Search
  • Follow NativePlanet
Share
» »ಕಬಿನಿ - ರೋಚಕ ಪ್ರಾಣಿಗಳ ರಾಜಧಾನಿ!

ಕಬಿನಿ - ರೋಚಕ ಪ್ರಾಣಿಗಳ ರಾಜಧಾನಿ!

ಈ ಪ್ರದೇಶಗಳು ವನ್ಯಜೀವಿಗಳನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ನಾಗರಹೊಳೆ ನೈಸರ್ಗಿಕ ನಿಸರ್ಗಧಾಮದ ಭಾಗವಾಗಿರುವ ಕಬಿನಿ ವನ್ಯಜೀವಿ ಸಂರಕ್ಷಿತ ಪ್ರದೇಶವಾಗಿರುವುದಕ್ಕೆ ಧನ್ಯವಾದಗಳನ್ನು ಹೇಳಬೇಕು . ಇದು ಕರ್ನಾಟಕಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯ ತಾಣವಾಗಿದೆ ಮತ್ತು ಬೆಂಗಳೂರಿನಿಂದ ಸುಮಾರು 163 ಕಿಮೀ ದೂರದಲ್ಲಿದೆ.

ಕಬಿನಿ ನದಿಯು ಈ ಅರಣ್ಯಪ್ರದೇಶದ ಜೀವಾಳವಾಗಿದ್ದು ಈ ಪ್ರದೇಶದಲ್ಲಿ ಹರಿಯುವುದರಿಂದ ಈ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಇದೇ ಹೆಸರನ್ನು ಇಡಲಾಗಿದೆ. ಇದು ನಾಗರಹೊಳೆ ನಿಸರ್ಗಧಾಮದ ಆಗ್ನೇಯ ಭಾಗವಾಗಿದ್ದು, ಕಬಿನಿ ಅರಣ್ಯ ಮೀಸಲು ಪ್ರದೇಶವು 55 ಎಕರೆ ಭೂಮಿಯನ್ನು ಒಳಗೊಂಡಿದೆ ಮತ್ತು ದಟ್ಟವಾದ ಕಾಡುಗಳು, ಗುಡ್ಡಗಾಡು ಪ್ರದೇಶಗಳು ಮತ್ತು ಸರೋವರಗಳು ಮತ್ತು ತೊರೆಗಳನ್ನು ಒಳಗೊಂಡಿದೆ.

ಇಲ್ಲಿದ್ದ ಮಾಸ್ತಿಗುಡಿ ಎಂಬ ಗ್ರಾಮವು ಕಬಿನಿ ಅಣೆಕಟ್ಟು ಹಿನ್ನೀರಿನಿಂದ ಮುಳುಗಿದೆ. ಆ ಗ್ರಾಮ ಇದ್ದ ಪ್ರದೇಶದಲ್ಲಿ ಬರುವ ಹಿನ್ನೀರಿಗೆ ಮಾಸ್ತಿಗುಡಿ ಕೆರೆ ಎಂದು ಕರೆಯಲಾಗುತ್ತಿದೆ. ಈ ಅಣೆಕಟ್ಟು ನಾಗರಹೊಳೆ ಸಂರಕ್ಷಿತ ಅರಣ್ಯ ಪ್ರದೇಶ ಮತ್ತು ಬಂಡೀಪುರ ಅರಣ್ಯಪ್ರದೇಶವನ್ನು ಎರಡು ವಿಭಾಗಗಳನ್ನಾಗಿಸುತ್ತದೆ.

ಈ ಅರಣ್ಯವು ಬೆರಗುಗೊಳಿಸುವಂತಹ ಹಲವಾರು ಪ್ರಭೇದಗಳಿಗೆ ಸಾಕ್ಷಿಯಾಗಿದೆ.

ಈ ಪ್ರದೇಶವು ವಿಭಿನ್ನ ರೀತಿಯ ಮಳೆಯನ್ನು ಪಡೆಯುತ್ತದೆ ಇದಕ್ಕೆ ಅನುಗುಣವಾಗಿ ಸಸ್ಯವರ್ಗವೂ ಬದಲಾಗುತ್ತದೆ. ಪ್ರತಿ ವರ್ಷ 1000 ಮಿ.ಮೀ.ಗಿಂತ ಹೆಚ್ಚು ಮಳೆ ಬೀಳುವ ತೇವಾಂಶ ಭರಿತ ಡೆಸಿಡಿಯಸ್ ಪ್ರದೇಶಗಳಿಂದ ಹಿಡಿದು ಕಡಿಮೆ ಮಳೆ ಬೀಳುವ ಡ್ರೈ ಡೆಸಿಡಿಯಸ್ ಪ್ರದೇಶಗಳವರೆಗೆ ವ್ಯಾಪಿಸಿದೆ.

