Search
  • Follow NativePlanet
Share
» »ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುವ ಕಾಡುದ್ಯಾನ

ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುವ ಕಾಡುದ್ಯಾನ

By Vijay

ಹೌದು, ಇದೊಂದು ರಕ್ಷಿತ ರಾಷ್ಟ್ರೀಯ ಉದ್ಯಾನ. ಪ್ರತಿ ವರ್ಷವೂ ಲಕ್ಷಕ್ಕಿಂತಲೂ ಹೆಚ್ಚು ಜನ ಪ್ರವಾಸಿಗರು ಈ ಅದ್ಭುತ ಹಾಗೂ ಆಕರ್ಷಕ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡುತ್ತಾರೆ. ಇದಕ್ಕೆ ಕಾರಣಗಳು ಹಲವು. ಪ್ರಮುಖವಾಗಿ, ಇದು ಇಡಿ ಏಷಿಯಾ ಖಂಡದಲ್ಲೆ ವೈವಿಧ್ಯಮಯ ಪಕ್ಷಿಗಳನ್ನು ವೀಕ್ಷಿಸಬಹುದಾದ ಅತ್ಯುನ್ನತ ಸ್ಥಳಗಳ ಪೈಕಿ ಒಂದು.

ದಟ್ಟ ಹಸಿರಿನ ಗಿಡ ಮರಗಳ ಮಧ್ಯೆ ಹರಡಿರುವ ಈ ಉದ್ಯಾನವು ಇರುವುದು ಪ್ರಖರವಾದ ಬಿಸಿಲು ಹಾಗೂ ಮರಭೂಮಿಗಳಿಂದ ಕೂಡಿದ ನಾಡಾದ ರಾಜಸ್ಥಾನದಲ್ಲಿ. ಉಳಿದ ಸಮಯದಲ್ಲಿ ಅತಿಯಾದ ಸುಡು ಬಿಸಿಲಿನಿಂದ ಕೂಡಿರುವ ಈ ರಾಜ್ಯ ಚಳಿಗಾಲದಲ್ಲಿ ಮೈಕೊರೆಯುವಷ್ಟು ತಿವ್ರತರವಾದ ಚಳಿಯನ್ನು ಹೊಂದಿರುತ್ತದೆ ಎಂದರೆ ಅಚ್ಚರಿಯಾಗದೆ ಇರಲಾರದು. ಚಳಿಗಾಲ ಈ ಉದ್ಯಾನಕ್ಕೆ ಭೇಟಿ ನೀಡಲು ಅದ್ಭುತ ಸಮಯ.

ನಿಮಗಿಷ್ಟವಾಗಬಹುದಾದ : ಚಿಲಿಪಿಲಿ ಜುಟ್ಟುಗಳ ಗುಟ್ಟು ಕಾಯ್ದುಕೊಂಡಿರುವ ರಂಗನತಿಟ್ಟು

ಇನ್ನೂ, ಈ ಸುಂದರ ರಾಷ್ಟ್ರೀಯ ಉದ್ಯಾನವು ರಾಜಸ್ಥಾನದ ಭರತಪುರ ಜಿಲ್ಲೆಯಲ್ಲಿದೆ. ಮೂಲತಃ ಇದೊಂದು ಅದ್ಭುತ ಪಕ್ಷಿಧಾಮ. ಅದರಲ್ಲೂ ವಿಶೇಷವಾಗಿ ಚಳಿಗಾಲದ ಸಂದರ್ಭದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ರಮಣೀಯ ಪಕ್ಷಿಧಾಮವಿದು. ಹಲವು ಬಗೆಯ, ವಿಶಿಷ್ಟ ಪಕ್ಷಿಗಳು ಈ ಸಮಯದಲ್ಲಿ ಈ ಧಾಮವನ್ನು ಆಶ್ರಯಿಸಿಕೊಂಡು ಬರುತ್ತವೆ. ಅಲ್ಲದೆ ಸುಮಾರು 230 ಬಗೆಯ ಪಕ್ಷಿ ಪ್ರಬೇಧಗಳು ಇಲ್ಲಿ ನೆಲೆಸಿವೆ.

