Search
  • Follow NativePlanet
Share
» » ಈ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಪುರುಷ ಕುಕ್‌ಗಳೇ ತುಂಬಿದ್ದಾರೆ

ಈ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಪುರುಷ ಕುಕ್‌ಗಳೇ ತುಂಬಿದ್ದಾರೆ

ಮಹಿಳೆಯರು ಅಡಿಗೆ ಮಾಡೋದರಲ್ಲಿ ಎಕ್ಸ್‌ಪರ್ಟ್‌ಗಳು ಎನ್ನುತ್ತಾರೆ. ಹಾಗಾಗಿ ಮನೆಯಲ್ಲಿ ಅಡುಗೆ ಮಾಡುವ ಕೆಲಸ ಏನಿದ್ದರೂ ಅದು ಮಹಿಳೆಯರಿಗೆ. ಹಾಗಂತ ಪುರುಷರು ಅಡುಗೆ ಮಾಡೋದರಲ್ಲಿ ಹಿಂದೆ ಅಂತಾ ತಿಳಿಯಬೇಡಿ. ಪುರುಷರೂ ಅಡುಗೆ ಮಾಡೋದರಲ್ಲಿ ಎತ್ತಿದ ಕೈ. ಹಾಗಾಗಿ ಯಾವುದೇ ಕ್ಯಾಟರಿಂಗ್, ಅಥವಾ ಸಾರ್ವಜನಿಕ ಸಮಾರಂಭಗಳಲ್ಲಿ ಅಡುಗೆ ಮಾಡೋದೇನಿದ್ದರೂ ಅದು ಪುರುಷರೇ.

ಇಂದು ನಾವು ಅಡುಗೆ ಮಾಡುವ ವಿಷಯ ಯಾಕೆ ಹೇಳುತ್ತಿದ್ದೇವೆ ಎಂದರೆ, ನಾವಿಂದು ಒಂದು ವಿಶೇಷ ಊರಿನ ಬಗ್ಗೆ ತಿಳಿಸಿಕೊಡಲಿದ್ದೇವೆ . ಆ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷರೂ ಕುಕ್. ಆ ಊರಿನಲ್ಲಿ ಎಲ್ಲರೂ ಪುರುಷ ಅಡುಗೆಯವರೇ ತುಂಬಿದ್ದಾರೆ. ಹಾಗಾದರೆ ಬನ್ನಿ ಆ ಊರಿನ ಬಗ್ಗೆ ತಿಳಿಯೋಣ.

ಯಾವುದು ಆ ಹಳ್ಳಿ ?

ಯಾವುದು ಆ ಹಳ್ಳಿ ?

ಅಡುಗೆ ಮಾಡುವ ಪುರುಷರಿಂದಲೇ ಕೂಡಿರುವ ಆ ಊರು ತಮಿಳುನಾಡಿನ ರಮಾನಾಥಪುರಂ ಜಿಲ್ಲೆಯ ಕಲಯೂರು . ಈ ವಿಶೇಷತೆಯೇ ಇತರ ಊರಿಗಿಂತ ಈ ಊರನ್ನು ಭಿನ್ನವಾಗಿಸಿದೆ.

ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಪುರುಷ ಅಡುಗೆಯವರು

ಪುರುಷ ಅಡುಗೆಯವರು

ಈ ಅನನ್ಯ ತಮಿಳುನಾಡಿನ ಪ್ರದೇಶದೊಳಗೆ ಪ್ರವೇಶಿಸುತ್ತಿದ್ದಂತೆ ಗಾಳಿಯ ಮೂಲಕ ಮಸಾಲೆಗಳ ಪ್ರಲೋಭನಗೊಳಿಸುವ ಸುವಾಸನೆಯು ನಿಮ್ಮನ್ನು ಔತಣಕ್ಕೆ ಆಹ್ವಾನಿಸುತ್ತದೆ. ದಕ್ಷಿಣ ಭಾರತದಲ್ಲಿ ಕಲೆಯೂರು ಆಹಾರಪ್ರೀಯರ ಸ್ವರ್ಗವೆಂದು ಪ್ರಸಿದ್ಧವಾಗಿದೆ. ಅಲ್ಲಿನ ಆಹಾರವು ಮಕರಂದದಂತ ರುಚಿಯನ್ನು ನೀಡುತ್ತದೆ.

200ಕ್ಕೂ ಅಧಿಕ ಅಡುಗೆಯವರು

200ಕ್ಕೂ ಅಧಿಕ ಅಡುಗೆಯವರು

ಈ ಊರಿನ ವಿಶೇಷತೆಯೆಂದರೆ ಇಲ್ಲಿನ ಪ್ರತಿ ಮನೆಯಲ್ಲೂ ಪ್ರಸಿದ್ಧ ಕುಕ್‌ಗಳು ಇದ್ದಾರೆ. ಪ್ರತಿ ಮನೆಯಲ್ಲೂ ವಿಶೇಷ ರುಚಿಕರವಾದ ಆಹಾರ ಲಭಿಸುತ್ತದೆ. ಕಲಯೂರಿನಲ್ಲಿ ಸುಮಾರು 200ಕ್ಕೂ ಅಧಿಕ ಉತ್ತಮ ಅಡುಗೆಯವರಿದ್ದಾರೆ.

ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದ ಎಲ್ಲಿದೆ ಗೊತ್ತಾ?ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದ ಎಲ್ಲಿದೆ ಗೊತ್ತಾ?

ಪ್ರಾರಂಭ ಆಗಿದ್ದು ಹೇಗೆ?

