Search
  • Follow NativePlanet
Share
» »ಹೀಗಿದೆ ನಮ್ಮ ಹೆಮ್ಮೆಯ ಕಾರ್ಗಿಲ್

ಹೀಗಿದೆ ನಮ್ಮ ಹೆಮ್ಮೆಯ ಕಾರ್ಗಿಲ್

By Vijay

1999, ಜುಲೈ ಸಮಯ, ಕಾಶ್ಮೀರ ಕಣಿವೆ ರಾಜ್ಯದಲ್ಲಿ ಯುದ್ಧದ ಕಾರ್ಮೋಡಗಳು ಕಾಣಿಸಲಾರಂಭಿಸಿವೆ. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನಗಳ ಮನದಲ್ಲಿ ಏನೋ ಒಂದು ರೀತಿಯ ಆತಂಕ ಮನೆ ಮಾಡಿದೆ. ಗುಂಡು, ಸಿಡಿ ಮದ್ದುಗಳ ರುದ್ರ ನರ್ತನ ಒಂದೆಡೆಯಿದ್ದರೆ, ಇನ್ನೊಂದೆಡೆ ಒಂದೆ ಕ್ಷಣದಲ್ಲಿ ಹಲವು ಬಲಿಗಳನ್ನು ತೆಗೆಯಬೇಕೆಂದು ಬಲೆ ಹಾಕಿ ಕಾದು ಕುಳಿತಿರುವ ಜವರಾಯನ ಆರ್ಭಟ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಕೆಚ್ಚೆದೆಯ ವೀರ ಯೋಧರು ತಮ್ಮ ಪ್ರಾಣದ ಹಂಗನ್ನೂ ತೊರೆದು ಶತ್ರುಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಬಿರುಸಿನಿಂದ ಹೋರಾಡುತ್ತಾರೆ ಹಾಗೂ ಸತ್ಯಕ್ಕೆ ಯಾವತ್ತಿದ್ದರೂ ಜಯವೆಂಬಂತೆ ನುಸುಳುಕೋರ ಶತ್ರುಗಳನ್ನು ಬಗ್ಗು ಬಡಿಯುತ್ತಾರೆ. ಹೌದು, ಇದೇ ಕಾರ್ಗಿಲ್ ಕದನ.

ಅಂದು ಯುದ್ಧದಿಂದ ಬಳಲಿ ಬೆಂಡಾಗಿದ್ದ ಕಾರ್ಗಿಲ್ ಇಂದು ದೇಶದ ವಿಜಯದ ಸಂಕೇತವಾಗಿ ಹೆಮ್ಮೆಯಿಂದ ಹೊಳೆಯುತ್ತಿದೆ. ಇದಕ್ಕೆ ಇಂಬು ನೀಡುವಂತೆ "ಆಪರೇಶನ್ ವಿಜಯ"ದ ನೆನಪಿಗಾಗಿ ಪ್ರತಿ ವರ್ಷ ಜುಲೈ 26 ರಂದು ಭಾರತದಲ್ಲಿ ಕಾರ್ಗಿಲ್ ವಿಜಯ ದಿನ ಎಂದು ಆಚರಿಸಲಾಗುತ್ತದೆ.

ಹಾಗಾದರೆ ಬನ್ನಿ, ನಮ್ಮನ್ನು ಚಿಂತಾ ಮುಕ್ತರನ್ನಾಗಿ ಮಾಡಿ, ನಮ್ಮನ್ನು ನಮ್ಮಿಷ್ಟದಂತೆ ಬದುಕಲು ಬಿಟ್ಟು ಆದರೆ ನಮ್ಮೆಲ್ಲರ ಹಾಗೂ ದೇಶದ ರಕ್ಷಣೆಯ ಮಹತ್ತರ ಜವಾಬ್ದಾರಿ ಹೊತ್ತುಕೊಂಡು ಹಗಲಿರುಳು ಗಡಿ ಕಾಯುತ್ತಿರುವ ನಮ್ಮ ವೀರ ಯೋಧರಿಗೆ ಹೃತ್ಪೂರ್ವಕವಾಗಿ ವಂದಿಸುತ್ತ ಕಾರ್ಗಿಲ್ ಪ್ರವಾಸೋದ್ಯಮದೆಡೆ ಒಂದು ಅಣುಕು ನೋಟ ಹಾಕೋಣ.

ಕಾರ್ಗಿಲ್:

ಕಾರ್ಗಿಲ್:

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲಡಾಖ್ ಪ್ರದೇಶದ ಕಾರ್ಗಿಲ್ ಪಟ್ಟಣವು ಲೇಹ್ ನಂತರದ ಎರಡನೇಯ ಅತಿ ದೊಡ್ಡ ಪಟ್ಟಣವಾಗಿದೆ.

