Search
  • Follow NativePlanet
Share
» »ಬೆಂಗಳೂರಿನ ಈ ಕಾರ್ಯ ಸಿದ್ಧಿ ಹನುಮನಿಗೆ ಸಂಕಲ್ಪದ ತೆಂಗಿನಕಾಯಿ ಕಟ್ಟೋದು ಯಾಕೆ?

ಬೆಂಗಳೂರಿನ ಈ ಕಾರ್ಯ ಸಿದ್ಧಿ ಹನುಮನಿಗೆ ಸಂಕಲ್ಪದ ತೆಂಗಿನಕಾಯಿ ಕಟ್ಟೋದು ಯಾಕೆ?

ನಮ್ಮ ರಾಜ್ಯದಲ್ಲಿ ಸಾಕಷ್ಟು ಹನುಮಂತನ ದೇವಾಲಯಗಳಿವೆ. ಅವುಗಳಲ್ಲಿ ಹನುಮಂತನ ವಿಶೇಷವಾದ ದೇವಾಲಯವೊಂದು ಬೆಂಗಳೂರಿನಲ್ಲಿದೆ. ಇದನ್ನು ಕಾರ್ಯಸಿದ್ಧಿ ಹನುಮ ಎನ್ನುತ್ತಾರೆ. ಈ ದೇವಸ್ಥಾನದಲ್ಲಿ ನೀವು ಏನೇ ಭಕ್ತಿಯಿಂದ ಬೇಡಿದರೂ ನೆರವೇರುತ್ತದಂತೆ. ಬನ್ನಿ ಆ ವಿಶೇಷ ಹನುಮನ ದೇವಸ್ಥಾನದ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

ಬೆಂಗಳೂರಿನ ನೈಋತ್ಯ ಭಾಗದಲ್ಲಿರುವ ಗಿರಿನಗರದಲ್ಲಿರುವ ಅವಧೂತ ದತ್ತ ಪೀಠದಲ್ಲಿ ಕಾರ್ಯಸಿದ್ಧಿ ಆಂಜನೇಯ ಕ್ಷೇತ್ರವಿದೆ. ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಇಲ್ಲಿ ಭಕ್ತಿಯಿಂದ ಬೇಡಿಕೊಂಡರೆ ನಿಮ್ಮಇಚ್ಛೆ ಈಡೇರುವುದರಂತೆ.

ಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರುಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರು

ದೇವಸ್ಥಾನದ ವಿಶೇಷತೆ

ದೇವಸ್ಥಾನದ ವಿಶೇಷತೆ

PC: youtube

ಇಲ್ಲಿ ಭಕ್ತರು ಪ್ರದಕ್ಷಿಣೆ ಹಾಕುತ್ತಾ ಇರುವುದು ಕಾಣುತ್ತದೆ. ಹಾಗೂ ದೇವಸ್ಥಾನಾದ್ಯಂತ ತೆಂಗಿನಕಾಯಿ ಕಟ್ಟಿರುವುದು ನಿಮಗೆ ಕಾಣಿಸುತ್ತದೆ. ಹಾಗದರೆ ಈ ಪ್ರದಕ್ಷಿಣೆ ಹಾಗೂ ತೆಂಗಿನಕಾಯಿಯ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಪೂರ್ಣಫಲ

ಪೂರ್ಣಫಲ

PC: youtube

ತೆಂಗಿನಕಾಯಿಯನ್ನು ಪೂರ್ಣಫಲ ಎನ್ನುತ್ತಾರೆ. ಇದನ್ನು ಅರ್ಪಣೆ ಮಾಡುವುದರಿಂದ ಎಲ್ಲಾ ಶುಭವಾಗುತ್ತದಂತೆ. ಭಕ್ತರು ಅಲ್ಲೇ ಕೌಂಟರ್‌ನಲ್ಲಿರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಕೌಂಟರ್‌ನಲ್ಲಿ ಕೊಡಬೇಕು. ಅಲ್ಲಿ ಕಾಯಿಯ ಮೇಲೆ ಸಂಖ್ಯೆ ಹಾಗೂ ದಿನಾಂಕವನ್ನು ನಮೂದಿಸುತ್ತಾರೆ. ಆ ಕಾಯಿಯನ್ನು ತೆಗೆದುಕೊಂಡು ದೇವರ ಮುಂದೆ ಕುಳಿತು ಸಂಕಲ್ಪ ಮಾಡುತ್ತಾರೆ.

ಸೌತಡ್ಕ ಗಣಪತಿ ; ಇಲ್ಲಿನ ಗಂಟೆಯ ಮಹಿಮೆ ಏನು ಗೊತ್ತಾ?ಸೌತಡ್ಕ ಗಣಪತಿ ; ಇಲ್ಲಿನ ಗಂಟೆಯ ಮಹಿಮೆ ಏನು ಗೊತ್ತಾ?

