Search
  • Follow NativePlanet
Share
» »ಜೋಗಿನಿ ಜಲಪಾತ ಎಲ್ಲಿದೆ ಗೊತ್ತಾ?

ಜೋಗಿನಿ ಜಲಪಾತ ಎಲ್ಲಿದೆ ಗೊತ್ತಾ?

ಭಾರತದ ಅತ್ಯುತ್ತಮ ಹನಿಮೂನ್‌ ತಾಣಗಳಲ್ಲಿ ಮನಾಲಿ ಕೂಡ ಒಂದು. ವರ್ಷಪೂರ್ತಿ ದಂಪತಿಗಳು ಮನಾಲಿಯಲ್ಲಿ ತಮ್ಮ ಸಮಯವನ್ನು ಆನಂದಿಸಬಹುದು. ಬಿಳಿ ನೀರಿನ ರಾಫ್ಟಿಂಗ್, ಟ್ರೆಕಿಂಗ್, ಪ್ಯಾರಾ ಗ್ಲೈಡಿಂಗ್, ಝೋರ್ಬಿಂಗ್, ಸ್ಕೀಯಿಂಗ್, ಕುದುರೆ ಸವಾರಿ ಮುಂತಾದ ಸಾಹಸ ಕ್ರೀಡೆಗಳಿಗೆ ಮನಾಲಿ ಹೆಸರುವಾಸಿಯಾಗಿದೆ. ಇಲ್ಲಿನ ವಾತಾವರಣವು ಪ್ರತಿಯೊಬ್ಬರನ್ನು ರೋಮಾಂಚನವಾಗಿಸುತ್ತದೆ. ಇವುಗಳನ್ನೆಲ್ಲಾ ಹೊರತುಪಡಿಸಿ ಮನಾಲಿಯಲ್ಲಿ ಇನ್ನೂ ಸಾಕಷ್ಟು ತಾಣಗಳಿವೆ. ಅವುಗಳಲ್ಲಿ ಜೋಗಿನಿ ಜಲಪಾತ ಕೂಡಾ ಒಂದು. ಹಾಗಾದರೆ ಬನ್ನಿ ಆ ಜೋಗಿನಿ ಜಲಪಾತದ ವಿಶೇಷತೆಗಳು ಏನು ಅನ್ನೋದನ್ನು ತಿಳಿಯೋಣ.

ಜೋಗಿನಿ ಜಲಪಾತ

ಜೋಗಿನಿ ಜಲಪಾತ

PC: The.sgr

ಜೋಗಿನಿ ಅಥವಾ ಜೋಗ್ನಿ ಜಲಪಾತವು ಹಿಮಾಚಲ ಪ್ರದೇಶದ ವಸಿಷ್ಠ ಹಳ್ಳಿಯ ಬಳಿಯಿರುವ ಸುಂದರ ಜಲಪಾತವಾಗಿದೆ. ಈ ಜಲಪಾತ ಬೀಳುವ ಕೆಳಭಾಗದಲ್ಲಿ ಒಂದು ಪೂಲ್ ರೂಪುಗೊಂಡಿದೆ. ಇಲ್ಲಿಗೆ ಭೇಟಿ ನೀಡುವವರು ಈ ಪೂಲ್‌ನ ನೀರಿನಲ್ಲಿ ಆಟವಾಡ ಬಹುದು, ಕಾಲಕಳೆಯಬಹುದು. ಇದು ಮನಾಲಿಯಲ್ಲಿ ಭೇಟಿ ನೀಡುವ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ .

150 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ

150 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ

PC:Dipeshmehta
ವಸಿಷ್ಠ ಗ್ರಾಮದ ಉತ್ತರದ ತುದಿಯಲ್ಲಿರುವ ಜೋಗಿನಿ ಜಲಪಾತವು ಗ್ರಾಮದ ಗಡಿಯಲ್ಲಿರುವ ಈ ಜಲಪಾತವು ಸುಮಾರು 150 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ. ಈ ಸ್ಥಳವು ಟ್ರಕ್ಕಿಂಗ್ ಪ್ರೀಯರಿಗೆ ಸೂಕ್ತವಾಗಿದೆ. ವಸಿಷ್ಠ ದೇವಾಲಯದಿಂದ ಟ್ರೆಕ್ಕಿಂಗ್ ಮೂಲಕ ಈ ಜಲಪಾತವನ್ನು ತಲುಪಬಹುದು.

