Search
  • Follow NativePlanet
Share
» »ಪಂಚಗಣಿಯಿಂದ ಮಹಾಬಳೇಶ್ವರ

ಪಂಚಗಣಿಯಿಂದ ಮಹಾಬಳೇಶ್ವರ

By Vijay

ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಕೆಲವರಿಗೆ ಪ್ರವಾಸ ಹೊರಡುವುದೆಂದರೆ ಬೇಸರ ಏಕೆಂದರೆ ನೆನೆಯುವಿಕೆ, ಎಲ್ಲೆಲ್ಲೂ ಕೆಸರು, ಅರೋಗ್ಯದಲ್ಲಿ ಏರು ಪೇರು ಮುಂತಾದ ವಿಚಾರಗಳು ಮಹತ್ವ ಪಡೆದು ಬಿಡುತ್ತವೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಕೆಲವು ಸ್ಥಳಗಳು ಮಳೆಗಾಲದಲ್ಲಿ ಜೀವ ಪಡೆದುಕೊಳ್ಳುತ್ತವೆ. ಆ ನಂತರ ಸಮಯ ಕಳೆದ ಹಾಗೆ ಮತ್ತಷ್ಟು ಆಕರ್ಷಣೆ ಪಡೆಯುತ್ತವೆ.

ಪ್ರಕೃತಿಗೆ ಜೀವ ಕಳೆ ಬಂದು ಸಂತಸದಿಂದ ನರ್ತಿಸುವುದನ್ನು ನೋಡಲೆಂದೆ ಸಾಕಷ್ಟು ಜನ ಇಂತಹ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಪ್ರಸ್ತುತ ಲೇಖನದ ಮೂಲಕ ನಾವೂ ಕೂಡ ಅಂತಹ ಎರಡು ಸುಂದರ ಸ್ಥಳಗಳ ಕುರಿತು ತಿಳಿಯೋಣ. ಇವೆರಡೂ ಸ್ಥಳಗಳ ಮಧ್ಯದಲ್ಲಿರುವ ಅಂತರ ಕೇವಲ 20 ಕಿ.ಮೀ ಗಳು. ಆದರೆ ಅಂದ ಚೆಂದಗಳನ್ನು ಹೋಲಿಸಿದರೆ ಒಂದಕ್ಕಿಂತ ಇನ್ನೊಂದು ಕಮ್ಮಿಯಿಲ್ಲ.

ದೀರ್ಘ ರಜೆಯನ್ನೊ ಇಲ್ಲವೆ ವಾರಾಂತ್ಯಗಳ ರಜೆಯನ್ನೊ ಸಾರ್ಥಕಗೊಳಿಸಲು ಬಯಸಿದ್ದರೆ, ಸ್ನೇಹಿತರೊಂದಿಗೋ ಇಲ್ಲವೆ ಕುಟುಂಬದವರೊಡನೆ ಎರಡು ದಿನಗಳ ಕಾಲ ಹಿತಕರವಾಗಿ ಸಮಯ ಕಳೆಯಬೇಕೆಂದಿದ್ದರೆ ಮಹಾರಾಷ್ಟ್ರದ ಪಂಚಗಣಿಯಿಂದ ಮಹಾಬಳೇಶ್ವರದವರೆಗೆ ಒಂದು ಪ್ರವಾಸ ಹೊರಡಿ. ಮನಸ್ಸು ತನ್ನಿಂತಾನೆ ಚಿಗುರತೊಡಗುತ್ತದೆ.

ಪಂಚಗಣಿ ಹೋಟೆಲುಗಳಿಗೆ ಇಲ್ಲಿ ಕ್ಲಿಕ್ ಮಾಡಿ ಹಾಗೂ ಮಹಾಬಳೇಶ್ವರ ಹೋಟೆಲುಗಳು.