ರಾಜಸ್ಥಾನ ಮೊದಲೆ ಶ್ರೀಮಂತ ರಾಜ ಇತಿಹಾಸ, ಅಸಾಮಾನ್ಯ ಕೋಟೆ ರಚನೆಗಳು, ವಿಶಿಷ್ಟ ಸಂಸ್ಕೃತಿ -ಸಂಪ್ರದಾಯಗಳಿಂದ ಕೂಡಿದ್ದು ಕೇವಲ ದೇಶವಲ್ಲದೆ ಜಗತ್ತಿನ ಎಲ್ಲೆಡೆಯಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಆ ಒಂದು ನಿಟ್ಟಿನಲ್ಲಿ ನೀವು ರಾಜಸ್ಥಾನ ಪ್ರವಾಸ ಕೈಗೊಂಡಿದ್ದರೆ ಈ ಅದ್ಭುತ ರಾಷ್ಟ್ರೀಯ ಉದ್ಯಾನಕ್ಕೊಮ್ಮೆ ಭೇಟಿ ನೀಡಲೇಬೇಕು. ಇದು ಸಾಮಾನ್ಯವಾಗಿ ದಕ್ಷಿಣ ಭಾರತದ ದಟ್ಟ ಕಾಡುಗಳಂತಿರದೆ ವಿಭಿನ್ನವಾಗಿದ್ದು ತನ್ನದೆ ಆದ ಒಂದು ವಿಶಿಷ್ಟತೆಯಿಂದ ಕೂಡಿದ್ದು ಭೇಟಿ ನೀಡುವವರಿಗೆ ಒಂದು ವಿನೂತನ ಅನುಭವ ನೀಡುತ್ತದೆ ಎಂದರೆ ತಪ್ಪಾಗಲಾರದು.

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಹಿಂದೆ ಭರತಪುರ ಪಕ್ಷಿಧಾಮ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಈ ರಾಷ್ಟ್ರೀಯ ಉದ್ಯಾನವು ಪ್ರಸ್ತುತ ಕೇವಲಾದೇವ್ ರಾಷ್ಟ್ರೀಯ ಉದ್ಯಾನ ಅಥವಾ ಕೇವಲಾದೇವ್ ಘನಾ ರಾಷ್ಟ್ರೀಯ ಉದ್ಯಾನ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. 1971 ರಲ್ಲಿ ರಕ್ಷಿತಧಾಮ ಎಂದು ಘೋಷಿಸಲ್ಪಟ್ಟ ಈ ಉದ್ಯಾನ ಒಂದು ವಿಶ್ವ ಪಾರಂಪರಿಕ ತಾಣವೂ ಹೌದು.

ಚಿತ್ರಕೃಪೆ: niiicedave

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಭಾರತದಲ್ಲಿರುವ ರಾಷ್ಟ್ರೀಯ್ ಉದ್ಯಾನಗಳಲ್ಲೊಂದಾಗಿರುವ ಕೇವಲಾದೇವ್ ಉದ್ಯಾನವು ಮನುಷ್ಯ - ನಿರ್ಮಿತ ಹಾಗೂ ಮನುಷ್ಯ - ನಿಯಂತ್ರಿತ ಜೌಗು ಪ್ರದೇಶವಾಗಿದ್ದು ವೈವಿಧ್ಯಮಯ ಜೀವ ಸಂಕುಲಗಳನ್ನೊಳಗೊಂಡ ರಕ್ಷಿತ ಪ್ರದೇಶವಾಗಿದೆ. ಅಲ್ಲದೆ ಸುತ್ತಮುತ್ತಲಿನ ಹಳ್ಳಿಗಳ ದನಕರುಗಳಿಗೆ ಮೇಯಲು ಅನುಕೂಲಕರವಾದ ತಾಣವಾಗಿಯೂ ಕಾರ್ಯನಿರ್ವಹಿಸುತ್ತದೆ.

ಚಿತ್ರಕೃಪೆ: Bengal Monitor

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಈ ರಾಷ್ಟ್ರೀಯ ಉದ್ಯಾನದಒಳಗಡೆ ಸುಮಾರು 29 ಚ.ಕಿ.ಮೀ ಗಳಷ್ಟು ವಿಸ್ತಾರವಾದ ಪ್ರದೇಶವು ದಟ್ಟವಾದ ಹುಲ್ಲುಗಾವಲುಗಳು, ಗಿಡ-ಮರಗಳು ಹಾಗೂ ನೀರಿನ ಮೂಲಗಳಿಂದ ಸಂಪದ್ಭರಿತವಾಗಿದ್ದು ಈ ನಿರ್ದಿಷ್ಟ ಪ್ರದೇಶವನ್ನು ಘನಾ ಅಂದರೆ ದಟ್ಟ ಎಂಬ ಹೆಸರಿನಿಂದ ಸಂಭೋದಿಸಲಾಗುತ್ತದೆ. ಈ ಒಂದು ಪ್ರದೇಶವು ಈ ಉದ್ಯಾನದ ಪ್ರಮುಖ ಆಕರ್ಷಣೆ. ಇಲ್ಲಿ ವೈವಿಧ್ಯಮಯ ಜೀವ ಸಂಕುಲನವನ್ನು ಆಳವಾಗಿ ಅಭ್ಯಸಿಸಬಹುದಾಗಿದೆ.