ಪ್ರದಕ್ಷಿಣೆ

ಪ್ರದಕ್ಷಿಣೆ

PC: youtube

ಸಂಕಲ್ಪದ ನಂತರ ಪ್ರದಕ್ಷಿಣೆಗೆ ಸಿದ್ಧರಾಗಬೇಕು. ಪ್ರದಕ್ಷಿಣೆಯ ನಂತರ ಅದನ್ನು ನಿಗದಿತ ಸ್ಥಳದಲ್ಲಿ ಕಟ್ಟಲಾಗುತ್ತದೆ. ೧೬ ದಿನದಲ್ಲಿ ೪ ದಿನ ದಿನಕ್ಕೆ ೪೧ ಪ್ರದಕ್ಷಿಣೆ ಹಾಕಿ ೧೬ ನೇ ದಿನ ಬಂದು ಕಟ್ಟಿದ ಕಾಯಿಯನ್ನು ತೆಗೆದು ಸಿಹಿ ತಯಾರಿಸಿ ತಿನ್ನಬೇಕು ಆಗ ಎಲ್ಲವೂ ಶುಭವಾಗುತ್ತದೆ ಎನ್ನುತ್ತಾರೆ.

ಯಾವೆಲ್ಲಾ ದೇವರಿದ್ದಾರೆ

ಯಾವೆಲ್ಲಾ ದೇವರಿದ್ದಾರೆ

PC: youtube

ದೇವಸ್ಥಾನವು ಅನಘಾದೇವಿ ಸಮಾತೆ ಶ್ರೀ ದತ್ತಾತ್ರೇಯ, ಶಿವ, ಗಣಪತಿ ಮತ್ತು ನವಗ್ರಹ ಗುಡಿ ಗಳನ್ನು ಹೊಂದಿದೆ. ಈ ದೇವಸ್ಥಾನವು ಅವಧೂತಾ ದಟ್ಟ ಪೀಠದಿಂದ ನಡೆಸಲ್ಪಡುತ್ತದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಇಲ್ಲಿ ಹನುಮಂತನನ್ನು ಸ್ಥಾಪಿಸಿದ್ದಾರೆ.

ಬಳ್ಳಾರಿಯ ಗಾಣಾಗಟ್ಟೆ ಮಾಯಮ್ಮಳ ಪವಾಡ ಕೇಳಿದ್ದೀರಾ?ಬಳ್ಳಾರಿಯ ಗಾಣಾಗಟ್ಟೆ ಮಾಯಮ್ಮಳ ಪವಾಡ ಕೇಳಿದ್ದೀರಾ?

ಅನಘಾ ಪೂಜೆ

ಅನಘಾ ಪೂಜೆ

PC: youtube

ಶುಕ್ರವಾರ ಅನಘಾ ಪೂಜೆ ಮಾಡಲಾಗುತ್ತದೆ. ಮುತ್ತೈದೆಯರು ಈ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಇಲ್ಲಿ ಹನುಮನಿಗೆ ಭಕ್ತರು ವಿಶೇ‍ಷವಾದ ಎಲೆಯ ಹಾರವನ್ನು ಅರ್ಪಿಸುತ್ತಾರೆ.

ನಿತ್ಯ ಪೂಜೆಗಳು

ನಿತ್ಯ ಪೂಜೆಗಳು

PC: youtube

ಬೆಳಿಗ್ಗೆ ಮತ್ತು ಸಂಜೆಯ ಸಮಯಗಳಲ್ಲಿ ಶ್ರೀ ಕಾರ್ಯ ಸಿದ್ಧಿ ಹನುಮನಿಗೆ ಸಿಂಧುರಾ ಪೂಜೆ, ನಿತ್ಯ ಪೂಜೆ ಮತ್ತು ಆರತಿ ಅಬಿಷೇಕವನ್ನು ಪ್ರತಿದಿನ ಬೆಳಗ್ಗೆ ನಡೆಸಲಾಗುತ್ತದೆ ಮತ್ತು ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಸಂಜೆ ಮಂಗಳಾರತಿಯನ್ನು ನಡೆಸಲಾಗುತ್ತದೆ ಮತ್ತು ಪ್ರಸಾದವನ್ನು ನೀಡಲಾಗುತ್ತದೆ.

ಈ ಬಾರಿ ಮೈಸೂರು ದಸರಾಕ್ಕೆ ಹೋಗುವವರು ಇದನ್ನ ನೆನಪಿಟ್ಟುಕೊಳ್ಳಲೇ ಬೇಕುಈ ಬಾರಿ ಮೈಸೂರು ದಸರಾಕ್ಕೆ ಹೋಗುವವರು ಇದನ್ನ ನೆನಪಿಟ್ಟುಕೊಳ್ಳಲೇ ಬೇಕು

ಹನುಮಾನ್ ಜಯಂತಿ

ಹನುಮಾನ್ ಜಯಂತಿ

PC: youtube

ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಶ್ರೀ ಹನುಮಾನ್‌ಜಯಂತಿ ಹಬ್ಬವನ್ನು 12 ದಿನಗಳ ಕಾಲ ಉತ್ಸವವಾಗಿ ಆಚರಿಸಲಾಗುತ್ತದೆ. ದೇವಾಲಯದ ಭವ್ಯತೆಗಾಗಿ ಸುಮಾರು 35000 ಮಂದಿ ಯಾತ್ರಾರ್ಥಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X