ ಪಡೆದಿರುವ ಈ ತಾಣವು ನಿರ್ದಿಷ್ಟವಾಗಿ ಕಾಮ ಪ್ರಚೋದಕ ಭಂಗಿಗಳ ಆಕರ್ಷಕ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Benjamín Preciado

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಮಧ್ಯ ಪ್ರದೇಶ ರಾಜ್ಯದಲ್ಲಿರುವ ಖಜುರಾಹೊ, ದೇಶದ ರಾಜಧಾನಿ ದೆಹಲಿಯ ದಕ್ಷಿಣಕ್ಕೆ ಸುಮಾರು 620 ಕಿ.ಮೀ ಗಳಷ್ಟು ದೂರದಲ್ಲಿದೆ. ಭಾರತದ ಅತ್ಯ೦ತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒ೦ದಾದ ಖಜುರಾಹೊ, ಮೂಲತಃ ಮಧ್ಯಕಾಲೀನ ಹಿ೦ದೂ ದೇವಾಲಯಗಳ ಅತಿ ದೊಡ್ಡ ಗು೦ಪು ಎಂದೆ ಹೇಳಬಹುದು. ಖಜುರಾಹೊವಿನ ವಿಶ್ವನಾಥ ದೇವಾಲಯ.

ಚಿತ್ರಕೃಪೆ: Airunp

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಒಂದಾನೊಂದು ಕಾಲದಲ್ಲಿ ಚಂಡೇಲಾ ರಜಪೂತ ಅರಸರ ರಾಜಧಾನಿ ನಗರವಾಗಿ ಮೆರೆದಿದ್ದ ಖಜುರಾಹೊ ಅವರಿಂದ ಸಾಕಷ್ಟು ದೇವಾಲಯಗಳ ರಚನೆಯನ್ನು ಪಡೆದಿದ್ದು ಈ ದೇವಾಲಯಗಳು ಸರಿ ಸುಮಾರು ಹತ್ತನೇಯ ಶತಮಾನದಲ್ಲಿ ನಿರ್ಮಾಣವಾದ ರಚನೆಗಳಾಗಿವೆ.

ಚಿತ್ರಕೃಪೆ: Sfu

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಈ ದೇವಾಲಯಗಳ ಸಂಕೀರ್ಣವು ಕೋಟೆಯೊಂದರಿಂದ ಸುತ್ತುವರೆಯಲ್ಪಟ್ಟಿದ್ದು ಪ್ರಮುಖವಾಗಿ ಎಂಟು ಪ್ರವೇಶ ದ್ವಾರಗಳನ್ನು ಹೊಂದಿದೆ. ಸ್ಥಳ ಪುರಾಣದಂತೆ ಪ್ರತಿ ದ್ವಾರಗಳ ಎರಡೂ ಬದಿಗಳಲ್ಲಿ ಖರ್ಜೂರದ ಗಿಡಗಳಿದ್ದುದರಿಂದ ಇದಕ್ಕೆ ಖಜುರಾಹೊ ಎಂಬ ಹೆಸರು ಬಂದಿತೆನ್ನಲಾಗಿದೆ.

ಚಿತ್ರಕೃಪೆ: Bgabel

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಇದೊಂದು ವಿಶಿಷ್ಟ ರಚನೆಗಳೆಂದೆ ಹೇಳಬಹುದು, ಜೈನ, ಶೈವ ಹಾಗೂ ವೈಷ್ಣವ ಪಂಥಗಳನ್ನು ಗೌರವಿಸುವ ಹಾಗೂ ದೇವ ದೇವತೆಯರ ದೇವಾಲಯಗಳು ಇಲ್ಲಿದ್ದು, ದೇವಾಲಯದ ಹೊರಭಾಗಗಳು ಅತ್ಯದ್ಭುತವಾದ ಶಿಲ್ಪಕಲೆಗಳಿಂದ ಸಾಕಷ್ಟು ಗಮನ ಸೆಳೆಯುತ್ತವೆ.

