Search
  • Follow NativePlanet
Share
» »ಇಲ್ಲಿನ ಶಿವಲಿಂಗದಿಂದ ಕೊಳೆತ ವಾಸನೆ ಬರುತ್ತದೆಯಂತೆ...

ಇಲ್ಲಿನ ಶಿವಲಿಂಗದಿಂದ ಕೊಳೆತ ವಾಸನೆ ಬರುತ್ತದೆಯಂತೆ...

ಭಾರತ ದೇಶದಲ್ಲಿರುವ ದೇವಾಲಯಗಳು ಮತ್ತೇಲ್ಲಿಯೂ ಕಾಣಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಹಿಂದೂ ಧರ್ಮದಲ್ಲಿನ ಶೈವರು ಪೂಜಿಸಿದರೆ, ಇನ್ನು ಕೆಲವರು ವೈಷ್ಣವರು ಆರಾಧಿಸುತ್ತಾರೆ. ಹಾಗಾಗಿ ಆಯಾ ದೇವಾಲಯಗಳಿಗೆ ಸಂಬಂಧಿಸಿದಂತೆ ಪುರಾಣ ಕಥೆಗಳನ್ನು ಕೂಡ

ಭಾರತ ದೇಶದಲ್ಲಿರುವ ದೇವಾಲಯಗಳು ಮತ್ತೇಲ್ಲಿಯೂ ಕಾಣಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಹಿಂದೂ ಧರ್ಮದಲ್ಲಿನ ಶೈವರು ಪೂಜಿಸಿದರೆ, ಇನ್ನು ಕೆಲವರು ವೈಷ್ಣವರು ಆರಾಧಿಸುತ್ತಾರೆ. ಹಾಗಾಗಿ ಆಯಾ ದೇವಾಲಯಗಳಿಗೆ ಸಂಬಂಧಿಸಿದಂತೆ ಪುರಾಣ ಕಥೆಗಳನ್ನು ಕೂಡ ಆಯಾ ವರ್ಗಕ್ಕೆ ಸೇರಿದ್ದಾಗಿರುತ್ತದೆ.

ಆದರೆ ದೇಶದಲ್ಲಿನ ಕೆಲವು ದೇವಾಲಯಗಳು, ಆ ದೇವಾಲಯಗಳಿಗೆ ಸಂಬಂಧಿಸಿದ ಕಥನಗಳು ಕೇವಲ ಹಿಂದೂ ಧರ್ಮದವರಿಗೆ ಅಲ್ಲದೇ ಬೌದ್ಧಧರ್ಮದಲ್ಲಿಯೂ ಪ್ರಸ್ತಾವನೆಗಳು ಬರುತ್ತವೆ. ಅಂತಹ ಪವಿತ್ರವಾದ ದೇವಾಲಯದ ಬಗ್ಗೆ ನಾವು ಲೇಖನದ ಮೂಲಕ ತಿಳಿದುಕೊಳ್ಳೊಣ. ವಿಚಿತ್ರ ಏನೆಂದರೆ ಇಲ್ಲಿನ ಶಿವಲಿಂಗವು ಗೋಳಾಕಾರದಲ್ಲಿರದೇ ಮಾನವ ಶರೀರದ ಮುಂಡಾ ಆಕಾರದಲ್ಲಿ ಕಾಣಿಸುತ್ತದೆ.

ಆಶ್ಚರ್ಯ ಏನಪ್ಪ ಎಂದರೆ, ಆ ಶಿವಲಿಂಗದಿಂದ ಕುಳೆತ ಮಾಸದ ವಾಸನೆ ಕೂಡ ಬರುತ್ತದೆಯಂತೆ. ಇದಕ್ಕೆ ಸಂಬಂಧಿಸಿದ ಕಥೆಯು ಮಹಾಬಾರತದಲ್ಲಿಯೇ ಅಲ್ಲದೇ ಬೌದ್ಧಧರ್ಮದಲ್ಲಿ ಕೂಡ ಕೇಳಬಹುದಂತೆ. ಇಷ್ಟು ವಿಶೇಷತೆಗಳನ್ನು ಹೊಂದಿರುವ ಶಿವಲಿಂಗದ ಕುರಿತು ತಿಳಿಯೋಣ.

