Search
  • Follow NativePlanet
Share
» »ಬಂಡೆಕಲ್ಲಿನ ಗುಹೆಯೊಳಗೆ ಕುಳಿತಿರುವ ಈ ಕಲ್ಲು ಗಣಪತಿಯ ನೋಡಿದ್ದೀರಾ?

ಬಂಡೆಕಲ್ಲಿನ ಗುಹೆಯೊಳಗೆ ಕುಳಿತಿರುವ ಈ ಕಲ್ಲು ಗಣಪತಿಯ ನೋಡಿದ್ದೀರಾ?

ಕಲ್ಲು ಗಣಪತಿ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಬಹಳಷ್ಟು ಮಂದಿ ಕೇಳಿರಲಿಕ್ಕಿಲ್ಲ. ಇದೊಂದು ಗುಹೆಯೊಳಗೆ ಇರುವ ಗಣಪತಿ. ಇದೊಂದು ಬಹಳ ಪ್ರಾಚೀನ ದೇವಾಲಯವಾಗಿದೆ. ಉಡುಪಿ ಜಿಲ್ಲೆಯ ಜನರಿಗೆ ಇದು ಚಿರಪರಿಚಿತ ದೇವಸ್ಥಾನ. ಇದೊಂದು ಗುಹಾದೇವಾಲಯವಾಗಿದ್ದು,ಇಲ್ಲಿ ಶಿವ, ಪಾರ್ವತಿ ಹಾಗೂ ಗಣೇಶನ ವಿಗ್ರಹವಿದೆ. ಇಲ್ಲಿನ ಶಿವ ಪಾರ್ವತಿ ಉದ್ಭವ ಮೂರ್ತಿ ಎನ್ನಲಾಗುತ್ತದೆ.

ಎಲ್ಲಿದೆ ಈ ದೇವಸ್ಥಾನ?

ಎಲ್ಲಿದೆ ಈ ದೇವಸ್ಥಾನ?

ಕಲ್ಲು ಗಣಪತಿ ದೇವಸ್ಥಾನವು ಉಡುಪಿ ಜಿಲ್ಲೆಯ ಶಿರಿಯಾರ ಗ್ರಾಮದ ಪಡುಮುನಾಡು ಎನ್ನುವ ಪ್ರದೇಶದಲ್ಲಿದೆ. ಈ ದೇವಾಲಯವು ಬಂಡೆಕಲ್ಲಿನ ಮೇಲೆ ಸ್ಥಾಪಿತವಾಗಿದೆ. ಬಲಗಡೆಯ ಕೆರೆಯನ್ನು ಸೂರ್ಯ ಪುಷ್ಕರಣಿ ಎನ್ನಲಾಗುತ್ತದೆ ಎಡಗಡೆಯ ಕೆರೆಯನ್ನು ಚಂದ್ರ ಪುಷ್ಕರಣಿ ಎನ್ನಲಾಗುತ್ತದೆ.

ಕಮಂಡಲ ಗಣಪತಿ: ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರಕಮಂಡಲ ಗಣಪತಿ: ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರ

ಈ ದೇವಾಲಯದ ವಿಶೇಷತೆ ಏನು?

ಈ ದೇವಾಲಯದ ವಿಶೇಷತೆ ಏನು?

ಇಲ್ಲಿನ ಗಣೇಶನು 4 ಕೈಯನ್ನು ಹೊಂದಿದ್ದಾನೆ ಎರಡು ಕೈ ವರದಾ ಹಸ್ತ ಇಚ್ಛೆಯನ್ನು ಸೂಚಿಸಿದರೆ ಇನ್ನೆರಡು ಕೈಗಳು ಮೋಕ್ಷವನ್ನು ಸೂಚಿಸುತ್ತದೆ. ಇಲ್ಲಿ ತುಲಾಭಾರದ ಮೂಲಕ ಗಣೇಶನನ್ನು ಪ್ರಾರ್ಥೀಸಲಾಗುತ್ತದೆ. ಗಣೇಶ ಚತುರ್ಥೀ ಸಂದರ್ಭದಲ್ಲಿ ದೂರದೂರದ ಊರುಗಳಿಂದ ಭಕ್ತರು ಗಣೇಶನ ದರ್ಶನಕ್ಕೆ ಆಗಮಿಸುತ್ತಾರೆ.