ನೀವಿಷ್ಟಪಡುಬಹುದಾದ : ಮಹಾಬಳೇಶ್ವರ ಒಂದು ರುದ್ರಮಯ ಗಿರಿಧಾಮ

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಒಂದು ಸುಂದರ ಗಿರಿಧಾಮ. ತನ್ನ ಸುಂದರ ಪ್ರಕೃತಿಯ ಸೊಬಗಿನೊಂದಿಗೆ ಈ ಪ್ರದೇಶವು ತನ್ನಲ್ಲಿರುವ ಪ್ರತಿಷ್ಠಿತ ವಸತಿ ಶಾಲೆಗಳಿಗೂ ಹೆಸರುವಾಸಿಯಾಗಿದೆ. ಅಷ್ಟೆ ಏಕೆ, ಆಮೀರ್ ಖಾನ್ ನಟಿಸಿದ "ತಾರೆ ಜಮೀನ್ ಪರ್" ಎಂಬ ಹಿಂದಿ ಚಿತ್ರದಲ್ಲಿ ಚಿತ್ರೀಕರಿಸಲಾದ ವಸತಿ ಶಾಲೆ ಪಂಚಗಣಿಯದ್ದೆ.

ಚಿತ್ರಕೃಪೆ: Sankarshan Mukhopadhyay

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಪುಣೆ ಅಥವಾ ಮುಂಬೈ ನಗರಗಳಿಂದ ಪಂಚಗಣಿಗೆ ಸುಲಭವಾಗಿ ತೆರಳಬಹುದು. ಬಸ್ಸುಗಳು ಹಾಗೂ ರೈಲುಗಳೆರಡರ ಸೌಲಭ್ಯವೂ ಇದೆ. ದೀರ್ಘ ರಜೆ ದೊರೆತಲ್ಲಿ ಕುಟುಂಬ ಸಮೇತ ಈ ಸ್ಥಳಗಳಿಗೆ ಭೇಟಿ ನೀಡಿ ಕಣ್ಮನ ತಂಪಾಗಿಸಿಕೊಳ್ಳಬಹುದಾಗಿದೆ.

ಚಿತ್ರಕೃಪೆ: sindhur reddy

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮೂಲತಃ ಪಂಚಗಣಿ ಪ್ರದೇಶವು 1800 ರ ಸಮಯದಲ್ಲಿ ಬ್ರಿಟೀಷರಿಂದ ಶೋಧಿಸಲ್ಪಟ್ಟಿತು ಹಾಗೂ ಜಾನ್ ಚೆಸ್ಸಾನ್ ಎಂಬ ಬ್ರಿಟಿಷ್ ಅಧಿಕಾರಿಯು ಈ ಗಿರಿಧಾಮದ ಉಸ್ತುವಾರಿಯನ್ನು ಹೊತ್ತಿದ್ದನು. ಪಶ್ಚಿಮದಲ್ಲಿ ಬೆಳೆಯುವ ಸಿಲ್ವರ್ ಓಕ್ ಹಾಗೂ ಪಾಇನ್ ಸೆಟ್ಟಿಯಾ ಎಂಬ ತಳಿಗಳ ಮರಗಳನ್ನು ಇಲ್ಲಿ ನೆಟ್ಟಿದ್ದರಿಂದ, ಆ ಮರಗಳನ್ನು ಇಂದು ಇಲ್ಲಿ ಅವ್ಯಾಹತವಾಗಿ ಬೆಳೆದಿರುವುದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Balaji.B

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮತ್ತೊಂದು ಸಂಗತಿಯೆಂದರೆ ಸಹ್ಯಾದ್ರಿ ಪರ್ವತ ಶ್ರೇಣಿಯ ಐದು ಗುಡ್ಡಗಳ ಮಧ್ಯೆ ಪ್ರಶಾಂತವಾಗಿ ಈ ಸ್ಥಳವು ನೆಲೆಸಿದ್ದುದರಿಂದ ಇದಕ್ಕೆ "ಪಂಚಗಣಿ" (ಪಂಚ ಎಂದರೆ ಐದು ಎಂದರ್ಥ) ಎಂದು ಹೆಸರಿಸಲಾಯಿತು.

ಚಿತ್ರಕೃಪೆ: Abhishekjoshi

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ ಪ್ರದೇಶದಲ್ಲಿ ಕಂಡುಬರುವ ಆಕರ್ಷಕ ವೀಕ್ಷಣಾ ಸ್ಥಳ. ಇದನ್ನು ಸಿಡ್ನಿ ಪಾಯಿಂಟ್ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Akhilesh Dasgupta

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿಯ ಮ್ಯಾಪ್ರೊ ಉದ್ಯಾನ. ಇಲ್ಲಿ ಸ್ಟ್ರಾಬೆರ್‍ರಿ ಹಣ್ಣುಗಳನ್ನು ಬೆಳೆಯಲಾಗುತ್ತದೆ ಹಾಗೂ ಪ್ರದೇಶದ ಈ ಹಣ್ಣುಗಳು ಹೆಸರುವಾಸಿಯಾಗಿವೆ.