ಚಿತ್ರಕೃಪೆ: Rajesh

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಜಿಲ್ಲೆಯ ಆಡಳಿತ ಪಟ್ಟಣವಾಗಿರುವ ಕಾರ್ಗಿಲ್, ಪ್ರಸಿದ್ಧ ದ್ರಾಸ್ ಕಣಿವೆಯಿಂದ 60 ಕಿ.ಮೀ ಹಾಗೂ ಶ್ರೀನಗರದಿಂದ 204 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Saurabh Lall

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಮೂಲತಃ ಕಣಿವೆ ಪ್ರಪಾತಗಳ ಪ್ರದೇಶವಾಗಿದ್ದು ಅಸಾಮಾನ್ಯ ವಾತಾವರಣ ಪರಿಸ್ಥಿತಿಯಿಂದ ಕೂಡಿದೆ. ಆದರೆ ಇಲ್ಲಿನ ಒಂದೊಂದು ಪ್ರದೇಶಗಳು ರುದ್ರ ರಮಣಿಯ ನೋಟಗಳನ್ನು ಹೊಂದಿದ್ದು ನೋಡುಗರನ್ನು ರೋಮಾಂಚಿತಗೊಳಿಸುತ್ತದೆ.

ಚಿತ್ರಕೃಪೆ: Tarun R

ಕಾರ್ಗಿಲ್:

ಕಾರ್ಗಿಲ್:

ಸಮುದ್ರ ಮಟ್ಟದಿಂದ 8780 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಪಟ್ಟಣವು ಸುರು (ಇಂಡಸ್) ನದಿ ದಂಡೆಯ ಮೇಲಿದೆ.

ಚಿತ್ರಕೃಪೆ: Miran Rijavec aka Stan Dalone

ಕಾರ್ಗಿಲ್:

ಕಾರ್ಗಿಲ್:

ಶ್ರೀನಗರವನ್ನು ಲೇಹ್ ದೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 1D ಕಾರ್ಗಿಲ್ ಮೂಲಕ ಹಾದು ಹೋಗುವುದರಿಂದ ಲೇಹ್ ಅಥವಾ ಶ್ರೀನಗರದಿಂದ ಕಾರ್ಗಿಲ್ ಪಟ್ಟಣವನ್ನು ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Praveen Selvam

ಕಾರ್ಗಿಲ್:

ಕಾರ್ಗಿಲ್:

ಪ್ರವಾಸೋದ್ಯಮದ ದೃಷ್ಟಿಯಿಂದಲೂ ಪ್ರಸಿದ್ಧವಾಗಿರುವ ಕಾರ್ಗಿಲ್ ನಲ್ಲಿ ಇಂದು ಹಲವು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಪಶ್ಕುಮ್ ಒಂದು ಹಳ್ಳಿಯಾಗಿದ್ದು ಕಾರ್ಗಿಲ್ ನಿಂದ ಐದು ಕಿ.ಮೀ ದೂರದಲ್ಲಿದೆ. ಭವ್ಯವಾದ ಬೆಟ್ಟಗಳು, ಅದರ ಮೇಲೆ ಅಳಿದುಳಿದ ಹಿಂದಿನ ಕಾಲದ ಕೋಟೆ ಕೊತ್ತಲಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Debajit Bose

ಕಾರ್ಗಿಲ್:

ಕಾರ್ಗಿಲ್:

ಮುಲ್ಬೆಕ್. ಕಾರ್ಗಿಲ್ ನಿಂದ ಸುಮಾರು 40 ಕಿ.ಮೀ ಗಳಷ್ಟು ದೂರದಲ್ಲಿರುವ ಮುಲ್ಬೆಕ್ ಒಂದು ಬೌದ್ಧ ಸನ್ಯಾಸಿಗಳು ನೆಲೆಸಿರುವ ಹಳ್ಳಿಯಾಗಿದೆ. ಇಲ್ಲಿನೆ ಮುಖ್ಯ ಆಕರ್ಷಣೆ ಮೈತ್ರೇಯ ಬುದ್ಧನ ಏಳನೇಯ ಶತಮಾನದ ವಿಗ್ರಹ. ಇದು 9 ಮೀ ಗಳಷ್ಟು ಎತ್ತರವಾಗಿದೆ.

ಚಿತ್ರಕೃಪೆ: Bart-Willem

ಕಾರ್ಗಿಲ್:

ಕಾರ್ಗಿಲ್:

ಶಾರ್ಗೋಲ್. ಕಾರ್ಗಿಲ್ - ಲೇಹ್ ದಾರಿಯ ಬಲಭಾಗದಲ್ಲಿ ಸುಮಾರು 35 ಕಿ.ಮೀ ದೂರದಲ್ಲಿರುವ ಶಾರ್ಗೋಲ್ ಒಂದು ಸುಂದರ ಹಳ್ಳಿಯಾಗಿದೆ. ಚಾರಣ ಕೈಗೊಳ್ಳಲು ಇದು ಪ್ರಶಸ್ತವಾದ ಸ್ಥಳವಾಗಿದೆ.

