Search
  • Follow NativePlanet
Share
» »ಮದ್ಯವನ್ನು ನಿಮ್ಮ ಕಣ್ಣ ಮುಂದೆಯೇ ಸೇವಿಸುವ ಕಾಲಭೈರವ

ಮದ್ಯವನ್ನು ನಿಮ್ಮ ಕಣ್ಣ ಮುಂದೆಯೇ ಸೇವಿಸುವ ಕಾಲಭೈರವ

ಇಲ್ಲಿ ದೇವಾಲಯಗಳು ಹೆಚ್ಚಾಗಿವೆ. ನೀವು ಎಂದಾದರು ಕಾಲ ಬೈರವ ದೇವಾಲಯಕ್ಕೆ ಭೇಟಿ ನೀಡಿದ್ದೀರಾ? ಹಾಗಾದರೆ ಒಮ್ಮೆ ಭೇಟಿ ನೀಡಿ ದೇವರಿಗೆ ಒಂದು 90 ಯನ್ನು ಕೊಟ್ಟು ಬನ್ನಿ. ಇದೇನೂ ಸರಿಯಾಗಿ ಓದುತ್ತಿದ್ದೇನೆ ಅಲ್ಲವೇ? ಎಂದು ಅಂದು ಕೊಳ್ಳಬೇಡಿ. ನೀವು

ಪವಿತ್ರವಾದ ವಾರಣಾಸಿಯಲ್ಲಿ ಹಲವಾರು ದೇವಾಲಯವಿದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ವಾರಣಾಸಿಯನ್ನು ಒಂದು ಪವಿತ್ರವಾದ ಪುಣ್ಯ ಭೂಮಿ ಎಂದೇ ಕರೆಯುತ್ತಾರೆ. ಈ ಸ್ಥಳದಲ್ಲಿ ಮಹಾ ಶಿವನು ನೆಲೆಸಿದ್ದು, ವಾರಣಾಸಿಯನ್ನು ಕಾಯುತ್ತಿದ್ದಾನೆ ಎಂಬ ಗಾಢವಾದ ನಂಬಿಕೆ ನಮ್ಮಲ್ಲಿದೆ. ಇಲ್ಲಿ ಹುಟ್ಟಿದ ಜನರು ನಾವು ಪುಣ್ಯವಂತರು ಎಂದು ಅಂದುಕೊಳ್ಳುವಷ್ಟು ಪುಣ್ಯ ಭೂಮಿಯಾಗಿದೆ ಈ ಸ್ಥಳ.

ಇಲ್ಲಿ ದೇವಾಲಯಗಳು ಹೆಚ್ಚಾಗಿವೆ. ನೀವು ಎಂದಾದರು ಕಾಲ ಬೈರವ ದೇವಾಲಯಕ್ಕೆ ಭೇಟಿ ನೀಡಿದ್ದೀರಾ? ಹಾಗಾದರೆ ಒಮ್ಮೆ ಭೇಟಿ ನೀಡಿ ದೇವರಿಗೆ ಒಂದು 90 ಯನ್ನು ಕೊಟ್ಟು ಬನ್ನಿ. ಇದೇನೂ ಸರಿಯಾಗಿ ಓದುತ್ತಿದ್ದೇನೆ ಅಲ್ಲವೇ? ಎಂದು ಅಂದು ಕೊಳ್ಳಬೇಡಿ. ನೀವು ಓದಿದ್ದು ಅಕ್ಷರಶಃ ಸರಿ. ಇಲ್ಲಿನ ಸ್ವಾಮಿಗೆ ಮದ್ಯವನ್ನು ನೈವೇದ್ಯವಾಗಿ ಕುಡಿಸುತ್ತಾರೆ. ಇಂತಹ ಆಶ್ಚರ್ಯಕರವಾದ ದೇವಾಲಯದ ಬಗ್ಗೆ ನಾವು ತಿಳಿದುಕೊಳ್ಳಬೇಕು ಅಲ್ಲವೇ?

ಪ್ರಸ್ತುತ ಲೇಖನದಲ್ಲಿ ಮದ್ಯ ಪ್ರದೇಶದಲ್ಲಿನ ಸ್ವಾಮಿ ಕಾಲಭೈರವ ಮದ್ಯವನ್ನು ಕುಡಿಯುವುದರ ಬಗ್ಗೆ ತಿಳಿಯೋಣ.

