Search
  • Follow NativePlanet
Share
» »ನೋಡಬನ್ನಿ ಉಡುಪಿಯ ‘ಕೆಮ್ಮಣ್ಣು ತೂಗು ಸೇತುವೆ’ ಸೊಬಗು  

ನೋಡಬನ್ನಿ ಉಡುಪಿಯ ‘ಕೆಮ್ಮಣ್ಣು ತೂಗು ಸೇತುವೆ’ ಸೊಬಗು  

ಈಗಾಗಲೇ ಬೆಟ್ಟ, ಕೋಟೆ, ಚಾರಣ ಎಂದು ಪ್ರವಾಸ ಮಾಡಿರುವವರು ಒಮ್ಮೆ ಉಡುಪಿಯ ಕೆಮ್ಮಣ್ಣು ತೂಗು ಸೇತುವೆಗೆ ಭೇಟಿ ಕೊಡಿ. ವಾರಾಂತ್ಯದಲ್ಲಿ ಸ್ನೇಹಿತರು, ಕುಟುಂಬದವರ ಜೊತೆ ಪಿಕ್ನಿಕ್ ಹೋಗಬೇಕೆಂದುಕೊಳ್ಳುತ್ತಿರುವವರಿಗೆ ಇದು ಬೆಸ್ಟ್ ಪ್ಲೇಸ್. ತೋನ್ಸೆ ಬಳಿಯಿರುವ 'ಕೆಮ್ಮಣ್ಣು ತೂಗು ಸೇತುವೆ' ಅಥವಾ 'ಕೆಮ್ಮಣ್ಣು ಹ್ಯಾಂಗಿಗ್ ಬ್ರಿಡ್ಜ್' ಉಡುಪಿಯ ಅತ್ಯಂತ ಆಕರ್ಷಕ ಸ್ಥಳಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೊರಜಗತ್ತಿಗೆ ಹೆಚ್ಚು ಪರಿಚಯವಾದ ಈ ಸೇತುವೆಯನ್ನು ಕರ್ನಾಟಕ ರಾಜ್ಯದಲ್ಲಿ ಇರುವವರು ಒಮ್ಮೆಯಾದರೂ ನೋಡಲೇಬೇಕಾದ ಸ್ಥಳವಾಗಿದೆ.

ಕರವಾಳಿ ಭಾಗದ ಜನರಿಗೆ ಈ ಸೇತುವೆಯ ಪರಿಚಯ ಇದ್ದೇ ಇರುತ್ತದೆ. ಆದರೆ ದೂರವಿರುವವರು ಇದನ್ನು ಹಲವಾರು ಚಲನಚಿತ್ರಗಳಲ್ಲಿ ನೋಡಿರಬೇಕು ಅಥವಾ ಅದರ ಬಗ್ಗೆ ಕೇಳಿರಬಹುದು. ಡೆಲ್ಟಾ ಬೀಚ್'ನಿಂದ 7.5 ಕಿಮೀ ದೂರದಲ್ಲಿರುವ ಇದು ಉಡುಪಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಮೊದಲು ಸೇತುವೆ ಹೀಗಿರಲಿಲ್ಲ

ಮೊದಲು ಸೇತುವೆ ಹೀಗಿರಲಿಲ್ಲ

ಸ್ವರ್ಣಾ ನದಿಯ ಎರಡು ದಡಗಳನ್ನು ಅಂದರೆ ತಿಮ್ಮಣ್ಣ ಕುದ್ರು ಮತ್ತು ಪಡುಕುದ್ರು ದ್ವೀಪದ ಜನರನ್ನು ಸಂಪರ್ಕಿಸುವ ಉದ್ದೇಶದಿಂದ ನಿರ್ಮಿಸಲಾದ ಕೆಮ್ಮಣ್ಣು ತೂಗು ಸೇತುವೆ ಇತ್ತೀಚೆಗೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಮೊದಲು ಕೆಮ್ಮಣ್ಣು ತೂಗು ಸೇತುವೆ ಪ್ರವಾಸಿ ತಾಣವಾಗಿರಲಿಲ್ಲ. ಸ್ಥಳೀಯರು ಪ್ರಯಾಣಿಸಲು ಅತ್ಯುತ್ತಮ ಮಾರ್ಗವಾಗಿತ್ತು. ಈ 280 ಅಡಿ ಉದ್ದದ ಸೇತುವೆಯು ನದಿಯ ಮಧ್ಯದಲ್ಲಿ ನೇತಾಡುವುದರಿಂದ ನದಿ ಮತ್ತು ಅದರ ಸುತ್ತಲಿನ ಪ್ರಕೃತಿಯ ಅಂದವನ್ನು ಸವಿಯಬಹುದು.

