Search
  • Follow NativePlanet
Share
» »ಕಬಿನಿ ವನ್ಯಜೀವಿ ಧಾಮ- ಚೆನ್ನೈನಿಂದ ಕಣಿವೆಗಳು ಮತ್ತು ವನ್ಯಜೀವಿಗಳ ಭೂಮಿಯ ಕಡೆಗೆ ಒಂದು ಪ್ರಯಾಣ

ಕಬಿನಿ ವನ್ಯಜೀವಿ ಧಾಮ- ಚೆನ್ನೈನಿಂದ ಕಣಿವೆಗಳು ಮತ್ತು ವನ್ಯಜೀವಿಗಳ ಭೂಮಿಯ ಕಡೆಗೆ ಒಂದು ಪ್ರಯಾಣ

ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ಸುಂದರವಾದ ವನ್ಯಜೀವಿ ಮತ್ತು ಕಣಿವೆಗಳ ಮಧ್ಯೆ ವಿಹಂಗಮ ಪರಿಸರದಲ್ಲಿ ನಿಮ್ಮನ್ನು ಕಂಡುಕೊಳ್ಳಿ.

By Manjula Balaraj Tantry

ಬೇಟೆಯಾಡುವ ಮತ್ತು ಬೇಟೆಯಾಡುವಿಕೆಯಿಂದ ಹೇಗೋ ಉಳಿದ ಮತ್ತು ಅಳಿವಂಚಿನಲ್ಲಿರುವ ಹಲವಾರು ಪ್ರಬೇಧದ ವನ್ಯಜೀವಿಗಳು ಮತ್ತು ಅಪರೂಪದ ಜಾತಿಯ ಸಸ್ಯಗಳನ್ನು ರಕ್ಷಿಸುವ ಸಲುವಾಗಿ ವನ್ಯಜೀವಿ ಅಭಯಾರಣ್ಯದ ಕಲ್ಪನೆಯು ಚಿತ್ರಕ್ಕೆ ಬಂದಿತು. ಮೂಲತಃ ಇದು ಭೂಮಿಯ ಒಂದು ನಿರ್ದಿಷ್ಟ ಭಾಗವಾಗಿದ್ದು, ವನ್ಯ ಜೀವಿಗಳನ್ನು ಇಲ್ಲಿ ಪೋಷಿಸಲಾಗುತ್ತದೆ.

ಕಬಿನಿ ವನ್ಯಜೀವಿ ಅಭಯಾರಣ್ಯವು ಇಂತಹ ಅಭಯಾರಣ್ಯಗಳಲ್ಲೊಂದಾಗಿದ್ದು ವನ್ಯಜೀವಿಗಳು ಮತ್ತು ಸಸ್ಯಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲಿ ಇದನ್ನು ಕೆಲವು ದಶಕಗಳ ಹಿಂದೆ ಸ್ಥಾಪಿಸಲಾಯಿತು. ಇಲ್ಲಿ ಅನೇಕ ಅಳಿವಿನಂಚಿನಲ್ಲಿರುವ ಜಾತಿಯ ಪ್ರಾಣಿಗಳಿಂದ ಹಿಡಿದು ಅಪರೂಪದ ತಳಿಯ ಸಸ್ಯಗಳವರೆಗೆ ಇಲ್ಲಿ ಸಂರಕ್ಷಿಸಿರುವುದನ್ನು ಕಾಣಬಹುದು. ಅಲ್ಲದೆ ಈ ಅಭಯಾರಣ್ಯ ವನ್ನು ನಾಶ ಮಾಡುವುದರಿಂದ ಸಂರಕ್ಷಿಸಿರುವುದರಿಂದ ಇಲ್ಲಿ ಅತ್ಯಂತ ಹಳೆಯದಾದ ಮರಗಳು ಮತ್ತು ಹೆಚ್ಚು ವಯಸ್ಸಾದ ಪ್ರಾಣಿಗಳನ್ನೂ ಸಹ ನೋಡಬಹುದಾಗಿದೆ.