ಕಾಲ ಬೈರವ ದೇವಾಲಯ

ಕಾಲ ಬೈರವ ದೇವಾಲಯ

ಇಲ್ಲಿನ ಪ್ರಸಿದ್ಧ ದೇವಾಲಯ ಕಾಲ ಬೈರವ ದೇವಾಲಯ. ಇಲ್ಲಿ ನೆಲೆಸಿರುವುದು ಬೇರೆ ಯಾರು ಅಲ್ಲ ಸಾಕ್ಷಾತ್ ಆ ಮಹಾಶಿವ. ಇಲ್ಲಿನ ಸ್ವಾಮಿಗೆ ನೈವೇದ್ಯವಾಗಿ ಭಕ್ತರು ಹೂವು, ಹಣ್ಣು ತೆಗೆದುಕೊಂಡು ಬರುವ ಬದಲು ಮದ್ಯವನ್ನು ನೈವೇದ್ಯವಾಗಿ ಕುಡಿಸುತ್ತಾರೆ.

PC:Rabs003

ನೂರಾರು ಭಕ್ತರು

ನೂರಾರು ಭಕ್ತರು

ಇದೊಂದು ಪ್ರಸಿದ್ಧವಾದ ಹಿಂದೂ ದೇವಾಲಯವಾಗಿದ್ದು, ಮಧ್ಯ ಪ್ರದೇಶದ ಉಜ್ಜಯಿನಿ ನಗರದಲ್ಲಿದೆ. ಈ ಕಾಲಬೈರವ ಒಬ್ಬ ರಕ್ಷಕ ದೇವತೆಯಾಗಿದ್ದಾನೆ. ದಿನಂಪ್ರತಿ ನೂರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.


PC:Utcursch

ಇತರ ದೇವತಾ ಮೂರ್ತಿಗಳು

ಇತರ ದೇವತಾ ಮೂರ್ತಿಗಳು

ಈ ದೇವಾಲಯವು ಅತ್ಯಂತ ಹಳೆಯಾದ ದೇವಾಲಯವಾಗಿದ್ದು, ಸುಮಾರು 9 ಅಥವಾ 13 ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿ ಶಿವ, ಪಾರ್ವತಿ, ವಿಷ್ಣು ಮತ್ತು ಗಣೇಶನ ಚಿತ್ರಗಳನ್ನು ಕಾಣಬಹುದಾಗಿದೆ.


PC:Utcursch

ವರ್ಣಚಿತ್ರಗಳು

ವರ್ಣಚಿತ್ರಗಳು

ದೇವಾಲಯದ ಗೋಡೆಗಳನ್ನು ಮಾಲ್ವಾ ಎಂಬ ವರ್ಣಚಿತ್ರಗಳೊಂದಿದೆ ಅಲಂಕರಿಸಲಾಗಿದೆ. ಆ ಕಾಲದ ವರ್ಣಚಿತ್ರಗಳು ಇಂದಿಗೂ ಅಚ್ಚಳಿಯದೇ ಹಾಗೆಯೇ ಇರುವುದು ಒಂದು ಆಶ್ಚರ್ಯವೇ ಸರಿ.

PC:K.vishnupranay

ಮರಾಠರ ಪ್ರಭಾವ

ಮರಾಠರ ಪ್ರಭಾವ

ಇಲ್ಲಿನ ಕಾಲಭೈರವ ಮೂಲ ದೇವತಾ ಮೂರ್ತಿಯಾಗಿದ್ದು, ಭದ್ರಾಸೇನ ಎಂಬ ರಾಜನಿಂದ ನಿರ್ಮಾಣ ಮಾಡಲಾಗಿದೆ ಎಂದು ನಂಬಲಾಗಿದೆ. ಆದರೆ ಈ ದೇವಾಲಯವು ಮರಾಠರ ಪ್ರಭಾವ ಹೆಚ್ಚಾಗಿ ತೋರಿಸುತ್ತದೆ.

ಕುಂಕುಮ ಬಣ್ಣದಲ್ಲಿ ದರ್ಶನ

ಕುಂಕುಮ ಬಣ್ಣದಲ್ಲಿ ದರ್ಶನ

ಹೆಸರೇ ಸೂಚಿಸುವಂತೆ ದೇವಾಲಯವು ಕಾಲಭೈರವನಿಗೆ ಸಮರ್ಪಿಸಲಾಗಿದೆ. ಇಲ್ಲಿನ ಕಾಲ ಭೈರವನು ಕುಂಕುಮ ಬಣ್ಣದಲ್ಲಿ ದರ್ಶನ ನೀಡುತ್ತಾನೆ. ದೇವತೆಯ ಬೆಳ್ಳಿಯ ತಲೆಯು ಮರಾಠ ಶೈಲಿಯ ಪಾಗ್ರಿಯಿಂದ ಅಲಂಕರಿಸಲ್ಪಟ್ಟಿದೆ. ಈ ಪದ್ದತಿ ಮಹಾದಜಿ ಶಿಂಧೆಯ ಹಿಂದಿನ ಸಂಪ್ರದಾಯವಾಗಿದೆ.