ಚಿತ್ರಕೃಪೆ: Ekabhishek

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ ಗಿರಿಧಾಮವು ಮುಂಬೈನಿಂದ 285 ಕಿ.ಮೀ, ಪುಣೆ ನಗರದಿಂದ 100 ಕಿ.ಮೀ, ಮಹಾಬಲೇಶ್ವರದಿಂದ 18 ಕಿ.ಮೀ ಹಾಗೂ ಸತಾರಾ ಪಟ್ಟಣದಿಂದ 45 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: Ramnath Bhat

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿಯಲ್ಲಿ ಕೆಲವು ಸುಂದರ ವೀಕ್ಷಣಾ ಸ್ಥಳಗಳಿವೆ. ನೀವು ಇಲ್ಲಿಗೆ ಭೇಟಿ ನೀಡಿದಾಗ ಅವುಗಳನ್ನು ನೋಡಲು ಮರೆಯದಿರಿ. ಎಲ್ಲವೂ ಹೆಚ್ಚುಕಡಿಮೆ ಒಂದಕ್ಕೊಂದು ಹತ್ತಿರದಲ್ಲೆ ನೆಲೆಸಿವೆ.

ಚಿತ್ರಕೃಪೆ: Balaji.B

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ನೀವು ಆನಂದಿಸಬಹುದಾದ ಪಂಚಗಣಿಯ ಕೆಲವು ವೀಕ್ಷಣಾ ಸ್ಥಳಗಳೆಂದರೆ, ಸಿಡ್ನಿ ಪಾಯಿಂಟ್, ಟೇಬಲ್ ಲ್ಯಾಂಡ್, ಪಾರ್ಸಿ ಪಾಯಿಂಟ್, ಡೆವಿಲ್ಸ್ ಕಿಚನ್ ಮುಂತಾದವುಗಳು.

ಚಿತ್ರಕೃಪೆ: Harald Deischinger

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಲೇಶ್ವರ ಪಂಚಗಣಿಯಿಂದ ಕೇವಲ 20 ಕಿ.ಮೀ ದೂರವಿದ್ದರೂ ಸಹ ತಲುಪುವುದು ತುಸು ಕಷ್ಟವೆ ಹೌದು. ಏಕೆಂದರೆ ಪಂಚಗಣಿಯು ಐದು ಗುಡ್ಡಗಳ ಮಧ್ಯವಿರುವುದರಿಂದ ರಸ್ತೆಯು ಸಾಕಷ್ಟು ಮೊನಚಾಗಿಯೂ, ಏರಿಕೆಯಿಂದಲೂ, ಪ್ರಪಾತಗಳಿಂದಲೂ ಕೂಡಿರುತ್ತದೆ. ಅಲ್ಲದೆ ಪಂಚಗಣಿಯು ಪ್ಯಾರಾ ಗ್ಲೈಡಿಂಗ್ ಗೂ ಸಹ ಪ್ರಸಿದ್ಧಿಯನ್ನು ಪಡೆದಿದೆ.

ಚಿತ್ರಕೃಪೆ: Suyash Sonawane

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾರಾಷ್ಟ್ರ ಸರ್ಕಾರದ ಅಧಿಕೃತ ಬಸ್ಸುಗಳು ಲಭ್ಯವಿದೆಯಾದರೂ ಕೇವಲ ನಿಯಮಿತ ಅವಧಿಗಳಲ್ಲಿ ಮಾತ್ರ. ಅಲ್ಲದೆ ರೈಲಿನಿಂದ ತಲುಪಬಹುದಾಗಿದ್ದರೂ ಸಹ ಪ್ರಯಾಣಾವಧಿಯು ಹೆಚ್ಚುತ್ತದೆ. ಏಕೆಂದರೆ ರೈಲು ಸುತ್ತುತ್ತ ತಲುಪುತ್ತದೆ ಹಾಗೂ ಇದು ಸಂಪೂರ್ಣ ರೈಲು ಪ್ರಯಾಣವೂ ಆಗಿರುವುದಿಲ್ಲ. ಟೇಬಲ್ ಲ್ಯಾಂಡ್ ವೀಕ್ಷಣಾ ಸ್ಥಳದಿಂದ ಕಂಡುಬರುವ ದೃಶ್ಯ.