ಚಿತ್ರಕೃಪೆ: Dennis Jarvis

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ವಿಶೇಷವೆಂದರೆ, ಇಲ್ಲಿನ ಶಿಲ್ಪಕಲೆಗಳಲ್ಲಿ ಕಾಮಸೂತ್ರದ ಹಲವಾರು ಭಂಗಿಗಳನ್ನು ಅದ್ಭುತವಾಗಿ ಬಿಂಬಿಸುವಂತೆ ಕೆತ್ತಲಾಗಿದ್ದು ವಿದೇಶಿಗರ ಸಾಕಷ್ಟು ಗಮನ ಸೆಳೆಯುತ್ತದೆ. ಆ ಒಂದು ಕಾರಣದಿಂದಾಗಿಯೆ ಇದು ಹೆಚ್ಚು ಮಹತ್ವ ಪಡೆದ ಮಧ್ಯ ಪ್ರದೇಶ ರಾಜ್ಯದ ಪ್ರವಾಸಿ ಕೇಂದ್ರವಾಗಿದೆ.

ಚಿತ್ರಕೃಪೆ: Dennis Jarvis

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಈ ದೇವಾಲಯಗಳ ಸಮೂಹದಲ್ಲಿ ಮೊದಲಿಗೆ 80 ಕ್ಕೂ ಅಧಿಕ ದೇವಾಲಯಗಳಿದ್ದವಾದರೂ ಪ್ರಸ್ತುತ 22 ದೇವಾಲಯಗಳು ನೋಡಲು ಯೋಗ್ಯವಾದ ಸುಸ್ಥಿತಿಯನ್ನು ಕಾಯ್ದುಕೊಂಡಿವೆ.

ಚಿತ್ರಕೃಪೆ: Dennis Jarvis

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಇತಿಹಾಸಕಾರರಿಂದ ಇಲ್ಲಿ ಮೊದಲು ಸಾಕಷ್ಟು ನೀರಿನ ಮೂಲಗಳಿದ್ದವೆನ್ನಲಾಗಿದೆ. ಅಂದರೆ ನೀರಿನ ದಂಡೆಯಲ್ಲಿ ಸಾಮಾನ್ಯವಾಗಿ ದೇವಾಲಯಗಳ ನಿರ್ಮಾಣ ಮಾಡುವಂತೆ ಇಲ್ಲಿಯು ನಿರ್ಮಾಣ ಮಾಡಲಾಗಿದೆ. ಎತ್ತರವಾದ ಜಗತಿಗಳ ಮೇಲೆ ಒಂದೊಂದು ಪ್ರತ್ಯೇಕವಾಗಿ ನಿಂತಿರುವ ಈ ದೇವಾಲಯಗಳ ರಚನೆಯಲ್ಲಿ ಯಾವುದೇ ಬಗೆಯ ವ್ಯವಸ್ಥಾಬದ್ಧ ಅನುಕ್ರಮವಾಗಲಿ ಅಥವಾ ಯೋಜನೆಯಾಗಲಿ ಇಲ್ಲ.

ಚಿತ್ರಕೃಪೆ: Dennis Jarvis

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಉತ್ತಮ ವಾಸ್ತುಶೈಲಿಯನ್ನು ಹೊಂದಿರುವ ಈ ದೇವಾಲಯಗಳು, ಮಂಟಪ, ಅಂತರಾಳ, ಗರ್ಭಗೃಹ, ಅರ್ಧ ಮಂಟಪದಂತಹ ರಚನೆಗಳನ್ನು ಹೊಂದಿರುವುದು ವಿಶೇಷವಾಗಿದೆ.

ಚಿತ್ರಕೃಪೆ: YashiWong

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ದೇವಾಲಯಗಳ ಉನ್ನತವಾದ ಶಿಖರಗಳು, ಅದ್ದೂರಿ ಗೋಪುರಗಳು ಮುಖ್ಯ ಅಂಗಗಳಾಗಿ ಕಂಡುಬರುವುದಲ್ಲದೆ ರಚನೆಗಳ ಔನ್ನತ್ಯವನ್ನು ಎತ್ತಿತೋರುವಂತಿವೆ. ಹೊರಗೋಡೆಗಳ ಮೇಲಿನ ಅಂಕರಣ ಕೆತ್ತನೆಗಳು ಕಟ್ಟಡಗಳ ಭವ್ಯತೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಚಿತ್ರಕೃಪೆ: YashiWong