ಇವೆಲ್ಲದರ ಮಧ್ಯದಲ್ಲಿ ಇಲ್ಲಿ ಹುಲ್ಲುಗಾವಲುಗಳು, ಪೊದೆಗಳು,ಮತ್ತು ಜೌಗು ಪ್ರದೇಶಗಳನ್ನೂ ಹೊಂದಿದೆ. ಕಬಿನಿ ಸಂರಕ್ಷಿತ ಅರಣ್ಯ ಪ್ರದೇಶ ಮತ್ತು ನಾಗರಹೊಳೆ ಮೀಸಲು ಪ್ರದೇಶವು ಹೆಚ್ಚಿನ ಸಂಖ್ಯೆಯ ಸಸ್ಯಹಾರಿ ಪ್ರಾಣಿಗಳನ್ನು ಹೊಂದಿರುವುದಕ್ಕೆ ಸಾಕ್ಷಿಯಾಗಿದ್ದು ಅದರಲ್ಲೂ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳಿಗೆ ನೆಲೆಯಾಗಿದೆ. ಈ ಪ್ರದೇಶವು ಏಷ್ಯಾದ ಆನೆಗಳನ್ನ ಅತೀ ಹೆಚ್ಚಾಗಿ ಹೊಂದಿರುವುದಕ್ಕೆ ಪ್ರಸಿದ್ದಿಯನ್ನು ಪಡೆದಿದೆ.

ಚಿತ್ತಾಲ್ ಗಳು, ನಾಲ್ಕು ಕೊಂಬಿನ ಜಿಂಕೆಗಳು, ಸಾಂಬಾರ್, ಕಾಡು ಹಂದಿಗಳು, ಗೌರ್, ಲಂಗೂರ್ ಗಳು, ಮುಂಜ್ತಕ್, ಕೋತಿಗಳು ಮತ್ತು ಸಹಜವಾಗಿ, ಆನೆಗಳಂತಹ ಸಸ್ಯಾಹಾರಿಗಳ ದೊಡ್ಡ ವೈವಿಧ್ಯಮಯವಾದ ಪ್ರಾಣಿಗಳನ್ನು ಈ ಅರಣ್ಯಪ್ರದೇಶವು ಹೊಂದಿದೆ. ಸಸ್ಯಾಹಾರಿ ಪ್ರಾಣಿಗಳು ಮಾತ್ರವಲ್ಲದೆ ಈ ಪ್ರದೇಶವು ಹುಲಿಗಳು, ಚಿರತೆಗಳು ಮತ್ತು ಧೋಲ್ಸ್ (ಭಾರತೀಯ ಕಾಡು ನಾಯಿಗಳು) ಸೇರಿದಂತೆ ಹೆಚ್ಚಿನ ಸಂಖ್ಯೆಯ ಪರಭಕ್ಷಕ ಪ್ರಾಣಿಗಳಿಗೂ ನೆಲೆಯಾಗಿದೆ.

ಈ ಕಾಡಿನಲ್ಲಿ ಸಫಾರಿ ಹೋಗುವುದರ ಮೂಲಕ ಇಲ್ಲಿಯ ವನ್ಯಜೀವಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಪಡೆಯಬಹುದು. ಅಲ್ಲದೆ ಆನೆಗಳ ದೊಡ್ಡ ಹಿಂಡುಗಳನ್ನು ಗುರುತಿಸಲು, ಚಿತ್ತಾಲಗಳು ಮತ್ತು ಸಾಂಬಾರ್ ಗಳನ್ನು ಮತ್ತು ಬಾರ್ಕಿಂಗ್ ಜಿಂಕೆಗಳು, ಲಂಗೂರ್ ಗಳು ಮತ್ತು ಕೋತಿಗಳು, ಕರಡಿಗಳು, ಗೌರ್ ಗಳು, ಚಿರತೆಗಳು, ಮೊಸಳೆಗಳು, ಹುಲಿಗಳು ಮತ್ತು ಕಾಡು ನಾಯಿಗಳು ಮುಂತಾದ ಇನ್ನೂ ಅನೇಕ ಪ್ರಾಣಿಗಳನನ್ನು ನೋಡುವ ಅವಕಾಶವನ್ನು ನೀವು ಪಡೆಯಬಹುದಾಗಿದೆ.

