Search
  • Follow NativePlanet
Share
» »ರುದ್ರಪ್ರಯಾಗ: ಕಾರ್ತಿಕೇಯ ತನ್ನ ಎಲುಬನ್ನೇ ಶಿವನಿಗೆ ಅರ್ಪಿಸಿದ ಕ್ಷೇತ್ರ ಇದು

ರುದ್ರಪ್ರಯಾಗ: ಕಾರ್ತಿಕೇಯ ತನ್ನ ಎಲುಬನ್ನೇ ಶಿವನಿಗೆ ಅರ್ಪಿಸಿದ ಕ್ಷೇತ್ರ ಇದು

ಉತ್ತರಖಂಡವು ಆಧ್ಯಾತ್ಮದ ದೃಷ್ಠಿಯಿಂದ ಪ್ರಮುಖವಾದುದು. ಮನಸ್ಸಿನ ಶಾಂತಿಗಾಗಿ ವಿಶ್ಬಾದ್ಯಂತ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಉತ್ತರಖಂಡವು ಅಸಂಖ್ಯಾತ ದೇವಾಲಯಗಳ ಬೀಡಾಗಿದೆ. ಅವುಗಳಲ್ಲಿ ಕೆಲವು ಪೌರಾಣಿಕ ಕಾಲಕ್ಕೆ ಸಂಬಂಧಿಸಿದ್ದವುಗಳಾಗಿವೆ. ಪುಣ್ಯ ತೀರ್ಥಸ್ಥಳಗಳು ಹಿಮಾಲಯದ ಬೆಟ್ಟಗಳ ಮಧ್ಯದಲ್ಲಿದೆ. ಇಂದು ನಾವು ಒಂದು ವಿಶೇಷ ಪೌರಾಣಿಕ ಕಾಲಕ್ಕೆ ಸಂಬಂಧಿಸಿದ ಮಂದಿರದ ಬಗ್ಗೆ ತಿಳಿಸಲಿದ್ದೇವೆ.

ಕಾರ್ತಿಕ ಸ್ವಾಮಿ ಮಂದಿರ

ಕಾರ್ತಿಕ ಸ್ವಾಮಿ ಮಂದಿರ

ಉತ್ತರಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಕಾರ್ತೀಕ ಸ್ವಾಮಿ ದೇವಸ್ಥಾನವು ಹಿಂದೂಗಳ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಅದು ಕಾರ್ತಿಕೇಯನಿಗೆ ಸಮರ್ಪಿತವಾಗಿದೆ. ಇದು ಸಮುದ್ರಮಟ್ಟದಿಂದ 3050 ಕಿ.ಮೀ ಎತ್ತರದಲ್ಲಿದೆ. ಇದೊಂದು ಪ್ರಾಚೀನ ಮಂದಿರವಾಗಿದ್ದು 200 ವರ್ಷಗಳ ಇತಿಹಾಸ ಇದೆ ಎನ್ನಲಾಗುತ್ತದೆ. ಇದು ಚಾರಣಿಗರು ಹಾಗೂ ಸಾಹಸಪ್ರೀಯರ ನಡುವೆ ಬಹಳ ಪ್ರಸಿದ್ಧಿ ಹೊಂದಿದೆ.

ಅಂಡಮಾನ್‌ಗೆ ಹನಿಮೂನ್‌ ಹೋದ್ರೆ ಎಲ್ಲಿ, ಏನೆಲ್ಲಾ ಎಂಜಾಯ್‌ ಮಾಡಬಹುದುಅಂಡಮಾನ್‌ಗೆ ಹನಿಮೂನ್‌ ಹೋದ್ರೆ ಎಲ್ಲಿ, ಏನೆಲ್ಲಾ ಎಂಜಾಯ್‌ ಮಾಡಬಹುದು

80 ಮೆಟ್ಟಿಲುಗಳು

80 ಮೆಟ್ಟಿಲುಗಳು

PC: Sumita Roy Dutta

ಕಾರ್ತೀಕ ದೇವರ ಪೂಜೆ ಉತ್ತರ ಭಾರತದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಮಾಡಲಾಗುತ್ತದೆ. ಅಲ್ಲಿ ಕಾರ್ತಿಕ ಮರುಗನ್ ಎನ್ನುವ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಈ ಮಂದಿರ ಗಂಟೆಗಳ ಸದ್ದು 800 ಮೀಟರ್ ದೂರದವರೆಗೂ ಕೇಳಿಸುತ್ತದೆ. ಮಂದಿರದ ಗರ್ಭ ಗುಡಿಯನ್ನು ತಲುಪಬೇಕಾದರೆ ಸುಮಾರು 80 ಮೆಟ್ಟಿಲುಗಳನ್ನು ಹತ್ತಬೇಕು. ಇಲ್ಲಿ ಬೆಳಗ್ಗೆ, ಸಂಜೆಯ ಆರತಿ ಬಹಳ ಸುಂದರವಾಗಿರುತ್ತದೆ. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಪೌರಾಣಿಕ ವದಂತಿ

ಪೌರಾಣಿಕ ವದಂತಿ

PC: Mahinthan So

ಈ ಮಂದಿರದಲ್ಲಿ ಒಂದು ಮಹತ್ವಪೂರ್ಣ ಘಟನೆಯೂ ಸೇರಿದೆ. ಕಾರ್ತಿಕನು ಇದೇ ಸ್ಥಳದಲ್ಲಿ ತನ್ನ ಎಲುಬನ್ನು ಶಿವನಿಗೆ ಅರ್ಪಿಸಿದನು ಎನ್ನಲಾಗುತ್ತದೆ. ಶಿವನು ತನ್ನ ಇಬ್ಬರು ಪುತ್ರರಾದ ಗಣೇಶ ಹಾಗೂ ಕಾರ್ತಿಕೇಯರಲ್ಲಿ ಯಾರು ಬ್ರಹ್ಮಾಂಡದ ೭ ಸುತ್ತು ಸುತ್ತಿ ಮೊದಲಿಗೆ ಬರುತ್ತಾರೋ ಅವರ ಪೂಜೆಯನ್ನು ಎಲ್ಲಾ ದೇವಿ ದೇವತೆಗಳ ಪೂಜೆಗಿಂತ ಮೊದಲು ಮಾಡಲಾಗುತ್ತದೆ.

