Search
  • Follow NativePlanet
Share
» »ವರ್ಷಕ್ಕೊಮ್ಮೆ ದೇವಿಯ ಋತುಸ್ರಾವ ಆಚರಿಸುವ ದೇವಾಲಯ

ವರ್ಷಕ್ಕೊಮ್ಮೆ ದೇವಿಯ ಋತುಸ್ರಾವ ಆಚರಿಸುವ ದೇವಾಲಯ

By Vijay

ಮಹಿಳೆಯರು ಋತುಚಕ್ರವನ್ನು ಅನುಭವಿಸುವುದು ಸರ್ವೆ ಸಾಮಾನ್ಯ. ಆದರೆ ಪರಮ ಪೂಜ್ಯವಾಗಿ ಪೂಜಿಸುವ ದೇವಿಯ ಋತುಸ್ರಾವ ಆಚರಣೆಯನ್ನು ಆಚರಿಸುವುದನ್ನು ಎಲ್ಲಾದರೂ ಕೇಳಿದ್ದೀರಾ? ಹೌದು ಇದು ಸತ್ಯ. ಈ ಒಂದು ಆಚರಣೆಯನ್ನು "ಅಂಬಾಬುಚಿ ಮೇಳ" ಎಂಬ ಹೆಸರಿನಿಂದ ಕರೆಯಲಾಗುತ್ತದೆ ಹಾಗೂ ಇದು ಅಸ್ಸಾಂ ರಾಜ್ಯದ ಅತಿ ದೊಡ್ಡ ಊರಾದ ಗುವಾಹಾಟಿಯ ಪ್ರಖ್ಯಾತ ಕಾಮಾಖ್ಯ ದೇವಿಯ ದೇವಾಲಯದಲ್ಲಿ ಆಚರಿಸಲ್ಪಡುತ್ತದೆ.

ಗುವಾಹಾಟಿ ನಗರದಲ್ಲಿ ಸ್ಥಿತವಿರುವ ಕಾಮಾಖ್ಯ ದೇವಾಲಯವು ಒಂದು ಪುರಾತನ ದೇವಾಲಯವಾಗಿದ್ದು ಈ ದೇವಾಲಯಕ್ಕೆ ಹಿಂದೂ ಧರ್ಮದವರು ಅದರಲ್ಲೂ ಪ್ರಮುಖವಾಗಿ ತಂತ್ರ ವಿದ್ಯೆಗಳನ್ನು ಆಚರಿಸುವವರು ನಡೆದುಕೊಳ್ಳುತ್ತಾರೆ. ಪುರಾತತ್ವ ಶಾಸ್ತ್ರಜ್ಞರ ಪ್ರಕಾರ ಹಿಂದೆ ಈ ದೇವಾಲಯ ಬಲಿಯನ್ನು ಕೊಡಲಾಗುವ ತಾಣವಾಗಿತ್ತೆನ್ನಲಾಗಿದೆ.

ನಗರದಲ್ಲಿರುವ ಪ್ರಮುಖ ದೇವಾಲಯ ಸಂಕೀರ್ಣದಲ್ಲಿ ಈ ಕಾಮಾಖ್ಯ ದೇವಾಲಯವು ಅತಿ ಪ್ರಮುಖವಾಗಿದ್ದು ಇತರೆ ದಶ ಮಹಾವಿದ್ಯೆಯರಾದ ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರಸುಂದರಿ, ತಾರಾ, ಕಾಳಿ, ಭೈರವಿ, ಧುಮವತಿ, ಮಾತಂಗಿ ಹಾಗೂ ಕಮಲಾ ದೇವಿಯರ ದೇವಾಲಯಗಳನ್ನೂ ಸಹ ಕಾಣಬಹುದು.

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯದಲ್ಲಿ ಜರುಗುವ ಪ್ರಸಿದ್ಧ ಅಂಬಾಬುಚಿ ಮೇಳವು ಅಸ್ಸಾಮಿನ ತಿಂಗಳಾದ ಅಹಾರ್ ಸಂದರ್ಭ ಅಂದರೆ ಮಳೆಗಾಲದ ಸಮಯ (ಜೂನ್ ಮಧ್ಯದಲ್ಲಿ)ದಲ್ಲಿ ಆಚರಿಸಲ್ಪಡುತ್ತದೆ. ಇದು ಕಾಮಾಖ್ಯ ದೇವಿಯ ವರ್ಷದ ಋತುಮಾಸದ ಆಚರಣೆಯಾಗಿದೆ ಹಾಗೂ ಅತಿ ವೈಭವೋಪೇತವಾಗಿ ಆಚರಿಸಲ್ಪಡುತ್ತದೆ.