ಮಗುವಿನ ಕೇಶ ಮುಂಡನೆ ಮಾಡಿಸ್ತಾರೆ

ಮಗುವಿನ ಕೇಶ ಮುಂಡನೆ ಮಾಡಿಸ್ತಾರೆ

PC:Aditya verma
ಈ ಜಲಪಾತದ ಬಳಿ ಒಂದು ಪ್ರವಿತ್ರ ದೇವಸ್ಥಾನವಿದೆ. ಅದನ್ನು ಜೋಗಿನಿ ಮಾತಾ ದೇವಸ್ಥಾನ ಎನ್ನುತ್ತಾರೆ. ಇದು ಜಲಪಾತದ ತಳದಲ್ಲಿದೆ. ಇದು ಸುತ್ತಮುತ್ತಲಿನ ಹಳ್ಳಿಗಳಿಗೆ ಪವಿತ್ರ ಸ್ಥಳವಾಗಿದೆ. ಇಲ್ಲಿ ಸ್ಥಳೀಯರು ತಮ್ಮ ಮಕ್ಕಳನ್ನು ತಮ್ಮ ಮೊದಲ ಬಾರಿ ಕೇಶ ಮುಂಡನ ಮಾಡಲು ಕರೆ ತರುತ್ತಾರೆ. ಇಲ್ಲಿ ಸಾಕಷ್ಟು ಮಂದಿ ತಮ್ಮ ಮಕ್ಕಳ ಕೇಳ ಮುಂಡನೆ ಮಾಡಿಸಿ ಅಲ್ಲಿನ ಪ್ರಸಾದವನ್ನು ಸ್ವೀಕರಿಸಿ ತೆರಳುತ್ತಾರೆ.

ಟ್ರಕ್ಕಿಂಗ್ ಮಾರ್ಗ

ಟ್ರಕ್ಕಿಂಗ್ ಮಾರ್ಗ

ವಸಿಷ್ಠ ದೇವಸ್ಥಾನದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ವಸಿಷ್ಠ ದೇವಸ್ಥಾನವು ಮನಾಲಿಯ ಮುಖ್ಯ ಮಾರುಕಟ್ಟೆ ಪ್ರದೇಶದಿಂದ 2 ಕಿಮೀ ದೂರದಲ್ಲಿದ್ದು, ನೀವು ವಾಹನದಿಂದ 15 ನಿಮಿಷಗಳಲ್ಲಿ ದೇವಾಲಯದ ಪಾರ್ಕಿಂಗ್ ಪ್ರದೇಶವನ್ನು ತಲುಪಬಹುದು. ವಸಿಷ್ಠ ದೇವಾಲಯದ ಸಂಕೀರ್ಣಕ್ಕೆ ಭೇಟಿ ನೀಡಿದ ನಂತರ ನೀವು ಚಾರಣವನ್ನು ಪ್ರಾರಂಭಿಸಬಹುದು. ಚಾರಣ ಮಾರ್ಗವು ಕಿರಿದಾಗಿದ್ದು ದೇವಾಲಯದ ಬದಿಯಲ್ಲಿ ಹಾದುಹೋಗುತ್ತದೆ ಮತ್ತು ಇದು ಸೇಬು ಆರ್ಕಿಡ್‌ಗಳು, ಎತ್ತರದ ಪೈನ್ ಮರಗಳು ಸಣ್ಣ ನೀರಿನ ಹೊಳೆಗಳ ಮೂಲಕ ಹಾದುಹೋಗುತ್ತದೆ. ಕೆಲವು ರೆಸ್ಟೋರೆಂಟ್‌ಗಳು ಮತ್ತು ಅತಿಥಿ ಮನೆಗಳು ಕೂಡಾ ಲಭ್ಯವಿವೆ.