ಮುಂಬೈ-ಗೋವಾ ಕ್ರೂಸ್ : ಒಬ್ಬರಿಗೆ ಟಿಕೇಟ್‌ ದರ ಎಷ್ಟು? ಅದರೊಳಗೆ ಏನೆಲ್ಲಾ ಇದೆ?ಮುಂಬೈ-ಗೋವಾ ಕ್ರೂಸ್ : ಒಬ್ಬರಿಗೆ ಟಿಕೇಟ್‌ ದರ ಎಷ್ಟು? ಅದರೊಳಗೆ ಏನೆಲ್ಲಾ ಇದೆ?

ಎಲುಬನ್ನು ಅರ್ಪಿಸಿದ ಕಾರ್ತಿಕೇಯ

ಎಲುಬನ್ನು ಅರ್ಪಿಸಿದ ಕಾರ್ತಿಕೇಯ

ಗಣೇಶನು ಶಿವ ಪಾರ್ವತಿಯ ಏಳು ಸುತ್ತು ಸುತ್ತಿ ನೀವೇ ನನಗೆ ಬ್ರಹ್ಮಾಂಡ ಎಂದು ಹೇಳುತ್ತಾನೆ. ಇದರಿಂದ ಖುಷಿಯಾದ ಶಿವನು ಪ್ರಥಮ ಪೂಜೆಯ ಸೌಭಾಗ್ಯವನ್ನು ಗಣೇಶನಿಗೆ ಕರುಣಿಸುತ್ತಾನೆ. ಆದರೆ ಬ್ರಹ್ಮಾಂಡದ ಸುತ್ತು ಸುತ್ತಿ ಕಾರ್ತಿಕ ಹಿಂದಿರುಗಿದಾಗ ಎಲ್ಲಾ ವಿಷ್ಯ ತಿಳಿದು ತನ್ನ ದೇಹ ತ್ಯಾಗ ಮಾಡಿ ಎಲುಬನ್ನು ಶಿವನಿಗೆ ಅರ್ಪಿಸುತ್ತಾನೆ.

ಉತ್ತಮ ತಾಣ

ಉತ್ತಮ ತಾಣ

PC: Sumita Roy Dutta

ಇಲ್ಲಿಗೆ ಬರುವ ಪ್ರವಾಸಿಗರಿಗೆ ಇದೊಂದು ಉತ್ತಮ ತಾಣವಾಗಿದೆ. ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಜೊತೆಗೆ ಸಾಹಸಮಯ ತಾಣಗಳನ್ನು ಇಷ್ಟಪಡುವ ಪ್ರಕೃತಿ ಪ್ರೇಮಿಗಳಿಗೆ ಸೂಕ್ತವಾಗಿದೆ. ಚಾರಣ ಹೈಕಿಂಗ್ ಆನಂದ ಪಡೆಯಬಹುದು. ಬೆಟ್ಟಗುಡ್ಡಗಳ ನಡುವೆ ಫೋಟೋ ಕ್ಲಿಕ್ಕಿಸಬಹುದು. ಅಕ್ಟೋಬರ್‌ನಿಂದ ಮಾರ್ಚ್‌ನಲ್ಲಿ ಇಲ್ಲಿಗೆ ಬರಬಹುದು.

ಕೊಹಿನೂರ್ ವಜ್ರದ ಮೂಲ ಯಾವುದು? ಈ ಭದ್ರಕಾಳಿಗೂ ವಜ್ರಕ್ಕೂ ಸಂಬಂಧವೇನು?ಕೊಹಿನೂರ್ ವಜ್ರದ ಮೂಲ ಯಾವುದು? ಈ ಭದ್ರಕಾಳಿಗೂ ವಜ್ರಕ್ಕೂ ಸಂಬಂಧವೇನು?

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Sumita Roy Dutta

ಉತ್ತರಖಂಡದ ರುದ್ರಪ್ರಯಾಗದಲ್ಲಿರುವ ಕಾರ್ತಿಕ ಸ್ವಾಮಿ ದೇವಾಲಯಕ್ಕೆ ಮೂರು ಮಾರ್ಗಗಳಿಂದಲೂ ತಲುಪಬಹುದು. ಇಲ್ಲಿಗೆ ಸಮೀಪದ ವಿಮಾನನಿಲ್ದಾಣವೆಂದರೆ ಡೆಹ್ರಾಡೂನ್‌ನ ಜಲ್ಲಿಗ್ರಾಂಟ್. ಏರ್‌ಪೋರ್ಟ್‌ನಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ರುದ್ರಪ್ರಯಾಗ್ ತಲುಪಿ ಮಂದಿರಕ್ಕೆ ಹೋಗಬಹುದು. ರೈಲು ಮುಖಾಂತರ ಹೋಗುವುದಾದರೆ ಋಷಿಕೇಶ್ ರೈಲ್ವೆ ಸ್ಟೇಶನ್ ಮೂಲಕ ಹೋಗಬಹುದು. ಇನ್ನು ರುದ್ರಪ್ರಯಾಗಕ್ಕೆ ಅನೇಕ ಕಡೆಗಳಿಂದ ಬಸ್‌ಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X