ಕಬಿನಿ ನದಿ ದಡದಲ್ಲಿರುವ ದಟ್ಟ ಕಾಡುಗಳಿಂದ ಸುತ್ತುವರಿದ ಮತ್ತು ವನ್ಯಜೀವಿಗಳಿರುವ ಅಭಯಾರಣ್ಯವನ್ನು ಭೇಟಿ ಕೊಡುವುದು ಹೇಗಿರುತ್ತದೆ?

ಕಬಿನಿ ವನ್ಯಜೀವಿಧಾಮಕ್ಕೆ ಭೇಟಿ ಕೊಡಲು ಸೂಕ್ತ ಸಮಯ

ಕಬಿನಿ ವನ್ಯಜೀವಿಧಾಮಕ್ಕೆ ಭೇಟಿ ಕೊಡಲು ಸೂಕ್ತ ಸಮಯ

PC- Karthik Narayana

ಕಬಿನಿ ವನ್ಯಜೀವಿಧಾಮ ಮತ್ತು ಅಲ್ಲಿಯ ಸುತ್ತಮುತ್ತಲಿನ ಪ್ರದೇಶವು ಮಧ್ಯಮ ರೀತಿಯ ಹವಾಮಾನವನ್ನು ಹೊಂದಿರುವುದರಿಂದ ಈ ಸ್ಥಳಕ್ಕೆ ಸೆಪ್ಟಂಬರ್ ತಿಂಗಳಿನಿಂದ ಮೇ ತಿಂಗಳ ಕೊನೆಯವರೆಗೆ ಭೇಟಿ ಕೊಡುವುದು ಸೂಕ್ತವಾದುದಾಗಿದೆ. ಈ ಸಮಯದಲ್ಲಿ ನೀವು ಇಲ್ಲಿ ಅನೇಕ ವನ್ಯ ಮೃಗಗಳು ಮತ್ತು ಪಕ್ಷಿಗಳು ತಿರುಗಾಡುವುದನ್ನು ನೋಡಬಹುದು ಮತ್ತು ಪ್ರಕೃತಿಯ ಹಸಿರುಮಯ ವಾತಾವರಣವನ್ನು ಎಲ್ಲಾ ಕಡೆ ನೋಡಬಹುದು.

ಚೆನ್ನೈನಿಂದ ಕಬಿನಿ ವನ್ಯಜೀವಿ ಧಾಮವನ್ನು ತಲುಪುವುದು ಹೇಗೆ?

ಚೆನ್ನೈನಿಂದ ಕಬಿನಿ ವನ್ಯಜೀವಿ ಧಾಮವನ್ನು ತಲುಪುವುದು ಹೇಗೆ?

PC- Maps

ವಾಯು ಮಾರ್ಗ: ನೀವು ಮೈಸೂರಿಗೆ ನೇರವಾಗಿ ವಿಮಾನದಲ್ಲಿ ಪ್ರಯಾಣಿಸಬಹುದು ನಂತರ ಅಲ್ಲಿಂದ ಕ್ಯಾಬ್ ಮೂಲಕ ಕಬಿನಿ ವನ್ಯಜೀವಿ ಅಭಯಾರಣ್ಯಕ್ಕೆ ಹೋಗಬಹುದು . ಮೈಸೂರು ವಿಮಾನ ನಿಲ್ದಾಣದಿಂದ ಸುಮಾರು 60 ಕಿ,ಮೀ ದೂರದಲ್ಲಿ ಕಬಿನಿ ವನ್ಯಜೀವಿ ಅಭಯಾರಣ್ಯವಿದೆ.

ರೈಲು ಮಾರ್ಗ : ಚೆನ್ನೈ ನಿಂದ ಕಬಿನಿ ವನ್ಯಜೀವಿ ಅಭಯಾರಣ್ಯಕ್ಕೆ ನೇರ ರೈಲು ಮಾರ್ಗ ಅನುಕೂಲವಿಲ್ಲ ಆದುದರಿಂದ ಚೆನ್ನೈ ರೈಲು ನಿಲ್ದಾಣದಿಂದ ಮೈಸೂರು ರೈಲು ನಿಲ್ದಾಣಕ್ಕೆ ರೈಲು ಮೂಲಕ ಪ್ರಯಾಣಿಸಬಹುದು ಮತ್ತು ಅಲ್ಲಿಂದ ಕ್ಯಾಬ್ ಮೂಲಕ ಕಬಿನಿ ವನ್ಯಜೀವಿ ಅಭಯಾರಣ್ಯ ತಲುಪಬಹುದು.

