India
Search
  • Follow NativePlanet
Share
» »ಕೊಂಕಣ ಕರಾವಳಿಯ ರಾಣಿ ಎಂದು ಕರೆಯಲ್ಪಡುವ ಸ್ಥಳ - ಕಾರವಾರ

ಕೊಂಕಣ ಕರಾವಳಿಯ ರಾಣಿ ಎಂದು ಕರೆಯಲ್ಪಡುವ ಸ್ಥಳ - ಕಾರವಾರ

ಕಾರವಾರವು ಭಾರತದ ಪರ್ಯಾಯ ದ್ವೀಪದಲ್ಲಿರುವ ಪಶ್ಚಿಮ ಕರಾವಳಿಯಲ್ಲಿದ್ದು, ಗೋವಾ ಜಿಲ್ಲೆಯಿಂದ ಕೇವಲ 15 ಕಿ.ಮೀ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಿಂದ 520 ಕಿಮೀ ದೂರದಲ್ಲಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ ಮತ್ತು 15ನೇ ಶತಮಾನಕ್ಕೆ ಸೇರಿದ ಇದು ಕೇವಾ ಐತಿಹಾಸಿಕ ಪಟ್ಟಣವಾಗಿರುವುದರ ಜೊತೆಗೆ ಉತ್ತಮ ವ್ಯಾಪಾರ ಕೇಂದ್ರವೂ ಆಗಿದೆ.
ಈ ಪಟ್ಟಣವು ನೈಸರ್ಗಿಕ ಬಂದರನ್ನು ಹೊಂದಿದ್ದು, ಸಂಬಾರ ಪದಾರ್ಥಗಳಿಗೆ ಹೆಸರುವಾಸಿಯಾದ ಕೇರಳಕ್ಕೆ ಹತ್ತಿರದಲ್ಲಿರುವುದರಿಂದ ಈ ಸ್ಥಳವು ಒಂದು ಕಾಲದಲ್ಲಿ ಪೋರ್ಚುಗೀಸರು,ಬ್ರಿಟೀಷರು ಮತ್ತು ಪೋರ್ಚುಗೀಸರು, ಅರೇಬಿಯನ್ನರಿಗೆ ವ್ಯಾಪಾರ ಕೇಂದ್ರವಾಗಿತ್ತು.ಈಗ ಭಾರತೀಯ ನೌಕಾಪಡೆಯ ನೆಲೆಯಾಗಿದ್ದು ಈ ಸ್ಥಳದ ಲಾಭವನ್ನು ಪಡೆದುಕೊಂಡಿದೆ.

ಕಾಳಿ ನದಿಯು ಕಾರವಾರಕ್ಕೆ ಸಮೀಪದಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ.ಕಾಳಿ ನದಿ ಸೇತುವೆಯ ಪಕ್ಕದಲ್ಲಿ ನಿರ್ಮಿಸಲಾಗಿರುವ ಪ್ರಸಿದ್ಧ ಸದಾಶಿವಗುಡ್ ಕೋಟೆ, ನದಿ, ಸೇತುವೆ, ದೂರದಲ್ಲಿರುವ ಕೋಟೆ ಮತ್ತು ನಿಧಾನವಾಗಿ ತೂಗಾಡುವ ತೆಂಗಿನ ಮರಗಳು ಪ್ರವಾಸಿಗರಿಗೆ ಪರಿಪೂರ್ಣ ಸುಂದರ ಚಿತ್ರಣವನ್ನು ನೀಡುತ್ತವೆ.

karwarculture

ಈ ಪ್ರದೇಶದ ಸಂಸ್ಕೃತಿ ಮತ್ತು ಇನ್ನಿತರ ವಿಷಯಗಳು

ಕಾರವಾರವು ಟಿಪ್ಪುಸುಲ್ತಾನನ ಕಾಲದಲ್ಲಿ ಅವನ ಆಳ್ವಿಕೆಗೆ ಒಳಪಟ್ಟಿತ್ತು ಅಲ್ಲದೆ ಇಲ್ಲಿಗೆ ಗೋವಾ ಹತ್ತಿರವಿರುವುದರಿಂದ ಬ್ರಿಟಿಷರು ಮತ್ತು ಪೋರ್ಚುಗೀಸ್ ಆಳ್ವಿಕೆಯಲ್ಲಿ ಸಮಯದಲ್ಲಿ ಈ ಸ್ಥಳಕ್ಕೆ ಗೋವಾದ ಅನೇಕ ಮಿಷನರಿಗಳು ಭೇಟಿ ನೀಡುತ್ತಿದ್ದರು ಇವೆಲ್ಲ ಕಾರಣಗಳಿಂದಾಗಿ ಕಾರವಾರವು ಮುಸಲ್ಮಾನರು ಮತ್ತು ಕ್ರೈಸ್ತ ಸಮಾಜಕ್ಕೆ ಸೇರಿದ ಹೆಚ್ಚಿನ ಮಟ್ಟದ ಜನಸಂಖ್ಯೆಯನ್ನು ಹೊಂದಿದೆ. ಕಾರವಾರದ ಸ್ಥಳೀಯರನ್ನು ಉತ್ತರ ಕನ್ನಡದ ಮೂಲನಿವಾಸಿಗಳು ಎಂದು ಕರೆಯಲಾಗುತ್ತದೆ ಹಾಗೂ ಸುಮಾರು 55% ಜನಸಂಖ್ಯೆಯು ಕೊಂಕಣಿ ಭಾಷೆ ಮಾತನಾಡುತ್ತಾರೆ, ಇಲ್ಲಿ ಕನ್ನಡ ಮಾತನಾಡುವುದು ಕಡಿಮೆಯೆಂದೇ ಹೇಳಬಹುದು.

