Search
  • Follow NativePlanet
Share
» »ಆದಿ ಶಂಕರರು ಜನಿಸಿದ ಕಾಲಡಿಗೆ ಭೇಟಿ ನೀಡಿ

ಆದಿ ಶಂಕರರು ಜನಿಸಿದ ಕಾಲಡಿಗೆ ಭೇಟಿ ನೀಡಿ

By Vijay

ಅದ್ವೈತ ಸಿದ್ಧಾಂತವನ್ನು ಪ್ರತಿ ಪಾದಿಸಿ, ದಕ್ಷಿಣದಿಂದ ಹಿಡಿದು ಉತ್ತರದ ಕಾಶ್ಮೀರದವರೆಗೆ ಅಲ್ಪಾಯುವಿನಲ್ಲೆ ಪ್ರಯಾಣಿಸಿ, ಹಿಂದೂ ಧರ್ಮದ ವೇದೋಪನಿಶತ್ತುಗಳ ತಿರುಳು ಸಾರುತ್ತ, ಪವಿತ್ರ ಭಾರತದ ನಾಲ್ಕು ದಿಕ್ಕುಗಳಲ್ಲಿ ಜಗತ್ಪೀಠಗಳನ್ನು ಸ್ಥಾಪಿಸಿ ಅಸಂಖ್ಯಾತ ಭಕ್ತ ಪರಿಪಾಲಕರನ್ನು ಹೊಂದಿರುವ ಶ್ರೀ ಆದಿ ಗುರು ಶಂಕರಾಚಾರ್ಯರು ಹುಟ್ಟಿದ್ದು ಕೇರಳ ರಾಜ್ಯದ ಕಾಲಡಿ ಎಂಬ ಪಟ್ಟಣದಲ್ಲಿ.

ಕಾಲಡಿ, ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಹರಿದಿರುವ ಪೆರಿಯಾರ್ ನದಿಯ ತಟವೊಂದರಲ್ಲಿ ಶಾಂತವಾಗಿ ನೆಲೆಸಿರುವ ಒಂದು ಪಟ್ಟಣವಾಗಿದೆ. ವಿಶೇಷವೆಂದರೆ ಈ ಪಟ್ಟಣವು ನಕ್ಷೆಯಲ್ಲಿ 19 ನೆಯ ಶತಮಾನದವರೆಗೂ ಗುರುತಿಸಿಕೊಂಡಿರಲಿಲ್ಲ. ಅದೆ ಶತಮಾನದ ಕೊನೆಯಲ್ಲಿ ಅಂದಿನ ಕರ್ನಾಟಕದ ಶೃಂಗೇರಿ ಪೀಠದ ಪೀಠಾಧಿಪತಿಗಳಾಗಿದ್ದ ಶಂಕರಾಚಾರ್ಯರಿಂದ ಈ ಸ್ಥಳವು ಶೋಧಿಸಲ್ಪಟ್ಟು, 1910 ರಲ್ಲಿ ಆದಿ ಗುರು ಶಂಕರರಿಗೆ ಮುಡಿಪಾದ ದೇಗುಲವನ್ನು ಪ್ರತಿಷ್ಠಾಪಿಸುವುದರ ಮೂಲಕ ಪ್ರವರ್ಧಮಾನಕ್ಕೆ ಬಂದಿತು.

2010 ರಲ್ಲಿ ಕಾಲಡಿಯ ಶೋಧನೆಯಾಗಿ ನೂರು ವರ್ಷಗಳು ಪೂರ್ಣಗೊಂಡಿದುದನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶೃಂಗೇರಿ ಶಾರದಾ ಪೀಠವು ಇದು ಶೋಧಿಸಲ್ಪಟ್ಟ ಕುರಿತಂತ ಚಿಕ್ಕದಾದ ಚಿತ್ರವನ್ನೂ ಸಹ ನಿರ್ಮಾಣ ಮಾಡಿತು. ಕಾಲಡಿಯ ಕುರಿತು ಸಂಕ್ಷೀಪ್ತವಾಗಿ ತಿಳಿದುಕೊಳ್ಳಿ.