ಕಬಿನಿಯು ಪಕ್ಷಿಶಾಸ್ತ್ರಜ್ಞರ ಸ್ವರ್ಗವೆಂದೇ ಹೇಳಬಹುದು. ಇಲ್ಲಿ 300 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳವೆ. ಈ ಮೀಸಲು ಅರಣ್ಯವು ಆಸ್ಪ್ರೆಗಳು, ಬಿಳಿ ತಲೆಯ ಫ಼ಿಶ್ ಹದ್ದುಗಳು, ಪೈಡ್ ಹಾರ್ನ್ಬಿಲ್, ಗ್ರೇಟ್ ಕಾರ್ಮೊರಂಟ್ಗಳು, ಲಾರ್ಕ್ ಗಳು, ಮಲಬಾರ್ ಟ್ರೋಗಾನ್ ಇನ್ನಿತರ ಪಕ್ಷಿ ಸಂಕುಲವನ್ನು ಹೊಂದಿದೆ.

ಈ ಅರಣ್ಯವು ಬೆರಗುಗೊಳಿಸುವಂತಹ ಹಲವಾರು ಪ್ರಭೇದಗಳಿಗೆ ಸಾಕ್ಷಿಯಾಗಿದೆ.

ಈ ಅರಣ್ಯವು ಬೆರಗುಗೊಳಿಸುವಂತಹ ಹಲವಾರು ಪ್ರಭೇದಗಳಿಗೆ ಸಾಕ್ಷಿಯಾಗಿದೆ.

ಈ ಪ್ರದೇಶವು ವಿಭಿನ್ನ ರೀತಿಯ ಮಳೆಯನ್ನು ಪಡೆಯುತ್ತದೆ ಇದಕ್ಕೆ ಅನುಗುಣವಾಗಿ ಸಸ್ಯವರ್ಗವೂ ಬದಲಾಗುತ್ತದೆ. ಪ್ರತಿ ವರ್ಷ 1000 ಮಿ.ಮೀ.ಗಿಂತ ಹೆಚ್ಚು ಮಳೆ ಬೀಳುವ ತೇವಾಂಶ ಭರಿತ ಡೆಸಿಡಿಯಸ್ ಪ್ರದೇಶಗಳಿಂದ ಹಿಡಿದು ಕಡಿಮೆ ಮಳೆ ಬೀಳುವ ಡ್ರೈ ಡೆಸಿಡಿಯಸ್ ಪ್ರದೇಶಗಳವರೆಗೆ ವ್ಯಾಪಿಸಿದೆ.

ಇವೆಲ್ಲದರ ಮಧ್ಯದಲ್ಲಿ ಇಲ್ಲಿ ಹುಲ್ಲುಗಾವಲುಗಳು, ಪೊದೆಗಳು,ಮತ್ತು ಜೌಗು ಪ್ರದೇಶಗಳನ್ನೂ ಹೊಂದಿದೆ. ಕಬಿನಿ ಸಂರಕ್ಷಿತ ಅರಣ್ಯ ಪ್ರದೇಶ ಮತ್ತು ನಾಗರಹೊಳೆ ಮೀಸಲು ಪ್ರದೇಶವು ಹೆಚ್ಚಿನ ಸಂಖ್ಯೆಯ ಸಸ್ಯಹಾರಿ ಪ್ರಾಣಿಗಳನ್ನು ಹೊಂದಿರುವುದಕ್ಕೆ ಸಾಕ್ಷಿಯಾಗಿದ್ದು ಅದರಲ್ಲೂ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳಿಗೆ ನೆಲೆಯಾಗಿದೆ. ಈ ಪ್ರದೇಶವು ಏಷ್ಯಾದ ಆನೆಗಳನ್ನ ಅತೀ ಹೆಚ್ಚಾಗಿ ಹೊಂದಿರುವುದಕ್ಕೆ ಪ್ರಸಿದ್ದಿಯನ್ನು ಪಡೆದಿದೆ.