ರಸ್ತೆ ಮೂಲಕ : ನೀವು ಚೆನ್ನೈ ನಿಂದ ನೇರ ಕಬಿನಿ ವನ್ಯಜೀವಿ ಧಾಮಕ್ಕೆ ಕ್ಯಾಬ್ ಮೂಲಕ ಪ್ರಯಾಣ ಮಾಡಬಹುದು ಅಥವಾ ಚೆನ್ನೈನಿಂದ ಮೈಸೂರಿಗೆ ಬಸ್ಸಿನ ಮೂಲಕ ಕೂಡಾ ಪ್ರಯಾಣ ಮಾಡಬಹುದು . ನಂತರ ಅಲ್ಲಿಂದ ಕಬಿನಿ ವನ್ಯಜೀವಿ ಧಾಮಕ್ಕೆ ಕ್ಯಾಬ್ ಮೂಲಕ ಪ್ರಯಾಣಿಸಬಹುದು.

ನೀವು ನಿಮ್ಮ ಸ್ವಂತ ವಾಹನದಲ್ಲಿ ಪ್ರಯಾಣ ಮಾಡ ಬಯಸಿದಲ್ಲಿ ನೀವು ಈ ಕೆಳಗಿನ ಮಾರ್ಗವನ್ನು ಅನುಸರಿಸಬಹುದು.

ಮಾರ್ಗ 1: ಚೆನ್ನೈ - ಕಾಂಚೀಪುರಂ - ವೆಲ್ಲೂರು - ಬೆಂಗಳೂರು - ಮೈಸುರು - ಕಬಿನಿ ವನ್ಯಜೀವಿ ಧಾಮ

ಮಾರ್ಗ 2: ಚೆನ್ನೈ - ವಿಲ್ಲುಪುರಾಂ - ಈರೋಡ್ - ಕಬಿನಿ ವನ್ಯಜೀವಿ ಅಭಯಾರಣ್ಯ
ಮಾರ್ಗ 1 ಅತ್ಯಂತ ಆರಾಮದಾಯಕವಾದುದರಿಂದ ಅದಕ್ಕೆ ಮೊದಲ ಆದ್ಯತೆ.

ನೀವು ನಿಮ್ಮ ಪ್ರಯಾಣವನ್ನು ಇನ್ನೂ ಹೆಚ್ಚು ಆಸಕ್ತಿದಾಯಕಗೊಳಿಸಬೇಕೆಂದಿದ್ದಲ್ಲಿ ಮಾರ್ಗ ಒಂದರಲ್ಲಿ ಪ್ರಯಾಣ ಹೆಚ್ಚು ಸೂಕ್ತ. ಈ ಮಾರ್ಗವು ಹೆಚ್ಚು ಅಚ್ಚರಿಗಳು ಮತ್ತು ಅದ್ಬುತಗಳನ್ನೊಳಗೊಂಡಿದೆ. ಒಮ್ಮೆ ನೀವು ಕಬಿನಿ ವನ್ಯಜೀವಿ ಅಭಯಾರಣ್ಯದ ಕಡೆ ಪ್ರಯಾಣ ಬೆಳೆಸಿದರೆ ನೀವು ಅನೇಕ ವಿಷಯಗಳನ್ನು ಅನ್ವೇಷಿಸಬಹುದು ಮತ್ತು ಇಲ್ಲಿ ವಿಶ್ರಾಂತಿ ಪಡೆಯಬಹುದಾಗಿದೆ.

