Search
  • Follow NativePlanet
Share
» »ಗುಪ್ತವಾಗಿ ನೆಲೆಸಿರುವ ಅದ್ಭುತ ಕಂಗೇರ್ ಘಾಟಿ!

ಗುಪ್ತವಾಗಿ ನೆಲೆಸಿರುವ ಅದ್ಭುತ ಕಂಗೇರ್ ಘಾಟಿ!

By Vijay

ಇದೊಂದು ಹೆಚ್ಚು ಅನ್ವೇಷಿಸಲಾರದ ಅದ್ಭುತ ತಾಣವಾಗಿದೆ. ಇಲ್ಲಿ ಕಂಡುಬರುವ ನಿಸರ್ಗ ಸೌಂದರ್ಯ ಕಣ್ಣಿಗೆ ಕಟ್ಟುವಂತಿದೆ. ನಿಜಕ್ಕೂ ಇಲ್ಲಿ ವೈವಿಧ್ಯಮಯ ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್ನು ಕಾಣಬಹುದು. ಇಲ್ಲಿರುವ ಜೈವಿಕ ಶ್ರೀಮಂತಿಕೆಯನ್ನರಿತ ಭಾರತ ಸರ್ಕಾರ ಇದನ್ನು 1982 ರಲ್ಲೆ ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿದೆ.

200 ಚ.ಕಿ.ಮೀ ಗಳಷ್ಟು ವಿಸ್ತೃತವಾದ ಪ್ರದೇಶದಲ್ಲಿ ಹರಡಿರುವ ಕಂಗೇರ್ ಗುಡ್ಡ-ಬೆಟಗಳಿಂದ ಕೂಡಿದ ಅಮೋಘ ತಾಣವಾಗಿದೆ. ಯೋಗ್ಯ ಋತುಮಾನದಲ್ಲಿ ಪ್ರವಾಸಿಗರು ಈ ಅದ್ಭುತ ತಾಣಕ್ಕೆ ಭೇಟಿ ನೀಡುತ್ತಾರೆ. ದಟ್ಟ ಹಸಿರಿನ ಗಿಡ-ಮರಗಳು, ಮುಳ್ಳು-ಪೊದೆಗಳು, ಗುಹೆಯಂತಹ ರಚನೆಗಳು ಹಾಗೂ ಜಲಪಾತಗಳಿಂದ ಕೂಡಿರುವ ಈ ಸ್ಥಳದ ಅಂದ ಚೆಂದವನ್ನು ನೋಡಿದವನಿಗೆ ಮಾತ್ರವೆ ಗೊತ್ತು ಎನ್ನುವಂತಿದೆ.

ಪ್ರಸ್ತುತ ಲೇಖನದಲ್ಲಿ ಕಂಗೇರ್ ಘಾಟಿ ಅಥವಾ ಕಂಗೇರ್ ರಾಷ್ಟ್ರೀಯ ಉದ್ಯಾನದ ಕುರಿತು ತಿಳಿಸಲಾಗಿದೆ. ಭಾರತದ ಎಲ್ಲೊ ಒಂದು ಮೂಲೆಯಲ್ಲಿರುವ ಇಂತಹ ಒಂದು ಸ್ಥಳದ ಕುರಿತು ಮಾಹಿತಿಯು ನಿಮಗೆ ಈ ಮೂಲಕ ಸಿಗಲಿದ್ದು ಭಾರತದಲ್ಲಿ ಹೆಚ್ಚು ಅನ್ವೇಷಿಸಲಾರದ ದಕ್ಷಿಣದಲಂತೂ ಅದರ ಹೆಸರನ್ನೂ ಸಹ ಕೇಳಿರಲಾರದ ಸ್ಥಳಕ್ಕೆ ಭೇಟಿ ನೀಡುವ ಬಯಕೆ ನಿಮ್ಮದಿದ್ದಲ್ಲಿ ಇದು ಸಹಾಯಕವಾಗಬಹುದು.

ಎಲ್ಲಿದೆ?

ಎಲ್ಲಿದೆ?

ಛತ್ತೀಸಗಢ್ ರಾಜ್ಯದ ಬಸ್ತಾರ್ ಎಂಬ ಜಿಲ್ಲೆಯಲ್ಲಿರುವ ಜಗ್ದಲಪುರ್ ಎಂಬ ಪಟ್ಟಣದ ಬಳಿ ಸ್ಥಿತವಿದೆ ಈ ಅದ್ಭುತ ರಾಷ್ಟ್ರೀಯ ಉದ್ಯಾನ.