ಎಂಟು ಭೈರವರು

ಎಂಟು ಭೈರವರು

ಇಲ್ಲಿ ಅಷ್ಟ ಭೈರವರು ( ಎಂಟು ಭೈರವರು) ನೆಲೆಸಿದ್ದಾರೆ ಎಂಬುದು ಭಕ್ತರ ನಂಬಿಕೆ. ಇದೊಂದು ಶೈವ ಸಂಪ್ರದಾಯವಾಗಿದ್ದು, ಇಲ್ಲಿ ಕಾಲ ಭೈರವನೇ ಮುಖ್ಯ ದೇವತಾ ಮೂರ್ತಿ ಎಂದು ನಂಬಲಾಗಿದೆ. ಈ ಕಾಲ ಭೈರವ ಪೂಜೆಗಳು ಕಪಾಲಿಕರಲ್ಲಿ ಮತ್ತು ಅಘೋರಿಗಳಲ್ಲಿ ಜನಪ್ರಿಯವಾಗಿದೆ.

ಉಜ್ಜೈನಿಯ ರಕ್ಷಕ ದೇವತೆ

ಉಜ್ಜೈನಿಯ ರಕ್ಷಕ ದೇವತೆ

ಕಾಲಭೈರವ ಉಜ್ಜೈನಿಯ ರಕ್ಷಕ ದೇವತೆಯಾಗಿದ್ದಾನೆ. ಈ ದೇವತಾ ಮೂರ್ತಿಯನ್ನು ಪಟ್ಟಣದ ಸೇನಾಧಿಪತಿ ಎಂತಲೂ ಅಲ್ಲಿನ ಭಕ್ತರು ಪರಿಗಣಿಸಿದ್ದಾರೆ. ಹಳೆಯ ಕಾಲದಲ್ಲಿ ಮದ್ಯ, ಮಾಂಸ, ಮೀನು, ಧಾನ್ಯ, ಮೈಥುನ ಎಂದು ಕರೆಯಲಾಗುವ 5 ತಾಂತ್ರಿಕ ಆಚರಣೆಗಳನ್ನು ಸಮರ್ಪಿಸುತ್ತಿದ್ದರು.


PC:Utcursch

ಆಲ್ಕೋಹಾಲ್

ಆಲ್ಕೋಹಾಲ್

ಹಳೆಯ ಕಾಲದಲ್ಲಿ ಈ ಎಲ್ಲಾ 5 ಅರ್ಪಣೆಗಳನ್ನು ದೇವರಿಗೆ ಮಾಡಲಾಗುತ್ತಿತ್ತು. ಆದರೆ ಈಗ ಕೇವಲ ಆಲ್ಕೋಹಾಲ್ ಮಾತ್ರ ನೀಡಲಾಗುತ್ತಿದೆ. ಇಲ್ಲಿನ ಅಂಗಡಿಯಲ್ಲಿ ಒಂದು ಬುಟ್ಟಿಯಲ್ಲಿ ಕೊಬ್ಬು, ಹೂವು, ಮದ್ಯದ ಬಾಟಲಿಗಳನ್ನು ದೇವರ ಪೂಜೆಗೆ ಎಂದು ಮಾರಾಟ ಮಾಡುತ್ತಾರೆ.


PC:Utcursch

ಮದ್ಯವನ್ನು ತಟ್ಟೆಯಲ್ಲಿ ಸುರಿದು ಪ್ರಾರ್ಥನೆ

ಮದ್ಯವನ್ನು ತಟ್ಟೆಯಲ್ಲಿ ಸುರಿದು ಪ್ರಾರ್ಥನೆ

ಪ್ರತಿ ದಿನ ನೂರಾರು ಭಕ್ತರು ಇಲ್ಲಿನ ಕಾಲ ಭೈರವನಿಗೆ ಮದ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ಭಕ್ತರು ಮದ್ಯದ ಬಾಟಲಿಗಳನ್ನು ಅಲ್ಲಿನ ಪೂಜಾರಿಗೆ ನೀಡುತ್ತಾರೆ. ಪೂಜಾರಿಯು ಮದ್ಯವನ್ನು ತಟ್ಟೆಯಲ್ಲಿ ಸುರಿದು ಪ್ರಾರ್ಥನೆ ಮಾಡುತ್ತಾರೆ. ನಂತರ ದೇವತಾ ಮೂರ್ತಿಯಾದ ಕಾಲ ಭೈರವನ ತುಟಿಯ ಬಳಿ ತಟ್ಟೆಯನ್ನು ಇಡುತ್ತಾರೆ.