ಬಿಸಿ ನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿ

ಬಿಸಿ ನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿ

ವಸಿಷ್ಠ ದೇವಾಲಯದಿಂದ ಬರೀ ಎರಡು ಗಂಟೆಗಳಲ್ಲಿ ಈ ಚಾರಣವನ್ನು ಪೂರ್ತಿ ಮಾಡಬಹುದು. ನೀವು ವಸಿಷ್ಠ ದೇವಾಲಯದಲ್ಲಿರುವ ಬಿಸಿ ನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿ ಜೋಗಿನಿ ವಾಟರ್‌ ಫಾಲ್ಸ್‌ನ್ನು ಅರ್ಧ ದಿನದಲ್ಲಿ ಮುಗಿಸಬಹುದು. ಇನ್ನುಳಿದ ಅರ್ಧ ದಿನದಲ್ಲಿ ನೀವು ಅಲ್ಲಿನ ಸುಂದರ ಪರಿಸರದ ಫೋಟೋ ಕ್ಲಿಕ್ಕಿಸಬಹುದು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ವರ್ಷಪೂರ್ತಿ ಪ್ರವಾಸಿಗರು ಕುಲ್ಲು ಮನಾಲಿಗೆ ಭೇಟಿ ನೀಡುತ್ತಾರೆ. ಬೇಸಿಗೆ ತಿಂಗಳುಗಳಲ್ಲಿ ಹೆಚ್ಚಿನ ಪ್ರವಾಸಿಗರು ಶಾಲೆಯ ರಜಾ ದಿನಗಳಿಂದ ಮನಾಲಿಗೆ ಭೇಟಿ ನೀಡುತ್ತಾರೆ. ಆದರೆ ಇದು ಮನಾಲಿಗೆ ಭೇಟಿ ನೀಡಲು ಮಳೆಗಾಲ ಉತ್ತಮ ಕಾಲವಲ್ಲ. ಜೋಗಿನಿ ಜಲಪಾತಕ್ಕೂ ಭೇಟಿ ನೀಡಲು ಮಳೆಗಾಲ ಸೂಕ್ತವಲ್ಲ. ಈ ಸ್ಥಳವು ಜಾರುವುದರಿಂದ ಬಹಳ ಅಪಾಯಕಾರಿಯಾಗಿರುತ್ತದೆ. ನೀರಿನ ಹರಿವು ಜಾಸ್ತಿಯಾಗಿರುತ್ತದೆ. ಹಾಗಾಗಿ ಯಾವುದೇ ಸಾಹಸ ಕ್ರಿಯೆಗೆ ಕೈ ಹಾಕದಿರುವುದೇ ಒಳ್ಳೆಯದು. ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ಹಿಡಿಂಬಿ ದೇವಸ್ಥಾನ

ಮಹಾಭಾರತದ ಮಹಾಕಾವ್ಯದ ಪಾಂಡವರಲ್ಲಿ ಒಬ್ಬರಾದ ಹಿಡಿಂಬದ ಸಹೋದರಿ ಮತ್ತು ಭೀಮಾ ಪತ್ನಿ ಹಿಡಿಂಬಿ ದೇವಿಗೆ ಈ ದೇವಸ್ಥಾನ ಸಮರ್ಪಿಸಲಾಗಿದೆ. ದಂಘ್ರಿ ವನ ವಿಹಾರ ಎಂದು ಕರೆಯಲ್ಪಡುವ ದಟ್ಟವಾದ ಕಾಡಿನ ಮಧ್ಯದಲ್ಲಿದೆ ಮತ್ತು ಕಾಡಿನ ಹೆಸರಿನಿಂದ ಮಾತ್ರ ಈ ದೇವಸ್ಥಾನವು ತನ್ನ ಹೆಸರನ್ನು ಪಡೆದುಕೊಳ್ಳುತ್ತದೆ. 1553 ರಲ್ಲಿ ರಾಜ ಬಹದ್ದೂರ್ ಸಿಂಗ್ ಅವರು ಈ ದೇವಸ್ಥಾನವನ್ನು ನಿರ್ಮಿಸಿದ್ದು, ಮನಾಲಿಯ ಪ್ರಮುಖ ಧಾರ್ಮಿಕ ತಾಣವಾಗಿದೆ. ಪಗೋಡ ಶೈಲಿಯಲ್ಲಿರುವ ಈ ದೇವಾಲಯದಲ್ಲಿ ಯಾವುದೇ ದೇವರ ಮೂರ್ತಿ ಇಲ್ಲ. ಬದಲಾಗಿ ಪಾದವನ್ನು ಪೂಜಿಸಲಾಗುತ್ತಿದೆ.