ಚಿತ್ರಕೃಪೆ: Theasg sap

ಅದ್ಭುತ ದೃಶ್ಯಗಳು

ಅದ್ಭುತ ದೃಶ್ಯಗಳು

ಛಾಯಾಗ್ರಹಣಕ್ಕೆ ಉತ್ತಮ ಎನ್ನಬಹುದಾದಂತಹ ಅದ್ಭುತ ಭೂದೃಶ್ಯಾವಳಿಗಳನ್ನು ಹೊಂದಿರುವ ಈ ತಾಣವು ತನ್ನಲ್ಲಿರುವ ಅತಿ ಜೀವ ವೈವಿಧ್ಯತೆಗೆ ಸಾಕಷ್ಟು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Theasg sap

ಒಬ್ಬರಿಗಂತಿಲ್ಲ

ಒಬ್ಬರಿಗಂತಿಲ್ಲ

ಕಂಗೇರ್ ಎಂಬ 34 ಕಿ.ಮೀ ಗಳಷ್ಟು ಉದ್ದದ ಕಣಿವೆ ಪ್ರದೇಶದಲ್ಲಿ ಸ್ಥಿತವಿರುವ ಕಂಗೇರ್ ರಾಷ್ಟ್ರೀಯ ಉದ್ಯಾನ ವನ್ಯಜೀವಿ ಪ್ರವಾಸಿಗರಿಗೆ, ಅಧ್ಯಯನಕಾರರಿಗೆ ಹಾಗೂ ಕುಟುಂಬ ಸಮೇತರಾಗಿ ಕಾಡುಗಳಂತಹ ತಾಣಕ್ಕೆ ಭೇಟಿ ನೀಡುವ ಪ್ರವಾಸಿ ವರ್ಗದವರಿಗೆ ಹೇಳಿ ಮಾಡಿಸಿದಂತಿದೆ.

ಚಿತ್ರಕೃಪೆ: Theasg sap

ಕಂಗೇರ್ ನದಿ

ಕಂಗೇರ್ ನದಿ

ಈ ಅದ್ಭುತ ಕಣಿವೆಯಲ್ಲಿ ಕಂಗೇರ್ ನದಿಯು ಹರಿದಿದ್ದು ಆ ನದಿಯಿಂದಾಗಿಯೆ ಈ ಕಣಿವೆಗೆ ಕಂಗೇರ್ ಘಾಟಿ ಅಥವಾ ಕಂಗೇರ್ ಕಣಿವೆ ಎಂಬ ಹೆಸರು ಬಂದಿದ್ದು ಇದರ ಒಂದು ಭಾಗವಾದ ರಾಷ್ಟ್ರೀಯ ಉದ್ಯಾನಕ್ಕೆ ಕಂಗೇರ್ ರಾಷ್ಟ್ರೀಯ ಉದ್ಯಾನ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Theasg sap

ಮಿಶ್ರರೂಪದ ರಚನೆಗಳು

ಮಿಶ್ರರೂಪದ ರಚನೆಗಳು

ಕಂಗೇರ್ ಘಾಟಿಯು ಪ್ರಮುಖವಾಗಿ ತನ್ನಲ್ಲಿರುವ ಹೆಟೆರೋಜಿನಿಯಸ್ (ಮಿಶ್ರ ಸ್ವರೂಪದ) ಭೂನಿರ್ಮಾಣಗಳಿಗೆ ಹೆಸರುವಾಸಿಯಾಗಿದೆ. ಅಂದರೆ ಇಲ್ಲಿ ಒಂದೆ ತರನಾದ ಭೂಮಿ ಇಲ್ಲವಾಗಿದ್ದು ಒಮ್ಮಿಂದೊಮ್ಮಿಲೆ ಮೊನಚಾದ, ಸಮತಟ್ಟಾದ, ದಿಬ್ಬಗಳನ್ನು ಹೊಂದಿರುವ, ಶಿಲೆಗಳ ಪದರಗಳಿಂದ ಕೂಡಿರುವ ಭೂಮಿಯ ರಚನೆಯನ್ನು ಕಾಣಬಹುದು.

ಚಿತ್ರಕೃಪೆ: Theasg sap

ಸಾಕಷ್ಟು ರೋಮಾಂಚನ

ಸಾಕಷ್ಟು ರೋಮಾಂಚನ

ಹೀಗೆ ಯಾದೃಚ್ಛಿಕವಾಗಿ, ಅಂಕು ಡೊಂಕಾದ ಭೂಪ್ರದೇಶಗಳು, ಅಸಂಖ್ಯಾತ ನೀರಿನ ಚಿಕ್ಕ ಪುಟ್ಟ ಮೂಲಗಳು, ಮುಳ್ಳು-ಪೊಟರೆಗಳು, ಗಿಡ-ಮರಗಳು ಇಲ್ಲಿರುವುದರಿಂದ ಜೀವ ವೈವಿಧ್ಯದ ಶ್ರೀಮಂತಿಕೆಯಿಂದ ಕೂಡಿದೆ.

ಚಿತ್ರಕೃಪೆ:Harminder singh saini

ಕೋತುಮ್ಸಾರ್

ಕೋತುಮ್ಸಾರ್

ಕಂಗೇರ್ ರಾಷ್ಟ್ರೀಯ ಉದ್ಯಾನದ ಪಶ್ಚಿಮದಲ್ಲಿ ಕೋತುಮ್ಸಾರ್ ಗುಹೆಗಳನ್ನು ಕಾಣಬಹುದು. ಇದು ಬಲು ಆಕರ್ಷಕವಾದ ಗುಹಾ ರಚನೆಗಳಾಗಿದ್ದು ಭೂಮಟ್ಟದಿಂದ ಸುಮಾರು 35 ಮೀ ಗಳಷ್ಟು ಕೆಳಗೆ ನಿರ್ಮಾಣವಾದ ನೈಸರ್ಗಿಕ ರಚನೆಯಾಗಿದೆ. ಇದು ನೋಡಲೇಬೇಕಾದ ಒಂದು ಆಕರ್ಷಣೆಯಾಗಿದೆ.