1.ಕಪೋತೇಶ್ವರ ದೇವಾಲಯ

1.ಕಪೋತೇಶ್ವರ ದೇವಾಲಯ

PC:YOUTUBE

ಕಪೋತೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವು ಶಿಬಿ ಚಕ್ರವರ್ತಿ ಶರೀರದಿಂದ ಉದ್ಭವಿಸಿತು ಎಂದು ಸ್ಥಳ ಪುರಾಣವು ಹೇಳುತ್ತದೆ. ಶಿಬಿ ಚಕ್ರವರ್ತಿಗೆ ಹಾಗು ಕಪೋತಕ್ಕೆ ಎಂದರೆ ಪಾರಿವಾಳ ಮಧ್ಯ ಇರುವ ಸಂಬಂಧದ ಬಗ್ಗೆ ಹಿಂದೂ ಪುರಾಣಗಳಲ್ಲಿ ಹಾಗು ಬೌದ್ಧ ಪುರಾಣಗಳೆರಡರಲ್ಲೂ ಅವುಗಳಿಗೆ ಸಂಬಂಧಿಸಿದ ಕಥೆಗಳಿವೆ.

2.ಇಬ್ಬರು ಸಹೋದರರು

2.ಇಬ್ಬರು ಸಹೋದರರು

PC:YOUTUBE

ಮಹಾಭಾರತವನ್ನು ಅನುಸರಿಸಿ ಕಾಶ್ಮೀರ ದೇಶವನ್ನು ಆಳ್ವಿಕೆ ಮಾಡುವ ಶಿಭಿ ಚಕ್ರವರ್ತಿಗೆ ಮೇಘದಾಂಬರ ಹಾಗು ಜೀಮೂತ ವಾಹನ ಎಂಬ ಇಬ್ಬರು ಸಹೋದರರು ಇರುತ್ತಾರೆ. ಶಿಭಿ ಚಕ್ರವರ್ತಿಯ ಮೊದಲ ತಮ್ಮನಾದ ಮೇಘದಾಂಬರ ತೀರ್ಥಯಾತ್ರೆಗೆ ತೆರಳುತ್ತಾನೆ.

3.ಚಿತಾಗ್ನಿಯಿಂದ

3.ಚಿತಾಗ್ನಿಯಿಂದ

PC:YOUTUBE

ಅಲ್ಲಿ ಒಂದು ಬೆಟ್ಟದ ಪ್ರಕೃತಿ ರಮಣೀಯತೆಗೆ ಮಂತ್ರಮುಗ್ಧನಾಗಿ, ಅತನು ತನ್ನ ಪರಿವಾರದ ಜೊತೆಗೆ ಅಲ್ಲಿರುವ ಯೋಗಿಗಳ ಜೊತೆ ಸೇರಿ ಶಿವನಿಗೆ ತಪಸ್ಸುನ್ನು ಮಾಡುತ್ತಾ ತನ್ನ ಪ್ರಾಣವನ್ನು ಬಿಡುತ್ತಾನೆ. ಆ ಬೆಟ್ಟದ ಮೇಲೆ ಆತನ ಶರೀರವನ್ನು ದಹನವನ್ನು ಮಾಡಿದರು. ಆಶ್ಚರ್ಯಕರವಾಗಿ ಆ ಚಿತ್ನಾಗಿಯಿಂದ ಒಂದು ಅದ್ಭುತವಾದ ಶಿವಲಿಂಗವು ಉದ್ಭವಿಸಿತು.

4.ಮೇಘದಂಭೇಶ್ವರಲಿಂಗ

4.ಮೇಘದಂಭೇಶ್ವರಲಿಂಗ

PC:YOUTUBE

ಇದರಿಂದಾಗಿ ಆ ಲಿಂಗವನ್ನು ಆ ಬೆಟ್ಟದ ಮೇಲೆ ಮೇಘದಾಂಬನು ತಪಸ್ಸು ಮಾಡಿದ ಗುಹೆಯಲ್ಲಿ ಪ್ರತಿಷ್ಟಾಪಿಸಿ ಅದನ್ನು ಮೇಘದಂಬೇಶ್ವರಲಿಂಗ ಎಂದು ಹೆಸರಿನಿಂದ ಕರೆದು ಪೂಜೆಗಳನ್ನು ಮಾಡುತ್ತಿದ್ದರು. ಇಂದಿಗೂ ಆ ಪ್ರದೇಶದಲ್ಲಿನ ಪ್ರಜೆಗಳು ತಮಗೆ ಮಳೆಯ ಅಭಾವ ಉಂಟಾದರೆ ಈ ಲಿಂಗಕ್ಕೆ ಅತ್ಯಂತ ಭಕ್ತಿ-ಶ್ರದ್ಧೆಯಿಂದ ಪೂಜಿಸುತ್ತಾರೆ.

