Search
  • Follow NativePlanet
Share
» »ಕೇರಳದಲ್ಲಿ ಬಾರೀ ಮಳೆ; ಮುಂದೂಡಲಾದ ಬೋಟ್‌ ರೇಸಿಂಗ್

ಕೇರಳದಲ್ಲಿ ಬಾರೀ ಮಳೆ; ಮುಂದೂಡಲಾದ ಬೋಟ್‌ ರೇಸಿಂಗ್

ಮಳೆಗಾಲದಲ್ಲಿ ಕೇರಳಕ್ಕೆ ಪ್ರವಾಸ ಹೋಗೋದು ಒಂಥರಾ ಖುಷಿ ನೀಡುತ್ತದೆ. ಕೇರಳದ ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಜಿಟಿ ಜಿಟಿ ಮಳೆಯಲ್ಲಿ ಕೇರಳದ ಪ್ರವಾಸ ಕೈಗೊಳ್ಳೊದು ನಿಜಕ್ಕೂ ಅದ್ಭುತ. ಆದರೆ ಈ ಬಾರಿ ಮಾತ್ರ ಕೇರಳ ಪ್ರವಾಸ ಹೋಗೋವಾಗ ಸ್ವಲ್ಪ ಆಲೋಚಿಸಬೇಕಾಗಿದೆ. ಯಾಕೆಂದರೆ ಕೇರಳದಲ್ಲಿ ಬಾರೀ ಮಳೆಯಾಗುತ್ತಿದೆ. ಕಳೆದ 24ಗಂಟೆಗಳಿಂದ ವಿಪರೀತ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ಥವಾಗಿದೆ.

ಇಡುಕ್ಕಿ ಡ್ಯಾಂ

ಇಡುಕ್ಕಿ ಡ್ಯಾಂ

ಇಡುಕ್ಕಿ ಡ್ಯಾಂನ್ನು 25ವರ್ಷಗಳ ನಂತರ ತೆರೆಯಲಾಗಿದ್ದು ಇದರಿಂದಲೂ ಕೇರಳದ ಸ್ಥಿತಿ ಇನ್ನಷ್ಟು ಭೀಕರವಾಗಿದೆ. ಸುಮಾರು ಜನರು ಸಾವನ್ನಪ್ಪಿದ್ದಾರೆ. ಏರ್‌ಫೋರ್ಸ್ ಹಾಗೂ ರಕ್ಷಣಾ ದಳದ ಪಡೆಗಳು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಕೇರಳಕ್ಕೆ ಪ್ರವಾಸ ಹೋಗೋದು ಅಷ್ಟೊಂದು ಸುರಕ್ಷಿತವಲ್ಲ ಎನ್ನಲಾಗುತ್ತಿದೆ.

ಬೋಟ್‌ ರೇಸ್

ಬೋಟ್‌ ರೇಸ್

ಮುನ್ನಾರ್‌, ಇಡುಕ್ಕಿ, ಆಲಪ್ಪಿ, ಕೇರಳದ ಬ್ಯಾಕ್‌ವಾಟರ್, ಕಪಲ್ ಬೋಟಿಂಗ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೆ ಆಗಸ್ಟ್ 11ರಂದು ನಡೆಯಲಿದ್ದ ಬೋಟ್‌ ರೇಸ್‌ ಸ್ಪರ್ಧೇಯನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಈ ಬಾರಿ ಬಾರೀ ಮಳೆ ಹಾಗೂ ಪ್ರವಾಹದಿಂದಾಗಿ ಜನರು ಅಲ್ಲಿಗೆ ತೆರಳುವುದು ಸುರಕ್ಷಿತವಲ್ಲ.

ಕಂಟ್ರೋಲ್ ರೂಂ

ಕಂಟ್ರೋಲ್ ರೂಂ

ಪೆರಿಯರ್ ನದಿಯ ಹೆಚ್ಚುತ್ತಿರುವ ಜಲಸ್ಥರವನ್ನು ನೋಡುತ್ತಿದ್ದರೆ ಕೊಚ್ಚಿ ಏರ್‌ಪೋರ್ಟ್ ಮುಳುಗುವುದರಲ್ಲಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಕಂಟ್ರೋಲ್ ರೂಂ ಮಾಡಲಾಗಿದೆ. ಹಾಗಾಗಿ ಯಾರಾದರೂ ಕೇರಳ ಪ್ರವಾಸ ಕೈಗೊಳ್ಳುವ ಪ್ಲ್ಯಾನ್ ಹಾಕಿದ್ದರೆ ಅದನ್ನು ಮುಂದೂಡುವುದು ಒಳ್ಳೆಯದು.

ಪ್ರವಾಸ ನಿಷೇಧ

ಪ್ರವಾಸ ನಿಷೇಧ

ಮಳೆ, ಪ್ರವಾಹವೆಲ್ಲಾ ನಿಂತ ಮೇಲೆ ಕೇರಳದ ಪ್ರವಾಸ ಕೈಗೊಳ್ಳುವುದು ಉತ್ತಮ. ಕೇರಳ ಸರ್ಕಾರ ಈಗಾಗಲೇ ಸುರಕ್ಷತಾ ದೃಷ್ಠಿಯಿಂದ ಪ್ರವಾಸವನ್ನು ನಿಷೇಧಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X