ಚಿತ್ರಕೃಪೆ: Vikas Rana

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಇನ್ನು, ಪಂಚಗಣಿ, ಮಹಾಬಲೇಶ್ವರ ಸುತ್ತಲು ಬಾಡಿಗೆ ಟ್ಯಾಕ್ಸಿಗಳು, ಜೀಪುಗಳು ಹಾಗೂ ಬೈಕುಗಳೂ ಸಹ ದಿನಕ್ಕೆ ಇಂತಿಷ್ಟು ಬಾಡಿಗೆಗಳಲ್ಲಿ ದೊರಕುತ್ತವೆ. ಸುತ್ತಾಡಲು ಜೀಪುಗಳು ಹಾಗೂ ಕಾರುಗಳು ಉತ್ತಮ. ರಸ್ತೆಗಳು ಇಳಿಜಾರು ಹಾಗೂ ಏರಿಕೆಗಳಿಂದ ಕೂಡಿರುವುದರಿಂದ ಶಕ್ತಿಶಾಲಿ ವಾಹನಗಳು ಹಾಗೂ ಅನುಭವಿ ಡ್ರೈವರುಗಳ ಅವಶ್ಯವಿರುತ್ತದೆ.

ಚಿತ್ರಕೃಪೆ: Balaji.B

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಬೈಕುಗಳ ಮೇಲೆ ಸವಾರಿ ಮಾಡಲು ಬಯಸಿದ್ದರೆ ಅದೂ ಕೂಡ ಲಭ್ಯವಿದೆ. ಆದರೆ ನೀವು ಒಬ್ಬ ಒಳ್ಳೆಯ ಅನುಭವಿ/ನುರಿತ ಸವಾರರಾಗಿದ್ದರೆ ಉತ್ತಮ.

ಚಿತ್ರಕೃಪೆ: Ashwin John

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರವು ಸಮುದ್ರ ಮಟ್ಟದಿಂದ ಸುಮಾರು 1,353 ಮೀ ಎತ್ತರದಲ್ಲಿ ನೆಲೆಸಿದ್ದು ಮಹಾರಾಷ್ಟ್ರದ ಸುಪ್ರಸಿದ್ಧ ನಗರಗಳಾದ ಪುಣೆ ಹಾಗು ಮುಂಬೈಗಳಿಂದ ಕ್ರಮವಾಗಿ 120 ಕಿ.ಮೀ ಹಾಗು 285 ಕಿ.ಮೀಗಳಷ್ಟು ಅಂತರದಲ್ಲಿದೆ. ಇದೊಂದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿದ್ದು ಆಕರ್ಷಕ ದೃಶ್ಯಾವಳಿಗಳನ್ನು ಪ್ರವಾಸಿಗರಿಗೆ ಒದಗಿಸುತ್ತದೆ.

ಚಿತ್ರಕೃಪೆ: Nishanth Jois

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಇಲ್ಲಿರುವ ಎಲಿಫಂಟ್ ಹೆಡ್ ಎಂಬ ವೀಕ್ಷಣಾ ಸ್ಥಳವು ರೋಮಾಂಚನವನ್ನುಂಟು ಮಾಡುತ್ತದೆ. ಅಲ್ಲದೆ ಮಹಾಬಲೇಶ್ವರದಲ್ಲಿರುವ ಅತ್ಯಂತ ಎತ್ತರದ ಸ್ಥಳವನ್ನು ವಿಲ್ಸನ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಈ ಸ್ಥಳವು ಸಮುದ್ರ ಮಟ್ಟದಿಂದ 4,721 ಅಡಿಗಳಷ್ಟು ಎತ್ತರದಲ್ಲಿದೆ.

ಚಿತ್ರಕೃಪೆ: Nishanth Jois

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಈ ಪ್ರಖ್ಯಾತ ಪ್ರವಾಸಿ ಕ್ಷೇತ್ರವು ಕೃಷ್ಣಾ ನದಿಯ ಮೂಲ ಸ್ಥಳವಾಗಿದೆ. ಕೃಷ್ಣಾ ನದಿಯು ಮಹಾರಾಷ್ಟ್ರ ರಾಜ್ಯವಲ್ಲದೆ ಕರ್ನಾಟಕ ಹಾಗು ಆಂಧ್ರಪ್ರದೇಶ ರಾಜ್ಯಗಳಲ್ಲೂ ಹರಿದಿದೆ. ಇಲ್ಲಿನ ಪುರಾತನ ಮಹಾಬಲೇಶ್ವರ ಪ್ರದೇಶದಲ್ಲಿರುವ ಪ್ರಾಚೀನ ಮಹಾದೇವನ ದೇವಾಲಯದಲ್ಲಿರುವ ಗೋವಿನ ಮುಖದಿಂದ ಕೃಷ್ಣಾ ನದಿಯು ಉಗಮವಾಗಿದೆ ಎನ್ನಲಾಗಿದೆ.