5.ಅವರ ನಂಬಿಕೆ

5.ಅವರ ನಂಬಿಕೆ

PC:YOUTUBE

ಹೀಗೆ ಆರಾಧಿ ಮನೆಗೆ ತೆರಳುವಷ್ಟರಲ್ಲಿ ಧಾರಾಕಾರವಾಗಿ ಆ ಪ್ರದೇಶದಲ್ಲಿ ಮಳೆಯಾಗುತ್ತದೆ ಎಂದು ಹೇಳುತ್ತಾರೆ. ಇದು ಹೀಗೆ ಇದ್ದರೆ, ಮೇಘದಾಂಬರನು ಮರಣ ಹೊಂದಿ ಶಿವಲಿಂಗ ಉದ್ಭವಿಸಿದ ವಿಷಯವನ್ನು ತಿಳಿದುಕೊಂಡು ಜೀವೂತ ವಾಹನನು ಕೂಡ ಚೆರುಂಹರ್ಲಗೆ ಸೇರಿಕೊಳ್ಳುತ್ತಾನೆ.

6.ಆತನು ಕೂಡ

6.ಆತನು ಕೂಡ

PC:YOUTUBE

ಅಲ್ಲಿನ ಪ್ರಕೃತಿಗೆ ಆತನು ಕೂಡ ಮಂತ್ರಮುಗ್ಧನಾಗಿ ಆತನು ಕೂಡ ಅಲಲಿ ತಪಸ್ಸು ಮಾಡಿ ಶಿವೈಖ್ಯನಾಗುತ್ತಾನೆ. ಆಶ್ಚರ್ಯಕರವಾಗಿ ಆತನ ಅಂತ್ಯಕ್ರಿಯೆಗಳು ನಡೆಸುವ ಸಮಯದಲ್ಲಿ ಮತ್ತೊಂದು ಶಿವಲಿಂಗವು ಉದ್ಭಿಸಿತಂತೆ. ಆ ಶಿವಲಿಂಗಕ್ಕೂ ಕೂಡ ಅಲ್ಲಿನ ಪ್ರಜೆಗಳು ಪೂಜಿಸುವುದನ್ನು ಪ್ರಾರಂಭಿಸಿದರಂತೆ.

7.ಶಿಭಿ ಚಕ್ರವರ್ತಿ

7.ಶಿಭಿ ಚಕ್ರವರ್ತಿ

PC:YOUTUBE

ಈ ವಿಷಯವನ್ನು ತಿಳಿದುಕೊಂಡ ಶಿಭಿಚಕ್ರವರ್ತಿ ವಿಷಯವನ್ನು ಪ್ರತ್ಯಕ್ಷವಾಗಿ ಕಾಣಬೇಕು ಎಂಬ ಉದ್ದೇಶದಿಂದ ತನ್ನ ಪರಿವಾರದ ಜೊತೆಗೆ ಚೆರುಂಜರ ಪ್ರದೇಶಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ತನ್ನ ಸಹೋದರರಿಬ್ಬರು ಶಿವೈಕ್ಯವಾದ ಪ್ರದೇಶದಲ್ಲಿರುವ ಶಿವಲಿಂಗವನ್ನು ಸ್ವಯಂ ಆಗಿ ನೋಡುತ್ತಾನೆ.

8.ನೂರು ಯಾಗಗಳು

8.ನೂರು ಯಾಗಗಳು

PC:YOUTUBE

ಇನ್ನು ತಾನು ಕೂಡ 100 ಯಾಗಗಳನ್ನು ಮಾಡಿ ಶಿವನ ಕೃಪಕಟಾಕ್ಷಕ್ಕೆ ಪಾತ್ರನಾಗಬೇಕು ಎಂದು ಭಾವಿಸುತ್ತಾನೆ. ಈ ಕ್ರಮದಲ್ಲಿ ಯಾಗಗಳನ್ನು ಪ್ರಾರಂಭಿಸಿ 99 ಯಾಗಗಳನ್ನು ಪೂರ್ತಿ ಮಾಡುತ್ತಾನೆ. ಮತ್ತೊಂದು ಯಾಗ ಪೂರ್ತಿ ಮಾಡಿದರೆ ತನ್ನ ಪದವಿ ಹೋಗುತ್ತದೆ ಎಂದು ಭಯಗೊಂಡ ಇಂದ್ರನು ತ್ರಿಮೂರ್ತಿಗಳ ಶರಣನ್ನು ಬೇಡುತ್ತಾನೆ.