ದೇಶದ ಏಕೈಕ ಕೊಂಕಣ ರಾಜ್ಯವಾಗಿರುವ ಗೋವಾಕ್ಕೆ ಹತ್ತಿರವಿರುವ ಕಾರವಾರವು ಕರ್ನಾಟಕದ ಒಂದು ಭಾಗವಾಗಿ ಇದ್ದರೂ ಕೂಡಾ ಕಾರವಾರದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೊಂಕಣಿ ಮಾತನಾಡುತ್ತಾ ಕೊಂಕಣಿ ಸಂಸ್ಕೃತಿಯನ್ನು ಅನುಸರಿಸುವವರಾಗಿರುತ್ತಾರೆ.

karwarculture

ಕಾರವಾರದಲ್ಲಿ ಮತ್ತು ಅದರ ಸುತ್ತಮುತ್ತಲಿನಲ್ಲಿ ನೋಡಬಹುದಾದ ಪ್ರವಾಸಿಸ್ಥಳಗಳು ಮತ್ತು ಮಾಡಬಹುದಾದ ಇನ್ನಿತರ ಚಟುವಟಿಕೆಗಳು

ಇಲ್ಲಿಯ ಬಂದರಿನ ಹೊರತಾಗಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮಗಳು ಇಲ್ಲಿಯ ಇನ್ನಿತರ ಪ್ರಮುಖ ಉದ್ಯಮಗಳಾಗಿವೆ . ಹೊಂಬಣ್ಣದ ಮರಳನ್ನು ಹೊಂದಿರುವ ಪ್ರಶಾಂತವಾದ ಕಡಲತೀರಗಳು ಅವುಗಳ ಜೊತೆಗೆ ತೆಂಗಿನಮರಗಳು ಮತ್ತು ಗಾಳಿಮರಗಳು ಮತ್ತು ನಿರ್ಮಲವಾದ ಸುತ್ತಮುತ್ತಲಿನ ಅಪರೂಪದ ಪ್ರದೇಶಗಳು ಪ್ರವಾಸಿಗರಿಗೆ ಸ್ವರ್ಗದ ಅನುಭವವನ್ನು ನೀಡುತ್ತದೆ

ಕಾರವಾರದ ಅನೇಕ ಸುಂದರ ಕಡಲತೀರಗಳಾದ ದೇವ್ ಬಾಗ್, ಕೂಡಿ ಮತ್ತು ಕಾಜು ಬಾಗ್‌ಗಳಲ್ಲಿ ಸ್ನಾರ್ಕ್ಲಿಂಗ್, ಈಜು, ಸರ್ಫಿಂಗ್ ಮತ್ತು ಡೈವಿಂಗ್‌ನಂತಹ ಜಲ ಕ್ರೀಡೆಗಳಿಗೆ ಅವಕಾಶವಿದ್ದು, ಸಾಹಸ ಪ್ರವಾಸಿಗರಿಗೆ ಈ ಸ್ಥಳವು ಸೂಕ್ತವಾಗಿದೆ. ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಆಸಕ್ತಿ ಹೊಂದಿರುವವರಿಗೆ ಅನೇಕ ಐತಿಹಾಸಿಕ ದೇವಾಲಯಗಳು, ಚರ್ಚ್‌ಗಳು ಮತ್ತು ಮಸೀದಿಗಳು ಮತ್ತು ಸಮಾಧಿಗಳಿವೆ.

ಈ ದೇವಾಲಯಗಳಲ್ಲಿ ಪ್ರಾಚೀನ ಕಾಲದ ಕರಕುಶಲತೆ ಮತ್ತು ಅದ್ಬುತ ವಾಸ್ತುಶಿಲ್ಪದ ವೈಭವವನ್ನು ಕಾಣಬಹುದಾಗಿದೆ. ಕಳೆದ ದಶಕಗಳಿಂದ, ಭಾರತೀಯ ನೌಕಾಪಡೆಯು ಇಲ್ಲಿ ನೆಲೆಯನ್ನು ಸ್ಥಾಪಿಸಿದೆ ಮತ್ತು ಭದ್ರತಾ ಕಾರಣಗಳಿಗಾಗಿ ಬಂದರನ್ನು ಸಾರ್ವಜನಿಕರಿಗೆ ಮುಚ್ಚಲಾಗಿದೆ. ಆದರೂ, ಪ್ರತಿ ವರ್ಷ ಆಚರಿಸುವ ನೌಕಾಪಡೆಯ ವಾರದಲ್ಲಿ, ನೌಕಾಪಡೆಯು ಇಲ್ಲಿಗೆ ಸಂದರ್ಶಕರಿಗೆ ಪ್ರವೇಶವನ್ನು ಅನುಮತಿಸುತ್ತದೆ ಮತ್ತು ಈ ಸಮಯದಲ್ಲಿ ನೀವು ಶತಮಾನಗಳಿಂದ ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುವ ಸುಂದರವಾದ ನೈಸರ್ಗಿಕ ಬಂದರಿನ ಒಂದು ನೋಟವನ್ನು ಪಡೆಯಬಹುದು.

ಕಾರವಾರಕ್ಕೆ ಭೇಟಿ ನೀಡಲು ಉತ್ತಮ : ಚಳಿಗಾಲವು ಇಲ್ಲಿಗೆ ಭೇಟಿಕೊಡಲು ಸೂಕ್ತವಾದ ಸಮಯವಾಗಿರುತ್ತದೆ.
ಕಾರವಾರವನ್ನು ತಲುಪುವುದು ಹೇಗೆ? : ಕಾರವಾರವನ್ನು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X