ಚಿತ್ರಕೃಪೆ: Vikas Rana

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಚಿತ್ರದಲ್ಲಿ ಕಾಣುತ್ತಿರುವುದು ಮಹಾಬಳೇಶ್ವರದ "ನೀಡಲ್ ಹೋಲ್ ಪಾಯಿಂಟ್" ಎಂಬ ವೀಕ್ಷಣಾ ಸ್ಥಳ. ಸೂಜಿಯ ಒಂದು ಕೊನೆಯಲ್ಲಿರುವ ರಂಧ್ರದಂತೆ ಇದು ಗೋಚರಿಸುವುದರಿಂದ ಇದಕ್ಕೆ"ನೀಡಲ್ ಹೋಲ್" ಎಂಬ ಹೆಸರುಬಂದಿದೆ.

ಚಿತ್ರಕೃಪೆ: Balaji.B

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಪೌರಾಣಿಕ ಪಾತ್ರವಾದ ಸಾವಿತ್ರಿಯ ಶಾಪದಿಂದ ತ್ರಿಮೂರ್ತಿಯರಲ್ಲಿ ಒಬ್ಬನಾದ ವಿಷ್ಣು ಕೃಷ್ಣಾ ನದಿಯಾಗಿದ್ದು ಇದರ ಎರಡು ಉಪನದಿಗಳಾದ ವೆನ್ನಾ ಹಾಗು ಕೊಯ್ನಾ ನದಿಗಳು ಶಿವ ಹಾಗು ಬ್ರಹ್ಮದೇವನಾಗಿದ್ದಾನೆ ಎಂದು ಇಲ್ಲಿನ ಸ್ಥಳಪುರಾಣ ಹೇಳುತ್ತದೆ.

ಚಿತ್ರಕೃಪೆ: Nishanth Jois

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಇನ್ನೊಂದು ಆಸಕ್ತಿಕರ ವಿಷಯವೆಂದರೆ ಕೃಷ್ಣಾ ನದಿಯ ಹೊರತಾಗಿ ವೆನ್ನಾ, ಕೊಯ್ನಾ, ಸಾವಿತ್ರಿ ಹಾಗು ಗಾಯಿತ್ರಿಗಳೆಂಬ ನಾಲ್ಕು ನದಿಗಳು ಗೋಮುಖದಿಂದಲೆ ಉದ್ಭವವಾಗಿದ್ದು ಸ್ವಲ್ಪ ದೂರ ಹರಿದು ಕೊನೆಗೆ ಕೃಷ್ಣಾ ನದಿಯಲ್ಲಿ ಸೇರ್ಪಡೆಯಾಗುತ್ತವೆ.

ಚಿತ್ರಕೃಪೆ: Ankur P

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಪ್ರಸ್ತುತ ಇಂದಿನ ಮಹಾಬಳೇಶ್ವರ ಗಿರಿಧಾಮವು ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿರುವುದೂ ಅಲ್ಲದೆ ಹಿಂದುಗಳಿಗೆ ಪವಿತ್ರವಾದ ಮಹಾಬಳೇಶ್ವರನ ದೇವಾಲಯವಿರುವ ಧಾರ್ಮಿಕ ಕ್ಷೇತ್ರವೂ ಆಗಿದೆ. ಪ್ರಸಿದ್ಧ ಶಿವ ದೇವಸ್ಥಾನದಿಂದ ಅರ್ಧ ಕಿ.ಮೀ ಟ್ರೆಕ್ ಮಾಡಿ ತಲುಪಬಹುದಾದ ಪುರಾತನ ಕೃಷ್ಣ ದೇವಿಯ ದೇಗುಲ.