9.ತ್ರಿಮೂರ್ತಿಗಳು

9.ತ್ರಿಮೂರ್ತಿಗಳು

PC:YOUTUBE

ಇದರಿಂದಾಗಿ ತ್ರಿಮೂರ್ತಿಗಳು 100 ಯಾಗವನ್ನು ಪೂರ್ತಿಯಾಗದಂತೆ ಮಾಡುತ್ತಾರೆ. ಇದಕ್ಕಾಗಿ ಶಿವನು ಒಬ್ಬ ಭೇಟೆಗಾರನ ವೇಶದಲ್ಲಿ, ಬ್ರಹ್ಮನು ಆತನ ಬಾಣದ ರೂಪದಲ್ಲಿ ಮಾರ್ಪಾಟಾಗುತ್ತಾನೆ. ಇನ್ನು ವಿಷ್ಣುವು ಒಂದು ಕಪೋತದಿಂದ ಎಂದರೆ ಪಾರಿವಾಳ ವೇಷವನ್ನು ಧರಿಸುತ್ತಾನೆ.

10.ಚಕ್ರವರ್ತಿ

10.ಚಕ್ರವರ್ತಿ

PC:YOUTUBE

ಭೇಟೆಗಾರನು ಆ ಪಾರಿವಾಳವನ್ನು ಭೇಟೆಯಾಡುತ್ತಿರುವ ಸಮಯದಲ್ಲಿ ಶಿಭಿ ಚಕ್ರವರ್ತಿಯ ಒಡಿಲಲ್ಲಿ ಶರಣು ಕೋರುತ್ತದೆ. ಶಿಭಿ ಆ ಪಾರಿವಾಳಕ್ಕೆ ಅಭಯವನ್ನು ನೀಡುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಬಂದ ಆ ಭೇಟೆಗಾರನು ಆ ಪಾರಿವಾಳವನ್ನು ತನಗೆ ಅರ್ಪಿಸಲಿಲ್ಲವಾದರೆ ತಾನು ಕೇಳಿದ ವಸ್ತುವನ್ನು ನೀಡಬೇಕು ಎಂದು ಕೇಳಿಕೊಳ್ಳುತ್ತಾನೆ.

11.ಶರೀರದ ಮಾಂಸ

11.ಶರೀರದ ಮಾಂಸ

PC:YOUTUBE

ಚೆನ್ನಾಗಿ ಆಲೋಚನೆ ಮಾಡಿದ ಶಿಭಿ ಚಕ್ರವರ್ತಿಯು ಪಾರಿವಾಳದ ಭಾರಕ್ಕೆ ಸಮಾನವಾದ ತನ್ನ ಶರೀರದ ಮಾಂಸವನ್ನು ನಿಡುತ್ತೇನೆ ಎಂದು ಹೇಳುತ್ತಾನೆ. ಇದಕ್ಕೆ ಭೇಟೆಗಾರನ್ನು ಒಪ್ಪಿಕೊಳ್ಳುತ್ತಾನೆ. ಇದರಿಂದಾಗಿ ಪಾರಿವಾಳವನ್ನು ಒಂದು ತಕ್ಕಡಿಯಲ್ಲಿ ಇಡುತ್ತಾನೆ.

12.ಮತ್ತೊಂದು ಭಾಗದಲ್ಲಿ

12.ಮತ್ತೊಂದು ಭಾಗದಲ್ಲಿ

PC:YOUTUBE

ಮತ್ತೊಂದು ಭಾಗದಲ್ಲಿ ತನ್ನ ಶರೀರದಿಂದ ತೆಗೆದ ಮಾಂಸವನ್ನು ಆ ಭಾಗದಲ್ಲಿ ಇಡುತ್ತಾನೆ. ಎಷ್ಟೇ ಮಾಂಸವನ್ನು ಇಟ್ಟರು ಕೂಡ ಆ ಪಾರಿವಾಳದ ಭಾರಕ್ಕೆ ಸಮಾನವಾಗುವುದಿಲ್ಲ. ತನ್ನ ಕಣ್ಣನ್ನು ಹಾಗು ಕೈಗಳನ್ನು ಇಡುತ್ತಾನೆ.