ಚಿತ್ರಕೃಪೆ: Rajesh

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಪ್ರದೇಶದ ಅಂದ ಚೆಂದವನ್ನು ವರ್ಣಿಸುವ ಕೆಲ ಸುಂದರ ಹಾಗೂ ರೋಮಾಂಚಕ ಚಿತ್ರಗಳು.

ಚಿತ್ರಕೃಪೆ: taNvir kohli

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಪ್ರದೇಶದ ಅಂದ ಚೆಂದವನ್ನು ವರ್ಣಿಸುವ ಕೆಲ ಸುಂದರ ಹಾಗೂ ರೋಮಾಂಚಕ ಚಿತ್ರಗಳು. ಕಾರ್ಗಿಲ್ ಪಟ್ಟಣದ ಮಾರುಕಟ್ಟೆ ಬೀದಿ.

ಚಿತ್ರಕೃಪೆ: Kondephy

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಪ್ರದೇಶದ ಅಂದ ಚೆಂದವನ್ನು ವರ್ಣಿಸುವ ಕೆಲ ಸುಂದರ ಹಾಗೂ ರೋಮಾಂಚಕ ಚಿತ್ರಗಳು. ಕಾರ್ಗಿಲ್ ಪಟ್ಟಣದಲ್ಲಿರುವ ಒಂದು ಶಾಲೆ.

ಚಿತ್ರಕೃಪೆ: Saurabh Lall

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಪ್ರದೇಶದ ಅಂದ ಚೆಂದವನ್ನು ವರ್ಣಿಸುವ ಕೆಲ ಸುಂದರ ಹಾಗೂ ರೋಮಾಂಚಕ ಚಿತ್ರಗಳು. ಪಟ್ಟಣದ ಬಸ್ಸು ನಿಲ್ದಾಣ.

ಚಿತ್ರಕೃಪೆ: Miran Rijavec aka Stan Dalone

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಪ್ರದೇಶದ ಅಂದ ಚೆಂದ, ನಿತ್ಯ ಜೀವನವನ್ನು ವರ್ಣಿಸುವ ಕೆಲ ಸುಂದರ ಹಾಗೂ ರೋಮಾಂಚಕ ಚಿತ್ರಗಳು.

ಚಿತ್ರಕೃಪೆ: Sajith T S

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಪ್ರದೇಶದ ಅಂದ ಚೆಂದ, ನಿತ್ಯ ಜೀವನವನ್ನು ವರ್ಣಿಸುವ ಕೆಲ ಸುಂದರ ಹಾಗೂ ರೋಮಾಂಚಕ ಚಿತ್ರಗಳು.

ಚಿತ್ರಕೃಪೆ: Sajith T S

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಪ್ರದೇಶದ ಅಂದ ಚೆಂದ, ನಿತ್ಯ ಜೀವನವನ್ನು ವರ್ಣಿಸುವ ಕೆಲ ಸುಂದರ ಹಾಗೂ ರೋಮಾಂಚಕ ಚಿತ್ರಗಳು.

ಚಿತ್ರಕೃಪೆ: Miran Rijavec aka Stan Dalone

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಪ್ರದೇಶದ ಅಂದ ಚೆಂದ, ನಿತ್ಯ ಜೀವನವನ್ನು ವರ್ಣಿಸುವ ಕೆಲ ಸುಂದರ ಹಾಗೂ ರೋಮಾಂಚಕ ಚಿತ್ರಗಳು.

ಚಿತ್ರಕೃಪೆ: Miran Rijavec aka Stan Dalone

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಪ್ರದೇಶದ ಅಂದ ಚೆಂದ, ನಿತ್ಯ ಜೀವನವನ್ನು ವರ್ಣಿಸುವ ಕೆಲ ಸುಂದರ ಹಾಗೂ ರೋಮಾಂಚಕ ಚಿತ್ರಗಳು.

ಚಿತ್ರಕೃಪೆ: Miran Rijavec aka Stan Dalone

ಕಾರ್ಗಿಲ್:

ಕಾರ್ಗಿಲ್:

ಕಾರ್ಗಿಲ್ ಪ್ರದೇಶದ ಅಂದ ಚೆಂದ, ನಿತ್ಯ ಜೀವನವನ್ನು ವರ್ಣಿಸುವ ಕೆಲ ಸುಂದರ ಹಾಗೂ ರೋಮಾಂಚಕ ಚಿತ್ರಗಳು.

ಚಿತ್ರಕೃಪೆ: Wolfgang Maehr

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X