ಚಿತ್ರಕೃಪೆ: Kunal Dalui

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಿಯು ವರ್ಷದ ಈ ನಿರ್ದಿಷ್ಟ ಸಮಯದಲ್ಲಿ ಋತುಚಕ್ರವನ್ನು ಅನುಭವಿಸುತ್ತಾಳೆ ಎಂದು ನಂಬಲಾಗಿದೆ. ಅಲ್ಲದೆ ಮುಟ್ಟಿನ ಈ ಸಮಯದಲ್ಲಿ ದೇವಿಯ ಶಕ್ತಿಯು ಅಪಾರವಾಗಿ ಕ್ರೋಢಿಕರಣಗೊಳ್ಳುತ್ತದೆ ಹಾಗೂ ಶೃದ್ಧೆ ಭಕ್ತಿಯಿಂದ ದೇವಿಯನ್ನು ಪೂಜಿಸುವವರಿಗೆ ನಿರಾಯಾಸವಾಗಿ ದೇವಿಯ ಕೃಪೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Gitartha Bordoloi

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ಕುತೂಹಲಕರ ಸಂಗತಿ ಎಂದರೆ ಈ ದೇವಾಲಯದಲ್ಲಿ ದೇವಿಯ ವಿಗ್ರಹವಿಲ್ಲ ಬದಲಾಗಿ "ಯೋನಿ" ಆಕಾರದ ಒಂದು ಕಲ್ಲಿನ ರಚನೆಯಿದ್ದು ಅದರ ಮೇಲೆ ನೈಸರ್ಗಿಕವಾಗಿ ಉದ್ಭವವಾಗಿರುವಂತಹ ನೀರಿನ ಚಿಲುಮೆಯೊಂದು ಹರಿಯುವುದನ್ನು ಕಾಣಬಹುದು.

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ಕಲಿಕಾ ಪುರಾಣದ ಪ್ರಕಾರ, ಈ ದೇವಾಲಯವು ಶಿವನು ಸತಿಯ ಪ್ರಾಣ ತ್ಯಾಗದ ನಂತರ ಆಕೆಯ ದೇಹವನ್ನು ಎತ್ತಿಕೊಂಡು ಅಸಮಾಧಾನದಿಂದ ನೃತ್ಯ ಮಾಡುತ್ತಿರುವ ಸಂದರ್ಭದಲ್ಲಿ ಆಕೆಯ ಯೋನಿ ಭಾಗವು ಬಿದ್ದಿದ್ದ ಸ್ಥಳವನ್ನು ಸೂಚಿಸುತ್ತದೆ. ದೇವಿ ಭಾಗವತದಲ್ಲಿ ಉಲ್ಲೇಖಿಸಲಾದ 108 ಶಕ್ತಿ ಪೀಠಗಳಲ್ಲಿ ಸತಿಯ ಈ ದೇಹದ ಭಾಗದ ಕುರಿತು ದಾಖಲಾಗಿಲ್ಲವಾದರೂ ನಂತರದ ಅನುಬಂಧಗಳಲ್ಲಿ ಕಮಾಖ್ಯ ದೇವಿಯ ಕುರಿತು ಉಲ್ಲೇಖಿಸಲಾಗಿದೆ.

ಚಿತ್ರಕೃಪೆ: chandrashekharbasumatary

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ತಂತ್ರ ವಿದ್ಯೆಗಳ ಕೇಂದ್ರಬಿಂದುವಾಗಿರುವ ಈ ದೇವಾಲಯವು ಅಂಬಾಬುಚಿ ಮೇಳದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Vikramjit Kakati

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ಸಾಮಾನ್ಯವಾಗಿ ದೇವಿಗೆ ಪುಷ್ಪಾದಿ ದ್ರವ್ಯಗಳಿಂದ ಪೂಜಿಸಲಾಗುವುದಾದರೂ ಅಲ್ಲಲ್ಲಿ ಕುರಿಗಳ ಬಲಿ ಕೊಡುವಿಕೆಯು ಸಾಮನ್ಯವಾಗಿರುತ್ತದೆ. ಆದರೆ ಪ್ರಾಣಿ ಬಲಿ ಸಂದರ್ಭದಲ್ಲಿ ನಿಯಮದ ಪ್ರಕಾರ ಹೆಣ್ಣು ಪ್ರಾಣಿಗಳ ಬಲಿ ಕೊಡಲಾಗುವುದಿಲ್ಲವಾದರೂ ಸಾಮೂಹಿಕ ಬಲಿ ಸಂದರ್ಭದಲ್ಲಿ ಈ ನಿಯಮವನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ಇನ್ನೂ ದೇವಾಲಯದ ಕುರಿತು ಹೇಳುವುದಾದರೆ, ದೇವಾಲಯದಲ್ಲಿ ಒಟ್ಟು ನಾಲ್ಕು ಕೋಣೆಗಳನ್ನು ಕಾಣಬಹುದು. ಒಂದು ಗರ್ಭಗೃಹವಿದ್ದು ಇತರೆ ಮೂರು ಮಂಟಪಗಳನ್ನು ಕಲಂತ, ಪಂಚರತ್ನ ಹಾಗೂ ನಟಮಂದಿರ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Subhashish Panigrahi