ಚಿತ್ರಕೃಪೆ: UrbanWanderer

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರ ಗಿರಿಧಾಮವು ತನ್ನಲ್ಲಿ ಬೆಳೆಯಲಾಗುವ ಸ್ಟ್ರಾಬೆರ್‍ರಿ, ಮಲ್ಬೆರ್‍ರಿ ಹಣ್ಣುಗಳು ಹಾಗು ಜೇನಿನ ಹನಿಗೆ ಅತಿ ಜನಪ್ರಿಯವಾಗಿದೆ. ಸ್ಟ್ರಾಬೆರ್‍ರಿಗಳನ್ನು ಅವುಗಳ ಸಹಜ ಸ್ಥಿತಿಯಲ್ಲಿ ನೋಡಲು ಇಲ್ಲಿನ ಸ್ಟ್ರಾಬೆರ್‍ರಿ ಫಾರ್ಮ್ ಗಳಿಗೆ ಬೇಕಾದರೆ ಭೇಟಿ ನೀಡಬಹುದು.

ಚಿತ್ರಕೃಪೆ: Bernard Oh

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಏಪ್ರಿಲ್ ಹಾಗು ಮೇ ತಿಂಗಳಿನ ಸಮಯದಲ್ಲಿ ಇಲ್ಲಿನ ಪ್ರಖ್ಯಾತ ಕ್ರೀಮ್ ಕಾರ್ನರ್ ಎಂಬಲ್ಲಿ ಬಾಯಲ್ಲಿ ನೀರೂರಿಸುವಂತಹ "ಸ್ಟ್ರಾಬೆರ್‍ರಿಸ್ ವಿಥ್ ಕ್ರೀಮ್" ಹಾಗು "ಮಲ್ಬೆರ್‍ರಿಸ್ ವಿಥ್ ಕ್ರೀಮ್" ಎಂಬ ಉತ್ಕೃಷ್ಟ ಖಾದ್ಯಗಳನ್ನು ಸವಿಯಬಹುದು.

ಚಿತ್ರಕೃಪೆ: Rauf.dange

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ವೆನ್ನಾ ಕೆರೆಯು ಮಹಾಬಳೇಶ್ವರದ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಕೆರೆಯು ತನ್ನ ಎಲ್ಲ ದಿಕ್ಕುಗಳಲ್ಲೂ ವಿಶಾಲವಾದ ಗಿಡ ಮರಗಳಿಂದ ಸುತ್ತುವರೆದಿದ್ದು ನೋಡಲು ವಿಹಂಗಮವಾದ ನೋಟವನ್ನು ಒದಗಿಸುತ್ತದೆ. ಚಳಿಗಾಲದ ಸಮಯದಲ್ಲಿ ಮಂಜು ಮುಸುಕಿದ ವಾತಾವರಣದಲ್ಲಿ ಕೈಗೊಳ್ಳಬಹುದಾದ ದೋಣಿ ವಿಹಾರವು ಅತಿ ರೋಮಾಂಚಕವಾಗಿರುತ್ತದೆ.

ಚಿತ್ರಕೃಪೆ: Abdul Razzak

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರದ ವೆನ್ನಾ ಕೆರೆಯಿಂದ ಕೇವಲ ಎರಡು ಕಿ.ಮೀ ದೂರ ಚಲಿಸಿದಾಗ ನಗರದ ಮಾರುಕಟ್ಟೆ ಹಾಗು ಬಸ್ ನಿಲ್ದಾಣಕ್ಕೆ ಪ್ರವೇಶಿಸಬಹುದು. ಹಲವಾರು ಖಾಸಗಿ ಹಾಗು ಸರ್ಕಾರಿ ಬಸ್ಸುಗಳು ಮಹಾಬಳೇಶ್ವರಕ್ಕೆ ತೆರಳುವಾಗ ವಿನಂತಿಯ ಮೆರೆಗೆ ವೆನ್ನಾ ಕೆರೆಯ ಬಳಿ ನಿಲುಗಡೆಯನ್ನು ಕೊಡುತ್ತವೆ.

