Search
  • Follow NativePlanet
Share
» » ಒಡಿಶಾದ ಕಲಾಹಂಡಿಯ ಪ್ರಾಕೃತಿಕ ಸೌಂದರ್ಯವನ್ನೊಮ್ಮೆ ನೋಡಿ

ಒಡಿಶಾದ ಕಲಾಹಂಡಿಯ ಪ್ರಾಕೃತಿಕ ಸೌಂದರ್ಯವನ್ನೊಮ್ಮೆ ನೋಡಿ

ಮಾನವ ಜನಾಂಗದ ಪೂರ್ವ ಇತಿಹಾಸಕ್ಕೆ ಸಂಬಂಧಿಸಿದ ಹಾಗೆ, ಶಿಲಾಯುಗಗಳಿಗೆ ಸಂಬಂಧ ಪಟ್ಟಂತೆ, ಹಲವು ಸಾಕ್ಷ್ಯಾಧಾರಗಳು ಇಲ್ಲಿ ಕಂಡುಬಂದಿವೆ.

ಕಲಾಹಂಡಿಯು ಒಡಿಶಾದ ಒಂದು ಜಿಲ್ಲೆಯಾಗಿದ್ದು, ಇತಿಹಾಸ ಮತ್ತು ಸಂಸ್ಕೃತಿಗಳಿಂದ ಸಮೃದ್ಧವಾಗಿದೆ. ನದಿಗಳಾದ ಉತ್ತೈ ಮತ್ತು ತೇಲ್ ಗಳ ಸಂಗಮ ಸ್ಥಾನದಲ್ಲಿರುವ ಕಲಾಹಂಡಿಯು 12 ನೇ ಶತಮಾನಕ್ಕೆ ಸೇರಿದ, ವ್ಯಾಪಕವಾದ ವಾಸ್ತುಶಿಲ್ಪದ ಶ್ರೇಷ್ಠತೆಗೆ ಹೆಸರುವಾಸಿಯಾದ ಅತಿ ಪುರಾತನ ದೇವಸ್ಥಾನಗಳ ನೆಲೆವೀಡಾಗಿದೆ. ಅನೇಕ ರಮಣೀಯವಾದ, ಮನಸೂರೆಗೊಳ್ಳುವ ಬೆಟ್ಟಗಳೊಂದಿಗೆ, ಮಹಡಿಗಳಂತಹ ರಚನೆಯುಳ್ಳ ಜಲಪಾತಗಳು, ಈ ಜಿಲ್ಲೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಶಿಲಾಯುಗಗಳಿಗೆ ಸಂಬಂಧಪಟ್ಟಿದ್ದು

ಶಿಲಾಯುಗಗಳಿಗೆ ಸಂಬಂಧಪಟ್ಟಿದ್ದು

PC:Sibaprasad Biswal
ಮಾನವ ಜನಾಂಗದ ಪೂರ್ವ ಇತಿಹಾಸಕ್ಕೆ ಸಂಬಂಧಿಸಿದ ಹಾಗೆ, ಶಿಲಾಯುಗಗಳಿಗೆ ಸಂಬಂಧ ಪಟ್ಟಂತೆ, ಹಲವು ಸಾಕ್ಷ್ಯಾಧಾರಗಳು ಇಲ್ಲಿ ಕಂಡುಬಂದಿವೆ. ಪ್ರತೀವರ್ಷವೂ ಕೂಡ ಕಲಾಹಂಡಿಯಲ್ಲಿ ಉತ್ಸವವು ಆಯೋಜಿಸಲ್ಪಡುವುದು ಇಲ್ಲಿನ ವಿಶೇಷ. ಈ ಉತ್ಸವವು , ಜಗತ್ತಿನಾದ್ಯಂತ ಪ್ರಸಿದ್ಧವಾದ ಕಲಾಹಂಡಿಯ ಕುಶಲಕಲೆ, ಸಂಸ್ಕೃತಿ, ಸಂಗೀತ, ಮತ್ತು ಕರಕುಶಲ ಕಲೆಯನ್ನು ಜಗಜ್ಜಾಹೀರುಗೊಳಿಸಲು ವೇದಿಕೆಯನ್ನೊದಗಿಸುತ್ತದೆ.

