Search
  • Follow NativePlanet
Share
» »ಬೆಂಗಳೂರಿನಲ್ಲಿರುವ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನ ಪಡೆದಿದ್ದೀರಾ?

ಬೆಂಗಳೂರಿನಲ್ಲಿರುವ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನ ಪಡೆದಿದ್ದೀರಾ?

ಈ ದೇವಾಲಯವು ಬಿಎಂಎಸ್ ಮಹಿಳಾ ಕಾಲೇಜಿನ ಪಕ್ಕದಲ್ಲಿದೆ . ದೊಡ್ಡ ಭೂಪ್ರದೇಶದಲ್ಲಿ ಹರಡಿಕೊಂಡಿದ್ದು, ಪಾರ್ಕಿಂಗ್‌ಗ ಸಾಕಷ್ಟು ಜಾಗವಿದೆ. ನೀವು ದೇವಸ್ಥಾನಕ್ಕೆ ಪ್ರವೇಶಿಸಿದಾಗ, ಗರುಡನಿಗೆ ಅರ್ಪಿತವಾದ ಎತ್ತರದ ಧ್ವಜವು ನಿಮ್ಮನ್ನು ಸ್ವಾಗತಿಸುತ್ತ

ಬೆಂಗಳೂರು ತನ್ನ ಐಷಾರಾಮಿ ಜೀವನ ಶೈಲಿ ಹಾಗೂ ವೇಗವಾಗಿ ಚಲಿಸುವ ಸಂಸ್ಕೃತಿಗೆ ಹೆಸರುವಾಸಿಯಾಗಿರುವುದಷ್ಟೇ ಅಲ್ಲ, ಅದ್ಭುತವಾದ ದೇವಾಲಯಗಳಿಗೂ ಹೆಸರುವಾಸಿಯಾಗಿದೆ. ಹಲವು ದೇವಿ, ದೇವತೆಗಳಿಗೆ ಸಮರ್ಪಿತವಾದ ದೇವಾಲಯಗಳಿವೆ. ಬೆಂಗಳೂರಿನಲ್ಲಿರುವ ಹಲವಾರು ದೇವಾಲಯಗಳಲ್ಲಿ ಬಸವನಗುಡಿಯಲ್ಲಿರುವ ಆಂಜನೇಯನಿಗೆ ಸಮರ್ಪಿತವಾದ ಕರಣಿ ಆಂಜನೇಯ ದೇವಸ್ಥಾನ ಕೂಡಾ ಒಂದು.

ಕಾರಂಜಿ ಸರೋವರ

ಕಾರಂಜಿ ಸರೋವರ

PC:MV Sharma
ಉತ್ತರಕ್ಕೆ ಎದುರಾಗಿರುವ ಹನುಮನ ವಿಗ್ರಹವು ಸುಮಾರು 18 ಅಡಿ ಎತ್ತರವಿದೆ. ಬೆಂಗಳೂರಿನ ಅತ್ಯಂತ ಎತ್ತರದ ಕಟ್ಟಡಗಳಲ್ಲಿ ಒಂದಾಗಿದೆ. ಈ ದೇವಾಲಯವು ಇಂದು ಕಾರಂಜಿ ಸರೋವರದ ಮೇಲೆ ನಿಂತಿದೆ ಹಾಗಾಗಿ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ ಎನ್ನುವ ಹೆಸರು ಬಂದಿದೆ.

ರಾಮ, ಸೀತೆ, ಲಕ್ಷ್ಮಣರ ದೇವಸ್ಥಾನ

ರಾಮ, ಸೀತೆ, ಲಕ್ಷ್ಮಣರ ದೇವಸ್ಥಾನ

PC: Malay Desai
ಈ ದೇವಾಲಯವು ಬಿಎಂಎಸ್ ಮಹಿಳಾ ಕಾಲೇಜಿನ ಪಕ್ಕದಲ್ಲಿದೆ . ದೊಡ್ಡ ಭೂಪ್ರದೇಶದಲ್ಲಿ ಹರಡಿಕೊಂಡಿದ್ದು, ಪಾರ್ಕಿಂಗ್‌ಗ ಸಾಕಷ್ಟು ಜಾಗವಿದೆ. ನೀವು ದೇವಸ್ಥಾನಕ್ಕೆ ಪ್ರವೇಶಿಸಿದಾಗ, ಗರುಡನಿಗೆ ಅರ್ಪಿತವಾದ ಎತ್ತರದ ಧ್ವಜವು ನಿಮ್ಮನ್ನು ಸ್ವಾಗತಿಸುತ್ತದೆ. ಈ ದೇವಾಲಯವು ರಾಮಾಯಣದ ವಿವಿಧ ಘಟನೆಗಳನ್ನು ಚಿತ್ರಿಸುವ ಕೆತ್ತನೆಗಳನ್ನು ಹೊಂದಿದೆ. ಹನುಮಾನ್ ಮುಖ್ಯ ದೇವಾಲಯದ ಬಲಕ್ಕೆ ರಾಮನಿಗೆ, ಸೀತಾ ಮತ್ತು ಅವರ ಸಹೋದರ ಲಕ್ಷ್ಮಣರಿಗೆ ಅರ್ಪಿತವಾದ ದೇವಸ್ಥಾನವಿದೆ. ದೇವಸ್ಥಾನದ ಹೊರಗೆ ಸರ್ಪ ದೇವತೆಗಳಿಗೆ ಸಮರ್ಪಿಸಿದ ಅನೇಕ ವಿಗ್ರಹಗಳನ್ನು ಹೊಂದಿರುವ ದೊಡ್ಡ ಅಶ್ವಥ ಮರವಿದೆ.

