Search
  • Follow NativePlanet
Share
» »ದಟ್ಟ ಕಾಡಿನ ಬೆಟ್ಟಗಳ ಮಧ್ಯದ ಕಲ್ಲಳಗರಸ್ವಾಮಿ!

ದಟ್ಟ ಕಾಡಿನ ಬೆಟ್ಟಗಳ ಮಧ್ಯದ ಕಲ್ಲಳಗರಸ್ವಾಮಿ!

ಇದೊಂದು ದಿವ್ಯ ದೇಸಂಗಳಲ್ಲೊಂದಾದ ವಿಷ್ಣುವಿನ ಒಂದು ಪವಿತ್ರವಾದ ದೇವಾಲಯವಾಗಿದ್ದು ತಮಿಳುನಾಡಿನ ಮದುರೈ ನಗರದಿಂದ 21 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ

By Vijay

ಇದೊಂದು ದಿವ್ಯ ದೇಸಂಗಳಲ್ಲೊಂದಾದ ವಿಷ್ಣುವಿನ ಒಂದು ಪವಿತ್ರವಾದ ದೇವಾಲಯವಾಗಿದೆ. ಸಾಕಷ್ಟು ದಂತಕಥೆ, ಮಹಿಮೆ ಹೊಂದಿರುವ ವೈಷ್ಣವ ಸಂಪ್ರದಾಯದ ಪವಿತ್ರ ದೇಗುಲವಾಗಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಮದುರೈ ನಗರದಿಂದ 21 ಕಿ.ಮೀ ದೂರದಲ್ಲಿರುವ ಅಳಗರ್ ಕೋಯಿಲ್ ಎಂಬಲ್ಲಿ ಈ ದೇವಾಲಯವಿದೆ. ಇದನ್ನು ಅಳಗರ್ ದೇವಾಲಯ ಎಂತಲೂ ಸಹ ಕರೆಯಲಾಗುತ್ತದೆ.

ವಿಷ್ಣು ಇಲ್ಲಿ ಕಲ್ಲಳಗರ್ ನಾಗಿಯೂ ಹಾಗೂ ಆತ್ನ ಮಡದಿಯಾದ ಲಕ್ಷ್ಮಿಯು ತಿರುಮಾಮಗಳ್ ಆಗಿಯೂ ಪೂಜಿಸಲ್ಪಡುತ್ತಾರೆ. ಈ ದೇವಾಲಯ ತಾಣವು ಪ್ರಾಕೃತಿಕವಾಗಿ ಸುಂದರವಾಗಿದೆ. ದಟ್ಟ ಹಸಿರಿನಿಂದ ಕೂಡಿದ ಗಿಡ ಮರಗಳು, ಬೆಟ್ಟ-ಗುಡ್ಡಗಳು ಹಿನ್ನೆಲೆಯಾದರೆ ಅವಶೇಷಗಳಿಂದ ಕೂಡಿರುವ ಪಾಳು ಬಿದ್ದ ಕೋಟೆಯೊಂದನ್ನು ದೇವಾಲಯದ ಸುತ್ತ ಕಾಣಬಹುದು.

ದಟ್ಟ ಕಾಡಿನ ಬೆಟ್ಟಗಳ ಮಧ್ಯದ ಕಲ್ಲಳಗರಸ್ವಾಮಿ!

ಚಿತ್ರಕೃಪೆ: Ssriram mt

ಇದರ ಬಳಿಯಿರುವ ಬೃಹತ್ತಾದ ಗುಡ್ಡವೊಂದನ್ನು ಅಳಗರ್ ಬೆಟ್ಟ ಎಂದೆ ಕರೆಯುತ್ತಾರೆ. ಈ ಒಂದು ಸ್ಥಳದಲ್ಲೆ ಪಾಂಡ್ಯ ರಾಜನಿಗೆ ವಿಷ್ಣುವಿನ ದರ್ಶವಾಯಿತೆಂಬ ಪ್ರತೀತಿಯಿದೆ. ಅಲ್ಲದೆ ಒಂದೊಮ್ಮೆ ಜೈನ ಮುನಿಯೊಬ್ಬ ಶಕ್ತಿಶಾಲಿಯಾದ ಮಾಯಾ ಆಕಳವೊಂದನ್ನು ನಂದಿಯ ಎದುರಿಗೆ ಬಿಟ್ಟಿದ್ದನು.

ಆ ಆಕಳು ಬಲು ದೈತ್ಯ ಗಾತ್ರದ್ದಾಗಿತ್ತು ಹಾಗೂ ಶಕ್ತಿಶಾಲಿಯಾಗಿತ್ತು. ಆದರೂ ಸಹ ನಂದಿ ಎದುರಿಗೆ ಅದಕ್ಕೇನೂ ಮಾಡಲಾಗಲಿಲ್ಲ. ನಂದಿಯಿಂದ ಸೋತು ಕೆಳಗೆ ಬಿದ್ದಿತು. ಹೀಗೆ ಕೆಳಗೆ ಬಿದ್ದ ಆ ಆಕಳೆ ಇಂದು ಅಳಗರ್ ಬೆಟ್ಟವಾಯಿತೆಂಬ ಪ್ರತೀತಿಯಿದೆ.