 ಕಲಾಹಂಡಿ ಪ್ರವಾಸೋದ್ಯಮ

ಕಲಾಹಂಡಿ ಪ್ರವಾಸೋದ್ಯಮ

PC: Debasish Rout
ಕಲಾಹಂಡಿಯಲ್ಲಿ ಮತ್ತು ಸುತ್ತಮುತ್ತಲಿರುವ ಪ್ರವಾಸೀ ತಾಣಗಳು ಕಲಾಹಂಡಿ ಪ್ರವಾಸೋದ್ಯಮವು ತನ್ನ ಪ್ರವಾಸಿಗರಿಗೆ, ಇತಿಹಾಸಕ್ಕೆ ಸಂಬಂಧಿಸಿದಂತೆ ಆಸಕ್ತಿದಾಯಕವಾದ ಮತ್ತು ರೋಚಕವಾದ ಪ್ರಾಕೃತಿಕ ಸೌಂದರ್ಯವಿರುವ, ಬೇರೊಂದು ಜಗತ್ತಿಗೇ ಹೋದಂತಹ ಅನುಭವವನ್ನು ನೀಡುವ ಕೆಲವು ತಾಣಗಳನ್ನು ಒಳಗೊಂಡಿದೆ. ಅಸುರ್‌‌‌‌‌‍ಗಡ್ ಎಂಬ ಸ್ಥಳದಲ್ಲಿ, 2000 ವರ್ಷಗಳಷ್ಟು ಹಿಂದಿನ ಮಾನವನ ಜೀವನ ಕುರಿತಾದ ಅಲ್ಪಪ್ರಮಾಣದ, ಬೇರೆಲ್ಲೂ ಕಾಣಸಿಗದ ಕುರುಹುಗಳಿವೆ.

 ಪುರಾತನ ಚಿತ್ರಕಲೆಗಳು

ಪುರಾತನ ಚಿತ್ರಕಲೆಗಳು

PC: Debasish Rout
ಗುಡಹಂಡಿ ಬೆಟ್ಟದ ಗುಹೆಗಳಲ್ಲಿ ಮೂಕವಿಸ್ಮಿತರನ್ನಾಗಿಸುವ ಕೆಲವು ಪುರಾತನ ಚಿತ್ರಕಲೆಗಳಿವೆ. ರಬಂದಾತ ಒಂದು ಸುಂದರವಾದ ಜಲಪಾತವಾಗಿದ್ದು, ಮೋಹನಗಿರಿಯಲ್ಲಿ ಪುರಾತನವಾದ ಭಗವಾನ್ ಶಿವನ ದೇವಸ್ಥಾನವೊಂದಿದೆ. ಮಾತ್ರವಲ್ಲದೆ, ಮೋಹನಗಿರಿಯಲ್ಲಿ ಕೆಲವು ರೋಚಕವಾದ ಪ್ರಕೃತಿ ಸೌಂದರ್ಯವನ್ನೂ ಕೂಡ ಸವಿಯಬಹುದಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣವೂ ಕೂಡ ಇಲ್ಲಿದ್ದು, ವಿವಿಧ ಕ್ರೀಡೆಗಳು ಮತ್ತು ಮೇಳಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.

ಕಲಾಹಂಡಿಯನ್ನು ತಲುಪುವುದು ಹೇಗೆ ?

ಕಲಾಹಂಡಿಯನ್ನು ತಲುಪುವುದು ಹೇಗೆ ?

PC:Riskyishwar

ಒಡಿಶಾ ರಾಜ್ಯದ ಎಲ್ಲಾ ಪ್ರಮುಖ ನಗರಗಳೊಂದಿಗೆ ಕಲಾಹಂಡಿಯು ಸಂಪರ್ಕವನ್ನು ಹೊಂದಿದೆ. ಕಲಾಹಂಡಿಗೆ ಕೇಸಿಂಗ ರೈಲ್ವೆ ನಿಲ್ದಾಣದ ಮೂಲಕ ರೈಲಿನಲ್ಲಿ ಹಾಗೂ ಭುಬನೇಶ್ವರ್ ವಿಮಾನ ನಿಲ್ದಾಣದ ಮೂಲಕ ವೈಮಾನಿಕವಾಗಿಯೂ ಸಹ ಸುಲಭವಾಗಿ ತಲುಪಬಹುದು. ಕಲಾಹಂಡಿಗೆ ಭೇಟಿ ನೀಡಲು ಪ್ರಶಸ್ತ ಕಾಲಾವಧಿ ಮಳೆಗಾಲವು ಕಲಾಹಂಡಿಗೆ ಭೇಟಿ ನೀಡಲು ಅತಿ ಸೂಕ್ತ ಕಾಲವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X