ಕಾಂಚೀಪುರಂ

ಕಾಂಚೀಪುರಂ

PC- McKay Savage

ಐತಿಹಾಸಿಕ ಸೌಂದರ್ಯತೆಯನ್ನು ಒಳಗೊಂಡಿರುವ ಮತ್ತು ವೇಗಾವತಿ ನದಿ ದಂಡೆಯ ಮೇಲಿರುವ ಸುಂದರವಾದ ನಗರ ಬೇರೆ ಯಾವುದು ಅಲ್ಲ ಅದುವೇ ಐತಿಹಾಸಿಕ ಪಟ್ಟಣ ಕಾಂಚೀಪುರಂ .ಇದು ಕಾಂಚೀಪುರಂ ಸೀರೆಗಳಿಗೆ ಮತ್ತು ಪ್ರಾಚೀನ ದೇವಾಲಯಗಳು ಮತ್ತು ಹಳೆಯ ಕಟ್ಟಡಗಳ ಸಂಕೀರ್ಣಗಳಿಗೆ ಹೆಸರುವಾಸಿಯಾಗಿದೆ. ಪಲ್ಲವರ ಕಾಲದಿಂದಲೂ ಕಾಂಚೀಪುರಂ ದೊಡ್ಡ ನಗರಗಳಲ್ಲೊಂದಾಗಿದೆ.

ನೀವು ಇಲ್ಲಿ ಪ್ರತೀವರ್ಷ ಲಕ್ಷಾಂತರ ಜನ ಪ್ರವಾಸಿಗರು ಇಲ್ಲಿಗೆ ಬಂದು ತಮ್ಮನ್ನು ತಾವು ಇಲ್ಲಿಯ ದೇವಾಲಯಗಳಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನೋಡಬಹುದು. ನೀವು ಸ್ವಲ್ಪ ಆಧ್ಯಾತಿಕತೆಯನ್ನು ಮತ್ತು ಭಕ್ತಿ ಪೂರ್ವ ವಾತಾವರಣವನ್ನು ಪಡೆಯ ಬಯಸಿದಲ್ಲಿ ಕಾಂಚೀಪುರಂ ಖಚಿತವಾಗಿಯೂ ನಿಮ್ಮ ಗಮ್ಯಸ್ಥಾನವಾಗಿರುತ್ತದೆ.

ವೆಲ್ಲೂರು

ವೆಲ್ಲೂರು

PC- Soham Banerjee

ವೆಲ್ಲೂರಿನ ಮಾನವ ನಿರ್ಮಿತ ಸೌಂದರ್ಯ ಮತ್ತು ಪ್ರಕೃತಿ ಸೌಂದರ್ಯಗಳನ್ನು ಸ್ವಲ್ಪ ಅನುಭವಿಸುವುದು ಹೇಗಿರಬಹುದು? ಇದು ಕೋಟೆಗಳ ನಗರವೆಂದೂ ಕೂಡ ಕರೆಯಲ್ಪಡುತ್ತದೆ. ವೆಲ್ಲೂರು ಅನೇಕ ದೇವಾಲಯಗಳಿಗೆ, ಕೋಟೆಗಳಿಗೆ ಮತ್ತು ಪ್ರಾಚೀನ ಕಟ್ಟಡಗಳಿಗೆ ನೆಲೆಯಾಗಿದೆ.

ವೆಲ್ಲೂರು ಕೋಟೆ ಎಲ್ಲಾ ಆಕರ್ಷಣೆಯನ್ನು ಸೆಳೆಯುವಂತಹ ಸೌಂದರ್ಯತೆಗಳ ಮಧ್ಯೆ ಪ್ರಮುಖವಾದ ಪ್ರವಾಸಿಗರ ಆಕರ್ಷಣೆಯ ಬಿಂದುವಾಗಿದೆ. ಯೆಲಗಿರಿ ಬೆಟ್ಟಗಳಿಂದ ಪ್ರಾಣಿಶಾಸ್ತ್ರೀಯ ಉದ್ಯಾನವನಗಳವರೆಗೆ ಪ್ರಕೃತಿ ಪ್ರೇಮಿಗಳಿಗೆ ವೆಲ್ಲೂರು ಒಂದು ಒಳ್ಳೆಯ ವಾರಾಂತ್ಯದ ರಜಾದಿನಗಳಲ್ಲಿ ಭೇಟಿ ಮಾಡಬಹುದಾದ ಸ್ಥಳವಾಗಿದೆ.