ಚಿತ್ರಕೃಪೆ: priyasavy

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಅಧಿಕೃತವಾಗಿ ದಾಖಲಿಸಲಾದ ಅಂಕಿ ಅಂಶಗಳ ಪ್ರಕಾರ ಹೇಳುವುದಾದರೆ ಇಲ್ಲಿ, 366 ಬಗೆಯ ಪಕ್ಷಿ ಸಂತತಿಗಳು, 379 ಬಗೆಯ ಸಂಸ್ಯ, ಹೂವುಗಳ ಸಂತತಿಗಳು, 50 ಬಗೆಯ ಮೀನು ಸಂತತಿಗಳು, 13 ಬಗೆಯ ಹಾವು ಸಂತತಿಗಳು, 5 ಬಗೆಯ ಹಲ್ಲಿ ಜಾತಿಯ ಸರಿಸೃಪಗಳು, 7 ಬಗೆಯ ಉಭಯವಾಸಿಗಳು ಹಾಗೂ 7 ಬಗೆಯ ಆಮೆ ಸಂತತಿಗಳು ಆಶ್ರಯ ಪಡೆದಿವೆ.

ಚಿತ್ರಕೃಪೆ: Josve05a

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಪಕ್ಷಿ ನೆಲೆಯಂತಲೆ ಅತಿ ಹೆಚ್ಚು ಪ್ರಖ್ಯಾತಿಗಳಿಸಿರುವ ಈ ಧಾಮವು ಜಗತ್ತಿನಲ್ಲಿಯೆ ಅತಿ ಹೆಚ್ಚು ಪಕ್ಷಿಗಳು ನೆಲೆಸಿರುವ ನೆಲೆಗಳ ಪೈಕಿ ಒಂದಾಗಿದೆ. ಚಳಿಗಾಲದ ಪ್ರಾರಂಭದಿಂದ ಇಲ್ಲಿ ವಿವಿಧ ದೇಶಗಳಿಂದ ಹಲವು ಬಗೆಯ ಪಕ್ಷಿಗಳು ಸಂತಾನೋತ್ಪತ್ತಿಗೆಂದು ಇಲ್ಲಿಗೆ ವಲಸೆ ಬರುತ್ತವೆ. ವಿಶೇಷವಾಗಿ ಈ ಸಮಯದಲ್ಲಿ ಈ ಧಾಮವು ನಿಸರ್ಗಪ್ರಿಯ ಪ್ರವಾಸಿಗರನ್ನು ಹಾಗೂ ಪಕ್ಷಿ ಸಾಸ್ತ್ರಜ್ಞರನ್ನು ಬಹುವಾಗಿ ಆಕರ್ಷಿಸುತ್ತದೆ. ಈ ಸಂದರ್ಭದಲ್ಲಿ ಸೈಬಿರಿಯನ್ ಕೊಕ್ಕರೆಗಳು ಪ್ರಮುಖವಾಗಿ ಇಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Josve05a

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಸುಮಾರು 250 ವರ್ಷಗಳ ಹಿಂದೆ ಮನುಷ್ಯನಿಂದ ನಿರ್ಮಿತ ಧಾಮ ಇದಾಗಿದ್ದು ಅಂದಿನ ಭರತಪುರವನ್ನು ಆಳುತ್ತಿದ್ದ ಅರಸರ ಬೇಟೆ ತಾಣವಾಗಿ ಇದು ಪ್ರಸಿದ್ಧವಾಗಿತ್ತು. ಇದು ನೈಸರ್ಗಿಕವಾಗಿ ತಗ್ಗು ಪ್ರದೇಶವಾಗಿದ್ದು ಭರತಪುರವನ್ನು ಭೌಗೋಳಿಕವಾಗಿ ನೆರೆಯಿಂದ ರಕ್ಷಿಸುವ ನೈಸರ್ಗಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಈ ಪ್ರದೇಶ ಬಳಿ ಕಾಣಬಹುದಾದ ಗಂಭೀರ ಹಾಗೂ ಬಾಣಗಂಗಾ ನದಿಗಳ ಸಂಗಮವಿದ್ದು ಅದರಿಂದ ನೆರೆಯ ಸಮ್ದರ್ಭದಲ್ಲಿ ನುಗ್ಗಬಹುದಾದ ಹೆಚ್ಚಿನ ಪ್ರಮಾಣದ ನೀರು ಈ ತಗ್ಗು ಪ್ರದೇಶದಲ್ಲಿ ನುಸುಳುವುದರಿಂದ ಇದರ ಇನ್ನೊಂದು ಬದಿಗೆ ಇರುವ ಭರತಪುರಕ್ಕೆ ನೀರು ನುಗ್ಗಲಾರದು.