ಪ್ರಾರಂಭ ಆಗಿದ್ದು ಹೇಗೆ?

ಸುಮಾರು 500 ಶತಮಾನಗಳ ಹಿಂದೆ, ಈ ಪ್ರದೇಶದಲ್ಲಿ ವಾಸಿಸುವ ಶ್ರೀಮಂತ ರೆಡ್ಡಿಯರ್ ಜಾತಿಯವರಿಗೆ ವನ್ಯರಾರ್ಸ್ ಕೆಳ ಜಾತಿಯವರು ಅಡುಗೆ ಮಾಡುವ ಕೆಲಸವನ್ನು ನೀಡಿದರು. ಅವರು ಆಹಾರದ ಪಾಕವಿಧಾನಗಳನ್ನು ಸಂಗ್ರಹಿಸಿಟ್ಟು ಸಾಂಪ್ರದಾಯಿಕ ಬ್ರಾಹ್ಮಣ ಅಡುಗೆ ಭಟ್ಟರು ಮಾಡುವ ಅಡುಗೆಗಿಂತಲೂ ಉತ್ತಮವಾದ ಅಡುಗೆಯನ್ನು ಮಾಡಿದರು. ಆ ಸಮಯದಲ್ಲಿ ಕೃಷಿ ಮಾಡುವುದು ಲಾಭದಾಯಕರವಾದ ಉದ್ಯೋಗವಾಗಿರಲಿಲ್ಲ. ಹಾಗಾಗಿ ಅದನ್ನು ಬಿಟ್ಟು ಬೇರೆ ಯಾವ ಕೆಲಸವೂ ಅವರಿಗೆ ತಿಳಿದಿರಲಿಲ್ಲ. ಹಾಗಾಗಿ ಅಡುಗೆ ಮಾಡುವ ಕಲೆಯನ್ನೇ ರೂಢಿಸಿಕೊಂಡರು.

3 ಗಂಟೆಯಲ್ಲಿ ಸಾವಿರ ಜನರಿಗೆ ಅಡುಗೆ

3 ಗಂಟೆಯಲ್ಲಿ ಸಾವಿರ ಜನರಿಗೆ ಅಡುಗೆ

ಇಂದು ಕಲಯೂರಿನ ಅಡುಗೆಯ ಪುರುಷರು ಆರು ತಿಂಗಳು ದಕ್ಷಿಣ ಭಾರತಾದ್ಯಂತ ಪರ್ಯಟನೆ ಮಾಡುತ್ತಾ ಬಾಯಲ್ಲಿ ನೀರೂರಿಸುವಂತಹ ರುಚಿಕರವಾದ ಆಹಾರವನ್ನು ತಯಾರಿಸುತ್ತಾರೆ. ಮದುವೆ, ಮುಂಜಿ ಸಮಾರಂಭಗಳಲ್ಲಿ ಇವರೇ ಅಡುಗೆ ತಯಾರಿಸುತ್ತಾರೆ. ಬರೀ 3 ಗಂಟೆಯಲ್ಲಿ ಸಾವಿರ ಜನರಿಗೆ ಅಡುಗೆ ತಯಾರಿಸಬಲ್ಲರು.

ಕುಕ್ ಆಗೋದು ಸುಲಭವಲ್ಲ

ಕುಕ್ ಆಗೋದು ಸುಲಭವಲ್ಲ

ಕಲಯೂರ್‌ನಲ್ಲಿ ಕುಕ್‌ ಆಗೋದಂದ್ರೆ ಅದೇನು ಅಷ್ಟೊಂದು ಸುಲಭದ ಕೆಲಸವಲ್ಲ. ಇಲ್ಲಿ ಫ್ರೆಶರ್ಸ್‌ ಮೊದಲೇ ಟ್ರೈನಿಂಗ್‌ನ್ನು ಪ್ರಾರಂಭಿಸಬೇಕು. ತರಕಾರಿ ಕತ್ತರಿಸುವುದು. ಸಾಮಾಗ್ರಿಗಳನ್ನು ಸಂಗ್ರಹಿಸುವುದು ಇದೆಲ್ಲವೂ ಮೊದಲೇ ಸರಿಯಾಗಿ ಕಲಿಯಬೇಕು. ಇನ್ನು ಅಡುಗೆ ಮಾಡಲು ಕಲಿತವರು ಇನ್ನಷ್ಟು ವಿವಿಧ ಅಡುಗೆಯನ್ನು ಮಾಡಲು ಪ್ರಾರಂಭಿಸುತ್ತಾರೆ.

ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !

10ವರ್ಷಗಳ ಕಾಲ ತರಭೇತಿ

10ವರ್ಷಗಳ ಕಾಲ ತರಭೇತಿ

10ವರ್ಷಗಳ ಕಾಲ ತರಭೇತಿ ಪಡೆದ ನಂತರವೇ ಆತ ತನ್ನದೇ ಆದ ಅಡುಗೆಯ ಟೀಮ್‌ನ್ನು ನಡೆಸಲು ಸಮರ್ಥನಾಗಿರುತ್ತಾನೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಪ್ರತಿಯೊಂದು ಮನೆಯಲ್ಲೂ ಪುರುಷ ಅಡುಗೆಯವರಿದ್ದರೂ ಅವರು ತಮ್ಮ ಮನೆಯವರಿಗೆ ಅಡುಗೆ ಮಾಡುವುದಿಲ್ಲವಂತೆ. ಮನೆಯಲ್ಲಿ ಮಹಿಳೆಯರೇ ಅಡುಗೆ ಮಾಡುವುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X