1991 ರಲ್ಲಿ ನಿರ್ಮಿಸಲಾದ ಕೆಮ್ಮಣ್ಣು ತೂಗು ಸೇತುವೆಯನ್ನು ಒಂದು ಕಾಲದಲ್ಲಿ ಮರದಿಂದ ಮಾಡಲಾಗಿತ್ತು. ಆದರೆ ಸ್ಥಳೀಯರು ಅಂತಿಮವಾಗಿ 2015ರಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಸೇತುವೆಯನ್ನು ನವೀಕರಿಸಿದರು. ಮರದ ಹಲಗೆಗಳನ್ನು ಸಿಮೆಂಟ್ ಹಲಗೆಗಳಾಗಿ ಬದಲಾಯಿಸಿದರು.

ಶಾಂತವಾಗಿರುವ ಸುಂದರವಾದ ಸ್ಥಳ

ಶಾಂತವಾಗಿರುವ ಸುಂದರವಾದ ಸ್ಥಳ

ಉಡುಪಿಯಿಂದ ಕೆಮ್ಮಣ್ಣುಗೆ ಬಸ್ಸಿನಲ್ಲಿ ಹೋಗಿ ನಂತರ ಸೇತುವೆಯ ಮೇಲೆ ನಡೆದುಕೊಂಡು ಹೋಗಬಹುದು. ಮಳೆ ಇಲ್ಲದಿದ್ದಾಗ ಸುಲಭವಾಗಿ ನಡೆದೇ ಹೋಗಬಹುದು. ನಡೆಯಲು ಆಗದಿದ್ದರೆ ನೀವು ಟ್ಯಾಕ್ಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಟ್ಯಾಕ್ಸಿ ನಿಮ್ಮನ್ನು ನೇರವಾಗಿ ಸೇತುವೆಯ ಬಳಿ ಇಳಿಸುತ್ತದೆ. ಸೇತುವೆಯು ಪಶ್ಚಿಮ ಭಾಗದಲ್ಲಿ ಅರೇಬಿಯನ್ ಸಮುದ್ರದಿಂದ ಸುತ್ತುವರೆದಿದೆ ಮತ್ತು ಪೂರ್ವ ಭಾಗದಲ್ಲಿ ಸುವರ್ಣ ನದಿಯಿಂದ ಸ್ಪರ್ಶಿಸಲ್ಪಟ್ಟಿದೆ.

ಇದು ಚಿಕ್ಕ, ಶಾಂತ ಮತ್ತು ಸುಂದರವಾದ ಸ್ಥಳವಾಗಿದೆ. ಸುವರ್ಣಾ ನದಿಯು ತೋನ್ಸೆಯಲ್ಲಿ ಹಲವಾರು ದ್ವೀಪಗಳನ್ನು ಸೃಷ್ಟಿಸುತ್ತದೆ. ಅದು ಅಂತಿಮವಾಗಿ ಕೋಡಿಬೆಂಗ್ರೆಯಲ್ಲಿ ಸಮುದ್ರದೊಂದಿಗೆ ವಿಲೀನಗೊಳ್ಳುತ್ತದೆ.

ಸಿನಿಮಾ ಚಿತ್ರೀಕರಣಕ್ಕೂ ಫೇಮಸ್

ಸಿನಿಮಾ ಚಿತ್ರೀಕರಣಕ್ಕೂ ಫೇಮಸ್

ಕೆಮ್ಮಣ್ಣು ತೂಗು ಸೇತುವೆ ಎರಡೂ ಬದಿಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತವೆ. ಸೇತುವೆಯ ಹೊರತಾಗಿ ಇಲ್ಲಿಗೆ ಬಂದಾಗ ಭೇಟಿ ನೀಡಬಹುದಾದ ಹಳ್ಳಿಯ ಸುತ್ತಲೂ ಹಲವಾರು ಆಕರ್ಷಣೀಯ ಸ್ಥಳಗಳಿವೆ. ಸೇತುವೆಯನ್ನು ನಿರ್ಮಿಸುವ ಮೊದಲು ದ್ವೀಪವನ್ನು ದೋಣಿಗಳ ಮೂಲಕ ಮಾತ್ರ ಪ್ರವೇಶಿಸಬಹುದಾಗಿತ್ತು.

ತೂಗಾಡುತ್ತಿರುವ ಕೆಮ್ಮಣ್ಣು ಸೇತುವೆಯು ದೂರದ ಸ್ಥಳಗಳಿಂದ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದೇನೇ ಇದ್ದರೂ, ಇದು ದಕ್ಷಿಣ ಭಾರತದ ಚಲನಚಿತ್ರಗಳ ಚಿತ್ರೀಕರಣಕ್ಕೆ ಬಹಳ ಪ್ರಸಿದ್ಧವಾದ ಸ್ಥಳವಾಗಿದೆ. ಸೇತುವೆಯ ಎಡಕ್ಕೆ ಸೇಂಟ್ ಮೇರಿಸ್ ದ್ವೀಪವನ್ನು ಗುರುತಿಸಬಹುದು.