ಚಿತ್ರಕೃಪೆ: Anupom sarmah

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

10 ಮಾರ್ಚ್ 1982 ರಂದು ಈ ಧಾಮವು ರಕ್ಷಿತ ಪಕ್ಷಿ ಧಾಮವಾಗಿ ಘೋಷಿತವಾಯಿತು. ಇದಕ್ಕೂ ಮುಂಚೆ ಇದು ಖಾಸಗಿಯವಾಗಿ ಮಹಾರಾಜರ ವಂಶಸ್ಥರಿಂದ ಬಾತು ಬೇಟೆಗಾಗಿ ಬಳಸಲ್ಪಡುತ್ತಿದ್ದ ತಾಣವಾಗಿತ್ತು. ಈ ಧಾಮಕ್ಕೆ ಪ್ರಾಣಿ, ಸರಿಸೃಪಗಳಿಗಿಂತಲೂ ಹೆಚ್ಚಾಗಿ ವಿಧ ವಿಧವಾದ ಸುಂದರ ಪಕ್ಷಿಗಳನ್ನು ನೋಡಲು ತೆರಳಬಹುದು. ಸದ್ದು ಗದ್ದಲಗಳಿಲ್ಲದ ಶಾಂತ ಪರಿಸರ, ಪಕ್ಷಿಗಳ ಕಲರವ, ಗಿಡ ಮರ ಬಳ್ಳಿಗಳು ಒಂದು ತಂಪಾದ ಅನುಭವವನ್ನು ನೀಡುತ್ತವೆ. ನೀರು ಫೆಬ್ರುವರಿ ಹಾಗೂ ನಂತರದ ಸಮಯದಲ್ಲಿ ಹೆಚ್ಚಾಗಿ ಬತ್ತಿ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ಪಂಪ್ ಸೆಟ್ ಗಳಿಂದ ಕೃತಕವಾಗಿ ನೀರು ಹರಿಯಬಿಡುವ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿದೆ.

ಚಿತ್ರಕೃಪೆ: Prashant Ram

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಭರತಪುರವು ದೆಹಲಿಯಿಂದ 180 ಕಿ.ಮೀ, ಆಗ್ರಾದಿಂದ 55 ಕಿ.ಮೀ, ಮಥುರಾದಿಂದ 35 ಕಿ.ಮೀ ಹಾಗೂ ಜೈಪುರದಿಂದ 178 ಕಿ.ಮೀ ಗಳಷ್ಟು ದೂರದಲ್ಲಿದ್ದು ಬಸ್ಸು ಹಾಗೂ ರೈಲುಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: ASIM CHAUDHURI

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ನಿಮ್ಮನ್ನು ಭರತಪುರಕ್ಕೆ ಸೆಳೆಯುವಂತೆ ಮಾಡುವ ಕೆಲವು ಸುಂದರ ಚಿತ್ರಗಳು. ಗ್ರೇ ಲ್ಯಾಗ್ ಎಂಬ ಹೆಸರಿನ ಹೆಬ್ಬಾತು ಕೋಳಿ.

ಚಿತ್ರಕೃಪೆ: Lip Kee

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಶಿಳ್ಳೆ ಹೊಡೆಯುವ ಬಾತು.

ಚಿತ್ರಕೃಪೆ: Koshy Koshy

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಗೆರೆಯುಳ್ಳ ಹೆಬ್ಬಾತು. ಇದನ್ನು ಅನ್ಸೆರ್ ಇಂಡಿಕಸ್ ಎಂದು ವೈಜ್ಞಾನಿಕವಾಗಿ ಕರೆಯಲಾಗುತ್ತದೆ.

ಚಿತ್ರಕೃಪೆ: Lip Kee

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ನೀರು ಕಾಗೆ ಅಥವಾ ಮಿಂಚುಳ್ಳಿ. ಇದು ನೀರಿನ ಮೂಲಗಳ ಆಸು ಪಾಸಿನಲ್ಲೆ ಸಾಮಾನ್ಯವಾಗಿ ಭಾರತದೆಲ್ಲೆಡೆ ಕಂಡುಬರುವ ಪಕ್ಷಿ. ಆಂಗ್ಲದಲ್ಲಿ ಇದನ್ನು ಡಾರ್ಟರ್ ಅಥವಾ ಸ್ನೇಕ್ ಬರ್ಡ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Koshy Koshy

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಟೀಲ್ ಎಂಬ ತಾಜಾ ನೀರಿನ ಕೊಳದ ಪುಟ್ಟ ಬಾತು ಕೋಳಿ. ಸಾಮಾನ್ಯವಾಗಿ ಹಿಂದಿನ ರೆಕ್ಕೆಗಳು ಗಾಢವಾದ ಹಸಿರು ಬಣ್ಣದಿಂದ ಕೂಡಿರುತ್ತದೆ.