ಅನ್ನದಾನ

ಅನ್ನದಾನ

ಗಣೇಶ ಚತುರ್ಥೀಯಂದು ಅಲ್ಲಿ ಬಂದ ಭಕ್ತರಿಗೆಲ್ಲರಿಗೂ ಅನ್ನದಾನವನ್ನು ಏರ್ಪಡಿಸಲಾಗಿರುತ್ತದೆ. ಹಾಲು, ಸಕ್ಕರೆ, ದಾಲ್ ಹಾಗೂ ಜೇನುತುಪ್ಪದಿಂದ ತಯಾರಿಸಲಾದ ಪ್ರಸಾದವನ್ನೂ ನೀಡಲಾಗುತ್ತದೆ.

ಕೆಂಪುಕೋಟೆ ಸೇರಿದಂತೆ ಈ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆದವರು ಯಾರು ?ಕೆಂಪುಕೋಟೆ ಸೇರಿದಂತೆ ಈ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆದವರು ಯಾರು ?

ವಿಶೇಷ ಪೂಜೆ

ವಿಶೇಷ ಪೂಜೆ

ಕಲ್ಲು ಗಣಪನಿಗೆ ದಿನದಲ್ಲಿ ಮೂರು ಬಾರಿ ವಿಶೇಷ ಪೂಜೆ ಮಾಡಲಾಗುತ್ತದೆ. ಬೆಳಗ್ಗೆ 5ಗಂಟೆಗೆ, ಮಧ್ಯಾಹ್ನ 1 ಗಂಟೆಗೆ ಹಾಗೂ ರಾತ್ರಿ 8.30 ಕ್ಕೆ. ಬೆಳಗ್ಗೆ 6 ಗಂಟೆಯಿಂದ 9ಗಂಟೆವರೆಗೆ ಭಕ್ತರಿಗಾಗಿ ತೆರೆದಿರುತ್ತದೆ. ಸಾಮಾನ್ಯವಾಗಿ ಭಾನುವಾರ, ಗುರುವಾರ ಹಾಗೂ ಶುಕ್ರವಾರ ಬಹಳ ಮಂದಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಹಬ್ಬಗಳಂದು ಭಕ್ತರಿಂದ ತುಂಬಿರುತ್ತದೆ

ಹಬ್ಬಗಳಂದು ಭಕ್ತರಿಂದ ತುಂಬಿರುತ್ತದೆ

ವಿಶೇಷ ಹಬ್ಬಗಳ ಸಂದರ್ಭಗಳಾದ ಗಣೇಶ ಚತುರ್ಥೀ, ಸಂಕ್ರಮಣ ಹಾಗೂ ಸಂಕಷ್ಟಹಾರ ಚತುರ್ಥಿಯಂದು, ವಾರ್ಷಿಕ ಉತ್ಸವದಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಗುಹೆಯೊಳಗಿನ ಗಣೇಶನ ದರ್ಶನ ಪಡೆಯಲು ಭಕ್ತರ ದಂಡೇ ಆಗಮಿಸುತ್ತದೆ.

 ಸತ್ಯ ಗಣಪತಿ ವೃತ

ಸತ್ಯ ಗಣಪತಿ ವೃತ

ಇತರ ವಿಶೇಷ ಪೂಜೆಗಳಾದ ಸತ್ಯ ಗಣಪತಿ ವೃತ, ಇದನ್ನು ಮದುವೆಯ ಸಂದರ್ಭದಲ್ಲಿ ಅಥವಾ ಸರಿಯಾದ ವರ ದೊರೆಯುವಂತೆ ಬೇಡಿಕೊಳ್ಳುವ ಸಲುವಾಗಿ ಈ ವೃತವನ್ನು ಆಚರಿಸುತ್ತಾರೆ. ಗಣೇಶನಿಗೆ ಕಬ್ಬು, ತೆಂಗಿನಕಾಯಿ, ಹಣ್ಣುಉ, ಮೋದಕ, ಕಡುಬನ್ನು ಅರ್ಪಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X