ಸಾಹಸಿ ಪ್ರಿಯರ ಮೆಚ್ಚಿನ ಸ್ಥಳ

ಸಾಹಸಿ ಪ್ರಿಯರ ಮೆಚ್ಚಿನ ಸ್ಥಳ

ಇದು ಈಗ ಹಲವಾರು ಸಾಹಸ ಕ್ರೀಡೆಗಳಿಗೆ ಜನಪ್ರಿಯ ಸ್ಥಳವಾಗಿದೆ. ಸೇತುವೆಯ ಸುತ್ತಲೂ ಹಲವಾರು ಸಾಹಸ ಚಟುವಟಿಕೆಗಳ ಸಂಘಟಕರು ಕಯಾಕಿಂಗ್, ಬೋಟಿಂಗ್ ಮತ್ತು ರಿವರ್ ರಾಫ್ಟಿಂಗ್‌ನಂತಹ ಜಲಕ್ರೀಡೆಗಳನ್ನು ನಡೆಸುತ್ತಾರೆ.

ಅತ್ಯಂತ ಕೈಗೆಟುಕುವ ದರದಲ್ಲಿ ಕಯಾಕಿಂಗ್ ಮತ್ತು ರಿವರ್ ರಾಫ್ಟಿಂಗ್ ಪ್ರಯತ್ನಿಸಬಹುದು. ದೋಣಿ ವಿಹಾರ ಮಾಡುವ ಪ್ರವಾಸಿಗರು, ಈ ಮೋಜಿನ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ, ದೂರದಿಂದ ನೇತಾಡುವ ಸೇತುವೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಹಸಿರನ್ನು ಬಯಸುವವರಿಗೆ ಯಾವುದೇ ಅಡೆತಡೆಯಿಲ್ಲದ ಎತ್ತರದ ತೆಂಗಿನ ಮರಗಳು ಎದುರಾಗುತ್ತವೆ.

ಸದ್ದುಗದ್ದಲವಿಲ್ಲ, ಜನಂಖ್ಯೆಯೂ ಕಡಿಮೆ

ಸದ್ದುಗದ್ದಲವಿಲ್ಲ, ಜನಂಖ್ಯೆಯೂ ಕಡಿಮೆ

ಈ ಸೇತುವೆಯತ್ತ ಪ್ರಯಾಣ ಮಾಡುವ ಮಧ್ಯೆ ನೀವು ಹಚ್ಚ ಹಸಿರಿನ ಗದ್ದೆ, ಗಿಡ, ಮರಗಳನ್ನು ನೋಡಬಹುದಾಗಿದ್ದು, ಇವು ಕೂಡ ಸೇತುವೆಯಂತೆಯೇ ಆಕರ್ಷಕವಾಗಿದೆ. ಒಂದು ಲೆಕ್ಕದಲ್ಲಿ ಇದು ಗೋವಾದ ಕಿರಿದಾದ ಬೀದಿಗಳನ್ನು ಹೋಲುತ್ತದೆ. ಹೆಚ್ಚು ಜನರಿಂದ ಕೂಡಿರುವ ಸ್ಥಳವನ್ನು ಇಷ್ಟಪಡದಿರುವವರು ಇಲ್ಲಿಗೆ ಭೇಟಿ ಕೊಡಬಹುದು. ಏಕೆಂದರೆ ರಜಾದಿನಗಳಲ್ಲಿಯೂ ಸಹ ಇಲ್ಲಿ ಜನಸಂಖ್ಯೆ ತುಂಬಾ ಕಡಿಮೆಯಿರುತ್ತದೆ. ಆದ್ದರಿಂದ ಯಾವುದೇ ಸದ್ದುಗದ್ದಲವಿಲ್ಲದ ಈ ಸ್ಥಳದಲ್ಲಿ ನಿಮ್ಮದೇ ಆಲೋಚನೆಯೊಂದಿಗೆ ಈ ಸ್ಥಳವನ್ನು ಆನಂದಿಸಬಹುದು.