ದಟ್ಟ ಕಾಡಿನ ಬೆಟ್ಟಗಳ ಮಧ್ಯದ ಕಲ್ಲಳಗರಸ್ವಾಮಿ!

ಚಿತ್ರಕೃಪೆ: Ssriram mt

ಈ ದೇವಾಲಯಕ್ಕೆ ಸಂಬಂಧಿಸಿದಂತೆ ಇನ್ನೊಂದು ದಂತಕಥೆಯೊಂದರ ಪ್ರಕಾರ, ಬಲು ಹಿಂದೆ ಈ ಸ್ಥಳದಲ್ಲಿ ಸೂತಪ ಮುನಿಗಳೆಂಬುವವರು ವಾಸವಾಗಿದ್ದರು. ಇಲ್ಲಿನ ಬೆಟ್ಟದ ಮೇಲಿಂದ ಚಿಮ್ಮುತ್ತಿದ್ದ ನೂಪುರ ಗಂಗಾ ಎಂಬ ನೀರಿನ ತೊರೆಯಲ್ಲಿ ನಿತ್ಯವು ಮಿಂದು ಕಲ್ಲಳಗರ್ ಸ್ವಾಮಿಯನ್ನು ಆರಾಧಿಸುತ್ತಿದ್ದರು.

ಒಂದೊಮ್ಮೆ ಅವರು ಸ್ನಾನ ಮಾಡುತ್ತಿದ್ದ ಸಮ್ದರ್ಭದಲ್ಲಿ ಅವರ ಪಕ್ಕದಲ್ಲೆ ದುರ್ವಾಸ ಮುನಿಗಲು ಹಾದು ಹೋದರು. ಸೂತಪರು ಸ್ನಾನದಲ್ಲಿ ಮಗ್ನರಾಗಿದ್ದ ಕಾರಣ ಅವರಿಗೆ ದುರ್ವಾಸರ ಸಾಗುತ್ತಿದ್ದುದು ತಿಳಿಯಲಿಲ್ಲ. ಆದರೆ ದುರ್ವಾಸರು ತನ್ನನ್ನು ಅಲಕ್ಷಿಸಿದರು ಎಂಬ ಕೋಪದಿಂದ ವಿಷ್ಣು ಪರಿಹರಿಸುವ ತನಕ ಈ ಕೊಳದಲ್ಲೆ ಕಪ್ಪೆಯಾಗಿರು ಎಂದು ಶಪಿಸಿ ಹೋದರು.

ದಟ್ಟ ಕಾಡಿನ ಬೆಟ್ಟಗಳ ಮಧ್ಯದ ಕಲ್ಲಳಗರಸ್ವಾಮಿ!

ಚಿತ್ರಕೃಪೆ: Ssriram mt

ಅದರಂತೆ ಸೂತಪರು ಕಪ್ಪೆಯಾಗಿ ಪರಿವರ್ತನೆಯಾದರು ಹಾಗೂ ಅಂದಿನಿಂದ ಅವರಿಗೆ ಮಂಡೂಕ ಮುನಿಗಳು ಎಂಬ ಹೆಸರು ಬಂದಿತು. ಕಪ್ಪೆಯಾಗಿಯೂ ಯಾವ ರೀತಿಯ ಬೇಧ ಭಾವವಿಲ್ಲದೆ ವಿಷ್ಣುವಿನನ್ನು ಪೂಜಿಸಿದರು ಹಾಗೂ ಪ್ರಾರ್ಥಿಸಿದರು. ಕೊನೆಗೆ ವಿಷ್ಣುವಿನ ದರ್ಶನವಾಗಿ ತಮ್ಮ ಕಪ್ಪೆಯ ರೂಪದಿಂದ ಮುಕ್ತಿ ಪಡೆದಿದುದಲ್ಲದೆ ವೀಷ್ಣುವಿನಲ್ಲೆ ಐಕ್ಯರಾದರು.

ವಿಶ್ವಾಮಿತ್ರ ಬ್ರಹ್ಮರ್ಷಿ ಪದವಿ ಪಡೆದ ಸ್ಥಳ!

ಈ ರೀತಿಯಾಗಿ ಸಾಕಷ್ಟು ವಿಶೇಷತೆಯುಳ್ಳ ದೇವಾಲಯವಾಗಿ ಕಲ್ಲಳಗರ್ ದೇವಾಲಯವು ಪ್ರಸಿದ್ಧವಾಗಿದೆ. ಮದುರೈ ನಗರಕ್ಕೆ ಬಲು ಹತ್ತಿರವಿರುವುದರಿಂದ ಮದುರೈಗೆಂದು ಪ್ರವಾಸ ಹೋದರೆ ಈ ಅದ್ಭುತ ಕಥೆಯ ದೇವಾಲಯವನ್ನೂ ಸಹ ನೋಡಲು ಮರೆಯದಿರಿ. ಇಲ್ಲಿಗೆ ತೆರಳಲು ಬಸ್ಸುಗಳು ಹಾಗೂ ಬಾಡಿಗೆ ಕಾರುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X