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಆನಂದಮಯ ಅದರಲ್ಲೂ ವಿಶೇಷವಾಗಿ ಕಾಮ ಸಂತೃಪ್ತಿಯ ಜೀವನದ ಭಾವವನ್ನು ಸಾರುವ ಗಂಡು-ಹೆಣ್ಣಿನ ಸಮಾಗಮದ ಮತ್ತು ಸುಂದರ ದೇವತೆಗಳ ಶಿಲ್ಪಗಳು ನೂರಾರು ಸಂಖ್ಯೆಯಲ್ಲಿ ಕೆತ್ತಲ್ಪಟ್ಟಿದ್ದು ಅಂದಿನ ನಿವಾಸಿಗರ ಜೀವನಶೈಲಿ ಹಾಗೂ ನೈಪುಣ್ಯತೆಯನ್ನು ತೋರಿಸುತ್ತವೆ. ಇವೆಲ್ಲದರಿಂದ ಇಡೀ ಕಟ್ಟಡವೇ ಜೀವಂತವಾಗಿರುವಂತೆ ಭಾಸವಾಗುತ್ತದೆ.

ಚಿತ್ರಕೃಪೆ: Sankara Subramanian

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಖಜುರಾಹೊ ಶಿಲ್ಪಕಲೆಗಳ ಪ್ರವಾಸ:

ಕೇವಲ ದೇವಾಲಯಗಳ ಹೊರ ಗೋಡೆಗಳ ಮೇಲಲ್ಲದೆ ಒಳಭಾಗದಲ್ಲೂ ಅತ್ಯದ್ಭುತವಾದ ಕಲಾಕೃತಿಗಳನ್ನು ಕಾಣಬಹುದು. ಅದರಲ್ಲೂ ವಿಶೇಷವಾಗಿ ಕುಬ್ಜ ಸ್ತ್ರೀಯರ ನಯನ ಮನೋಹರ, ಭಾವೋದ್ವೇಗಗೊಳಿಸುವ ಭಂಗಿಗಳು ಗಮನಸೆಳೆಯುತ್ತವೆ.

ಚಿತ್ರಕೃಪೆ: Airunp

ಮಿಥುನ ಶಿಲ್ಪಕಲೆ

ಮಿಥುನ ಶಿಲ್ಪಕಲೆ

ಶಿಲ್ಪಕಲೆಯ ಪ್ರತಿಯೊಂದು ಹಂತಗಳಲ್ಲೂ ಶಿಲ್ಪಿಯ ಕಲಾ ನೈಪುಣ್ಯತೆ, ಕುಸುರಿ ಕೆಲಸದ ಅಗಾಧತೆ ಸಾಕಷ್ಟು ಅನಾವರಣಗೊಳ್ಳುತ್ತವೆ.

ಚಿತ್ರಕೃಪೆ: Aotearoa

ಮಿಥುನ ಶಿಲ್ಪಕಲೆ

ಮಿಥುನ ಶಿಲ್ಪಕಲೆ

ಈ ದೇವಾಲಯಗಳ ವಾಯವ್ಯ ಭಾಗದಲ್ಲಿ ಶೈವ ಹಾಗೂ ವೈಷ್ಣವ ದೇವಾಲಯಗಳಿವೆ. ಅದರಲ್ಲಿ ಖಂಡಾರಿಯಾ ಮಹಾದೇವ ದೇವಾಲಯ ಭಾರತದ ಪುರಾತನ ದೇವಾಲಯಗಳಲ್ಲೊಂದಾಗಿರುವುದಲ್ಲದೆ ಖಜುರಾಹೊದ ಪ್ರಮುಖ ದೇವಾಲಯಗಳಲ್ಲಿಯೂ ಒಂದಾಗಿದೆ.