ವಸಿಷ್ಠ ದೇವಾಲಯ

ವಸಿಷ್ಠ ದೇವಾಲಯ

PC: Balajijagadesh
ಮನಾಲಿಯ ವಸಿಷ್ಠ ದೇವಾಲಯವು ಬಿಯಸ್ ನದಿಗೆ ಅಡ್ಡಲಾಗಿದೆ. ರಾಮನ ಕುಲ ಗುರುವಾಗಿದ್ದ ವಸಿಷ್ಠರನ್ನು ಇಲ್ಲಿ ಪೂಜಿಸಲಾಗುತ್ತದೆ. ಇದು ಮನಾಲಿಯಲ್ಲಿ ಭೇಟಿ ನೀಡುವ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ವಶಿಷ್ಟ ದೇವಾಲಯ 4000 ಕ್ಕಿಂತಲೂ ಹೆಚ್ಚು ವರ್ಷಗಳಷ್ಟು ಹಳೆಯದಾಗಿದೆ ಎಂದು ನಂಬಲಾಗಿದೆ. ದೇವಾಲಯದ ಒಳಗಡೆ ರಿಷಿಯು ಪಂಚೆ ಧರಿಸಿರುವ ಕಪ್ಪು ಕಲ್ಲಿನ ವಿಗ್ರಹವಿದೆ. ವಸಿಷ್ಠ ದೇವಾಲಯದಲ್ಲಿ ಅತ್ಯುತ್ತಮ ಮತ್ತು ಸುಂದರವಾದ ಮರದ ಕೆತ್ತನೆಗಳನ್ನು ಕಾಣಬಹುದು. ಈ ದೇವಾಲಯದ ಆಂತರಿಕ ಶೈಲಿಯು ಸಾಂಪ್ರದಾಯಿಕವಾಗಿ ಪುರಾತನ ಚಿತ್ರಕಲೆ ಮತ್ತು ಚಿತ್ರಣದೊಂದಿಗೆ ಅಲಂಕರಿಸಲ್ಪಟ್ಟಿದೆ.

ಸೋಲಾಂಗ್ ಕಣಿವೆ

ಸ್ಥಳೀಯವಾಗಿ ಸೋಲಾಂಗ್ ಎಂದು ಕರೆಯಲ್ಪಡುವ ಸೋಲಾಂಗ್ ಕಣಿವೆ ಮನಾಲಿಯ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ಹಿಮಾಚಲ ಪ್ರದೇಶದ ಸ್ಕೀಯಿಂಗ್, ಪರ್ವತಾರೋಹಣ ಮತ್ತು ಚಾರಣ ಚಟುವಟಿಕೆಗಳಿಗೆ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಸೋಲಾಂಗ್ ಕಣಿವೆ ಸೋಲಾಂಗ್ ಗ್ರಾಮ ಮತ್ತು ಬಿಯಾಸ್ ಕುಂಡ್ ನಡುವೆ ನೆಲೆಗೊಂಡಿದೆ. ಇದು ಸುತ್ತಮುತ್ತಲಿನ ಹಿಮಪಾತದ ಪರ್ವತಗಳು ಮತ್ತು ಹಿಮನದಿಗಳ ವಿಹಂಗಮ ನೋಟಗಳನ್ನು ನೀಡುತ್ತದೆ. ಇದು ಸಮುದ್ರ ಮಟ್ಟದಿಂದ 8500 ಅಡಿ ಎತ್ತರದಲ್ಲಿದೆ ಮತ್ತು ಹಸಿರು ದಟ್ಟವಾದ ಕಾಡುಗಳಿಂದ ಆವೃತವಾಗಿದೆ. ಚಳಿಗಾಲದ ಸ್ಕೀಯಿಂಗ್ ಹಬ್ಬವನ್ನು ಸೋಲಾಂಗ್ ಕಣಿವೆಯಲ್ಲಿ ಆಯೋಜಿಸಲಾಗುತ್ತದೆ. ಸ್ಕೀಯಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ಇಲ್ಲಿ ಆಯೋಜಿಸಲಾಗುವ ಎರಡು ಮುಖ್ಯ ಚಟುವಟಿಕೆಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X