ರುಚಿಕರವಾದ ಪ್ರಸಾದ

ರುಚಿಕರವಾದ ಪ್ರಸಾದ

PC : Brunda Nagaraj
ದೇವಾಲಯಗಳ ಆವರಣದಲ್ಲಿ ಪುರೋಹಿತರಿಗೆ ಆಶ್ರಯವಿದೆ ಮತ್ತು ಮುಜರಾಯಿ ಇಲಾಖೆ ಅಡಿಯಲ್ಲಿ ಉತ್ತಮವಾಗಿ ನಿರ್ವಹಿಸಿಕೊಂಡು ಬರುತ್ತಿದೆ. ದೇವಸ್ಥಾನ ರುಚಿಕರವಾದ ಪ್ರಸಾದವನ್ನು ವಿತರಿಸುತ್ತದೆ. ಇಲ್ಲಿ ಅನೇಕ ಆಚರಣೆಗಳನ್ನು ನಡೆಸಲಾಗುತ್ತದೆ. ಇಲ್ಲಿನ ಹನುಮ ಅತ್ಯಂತ ಶಕ್ತಿಶಾಲಿ ಎಂದು ಹೇಳಲಾಗುತ್ತದೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC:Rkrish67
ಇದು ಭೇಟಿ ನೀಡಲು ಆಹ್ಲಾದಕರವಾದ ಸ್ಥಳವಾಗಿದೆ ಜೊತೆಗೆ ಈ ದೇವಾಲಯದ ಸುತ್ತಮುತ್ತಲು ಅನೇಕ ಆಕರ್ಷಣೆಗಳಿವೆ. ದೇವಾಲಯದ ಕೇಂದ್ರ ಭಾಗದಲ್ಲಿಯೇ ಈ ದೇವಸ್ಥಾನವಿದೆ. ಈ ದೇವಸ್ಥಾನವನ್ನು ನೀವು ಭೇಟಿ ಮಾಡಿದಾಗ, ಬುಲ್ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ ಮತ್ತು ಬ್ಯುಗಲ್ ಬಂಡೆಯನ್ನು ಭೇಟಿ ಮಾಡಲು ಮರೆಯದಿರಿ.

ಭೇಟಿಯ ಸಮಯ

ಭೇಟಿಯ ಸಮಯ

PC : Brunda Nagaraj
ಸಂಜೆ ಸಮಯದಲ್ಲಿ ನೀವು ದೇವಸ್ಥಾನವನ್ನು ಭೇಟಿ ಮಾಡಲು ಯೋಜಿಸಿದ್ದರೆ, ಬಸವನಗುಡಿ ಮತ್ತು ಗಾಂಧಿ ಬಜಾರ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ ನೀವು ಸಾಕಷ್ಟು ಸ್ಟ್ರೀಟ್‌ ಫುಡ್‌ಗಳನ್ನು ಆಸ್ವಾದಿಸಬಹುದು. ಕಾರಂಜಿ ಆಂಜನೇಯ ದೇವಸ್ಥಾನ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಸಂಜೆ 4 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ.

 ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube
ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ 4.3 ಕಿ.ಮೀ ದೂರದಲ್ಲಿ ಈ ದೇವಸ್ಥಾನವಿದೆ. ಮೆಜೆಸ್ಟಿಕ್ ಮತ್ತು ಕೆ.ಆರ್.ಮಾರ್ಕೆಟ್‌ನಿಂದ ಬಸವನಗುಡಿಗೆ ಅನೇಕ ಬಸ್ಸುಗಳಿವೆ. ಗಾಂಧಿ ಬಜಾರ್ ಬಸ್ ನಿಲ್ದಾಣ ಅಥವಾ ಗಣೇಶ್ ಭವನದಲ್ಲಿ ಇಳಿಯಲು ನೀವು ಆಯ್ಕೆ ಮಾಡಬಹುದು. ಅಲ್ಲಿಂದ ಬರೀ ಕಾಲ್ನಡಿಗೆಯ ದೂರದಲ್ಲಿದೆ. ಈ ದೇವಾಲಯವು ಬೆಂಗಳೂರಿನಲ್ಲಿ ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X