ಚಿತ್ರಕೃಪೆ: JanManu

ಶಿಲ್ಪಕಲೆ

ಶಿಲ್ಪಕಲೆ

109 ಅಡಿ ಉದ್ದ 60 ಅಡಿ ಅಗಲ ಮತ್ತು ಭೂಮಿಯ ಮೇಲಿನಿಂದ 116 ಅಡಿ ಎತ್ತರ ಅಥವಾ ಜಗತಿಯಿಂದ 88 ಅಡಿ ಇರುವ ತಳಹದಿಯ ಮೇಲೆ ನಿರ್ಮಿತವಾಗಿದೆ. ಅದ್ಭುತವಗಿ ಕಂಡುಬರುವ ಶಿಖರ ಹಾಗೂ ಸುಂದರವಾಗಿ ಕೆತ್ತಲಾದ ಶಿಲ್ಪಕಲೆಗಲಿಂದ ನೋಡುಗರ ಮನಸನ್ನು ಕದಿಯುವಲ್ಲಿ ಯಶಸ್ವಿಯಾಗುತ್ತದೆ. ಖಂಡರಿಯಾ ಮಹಾದೇವ ದೇವಾಲಯ.

ಚಿತ್ರಕೃಪೆ: Aminesh.aryan

ಆಕರ್ಷಕ ಶಿಲ್ಪಕಲೆ

ಆಕರ್ಷಕ ಶಿಲ್ಪಕಲೆ

ಖಂಡರಿಯಾ ಮಹಾದೇವ ದೇವಾಲಯ ಶೈವ ದೇವಾಲಯವಾಗಿದ್ದರೆ ವೈಷ್ಣವ ದೇವಾಲಯಕ್ಕೆ ಸಾಕ್ಷಿಯಾಗಿ ಚತುರ್ಭುಜ ದೇವಾಲಯವಿರುವುದನ್ನು ನೋಡಬಹುದು.

ಚಿತ್ರಕೃಪೆ: Navin Gautam

ಆಕರ್ಷಕ ಶಿಲ್ಪಕಲೆ

ಆಕರ್ಷಕ ಶಿಲ್ಪಕಲೆ

ಖಂಡರಿಯಾ ಮಹಾದೇವ ದೇವಾಲಯ ಶೈವ ದೇವಾಲಯವಾಗಿದ್ದರೆ ವೈಷ್ಣವ ದೇವಾಲಯಕ್ಕೆ ಸಾಕ್ಷಿಯಾಗಿ ಚತುರ್ಭುಜ ದೇವಾಲಯವಿರುವುದನ್ನು ನೋಡಬಹುದು.

ಚಿತ್ರಕೃಪೆ: Navin Gautam

ಆಕರ್ಷಕ ದೇವಾಲಯ

ಆಕರ್ಷಕ ದೇವಾಲಯ

ಪಂಚಾಯತನ ಪದ್ಧತಿಯಲ್ಲಿ ನಿರ್ಮಿತವಾಗಿರುವ ಈ ವಿಷ್ಣು ಮಂದಿರದಲ್ಲಿ ಐದು ಗರ್ಭಗೃಹಗಳಿರುವುದನ್ನು ಕಾಣಬಹುದು. ಅಲ್ಲದೆ ಈ ದೇವಾಲಯವೂ ಸಹ ಸಾಕಷ್ಟು ಆಕರ್ಷಕ ಕಲಾಕ್ರ್‍ಇತಿಗಳಿಂದ ಕೂಡಿದ್ದು ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತದೆ.

ಚಿತ್ರಕೃಪೆ: Dennis Jarvis

ಮಿಥುನ ಶಿಲ್ಪಕಲೆಯ ಭಂಗಿ

ಮಿಥುನ ಶಿಲ್ಪಕಲೆಯ ಭಂಗಿ

ಈ ಹಿಂದೂ ದೇವಾಲಯಗಳ ಮಾದರಿಯಲ್ಲೇ ನಿರ್ಮಿತವಾದ ಆರು ಜೈನ ದೇವಾಲಯಗಳೂ ಸಹ ಇಲ್ಲಿದೆ ಇವುಗಳನು ಆಗ್ನೇಯ ದಿಕ್ಕಿನಲ್ಲಿ ಕಾಣಬಹುದಾಗಿದೆ. ಇವುಗಳ ಹೊರಗೋಡೆಗಳ ಮೇಲೆ ತೋರಣಗಳು, ಸ್ತಂಭಿಕೆಗಳು ಮುಂತಾದ ವಾಸ್ತುಕೃತಿಗಳ ಅಲಂಕರಣವಿಲ್ಲದೆ ಅವು ಸರಳವಾಗಿವೆ.