ಚಿತ್ರಕೃಪೆ: Nishanth Jois

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಹೊಸ ರಸ್ತೆಯ ನಿರ್ಮಾಣದ ನಂತರ ಮಹಾಬಳೇಶ್ವರವನ್ನು ಮುಂಬೈನಿಂದ ನೇರವಾಗಿ ನಾಲ್ಕು ಘಂಟೆಗಳಷ್ಟು ಪ್ರಯಾಣ ಮಾಡಿ ತಲುಪಬಹುದಾಗಿದೆ. ನೀವು ಪಂಚಗಣಿಯಿಂದಾದರೂ ಮಹಾಬಳೇಶ್ವರಕ್ಕೆ ಹೊರಡಿ ಇಲ್ಲವೆ ಮಹಾಬಳೇಶ್ವರದಿಂದ ಪಂಚಗಣಿಗೆ ಹೊರಡಿ ಆಗುವ ಆನಂದ, ಉತ್ಸಾಹ ಮಾತ್ರ ನಿಮ್ಮದೆ ಹಾಗೂ ಅನನ್ಯವೆ ಆಗಿರುತ್ತದೆ.

ಚಿತ್ರಕೃಪೆ: Ankur P

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರ - ಪಂಚಗಣಿಯ ಕೆಲವು ಮನಸೂರೆಗೊಳ್ಳುವ ಚಿತ್ರಗಳು.

ಚಿತ್ರಕೃಪೆ: sudeep1106

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರ - ಪಂಚಗಣಿಯ ಕೆಲವು ಮನಸೂರೆಗೊಳ್ಳುವ ಚಿತ್ರಗಳು. ಮಹಾಬಳೇಶ್ವರದ ಬಳಿಯಿರುವ ಲಿಂಗಮಾಲಾ ಜಲಪಾತದ ಸುಂದರ ದೃಶ್ಯ.

ಚಿತ್ರಕೃಪೆ: Karunakar Rayker

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರ - ಪಂಚಗಣಿಯ ಕೆಲವು ಮನಸೂರೆಗೊಳ್ಳುವ ಚಿತ್ರಗಳು.

ಚಿತ್ರಕೃಪೆ: Nishanth Jois

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರ - ಪಂಚಗಣಿಯ ಕೆಲವು ಮನಸೂರೆಗೊಳ್ಳುವ ಚಿತ್ರಗಳು.

ಚಿತ್ರಕೃಪೆ: Ankur P

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರ - ಪಂಚಗಣಿಯ ಕೆಲವು ಮನಸೂರೆಗೊಳ್ಳುವ ಚಿತ್ರಗಳು. ಹಳೆಯ ಮಹಾಬಳೇಶ್ವರ ದೇವಸ್ಥಾನ.

ಚಿತ್ರಕೃಪೆ: Vikas Rana

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರ - ಪಂಚಗಣಿಯ ಕೆಲವು ಮನಸೂರೆಗೊಳ್ಳುವ ಚಿತ್ರಗಳು. ಮಹಾಬಳೇಶ್ವರದಲ್ಲಿರುವ ಒಂದು ವೀಕ್ಷಣಾ ಕೇಂದ್ರವಾದ ಅರ್ಥರ್ ಸೀಟ್ ನೆಡೆ ಕರೆದುಕೊಂಡು ಹೋಗುವ ಮೆಟ್ಟಿಲುಗಳು.

ಚಿತ್ರಕೃಪೆ: Suddhasatwa Bhaumik

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರ - ಪಂಚಗಣಿಯ ಕೆಲವು ಮನಸೂರೆಗೊಳ್ಳುವ ಚಿತ್ರಗಳು.

ಚಿತ್ರಕೃಪೆ: Vikas Rana

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರ - ಪಂಚಗಣಿಯ ಕೆಲವು ಮನಸೂರೆಗೊಳ್ಳುವ ಚಿತ್ರಗಳು.

ಚಿತ್ರಕೃಪೆ: Dhananjay Odhekar

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರ - ಪಂಚಗಣಿಯ ಕೆಲವು ಮನಸೂರೆಗೊಳ್ಳುವ ಚಿತ್ರಗಳು. ಮಹಾಬಳೇಶ್ವರದ ಬಳಿಯಿರುವ ಪ್ರತಾಪ್ಗಡ್ ಕೋಟೆ.

ಚಿತ್ರಕೃಪೆ: Ankur P

ಪಂಚಗಣಿ - ಮಹಾಬಳೇಶ್ವರ:

ಪಂಚಗಣಿ - ಮಹಾಬಳೇಶ್ವರ:

ಮಹಾಬಳೇಶ್ವರ - ಪಂಚಗಣಿಯ ಕೆಲವು ಮನಸೂರೆಗೊಳ್ಳುವ ಚಿತ್ರಗಳು.

ಚಿತ್ರಕೃಪೆ: Nishanth Jois

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X