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ಗರ್ಭಗೃಹವನ್ನು ಚಿಕ್ಕದಾದ ಹಾಗೂ ಮೊನಚಾದ ಮೆಟಿಲುಗಳ ಮೂಲಕ ತಲುಪಬಹುದಾಗಿದ್ದು, ಮುಖ್ಯ ದೇವಿಯ ಪೀಠವಿರುವ ಸ್ಥಳದಲ್ಲಿ ಕೆಲವು ಇಂಚುಗಳ ಆಳದಲ್ಲಿ ಯೋನಿ ಆಕಾರದ ರಚನೆಯನ್ನು ಕಾಣಬಹುದು. ಇದು ನೈಸರ್ಗಿಕ ನೀರ್ನಿ ಚಿಲುಮೆಯಿಂದ ಸದಾ ಆವೃತವಾಗಿರುತ್ತದೆ.

ಚಿತ್ರಕೃಪೆ: Raymond Bucko, SJ

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ಅಲ್ಲದೆ ದೇವಾಲಯದ ಹೊರ ಗೋಡೆಗಳು ಸುಂದರವಾದ ಕೆತ್ತನೆಗಳಿಂದ ತುಂಬಿದ್ದು ನೋಡಲು ಮನಮೋಹಕವಾಗಿ ಗೋಚರಿಸುತ್ತವೆ.

ಚಿತ್ರಕೃಪೆ: Manabendra Ray

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ಅಂಬಾಬುಚಿ ಮೇಳದ ಹೊರತಾಗಿ ವಾರ್ಷಿಕವಾಗಿ ಮಾನಶ ಪೂಜಾ ಹಾಗೂ ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ಪೂಜೆಯನ್ನು ಕೂಡ ಆಚರಿಸಲಾಗುತ್ತದೆ. ಐದು ದಿನಗಳ ವರೆಗೆ ನಡೆಯುವ ಈ ಉತ್ಸವವು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Vikramjit Kakati

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ದೇವಾಲಯ ಸಂಕೀರ್ಣದಲ್ಲಿರುವ ಇತರೆ ದೇವರು ವಿಗ್ರಹಗಳ ಪೂಜೆಯಲ್ಲಿ ನಿರತರಾಗಿರುವ ಮಂದಿರದ ಅರ್ಚಕ.

ಚಿತ್ರಕೃಪೆ: kulasundari

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಅಪಾರ. ಭಕ್ತ ಸಮೂಹದ ನಡುವೆ ತನ್ನ ಕಾಯಕದಲ್ಲಿ ನಿರತನಾಗಿರುವ ಸಾಧು.

ಚಿತ್ರಕೃಪೆ: Warlock D

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ದೇವಿಯ ಕೃಪೆ ಬಯಸಿ ತನ್ನದೆ ಆದ ವಿಶಿಷ್ಟ ಭಂಗಿಯಲ್ಲಿ ನಾದ ಹೊಮ್ಮಿಸುತ್ತಿರುವ ಒಬ್ಬ ಭಕ್ತ.

ಚಿತ್ರಕೃಪೆ: Ankur Jyoti Das

ಕಾಮಾಖ್ಯ ದೇವಾಲಯ:

ಕಾಮಾಖ್ಯ ದೇವಾಲಯ:

ಗುವಾಹಾಟಿಯನ್ನು ವಿಮಾನ, ರೈಲು ಹಾಗೂ ಬಸ್ಸುಗಳ ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಲೋಕಪ್ರಿಯ ಗೋಪಿನಾಥ ಬೊರ್ಡೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಗರದಿಂದ 20 ಕಿ.ಮೀ ದೂರವಿದ್ದು ಭಾರತದ ಮಹಾನಗರಗಳೊಂದಿಗೆ ಸಂಪರ್ಕ ಹೊಂದಿದೆ. ಭಾರತದ ಪ್ರಮುಖ ಪಟ್ಟಣಗಳಿಂದ ಗುವಾಹಾಟಿಗೆ ರೈಲು ಸಂಪರ್ಕ ದೊರೆಯುತ್ತದೆ. ಇನ್ನೂ ಪಶ್ಚಿಮ ಬಂಗಾಳ, ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 31 ಗುವಾಹಾಟಿಯೊಂದಿಗೆ ಸಂಪರ್ಕ ಬೆಸೆಯುತ್ತದೆ.

ಚಿತ್ರಕೃಪೆ: Jyoti Prakash Bhattacharjee

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X