ಚಿತ್ರಕೃಪೆ: Vu2sga

ರೋಮಾಂಚಕ ಕೆತ್ತನೆ

ರೋಮಾಂಚಕ ಕೆತ್ತನೆ

ಒಟ್ಟಿನಲ್ಲಿ ಹೇಳಬೇಕೆಂದರೆ ಖಜುರಾಹೊದ ದೇವಾಲಯಗಳು ಭಾರತೀಯ ವಾಸ್ತುಕಲೆಯ ಶ್ರೀಮಂತಿಕೆಗೆ ಉತ್ತಮ ಸಾಕ್ಷಿಗಳಾಗಿದ್ದು ಕಲೆಯ ಮಹೋನ್ನತ ಘಟ್ಟವನ್ನು ಸೂಚಿಸುವ ಅದ್ಭುತ ಸ್ಮಾರಕಗಳಾಗಿವೆ ಎಂದರೂ ತಪ್ಪಾಗಲಾರದು.

ಚಿತ್ರಕೃಪೆ: Vu2sga

ಹೊರಗೋಡೆಗಳಲ್ಲಿ ಅರಳಿದ ಕೆತ್ತನೆ

ಹೊರಗೋಡೆಗಳಲ್ಲಿ ಅರಳಿದ ಕೆತ್ತನೆ

ಹಂತ ಹಂತವಾಗಿ ಕೆತ್ತಲಾದ ನಗ್ನ ಅಪ್ಸರೆಯರ ಸೌಂದರ್ಯಭರಿತ ದೇಹಗಳು, ಬಳುಕುತ್ತ ಶೃಂಗಾರ ರಸವನ್ನು ಉಕ್ಕಿಸುವ ಆ ಭಂಗಿಗಳು ಒಂದು ಕ್ಷಣ ನೋಡುಗರನ್ನು ಮಾಯಾ ಲೋಕಕ್ಕೆ ಕರೆದೊಯ್ಯುವಂತಿವೆ.

ಚಿತ್ರಕೃಪೆ: Jean-Pierre Dalbéra

ಸ್ತ್ರೀಯರ ಸೌಂದರ್ಯದ ಕೆತ್ತನೆಗಳು

ಸ್ತ್ರೀಯರ ಸೌಂದರ್ಯದ ಕೆತ್ತನೆಗಳು

ಸುಂದರ ಸ್ತ್ರೀಯರ ದೇಹಗಳಲ್ಲಿ ತುಂಬಿ ತುಳುಕುವ ವಿವಿಧ ಶೃಂಗಾರ ಪ್ರಧಾನ ಭಾವಭಂಗಿಗಳು, ಪುರುಷರ ಚಿತ್ತವನ್ನು ಕ್ಷೋಭೆಗೊಳಿಸುವ ರಸಮಯ ಸನ್ನಿವೇಶಗಳು ನೋಡುಗರ ಭಾವ ರಸವನ್ನು ಕೆಣಕುವಂತಿವೆ.

ಚಿತ್ರಕೃಪೆ: Antoine Taveneaux

ಕೈಬಿಸಿ ಕರೆಯುತಿದೆ

ಕೈಬಿಸಿ ಕರೆಯುತಿದೆ

ಖಜುರಾಹೊ ಒಂದು ಸಣ್ಣ ಪಟ್ಟಣವಾಗಿದ್ದು ಮಧ್ಯ ಪ್ರದೇಶ ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ನಗರದಿಂದ ಸುಮಾರು 50 ಕಿ.ಮೀ ಗಳಷ್ಟು ದೂರದಲ್ಲಿದೆ. ಇನ್ನೊಂದು ಪ್ರಸಿದ್ಧ ನಗರವಾದ ಝಾನ್ಸಿಯಿಂದ 175 ಕಿ.ಮೀ ಗಳಷ್ಟು ದೂರದಲ್ಲಿದೆ. ಛತ್ತರ್ಪುರ್ ನಿಂದ ಇಲ್ಲಿಗೆ ತೆರಳಲು ಬಾಡಿಗೆ ಕಾರುಗಳು ಹಾಗೂ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Aakash.gautam

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X