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿ ಎಂದರೆ ಸ್ಥಳೀಯವಾಗಿ ಮಲಯಾಳಂ ಭಾಷೆಯಲ್ಲಿ ಹೆಜ್ಜೆ ಗುರುತು ಎಂದಾಗುತ್ತದೆ. ಮೊದಲಿಗೆ ಈ ಸ್ಥಳವು ಸಸಾಲಂ ಎಂಬ ಹೆಸರಿನಿಂದ ಗುರುತಿಸಿಕೊಂಡಿತ್ತು.

ಚಿತ್ರಕೃಪೆ: Ranjithsiji

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಆದಿ ಶಂಕರರ ಅನುಯಾಯಿಗಳು ಮತ್ತು ಭಾರತ ಮೂಲೆ ಮೂಲೆಯಿಂದ ಬರುವ ಯಾತ್ರಾರ್ಥಿಗಳಿಗೆ ಈ ಊರು ಒಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ.

ಚಿತ್ರಕೃಪೆ: Srevalsan Nambudiri

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಆದಿ ಶಂಕರ ಮತ್ತು ಅವರ ಮಾತೃಶ್ರೀಯವರ ಕುರಿತಾದ ಒಂದು ಪೂರ್ವದ ದಂತಕತೆಗೆ ಈ ಊರು ಸಾಕ್ಷಿಯಾಗಿದೆ. ಪೆರಿಯಾರ್ ನದಿಯು ಮೊದಲಿಗೆ ಪೂರ್ಣಾ ನದಿ ಎಂದು ಕರೆಯಲ್ಪಡುತ್ತಿತ್ತು.

ಚಿತ್ರಕೃಪೆ: Challiyan

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಇದು ಶಂಕರರು ಮತ್ತು ಅವರ ತಾಯಿ ನೆಲೆಸಿದ್ದ ಸ್ಥಳದಿಂದ ತುಂಬಾ ದೂರದಲ್ಲಿ ಹರಿಯುತ್ತಿತ್ತು. ಒಮ್ಮೆ ಶಂಕರರ ತಾಯಿಯು ಪ್ರತಿದಿನದಂತೆ ಅಂದು ಸಹ ಸ್ನಾನಮಾಡಲು ಹೋಗುವಾಗ ತಲೆಸುತ್ತು ಬಂದು ಕುಳಿತುಬಿಟ್ಟರು. ಆಗ ನಿಸ್ಸಹಾಯಕರಾದ ಶಂಕರರು ಭಗವಾನ್ ಕೃಷ್ಣನನ್ನು ಪ್ರಾರ್ಥಿಸಿದರು.

ಚಿತ್ರಕೃಪೆ: Hvadga

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಆಗ ಶ್ರೀ ಕೃಷ್ಣನು ಅವರ ಮೊರೆಗೆ ಓಗೊಟ್ಟು ಬಂದನು.' ತನ್ನ ಕಾಲಿನ ಹೆಜ್ಜೆಗುರುತು ಎಲ್ಲಿದೆಯೊ ಅಲ್ಲಿಂದ ನದಿ ಹರಿಯುತ್ತದೆ' ಎಂದು ಶ್ರೀ ಕೃಷ್ಣನು ಶಂಕರರಿಗೆ ಹೇಳಿದನು. ಅದರ ಪರಿಣಾಮವಾಗಿ ಶಂಕರರ ಉದ್ಯಾನವನದ ಬಳಿಯಲ್ಲಿ ನದಿಯು ಹರಿಯಲು ಪ್ರಾರಂಭಿಸಿತು. ಕಾಲಡಿಯಲ್ಲಿರುವ ಶಂಕರ ಗೋಪುರ ಮಂಟಪ.

ಚಿತ್ರಕೃಪೆ: Kaladian

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ನಂತರ ಶಂಕರರು ಶ್ರೀ ಕೃಷ್ಣನಿಗಾಗಿ ಇಲ್ಲಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು, ಅಲ್ಲದೆ ಕೃಷ್ಣನಿಗಾಗಿ ಅಚ್ಯುತ ಅಷ್ಟಕಂ ಎಂಬ ಪ್ರಸಿದ್ಧ ಸ್ತೋತ್ರವನ್ನು ಪಠಿಸಿದರು. ರಾಮಕೃಷ್ಣ ಅದ್ವೈತ ಆಶ್ರಮ.

