Search
  • Follow NativePlanet
Share
» » ಮಹಾಶಕ್ತಿ ಪೀಠದಲ್ಲಿ ದೇವಿಯ ಮುಟ್ಟಿನ ಬಟ್ಟೆಯೇ ಭಕ್ತರಿಗೆ ಪ್ರಸಾದ !

ಮಹಾಶಕ್ತಿ ಪೀಠದಲ್ಲಿ ದೇವಿಯ ಮುಟ್ಟಿನ ಬಟ್ಟೆಯೇ ಭಕ್ತರಿಗೆ ಪ್ರಸಾದ !

ಪುರಾಣಗಳ ಪ್ರಕಾರ ವಿಷ್ಣು ದೇವಿ ಸತಿಯ ಮೃತ ದೇಹವನ್ನು ತನ್ನ ಸುದರ್ಶನ ಚಕ್ರದ ಮೂಲಕ 52 ಭಾಗಗಳನ್ನಾಗಿ ಮಾಡಿದ್ದನು. ಆ ಭಾಗಗಳು ಎಲ್ಲೆಲ್ಲಾ ಬಿದ್ದಿವೆ ಅವು ಇಂದು ಶಕ್ತಿಪೀಠಗಳಾಗಿ ಕರೆಯಲ್ಪಡುತ್ತಿವೆ. ಗುವಾಹಟಿಯ ಕಾಮಾಕ್ಯ ಶಕ್ತಿಪೀಠದಲ್ಲಿ ಸತಿಯ ಯೋನಿ ಭಾಗ ಬಿದ್ದಿತ್ತಂತೆ. ಹಾಗಾಗಿ ಇಲ್ಲಿ ಕಾಮಾಕ್ಯ ಮಹಾಪೀಠ ಉತ್ಪತ್ತಿಯಾಯಿತು ಎನ್ನಲಾಗುತ್ತದೆ. ಹಾಗಾಗಿ ಇಲ್ಲಿ ದೇವಿ ಮುಟ್ಟಾಗುತ್ತಾಳಂತೆ.

ಹೊಟ್ಟೆ ತುಂಬುವಷ್ಟು ತಿಂದ್ರೂ ಯಾರೂ ಬಿಲ್ ಕೇಳೊಲ್ಲ... ಮೂರೊತ್ತೂ ಊಟ ಫ್ರೀ !ಹೊಟ್ಟೆ ತುಂಬುವಷ್ಟು ತಿಂದ್ರೂ ಯಾರೂ ಬಿಲ್ ಕೇಳೊಲ್ಲ... ಮೂರೊತ್ತೂ ಊಟ ಫ್ರೀ !

ದೇವಿಯ ಮೂರ್ತಿಯೇ ಇಲ್ಲ

ದೇವಿಯ ಮೂರ್ತಿಯೇ ಇಲ್ಲ

PC: daimalu
ಈ ಮಂದಿರದಲ್ಲಿ ದೇವಿಯ ಮೂರ್ತಿಯೇ ಇಲ್ಲ . ಇಲ್ಲಿ ದೇವಿಯ ಯೋನಿ ಭಾಗವನ್ನೇ ಪೂಜಿಸಲಾಗುತ್ತಿದೆ. ಮಂದಿರದಲ್ಲಿ ಒಂದು ಕುಂಡದಂತಿದೆ. ಅದು ಯಾವಾಗಲೂ ಹೂನಿನಿಂದ ಮುಚ್ಚಲ್ಪಟ್ಟಿರುತ್ತದೆ. ಈ ಸ್ಥಳದ ಸಮೀಪದಲ್ಲೇ ಒಂದು ಮಂದಿರವಿದೆ ಅಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಪೀಠವನ್ನು ದೇವಿಯ ಎಲ್ಲಾ ಪೀಠಕ್ಕಿಂತಲೂ ಮಹಾಪೀಠ ಎನ್ನಲಾಗುತ್ತದೆ.

ಒದ್ದೆ ಬಟ್ಟೆ ಪ್ರಸಾದ

ಒದ್ದೆ ಬಟ್ಟೆ ಪ್ರಸಾದ

PC: Deeporaj
ಈ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಒದ್ದೆ ಬಟ್ಟೆಯನ್ನು ನೀಡಲಾಗುತ್ತದೆ. ಅದನ್ನು ಅಂಬುವಾಚಿ ಎನ್ನಲಾಗುತ್ತದೆ. ದೇವಿಗೆ ಮುಟ್ಟಾಗುವ ಸಂದರ್ಭದಲ್ಲಿ ಪ್ರತಿಮೆ ಸುತ್ತಲೂ ಬಿಳಿ ಬಟ್ಟೆಯನ್ನು ಹರಡಲಾಗುತ್ತದೆ. ಮೂರು ದಿನಗಳ ನಂತರ ದೇವಸ್ಥಾನದ ಬಾಗಿಲು ತೆಗೆದಾಗ ಆ ಬಟ್ಟೆ ದೇವಿಯ ಮುಟ್ಟಿನ ರಕ್ತದಿಂದ ಕೆಂಪಾಗಿರುತ್ತದೆ, ನಂತರ ಇದೇ ವಸ್ತ್ರವನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.