13.ಮೋಕ್ಷ

13.ಮೋಕ್ಷ

PC:YOUTUBE

ಆದರೂ ಕೂಡ ಆ ಪಾರಿವಾಳಕ್ಕೆ ಸಮಾನವಾಗುವುದಿಲ್ಲ. ಇದರಿಂದಾಗಿ ಕೊನೆಗೆ ತನ್ನ ದೇಹವನ್ನೇ ಇಡುತ್ತಾನೆ. ಶಿಭಿ ಚಕ್ರವರ್ತಿ ತ್ಯಾಗವನ್ನು ಮೆಚ್ಚಿದ ತ್ರಿಮೂರ್ತಿಗಳು ಆತನ ಎದುರು ಪ್ರತ್ಯಕ್ಷವಾಗಿ ಮೋಕ್ಷವನ್ನು ಪ್ರಸಾದಿಸುತ್ತಾರೆ.

14.ಚಕ್ರವರ್ತಿ

14.ಚಕ್ರವರ್ತಿ

PC:YOUTUBE

ಇದೇ ಕಥನದಲ್ಲಿ ಬೌದ್ಧಕಥೆಯಲ್ಲಿ ನಮಗೆ ಬುದ್ಧನ ಚರಿತ್ರೆಗೆ ಸಂಬಂಧಿಸಿದ ಅವಧಾನ ಶತಕದಲ್ಲಿ ಶಿಭಿ ಜಾತಕನ ಹೆಸರಿನಿಂದ ಕೇಳಿಬರುತ್ತದೆ. ಕೈ, ಕಾಲು ಇಲ್ಲದ ಶಿಭಿ ಚಕ್ರವರ್ತಿಯ ತಲೆಯೇ ಶಿವಲಿಂಗವಾಗಿ ಮಾರ್ಪಾಟಾಯಿತು ಎಂದು ಮಹಾಭಾರತದಲ್ಲಿ ಹೇಳುತ್ತದೆ.

15.ಶಿವಲಿಂಗ

15.ಶಿವಲಿಂಗ

PC:YOUTUBE

ಕಪೋತೇಶ್ವರ ಲಿಂಗವು 4 ಆಕಾರದ ಜಗಲಿಯ ಮೇಲೆ ದರ್ಶನವನ್ನು ನೀಡುತ್ತದೆ. ಈ ಲಿಂಗವು ಗುಂಡಾಗಿ ಅಲ್ಲದೆ ಕೈಗಳು, ಕಾಲುಗಳು ತಲೆ ಇಲ್ಲದ ದೇಹವಾಗಿ ಕಾಣಿಸುತ್ತದೆ. ಶಿಭಿಚಕ್ರವರ್ತಿ ತನ್ನ ಭುಜಗಳನ್ನು ಕತ್ತರಿಸಿ ನೀಡಿದ ಹಾಗೆ ಶಿವಲಿಂಗವು ಇಲ್ಲಿ ದರ್ಶನ ನೀಡುತ್ತದೆ.

16.ಗುಂಟೂರು ಜಿಲ್ಲೆ

16.ಗುಂಟೂರು ಜಿಲ್ಲೆ

PC:YOUTUBE

ಈ ಕಪೋತೇಶ್ವರ ದೇವಾಲಯದಲ್ಲಿ ಅತಿ ಪ್ರಾಚೀನವಾದ ಗಣಪತಿಯ ವಿಗ್ರಹವನ್ನು ಕಾಣಬಹುದು. ಗುಂಟೂರು ಜಿಲ್ಲೆಯ ನಕರಿಕಲ್ಲಿನಿಂದ ಕೇವಲ 13 ಕಿ.ಮೀ ದೂರದಲ್ಲಿದೆ. ಅದೇ ವಿಧವಾಗಿ ಗುಂಟೂರು ಜಿಲ್ಲೆಯಲ್ಲಿನ ಪ್ರಮುಖವಾದ ಪಟ್ಟಣವಾದ ನರಸರಾವು ಪೇಟೆಯಿಂದ 30 ಕಿ.ಮೀ ದೂರದಲ್ಲಿದೆ ಈ ಮಹಿಮಾನ್ವಿತವಾದ ದೇವಾಲಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X