Search
  • Follow NativePlanet
Share
» » ಹಿಂದೂ ಮುಸ್ಲಿಂ ಇಬ್ಬರಿಗೂ ವಿಶೇಷವಾದ ದೇವಸ್ಥಾನ ಇದು !

ಹಿಂದೂ ಮುಸ್ಲಿಂ ಇಬ್ಬರಿಗೂ ವಿಶೇಷವಾದ ದೇವಸ್ಥಾನ ಇದು !

ಗುಜರಾತ್‌ನಲ್ಲಿರುವ ಮಹಾಕಾಳಿ ಮಂದಿರವು ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕ ದೃಷ್ಠಿಯಿಂದ ಮಹತ್ವದ್ದಾಗಿದೆ. ಇಲ್ಲಿರುವ ವಿಶೇಷತೆ ಎಂದರೆ ಈ ಮಂದಿರದಲ್ಲಿರುವುದು ದಕ್ಷಿಣ ಮುಖಿ ಕಾಳಿ ದೇವಿಯ ಮೂರ್ತಿ. ಈ ಮಂದಿರದಲ್ಲಿ ಅನೇಕ ಧಾರ್ಮಿಕ ರಹಸ್ಯಗಳಡಗಿವೆ. ಅವು ಈ ಮಂದಿರವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಕೆಲವು ರಾಮನ ಪುತ್ರರಾದ ಲವ ಕುಶರಿಗೆ ಸಂಬಂಧಿಸಿದ್ದಾದರೆ ಇನ್ನೂ ಕೆಲವು ವಿಷ್ಯ ಋಷಿ ವಿಶ್ವಾಮಿತ್ರರಿಗೆ ಸಂಬಂಧಿಸಿದ್ದಾಗಿದೆ.

ಮೈಸೂರಿಗೆ ಹೋದಾಗ ಏನ್ ಖರೀದಿಸೋದು ಗೊತ್ತಾಗ್ತಿಲ್ವಾ?ಮೈಸೂರಿಗೆ ಹೋದಾಗ ಏನ್ ಖರೀದಿಸೋದು ಗೊತ್ತಾಗ್ತಿಲ್ವಾ?

ವಾವಗಡ ಎನ್ನುವ ಹೆಸರು ಯಾಕೆ ಬಂದಿತು?

ವಾವಗಡ ಎನ್ನುವ ಹೆಸರು ಯಾಕೆ ಬಂದಿತು?

PC:Gashwin Gomes
ಒಂದಾನೊಂದು ಕಾಲದಲ್ಲಿ ಈ ಬೆಟ್ಟವನ್ನು ಹತ್ತುವುದು ಅಸಂಭವವಿತ್ತು. ಅಲ್ಲದೆ ಈ ಬೆಟ್ಟದಲ್ಲಿ ಗಾಳಿಯು ಎಲ್ಲಾ ಕಡೆಯಿಂದಲೂ ಬರುತ್ತಿತ್ತು. ಅದಕ್ಕಾಗಿ ಈ ಬೆಟ್ಟಕ್ಕೆ ಪಾವಗಡ ಎನ್ನುವ ಹೆಸರಿಡಲಾಗಿದೆ. ಪಾವಗಡ ಎಂದರೆ ಯಾವಾಗಲೂ ಗಾಳಿಯಿಂದ ಕೂಡಿರುವ ಪ್ರದೇಶ. ಈ ಮಂದಿರ ಬೆಟ್ಟದ ಮೇಲಿದೆ ಇದನ್ನು ತಲುಪಬೇಕಾದರೆ ಸುಮಾರು 250 ಮೆಟ್ಟಿಲುಗಳನ್ನು ಹತ್ತಬೇಕು.

ಲವ-ಕುಶ ಸೇರಿದಂತೆ ಅನೇಕ ಖುಷಿಗಳು ಇಲ್ಲೇ ಮೋಕ್ಷ ಕಂಡುಕೊಂಡಿದ್ದು

ಲವ-ಕುಶ ಸೇರಿದಂತೆ ಅನೇಕ ಖುಷಿಗಳು ಇಲ್ಲೇ ಮೋಕ್ಷ ಕಂಡುಕೊಂಡಿದ್ದು

PC:Arian Zwegers
ಈ ಮಂದಿರ ಶ್ರೀರಾಮನ ಕಾಲದ್ದು ಎನ್ನುತ್ತದೆ ಇಲ್ಲಿನ ಇತಿಹಾಸ. ಶ್ರೀರಾಮನ ಮಕ್ಕಳಾದ ಲವ-ಕುಶರು ಹಾಗೂ ಅನೇಕ ಋಷಿ ಮುನಿಗಳು, ಬೌದ್ಧ ಭಿಕ್ಷುಗಳು ಇಲ್ಲೇ ಮೋಕ್ಷ ಪ್ರಡೆದಿದ್ದರು ಎನ್ನಲಾಗುತ್ತದೆ.

 ವಿಶ್ವಾಮಿತ್ರರು ಪ್ರತಿಷ್ಠಾಪಿಸಿದ ಕಾಳಿ ಮೂರ್ತಿ

ವಿಶ್ವಾಮಿತ್ರರು ಪ್ರತಿಷ್ಠಾಪಿಸಿದ ಕಾಳಿ ಮೂರ್ತಿ

PC:Hardik D.Trivedi
ಋಷಿ ವಿಶ್ವಾಮಿತ್ರರು ಇಲ್ಲಿ ಕಾಳಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಹಾಗಾಗಿ ಇಲ್ಲಿ ಹರಿಯುವ ನದಿಯ ಹೆಸರು ಕೂಡಾ ವಿಶ್ವಾಮಿತ್ರ ಎಂದು ಇಡಲಾಗಿದೆ.

ಹಿಂದೂಗಳಿಗೆ ಮಾತ್ರವಲ್ಲ ಮುಸಲ್ಮಾನರಿಗೂ ಮಹತ್ವದ್ದು ಈ ದೇವಾಲಯ

ಹಿಂದೂಗಳಿಗೆ ಮಾತ್ರವಲ್ಲ ಮುಸಲ್ಮಾನರಿಗೂ ಮಹತ್ವದ್ದು ಈ ದೇವಾಲಯ

PC: ashesh shah
ಮಂದಿರದ ಮಹಡಿ ಮೇಲೆ ಮುಸಲ್ಮಾನರ ಪವಿತ್ರ ಸ್ಥಳವಿದೆ. ಸದನ್ ಶಾಹ್ ಪಿರ್ ದರ್ಗಾವಿದೆ. ಹಾಗಾಗಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರರೂ ಕೂಡಾ ಭೇಟಿ ನೀಡುತ್ತಾರೆ. ಹಾಗಾಗಿ ಇದು ಹಿಂದೂ ಹಾಗೂ ಮುಸಲ್ಮಾನರಿಗೂ ಮಹತ್ವದ್ದಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Tridatt
ಪಾವಗಡದಿಂದ ಸುಮಾರು 50 ಕಿ.ಮೀ ದೂರದಲ್ಲಿ ಗುಜರಾತ್‌ನಿಂದ ವಡೋದರದಲ್ಲಿ ಬಂದು ಅಲ್ಲಿಂದ ಪಾವಗಡಕ್ಕೆ ಬೇಕಾದಷ್ಟು ಬಸ್, ವಾಹನಗಳು ಸಿಗುತ್ತದೆ.

Read more about: temple gujarat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X