ಚಿತ್ರಕೃಪೆ: Kaladian

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಈ ಸ್ಥಳದ ಪ್ರಮುಖ ಆಕರ್ಷಣೆಗಳಲ್ಲಿ ರಾಮಕೃಷ್ಣ ಆಶ್ರಮ, ಕಲ್ಲಿಲ್ ದೇವಿ ದೇವಾಲಯ, ಶೃಂಗೇರಿ ಮಠದ ಸಂಕೀರ್ಣ, ಮಹಾದೇವ ದೇವಾಲಯ, ವನಮೂರ್ತಿ ದೇವಾಲಯ, ಕುಳುಪ್ಪಿಲ್ಲಿಕ್ಕವೆ ಜಲದುರ್ಗ ದೇವಾಲಯಗಳು ಸೇರಿವೆ.

ಚಿತ್ರಕೃಪೆ: Challiyan

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಇದು ಕಾಲಡಿಯಲ್ಲಿರುವ ಶಂಕರರ ಜನ್ಮ ಸ್ಥಳದ ಹಳೆಯ ಚಿತ್ರ.

ಚಿತ್ರಕೃಪೆ: Mrug

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿಯಲ್ಲಿರುವ ಮೊಸಳೆ ದಂಡೆ. ಇಲ್ಲಿಂದಲೆ ಶಂಕರರ ಜೀವನ ಬದಲಾಗಿ ಬಾಲ್ಯದಲ್ಲಿಯೆ ಸನ್ಯಾಸತ್ವವನ್ನು ಸ್ವಿಕರಿಸಿದರು. ಕಥೆಯ ಪ್ರಕಾರ, ಶಂಕರರ ತಾಯಿಗೆ ಶಂಕರನು ಸನ್ಯಾಸತ್ವ ಸ್ವಿಕರಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ ಹಾಗೂ ಅದನ್ನು ವಿರೋಧಿಸಿದ್ದಳು. ಒಮ್ಮೆ ಶಂಕರರು ಪೂರ್ಣಾ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಮೊಸಳೆಯೊಂದು ಅವರ ಕಾಲನ್ನು ಹಿಡಿದು ಎಳೆಯಲು ಆರಂಭಿಸಿತು. ಇದರಿಂದ ಭಯಬಿದ್ದ ತಾಯಿ ಶಂಕರನನ್ನು ದಡಕ್ಕೆ ಬರುವಂತೆ ಕೂಗಿದಾಗ ಅತ್ತ ಕಡೆಯಿಂದ ಶಂಕರರು ತಾಯಿಗೆ, ನೀನು ನನಗೆ ಸನ್ಯಾಸಿಯಾಗಲು ಒಪ್ಪಿದರೆ ಮಾತ್ರ ಮೊಸಳೆಯಿಂದ ಮುಕ್ತಿ ಎಂದು ಹೇಳಿದರು. ಆಗ ತಾಯಿ ಬೇರೆ ದಾರಿ ಕಾಣದೆ ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸಿದರು.

ಚಿತ್ರಕೃಪೆ: Ssriram mt

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿ, ಆದಿ ಶಂಕರರ ಜನ್ಮಸ್ಥಳ:

ಕಾಲಡಿಯು ವಿಮಾನ, ರೈಲು ಮತ್ತು ರಸ್ತೆ ಮಾರ್ಗವಾಗಿ ದಕ್ಷಿಣ ಭಾರತದ ಹಲವು ನಗರಗಳೊಂದಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಅಲುವಾ 16 ಕಿ.ಮೀ ದೂರದಲ್ಲಿರುವ ಕಾಲಡಿಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ಇದು ಕೇರಳದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಅಲ್ಲದೆ ತ್ರಿಶ್ಶುರ್ ಕೊಲ್ಲಂ, ತಿರುವನಂತಪುರಂಗಳಿಂದ ಬಸ್ಸುಗಳ ಸೌಕರ್ಯವಿದೆ.

ಚಿತ್ರಕೃಪೆ: കാക്കര

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X