ದೀರ್ಘ ವಾರಾಂತ್ಯ ರಜೆ ಕಳೆಯಲು ಬೆಸ್ಟ್ ಪ್ಲೇಸ್

ದೀರ್ಘ ವಾರಾಂತ್ಯ ರಜೆ ಕಳೆಯಲು ಬೆಸ್ಟ್ ಪ್ಲೇಸ್

ಮುಂದಿನ ಬಾರಿ ದೀರ್ಘ ವಾರಾಂತ್ಯದಲ್ಲಿ ಪ್ರವಾಸ ಹಮ್ಮಿಕೊಳ್ಳುವವರು ಉಡುಪಿಯ ಕೆಮ್ಮಣ್ಣು ತೂಗು ಸೇತುವೆ ಪ್ರಕೃತಿಯ ನಡುವೆ ವಿಶ್ರಾಂತಿ ಪಡೆಯಿರಿ. ಜೊತೆಗೆ ಕ್ಯಾಮೆರಾಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯಬೇಡಿ. ರಾಜಧಾನಿ ಬೆಂಗಳೂರಿನಿಂದ ಪ್ರಯಾಣಿಸುವವರಿಗೆ 8 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇಲ್ಲಿ ತೊರೆಗಳು ಹಚ್ಚ ಹಸಿರನ್ನು ಹೊದ್ದಿರುವ ತೆಂಗಿನ ಮರಗಳನ್ನು ನೋಡಲು ಎರಡು ಕಣ್ಣು ಸಾಲದು. ಈ ಪ್ರದೇಶವನ್ನು ಸುತ್ತುವರೆದಿರುವ ಹೊಳೆಯುವ ನೀಲಿ ನೀರು ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿದೆ. ಈ ಕೆಮ್ಮಣ್ಣು ತೂಗು ಸೇತುವೆ ತೋನ್ಸೆ ಮತ್ತು ಇಲ್ಲಿಗೆ ಹತ್ತಿರದ ಜನರಿಗೆ, ವಿಶ್ರಾಂತಿಯನ್ನು ಬಯಸುತ್ತಿರುವವರಿಗೆ ಉತ್ತಮ ತಾಣವಾಗಿದೆ.

ಉಡುಪಿಗೆ ಸಮೀಪವಿದೆ

ಉಡುಪಿಗೆ ಸಮೀಪವಿದೆ

ಉಡುಪಿಯಿಂದ ಕೆಮ್ಮಣ್ಣು ತೂಗು ಸೇತುವೆ ನೇರ ಸಂಪರ್ಕ ಹೊಂದಿದೆ. ಉಡುಪಿ ಭಾರತದ ಯಾವುದೇ ಭಾಗಗಳಿಗೆ ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಉಡುಪಿಗೆ ರೈಲು ಮತ್ತು ಬಸ್ ಸೇವೆಗಳು ಲಭ್ಯವಿದ್ದು, ಇಲ್ಲಿಂದ ಸೇತುವೆಗೆ ಹೋಗಲು ಬಸ್, ಟಾಕ್ಸಿ ಸೌಲಭ್ಯವಿದೆ. ಖಾಸಗಿ ಮತ್ತು ಸರ್ಕಾರಿ ಮಾಲೀಕರು ಎರಡೂ ಬಸ್‌'ಗಳನ್ನು ನಿರ್ವಹಿಸುತ್ತಿದ್ದಾರೆ. ಉಡುಪಿಗೆ ನೇರ ವಿಮಾನ ಸಂಪರ್ಕವಿಲ್ಲ. ಆದರೆ 60 ಕಿಮೀ ದೂರದಲ್ಲಿರುವ ಮಂಗಳೂರು ವಿಮಾನ ನಿಲ್ದಾಣವು ಉಡುಪಿಯನ್ನು ಭಾರತದ ಉಳಿದ ಭಾಗಗಳಿಗೆ ಮತ್ತು ಕೆಲವು ಗಲ್ಫ್ ದೇಶಗಳಿಗೆ ಸಂಪರ್ಕಿಸುವ ಹತ್ತಿರದ ವಿಮಾನ ನಿಲ್ದಾಣವಾಗಿದೆ.

FAQ's
  • ಪ್ರವಾಸಕ್ಕೆ ಸೂಕ್ತ ಸಮಯ

    ಅಕ್ಟೋಬರ್‌'ನಿಂದ ಮಾರ್ಚ್‌ ಉಡುಪಿಗೆ ಭೇಟಿ ನೀಡಲು ಉತ್ತಮ ಸಮಯ. ಡಿಸೆಂಬರ್ ನಿಂದ ಜನವರಿ ಮತ್ತು ಮೇ ನಿಂದ ಜೂನ್ ಉಡುಪಿಯಲ್ಲಿ ಪೀಕ್ ಸೀಸನ್. ಹೆಚ್ಚಿನ ಪ್ರವಾಸಿಗರು ದೀಪಾವಳಿ ಸಮಯದಲ್ಲಿ ಉಡುಪಿಗೆ ಭೇಟಿ ನೀಡಲು ಯೋಜಿಸುತ್ತಾರೆ. ಆದ್ದರಿಂದ ಈ ಸಮಯದಲ್ಲಿ ಹೋಟೆಲ್‌'ಗಳ ಬೆಲೆ ಸ್ವಲ್ಪ ಹೆಚ್ಚು.       

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X