 ಕಾಲಭೈರವ ಮದ್ಯವನ್ನು ಸೇವಿಸುತ್ತಾನೆ

ಕಾಲಭೈರವ ಮದ್ಯವನ್ನು ಸೇವಿಸುತ್ತಾನೆ

ಆಶ್ಚರ್ಯ ಏನಪ್ಪ ಎಂದರೆ ಇಲ್ಲಿ ಕಾಲಭೈರವ ಮದ್ಯವನ್ನು ಸೇವಿಸುವುದು. ಹೌದು ನೀವು ಕೇಳುತ್ತಿರುವುದು ಸತ್ಯ. ಮದ್ಯದ ತಟ್ಟೆಯನ್ನು ಕಾಲ ಭೈರವನ ತುಟಿಯ ಬಳಿ ಇಟ್ಟಾಗ ಪೂಜಾರಿಯು ತಟ್ಟೆಯನ್ನು ಸ್ವಲ್ಪ ಓರೆಯಾಗಿ ಇಡುತ್ತಾನೆ. ಆಗ ಮದ್ಯವು ಕಣ್ಮರೆಯಾಗುತ್ತಾ ಹೋಗುತ್ತದೆ.

ಮಾಹಿಮಾನ್ವಿತ

ಮಾಹಿಮಾನ್ವಿತ

ಪ್ರಸಾದವಾಗಿ ಸುಮಾರು ಮೂರನೇ ಒಂದು ಭಾಗದಷ್ಟು ಮದ್ಯವನ್ನು ಭಕ್ತರಿಗೆ ಹಿಂದಿರುಗಿಸಲಾಗುತ್ತದೆ. ಅಲ್ಲಿನ ಪೂಜಾರಿಯು ಇದರಲ್ಲಿ ಯಾವುದೇ ತಂತ್ರ ಇಲ್ಲವೆಂದೂ ಹಾಗು ಇಲ್ಲಿನ ಕಾಲಭೈರವ ಮಾಹಿಮಾನ್ವಿತನಾಗಿದ್ದು, ಆತನೇ ಮದ್ಯವನ್ನು ಸೇವಿಸುತ್ತಾನೆ ಎಂದು ಹೇಳುತ್ತಾರೆ.

PC:Rabs003

ನೂರಾರು ಲೀಟರ್‍ಗಳಷ್ಟು ಮದ್ಯ

ನೂರಾರು ಲೀಟರ್‍ಗಳಷ್ಟು ಮದ್ಯ

ವಿಶೇಷ ಏನಪ್ಪ ಎಂದರೆ ಈ ದೇವರು ಪೂಜಾರಿ ಕುಡಿಸಿದರೆ ಮಾತ್ರ ಮದ್ಯವನ್ನು ಕುಡಿಯುತ್ತದೆ. ಬದಲಾಗಿ ಯಾವ ಭಕ್ತನಿಂದಲೂ ಸ್ವಾಮಿ ಮದ್ಯವನ್ನು ಸೇವಿಸುವುದಿಲ್ಲ. ಆದರೆ ಮದ್ಯವನ್ನು ಇಲ್ಲಿ ಸುಮಾರು ನೂರಾರು ಲೀಟರ್‍ಗಳಷ್ಟು ಮದ್ಯವನ್ನು ದಿನ ನಿತ್ಯ ಕಾಲ ಭೈರವ ಸೇವಿಸುತ್ತಾನೆ.

PC:Utcursch

ದೇವಾಲಯದ ಪ್ರವೇಶ ಸಮಯ

ದೇವಾಲಯದ ಪ್ರವೇಶ ಸಮಯ

ಇದರಲ್ಲಿ ಯಾವುದು ಸತ್ಯವೊ, ಯಾವುದು ಸುಳ್ಳೊ ಆ ಕಾಲ ಭೈರವಿನಿಗೆ ಗೊತ್ತು. ಈ ದೇವಾಲಯವನ್ನು ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಹಾಗು ಮಧ್ಯಾಹ್ನ 3:30 ರಿಂದ ರಾತ್ರಿ 10:00 ರವರೆಗೆ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ.


PC:Utcursch

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಈ ಕಾಲಭೈರವ ದೇವಾಲಯಕ್ಕೆ ತಲುಪುಲು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮಧ್ಯ ಪ್ರದೇಶ ರಾಜ್ಯದ ಇಂಡೋರ್ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ದೇವಾಲಯಕ್ಕೆ ಸುಮಾರು 55 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಸುಲಭವಾಗಿ ಕ್ಯಾಬ್‍ನ ಮೂಲಕ ತೆರಳಬಹುದಾಗಿದೆ.

ಉಜ್ಜೈನಿ ಸಮೀಪದ ರೈಲ್ವೆ ನಿಲ್ದಾಣವಾಗಿದ್ದು, ಇದು ದೇಶದ ಹಲವಾರು ಪ್ರಮುಖ ನಗರಗಳನ್ನು ಸುತ್ತಿ ಈ ಸ್ಥಳಕ್ಕೂ ಕೂಡ ಸಂಪರ್ಕ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X