ಚಿತ್ತಾಲ್ ಗಳು, ನಾಲ್ಕು ಕೊಂಬಿನ ಜಿಂಕೆಗಳು, ಸಾಂಬಾರ್, ಕಾಡು ಹಂದಿಗಳು, ಗೌರ್, ಲಂಗೂರ್ ಗಳು, ಮುಂಜ್ತಕ್, ಕೋತಿಗಳು ಮತ್ತು ಸಹಜವಾಗಿ, ಆನೆಗಳಂತಹ ಸಸ್ಯಾಹಾರಿಗಳ ದೊಡ್ಡ ವೈವಿಧ್ಯಮಯವಾದ ಪ್ರಾಣಿಗಳನ್ನು ಈ ಅರಣ್ಯಪ್ರದೇಶವು ಹೊಂದಿದೆ. ಸಸ್ಯಾಹಾರಿ ಪ್ರಾಣಿಗಳು ಮಾತ್ರವಲ್ಲದೆ ಈ ಪ್ರದೇಶವು ಹುಲಿಗಳು, ಚಿರತೆಗಳು ಮತ್ತು ಧೋಲ್ಸ್ (ಭಾರತೀಯ ಕಾಡು ನಾಯಿಗಳು) ಸೇರಿದಂತೆ ಹೆಚ್ಚಿನ ಸಂಖ್ಯೆಯ ಪರಭಕ್ಷಕ ಪ್ರಾಣಿಗಳಿಗೂ ನೆಲೆಯಾಗಿದೆ.

ಈ ಕಾಡಿನಲ್ಲಿ ಸಫಾರಿ ಹೋಗುವುದರ ಮೂಲಕ ಇಲ್ಲಿಯ ವನ್ಯಜೀವಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಪಡೆಯಬಹುದು. ಅಲ್ಲದೆ ಆನೆಗಳ ದೊಡ್ಡ ಹಿಂಡುಗಳನ್ನು ಗುರುತಿಸಲು, ಚಿತ್ತಾಲಗಳು ಮತ್ತು ಸಾಂಬಾರ್ ಗಳನ್ನು ಮತ್ತು ಬಾರ್ಕಿಂಗ್ ಜಿಂಕೆಗಳು, ಲಂಗೂರ್ ಗಳು ಮತ್ತು ಕೋತಿಗಳು, ಕರಡಿಗಳು, ಗೌರ್ ಗಳು, ಚಿರತೆಗಳು, ಮೊಸಳೆಗಳು, ಹುಲಿಗಳು ಮತ್ತು ಕಾಡು ನಾಯಿಗಳು ಮುಂತಾದ ಇನ್ನೂ ಅನೇಕ ಪ್ರಾಣಿಗಳನನ್ನು ನೋಡುವ ಅವಕಾಶವನ್ನು ನೀವು ಪಡೆಯಬಹುದಾಗಿದೆ.

ಕಬಿನಿ ಮತ್ತು ಇದರ ಸುತ್ತಮುತ್ತಲಿನಲ್ಲಿರುವ ಪ್ರವಾಸಿ ತಾಣಗಳು ಮತ್ತು ಇಲ್ಲಿನ ಸ್ಥಳಗಳಲ್ಲಿ ಮಾಡಬಹುದಾದ ಚಟುವಟಿಕೆಗಳು

ಕಬಿನಿ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳೆಂದರೆ ಜಂಗಲ್ ಸಫಾರಿ ಮತ್ತು ಎಲಿಫೆಂಟ್ ಸಫಾರಿ(ಆನೆಗಳ ಸಫಾರಿ.) ಇಲ್ಲಿಯ ಲೇಕ್ ಗಳಲ್ಲಿ ದೋಣಿ ವಿಹಾರ ಮಾಡಬಹುದಾಗಿದ್ದು ಇದರಿಂದಾಗಿ ನೀವು ಇಲ್ಲಿರುವ ಸಂಬಾರ್ ಗಳು ಮತ್ತು ಚಿತ್ತಾಲ್ ಗಳನ್ನು ನೀರಿನ ಬಳಿಯಲ್ಲಿ ಕಾಣಬಹುದಾಗಿದೆ ಅಲ್ಲದೆ ಕೆಲವು ಮೊಸಳೆಗಳು ನದಿ ದಡದಲ್ಲಿ ಸನ್ ಬಾತ್ ಮಾಡುತ್ತಿರುವ ದೃಶ್ಯವನ್ನೂ ಕಾಣಬಹುದಾಗಿದೆ.