ಚಿತ್ರಕೃಪೆ: Theasg sap

ಕೈಲಾಶ ಗುಹೆ

ಕೈಲಾಶ ಗುಹೆ

ಇನ್ನೂ ಕಾಲು ಕಿ.ಮೀ ಗಳಷ್ಟು ಉದ್ದವಾದ ಕೈಲಾಶ ಗುಹೆಗಳು ಕಗೇರ್ ರಾಷ್ಟ್ರೀಯ ಉದ್ಯಾನದಲ್ಲಿರುವ ಮತ್ತೊಂದು ಆಕರ್ಷಕ ಗುಹಾ ರಚನೆಯಾಗಿದೆ.

ಚಿತ್ರಕೃಪೆ: Theasg sap

ಪ್ರವೇಶ ಶುಲ್ಕವಿದೆ

ಪ್ರವೇಶ ಶುಲ್ಕವಿದೆ

ಕಂಗೇರ್ ಧಾರಾ ಇದು ಈ ರಾಷ್ಟ್ರೀಯ ಉದ್ಯಾನದಲ್ಲಿರುವ ಪ್ರಾಕೃತಿಕ ಸೊಬಗಿನಿಂದ ಕೂಡಿದ ಜಲಪಾತ ಹೊಂದಿರುವ ಅದ್ಭುತ ಪಿಕ್ನಿಕ್ ತಾಣವಾಗಿದೆ. ಕುಟುಂಬದವರೊಡನೆ, ಸ್ನೇಹಿತರೊಡನೆ ಅದ್ಭುತವಾಗಿ ಸಮಯ ಕಳೆಯ ಬಯಸುವವರಿಗೆ ಆದರ್ಶಮಯ ಸ್ಥಳವಾಗಿದೆ. ಇದಕ್ಕೆ ಪ್ರವೇಶಿಸಲು ಪ್ರವೇಶ ಶುಲ್ಕವಿದೆ.

ಚಿತ್ರಕೃಪೆ: Pranabk

ಹೇಗೆ ತಲುಪಬೇಕು

ಹೇಗೆ ತಲುಪಬೇಕು

ಬಸ್ತಾರ್ ಜಿಲ್ಲೆಯ ಜಗ್ದಲ್ಪುರ್ ನಿಂದ ಈ ರಾಷ್ಟ್ರೀಯ ಉದ್ಯಾನವು 36 ಕಿ.ಮೀ ಗಳಷ್ಟು ದೂರವಿದೆ. ಜಗ್ದಲ್ಪುರ್ ನಿಂದ ನಎನತಾರ್ ಹಾಗೂ ಕೋತಮ್ಸಾರ್ ಬ್ಯಾರಿಯರ್ ಗಳಿಗೆ ರಸ್ತೆ ಸಂಪರ್ಕವಿದ್ದು ಅವುಗಳಿಂದ ಈ ರಾಷ್ಟ್ರೀಯ ಉದ್ಯಾನವನ್ನು ಪ್ರವೇಶಿಸಬಹುದು.

ಚಿತ್ರಕೃಪೆ: Theasg sap

ವಿಜಯವಾಡಾದಿಂದಲೂ

ವಿಜಯವಾಡಾದಿಂದಲೂ

ನೆನತಾರ್ ಬ್ಯಾರಿಯರ್ ಜಗ್ದಲ್ಪುರ್ ನಿಂದ 33 ಕಿ.ಮೀ ದೂರವಿದೆ. ನೆನತಾರ್ ನಿಂದ ಮೂರು ಕಿ.ಮೀ ಕ್ರಮಿಸಿದ ಮೇಲೆ ರಾಷ್ಟ್ರೀಯ ಉದ್ಯಾನ ಪ್ರಾರಂಭವಾಗುತ್ತದೆ. ಅದೆ ರೀತಿ ಕೋತಮ್ಸಾರ್ ಜಗ್ದಲ್ಪುರ್ ನಿಂದ 27 ಕಿ.ಮೀ ದೂರವಿದು ಇಲ್ಲಿಂದಲೂ ಸಹ ಉದ್ಯಾನದ ಮುಖ್ಯ ದ್ವಾರವನ್ನು ಪ್ರವೇಶಿಸಬಹುದು. ಇನ್ನೂ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 221 ಆಂಧ್ರಪ್ರದೇಶದ ವಿಜಯವಾಡವನ್ನು ಜಗ್ದಲ್ಪುರ್ ನೊಂದಿಗೆ ಸಮ್ಪರ್ಕಿಸುತ್ತದೆ.

ಚಿತ್ರಕೃಪೆ: Theasg sap

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X