ಪ್ರತಿವರ್ಷ ಮುಟ್ಟಾಗುತ್ತಾಳೆ

ಪ್ರತಿವರ್ಷ ಮುಟ್ಟಾಗುತ್ತಾಳೆ

PC: Deeporaj
ಈ ದೇವಸ್ಥಾನದಲ್ಲಿ ದೇವಿ ಪ್ರತಿವರ್ಷ ಮುಟ್ಟಾಗುತ್ತಾಳಂತೆ. ಆ ಸಂದರ್ಭದಲ್ಲಿ ಮೂರು ದಿನಗಳ ಕಾಲ ದೇವಸ್ಥಾನವನ್ನು ಮುಚ್ಚುತ್ತಾರೆ. ಮೂರು ದಿನಗಳ ನಂತರ ಉತ್ಸಾಹದಿಂದ ಬಾಗಿಲು ತೆರೆಯಲಾಗುತ್ತದೆ.

ಬೈರವನ ದರ್ಶನ

ಬೈರವನ ದರ್ಶನ

PC:chandrashekharbasumatary
ಕಾಮಾಕ್ಯ ಮಂದಿರದಿಂದ ಸ್ವಲ್ಪ ದೂರದಲ್ಲಿ ಉಮಾನಂದ ಬೈರವನ ಮಂದಿರವಿದೆ.ಈ ಮಂದಿರ ಬ್ರಹ್ಮಪುತ್ರ ನದಿಯ ನಡುವೆ ಇದೆ. ಬೈರವನ ದರ್ಶನದ ಹೊರತಾಗಿ ಕಾಮಾಕ್ಯ ದರ್ಶನ ಪೂರ್ಣಗೊಳ್ಳುವುದಿಲ್ಲ ಎನ್ನಲಾಗುತ್ತದೆ. ನಿಮ್ಮ ಮನೋಕಾಮನೆ ಪೂರ್ಣಗೊಳ್ಳಬೇಕಾದರೆ ಕಾಮಕ್ಯ ದೇವಿಯ ದರ್ಶನದ ನಂತರ ಉಮಾನಂದ ಬೈರವನ ದರ್ಶನ ಮಾಡಬೇಕು.

16ನೇ ಶತಮಾನಕ್ಕೆ ಸಂಬಂಧಿಸಿದ್ದು

16ನೇ ಶತಮಾನಕ್ಕೆ ಸಂಬಂಧಿಸಿದ್ದು

PC: Vikramjit Kakati
ಈಗಿನ ದೇವಾಲಯವು 16ನೇ ಶತಮಾನಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತದೆ. ನೆಲಸಮವಾಗಿದ್ದ ಮಂದಿರವನ್ನು ವಿಶ್ವಸಿಂಗ್ ಎನ್ನುವ ರಾಜನು ಕಾಮಾಕ್ಯಾ ದೇವಿ ಮಂದಿರ ಅಲ್ಲಿ ಅಸ್ಥಿತ್ವದಲ್ಲಿತ್ತು ಎನ್ನುವುದನ್ನು ತಿಳಿದು ಅದೇ ಸ್ಥಳದಲ್ಲಿ ಮಂದಿರವನ್ನು ಮರು ನಿರ್ಮಾಣ ಮಾಡಿದನು.

ದೇಶದಲ್ಲೇ ವಿಶೇಷ ದೇವಸ್ಥಾನ

ದೇಶದಲ್ಲೇ ವಿಶೇಷ ದೇವಸ್ಥಾನ

PC:Deeporaj

ಕಾಮಾಕ್ಯ ದೇವಿ ದೇವಸ್ಥಾನವು ಅಸ್ಸಾಂನಲ್ಲಿರುವ ಒಂದು ಪ್ರಸಿದ್ಧ ದೇವಸ್ಥಾನ ಮಾತ್ರವಲ್ಲ. ಇಡೀ ದೇಶದಲ್ಲೇ ಒಂದು ವಿಶೇಷವಾದ ದೇವಸ್ಥಾನವಾಗಿದೆ. ಈ ರೀತಿಯ ಪ್ರಸಾದ ಬೇರೆ ಯಾವ ದೇವಸ್ಥಾನದಲ್ಲೂ ಸಿಗೋದಿಲ್ಲ.

ಹೋಗೋದು ಹೇಗೆ?

ಹೋಗೋದು ಹೇಗೆ?

PC: Deeporaj
ಕಾಮಾಕ್ಯ ಶಕ್ತಿಪೀಠಕ್ಕೆ ಹೋಗಲು ಅಸ್ಸೋಂ ಲಿಂಕ್ ರೈಲ್ ಲೈನ್‌ನಿಂದ ಅಮಿನ್ ಗಾಂ ಹೋಗಬೇಕು. ಅಲ್ಲಿಂದ ಬ್ರಹ್ಮಪುತ್ರ ನದಿಯನ್ನು ಬೋಟ್‌ನಲ್ಲಿ ದಾಟಿ ಮುಂದೆ 5 ಕಿ.ಮೀ ಟ್ಯಾಕ್ಸಿ, ಕಾರ್ ಮೂಲಕ ಮಂದಿರವನ್ನು ತಲುಪಬಹುದು. ಪಾಂಡುವಿನಿಂದ ರೈಲಿನಿಂದ ಗುವಾಹಟಿಗೆ ಬಂದು ಕಾಮಾಕ್ಯ ಮಂದಿರ ತಲುಪಬಹುದು. ಗುವಾಹಟಿ ರೈಲ್ವೆ ಸ್ಟೇಶನ್‌ನಿಂದ 10 ಕಿ.ಮೀ ದೂರದಲ್ಲಿರುವ ಈ ಮಂದಿರ ತಲುಪಲು ಆಟೋರಿಕ್ಷಾ ಲಭ್ಯವಿದೆ.

Read more about: guwahati assam kamakhya temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X