ಪ್ರಕೃತಿಯಲ್ಲಿ ನಡಿಗೆ, ಕಾಡಿನಲ್ಲಿ ಟ್ರಕ್ಕಿಂಗ್, ದೋಣಿ ವಿಹಾರ, ಸೈಕ್ಲಿಂಗ್, ಪಕ್ಷಿ ವೀಕ್ಷಣೆ, ಬೊನ್ ಫ಼ೈರ್ ರಾತ್ರಿಗಳು, ಮತ್ತು ಸ್ಥಳೀಯ ಹಳ್ಳಿಗಳಿಗೆ ಪ್ರವಾಸಗಳು ನೀವು ಇಲ್ಲಿ ಆನಂದಿಸಬಹುದಾದ ಇತರ ಮೋಜಿನ ಚಟುವಟಿಕೆಗಳಾಗಿವೆ. ಕಬಿನಿಯು ದೇಶದ ಅತ್ಯಂತ ಮೋಡಿಮಾಡುವ ನೈಸರ್ಗಿಕ ರಜಾ ತಾಣಗಳಲ್ಲಿ ಒಂದಾಗಿದ್ದು, ಇದು ಶ್ರೀಮಂತ ವನ್ಯಜೀವಿಗಳು ಮತ್ತು ಮೋಡಿಮಾಡುವ ರಮಣೀಯ ಸೌಂದರ್ಯದೊಂದಿಗೆ ಮನಸ್ಸು ಮತ್ತು ಆತ್ಮಕ್ಕೆ ಹಬ್ಬವನ್ನು ನೀಡುತ್ತದೆ. ಇದು ಖಂಡಿತವಾಗಿಯೂ ಕರ್ನಾಟಕದಲ್ಲಿ ನೋಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದ್ದು ಇಲ್ಲಿಗೆ ಭೇಟಿ ಕೊಡುವುದನ್ನು ನೀವು ಖಂಡಿತವಾಗಿಯೂ ತಪ್ಪಿಸಿಕೊಳ್ಳಬಾರದು!

ಕಬಿನಿಗೆ ಭೇಟಿ ಕೊಡಲು ಉತ್ತಮ ಸಮಯ: ನವೆಂಬರ್ ಮತ್ತು ಜೂನ್ ತಿಂಗಳುಗಳ ಮಧ್ಯದ ಸಮಯ ಇಲ್ಲಿಗೆ ಭೇಟಿಗೆ ಯೋಗ್ಯವಾದ ಸಮಯವಾಗಿದೆ.

ಕಬಿನಿಗೆ ಭೇಟಿ ಕೊಡಲು ಉತ್ತಮ ಸಮಯ

ಕಬಿನಿಗೆ ಭೇಟಿ ಕೊಡಲು ಉತ್ತಮ ಸಮಯ

ಪ್ರಕೃತಿಯಲ್ಲಿ ನಡಿಗೆ, ಕಾಡಿನಲ್ಲಿ ಟ್ರಕ್ಕಿಂಗ್, ದೋಣಿ ವಿಹಾರ, ಸೈಕ್ಲಿಂಗ್, ಪಕ್ಷಿ ವೀಕ್ಷಣೆ, ಬೊನ್ ಫ಼ೈರ್ ರಾತ್ರಿಗಳು, ಮತ್ತು ಸ್ಥಳೀಯ ಹಳ್ಳಿಗಳಿಗೆ ಪ್ರವಾಸಗಳು ನೀವು ಇಲ್ಲಿ ಆನಂದಿಸಬಹುದಾದ ಇತರ ಮೋಜಿನ ಚಟುವಟಿಕೆಗಳಾಗಿವೆ. ಕಬಿನಿಯು ದೇಶದ ಅತ್ಯಂತ ಮೋಡಿಮಾಡುವ ನೈಸರ್ಗಿಕ ರಜಾ ತಾಣಗಳಲ್ಲಿ ಒಂದಾಗಿದ್ದು, ಇದು ಶ್ರೀಮಂತ ವನ್ಯಜೀವಿಗಳು ಮತ್ತು ಮೋಡಿಮಾಡುವ ರಮಣೀಯ ಸೌಂದರ್ಯದೊಂದಿಗೆ ಮನಸ್ಸು ಮತ್ತು ಆತ್ಮಕ್ಕೆ ಹಬ್ಬವನ್ನು ನೀಡುತ್ತದೆ. ಇದು ಖಂಡಿತವಾಗಿಯೂ ಕರ್ನಾಟಕದಲ್ಲಿ ನೋಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದ್ದು ಇಲ್ಲಿಗೆ ಭೇಟಿ ಕೊಡುವುದನ್ನು ನೀವು ಖಂಡಿತವಾಗಿಯೂ ತಪ್ಪಿಸಿಕೊಳ್ಳಬಾರದು!

FAQ's
  • ಕಬಿನಿಗೆ ಭೇಟಿ ಕೊಡಲು ಉತ್ತಮ ಸಮಯ

    ನವೆಂಬರ್ ಮತ್ತು ಜೂನ್ ತಿಂಗಳುಗಳ ಮಧ್ಯದ ಸಮಯ ಇಲ್ಲಿಗೆ ಭೇಟಿಗೆ ಯೋಗ್ಯವಾದ ಸಮಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X