ಚಿತ್ರಕೃಪೆ: Lip Kee

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಭರತಪುರ ಪಕ್ಷಿ ಧಾಮದ ಕೊಳವೊಂದರಲ್ಲಿ ಕಂಡು ಬಂದ ಇಂಡಿಯನ್ ರೂಫ್ಡ್ ಟರ್ಟಲ್.

ಚಿತ್ರಕೃಪೆ: CLPramod

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಭರತಪುರ ಪಕ್ಷಿ ಧಾಮದ ಕೊಳವೊಂದರಲ್ಲಿ ಕಂಡು ಬಂದ ಭಾರತೀಯ ಹೆಬ್ಬಾವು.

ಚಿತ್ರಕೃಪೆ: Paul Asman and Jill Lenoble

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಭರತಪುರ ಪಕ್ಷಿ ಧಾಮದಲ್ಲಿ ಕಂಡುಬಂದ ಸಾಂಬಾರು ಜಿಂಕೆ.

ಚಿತ್ರಕೃಪೆ: Flying Pharmacist

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ನೀಲ್ಗಾಯ್ ಎಂಬ ಹೆಸರಿನ ಚಿಗರೆ. ಕೇವಲಾದೇವ್ ರಾಷ್ಟ್ರೀಯ ಉದ್ಯಾನದಲ್ಲಿ.

ಚಿತ್ರಕೃಪೆ: Anupom sarmah

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕುಣಿಗಳಿಗಿಂತ ಹೆಚ್ಚಾಗಿ ಪೊದೆಗಳಲ್ಲಿ ಕಂಡುಬರುವ ಇಲಿ. ಕೇವಲಾದೇವ್ ರಾಷ್ಟ್ರೀಯ ಉದ್ಯಾನದಲ್ಲಿ.

ಚಿತ್ರಕೃಪೆ: Rana & Sugandhi

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ನಾಡಿಗಿಂತ ಕಾಡಿನಲ್ಲಿ ಸ್ವಚ್ಛಂದವಾಗಿ ವಾಸಿಸುತ್ತಿರುವ ಕಾಡು ಮಂಗ.

ಚಿತ್ರಕೃಪೆ: André Richard Chalmers

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನದಲ್ಲಿ ಬೆಳ್ಳಂಬೆಳಿಗ್ಗೆ ಕುಟುಂಬಸಹಿತವಾಗಿ ಉಪಹಾರ ಸವಿಯುತ್ತಿರುವ ಕೊಕ್ಕರೆ ಹಿಂಡು.

ಚಿತ್ರಕೃಪೆ: Nikhilchandra81

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಟಕ್ಕನೆ ನೀರಿನೊಳಗೆ ನುಸುಳಿ ಪಕ್ಕನೆ ಮೀನು ಹಿಡಿಯುವ ಕಿಂಗ್ ಫಿಷರ್.

ಚಿತ್ರಕೃಪೆ: Himansu Tripathy

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ನಲ್ಲಿ ಕಂಡುಬರುವ ಈಜಿಪ್ತ ದೇಶದ ರಣ ಹದ್ದುಗಳು.

ಚಿತ್ರಕೃಪೆ: J.M.Garg

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ತಿಂಡಿಬಾಕ ವಿಶಾಲವಾದ ನೀರು ಕಾಗೆ.

ಚಿತ್ರಕೃಪೆ: J.M.Garg

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಭಾರತೀಯ ರಣ ಹದ್ದುಗಳ ಸಾಮಿಪ್ಯವನ್ನು ಆನಂದಿಸುತ್ತಿರುವ ಒಬ್ಬ ವಿದೇಶಿ ಪ್ರವಾಸಿಗ.

ಚಿತ್ರಕೃಪೆ: Josve05a

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ಕೇವಲಾದೇವ್ ರಾಷ್ಟ್ರೀಯ ಉದ್ಯಾನ :

ವಿಶ್ವ ವಿಖ್ಯಾತಿಯ ಸಾರಸ್ ಕೊಕ್ಕರೆ ಹಕ್ಕಿಯ ಗಮ್ಯ ನೋಟ.

ಚಿತ್ರಕೃಪೆ: J.M.Garg

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X