ಬೆರಗುಗೊಳಿಸುವಂತಹ ಯೆಲಗಿರಿ ಬೆಟ್ಟಗಳು ಮತ್ತು ವೆಲ್ಲೂರು ಕೋಟೆಯ ಹೆಮ್ಮೆಯ ಪ್ರತಿಧ್ವನಿಗಳು ಯಾವಾಗಲೂ ಪ್ರವಾಸಿಗರನ್ನು ಈ ಪ್ರದೇಶದ ಸೌಂದರ್ಯತೆ ಮತ್ತು ಅದ್ಬುತಗಳನ್ನು ನೋಡಲು ಪ್ರೇರೆಪಿಸುತ್ತವೆ.

ಬೆಂಗಳೂರು

ಬೆಂಗಳೂರು

ಬೆಂಗಳೂರು ಪ್ರಯಾಣಿಗರಿಗೆ ಒಂದು ಪೂರ್ಣ ಪ್ರಮಾಣದ ಪ್ಯಾಕೇಜ್ ನೀಡುವಂತಹ ಸ್ಥಳವಾದುದರಿಂದ ಇಲ್ಲಿಗೆ ಭೇಟಿ ಕೊಡುವುದನ್ನು ತಪ್ಪಿಸಬಾರದು. ಅದು ಮುಖ್ಯವಾಗಿ ಅದೇ ಮಾರ್ಗವಾಗಿ ಹೋಗುವಾಗ. ಕಬಿನಿ ವನ್ಯಜೀವಿ ಅಭಯಾರಣ್ಯಕ್ಕೆ ಹೋಗುವ ಮಾರ್ಗದಲ್ಲಿ ನೀವು ಖಂಡಿತವಾಗಿಯೂ ಭಾರತದ ಐ ಟಿ ನೆಲೆಯನ್ನು ಕಾಣಬಹುದಾಗಿದೆ.

ಇದು ಮಾತ್ರವಲ್ಲದೆ ಇಲ್ಲಿ ನೈಸರ್ಗಿಕ ಸೌಂದರ್ಯತೆಗಳಾದ ಆಕರ್ಷಕ ಸರೋವರಗಳು ಎತ್ತರವಾದ ಬೆಟ್ಟಗಳ ಶಿಖರಗಳು, ಮತ್ತು ನಯನ ಮನೋಹರ ತೋಟಗಳು ಇವೆಲ್ಲವನ್ನೂ ಒಳಗೊಂಡಿದೆ. ಇಂತಹ ನಗರೀಕರಣ ಮತ್ತು ಪ್ರಕೃತಿಯ ಸಮ್ಮಿಲನವಿರುವ ಸ್ಥಳವಾದ ಬೆಂಗಳೂರಿನಲ್ಲಿ ಒಂದು ವಿಶ್ರಾಂತಿ ಪಡೆಯುವುದು ಹೇಗಿರುತ್ತದೆ?

ಮೈಸೂರು

ಮೈಸೂರು

ಮೈಸೂರಿನ ಗಡಿದಾಟಿ ಬಂದು ಮೈಸೂರಿನಲ್ಲಿ ಅರಮನೆಗೆ ಭೇಟಿ ಮತ್ತು ಅಲ್ಲಿಯ ಬಾಯಿ ನೀರೂರಿಸುವ ಸವಿಯ ಮೈಸೂರು ಪಾಕದ ಸವಿಯನ್ನು ಸವಿಯದಿರಲು ಸಾಧ್ಯವೆ? ಇದು ಮಾತ್ರವಲ್ಲದೆ ಇಲ್ಲಿ ಮೈಸೂರು ಸ್ಯಾಂಡಲ್ ಕೂಡಾ ಹೆಸರುವಾಸಿಯಾದುದಾಗಿದೆ.

ಈ ಪಾರಂಪರಿಕ ನಗರವು ಸಂಸ್ಕೃತಿ ಮತ್ತು ಐತಿಹಾಸಿಕ ಸೌಂದರ್ಯತೆಯಲ್ಲಿ ಶ್ರೀಮಂತವಾಗಿದುದರಿಂದ ಇದನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯೆಂದು ಕರೆಯಲಾಗುತ್ತದೆ. ನೀವು ಭಾರತದ ಇತಿಹಾಸದ ಆಳಕ್ಕೆ ಇಣುಕಿ ನೋಡಿದರೆ ಮೈಸೂರು ನೀವು ಭೇಟಿ ಕೊಡಲೇ ಬೇಕೆನಿಸುವಂತಹ ಸ್ಥಳವಾಗಿದೆ.

ಅಂತಿಮ ಗಮ್ಯಸ್ಥಾನ - ಕಬಿನಿ ವನ್ಯಜೀವಿ ಅಭಯಾರಣ್ಯ

ಅಂತಿಮ ಗಮ್ಯಸ್ಥಾನ - ಕಬಿನಿ ವನ್ಯಜೀವಿ ಅಭಯಾರಣ್ಯ

55 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಈ ಅಭಯಾರಣ್ಯವು ಅಳಿವಂಚಿನಲ್ಲಿರುವ ಹಾಗೂ ಅಪರೂಪದ ಅನೇಕ ಜಾತಿಯ ವನ್ಯಜೀವಿಗಳನ್ನು ರಕ್ಷಿಸುತ್ತದೆ. ಇದರ ಪರಿಧಿಯಲ್ಲಿ ಕೊಲ್ಲುವುದು ಮತ್ತು ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಈ ಭೂಮಿಯು ಈಗ ಸಂರಕ್ಷಿಸಲ್ಪಟ್ಟಿದ್ದು ಕಳೆದ ಹಲವಾರು ದಶಕಗಳಿಂದ ಹಲವಾರು ಪ್ರಬೇಧದ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳನ್ನು ಬೆಳೆಸಲಾಗುತ್ತದೆ ಮತ್ತು ಸಂರಕ್ಷಿಸಲಾಗುತ್ತಿದೆ.

ಕಬಿನಿ ನದಿಯ ದಡದಲ್ಲಿ ಹಾಗೂ ಪಶ್ಚಿಮ ಘಟ್ಟಗಳ ಮಧ್ಯೆ ನೆಲೆಸಿರುವ ಈ ಹಸಿರುಮಯ ವನ್ಯಜೀವಿಧಾಮವು ಅನೇಕ ಪ್ರಾಣಿಗಳಾದ ಚಿರತೆ, ಸಾಂಬರ್, ಪ್ಯಾಂಥರ್, ಮಚ್ಚೆಯುಳ್ಳ ಜಿಂಕೆ ಇತ್ಯಾದಿ. ಗಳಿಗೆ ನೆಲೆಯಾಗಿದೆ. ಅಲ್ಲದೆ ಇದು ಸಂರಕ್ಷಿತ ಭೂಮಿಯಾದುದರಿಂದ ಇಲ್ಲಿ ಅನೇಕ ಆನೆಗಳು ಮತ್ತು ಹುಲಿಗಳು ಗಡಿಯ ಒಳಗೆ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ತಿರುಗಾಡುವುದನ್ನು ಕಾಣಬಹುದಾಗಿದೆ.

250 ಜಾತಿಯ ಪಕ್ಷಿಗಳೊಂದಿಗೆ, ನೀವು ಪಾರಿವಾಳಗಳು, ಪ್ಯಾರೆಕೆಟ್ ಗಳು, ಬೀ-ಈಟರ್ಸ್, ಹದ್ದುಗಳು ಇಲ್ಲಿಯ ಕಣಿವೆಗಳು ಮತ್ತು ಕಬಿನಿ ವನ್ಯಜೀವಿ ಅಭಯಾರಣ್ಯದ ಕಾಡಿನ ಪ್ರದೇಶದ ಸುತ್ತಲೂ ಹಾರಾಡುವುದನ್ನು ನೋಡಬಹುದು ಅಲ್ಲದೆ ಹಲವು ಅಳಿವಿನಂಚಿನಲ್ಲಿರುವ ಪಕ್ಷಿಗಳ ಅದ್ಭುತ ವೀಕ್ಷಣೆಯನ್ನು ಸೆರೆಹಿಡಿಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X