Search
  • Follow NativePlanet
Share
» »ಜೋಗೇಶ್ವರಿ ಮಾತ ; ಇಲ್ಲಿಗೆ ಹೋದ್ರೆ ನಿಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರುತ್ತಂತೆ

ಜೋಗೇಶ್ವರಿ ಮಾತ ; ಇಲ್ಲಿಗೆ ಹೋದ್ರೆ ನಿಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರುತ್ತಂತೆ

ವಿವಾಹಿತ ಮಹಿಳೆಯರು ಹೆಚ್ಚಿನವರು ತಮ್ಮ ಮಾಂಗಲ್ಯ ಗಟ್ಟಿಯಾಗಿರಲಿ, ಪತಿಯ ಆಯಸ್ಸು ಚೆನ್ನಾಗಿರಲಿ ಎಂದು ದೇವರನ್ನು ಪೂಜಿಸುತ್ತಾರೆ. ಹಾಗಾಗಿ ಅನೇಕ ದೇವಾಲಯಗಳಿಗೆ ಭೇಟಿ ನೀಡುತ್ತಾ ಇರುತ್ತಾರೆ. ಈ ಮಧ್ಯೆ ಮುಂಬೈಯಲ್ಲಿ ಒಂದು ಪ್ರಾಚೀನ ದೇವಾಲಯವು ಮಹಿಳೆಯರನ್ನು ತನ್ನತ್ತ ಆಕರ್ಷಿಸುತ್ತಿದೆ. ವಿಶೇಷವಾಗಿ ಕಾರ್ತೀಕ ಮಾಸದಲ್ಲಿ, ಈ ದೇವಾಲಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಗುಹಾದೇವಾಲಯ

ಗುಹಾದೇವಾಲಯ

PC: youtube

ಮುಂಬೈಯಲ್ಲಿರುವ ಜೋಗೇಶ್ವರಿ ಮಾತ ದೇವಾಲಯವು ಅತ್ಯಂತ ಹಳೆಯ ದೇವಾಲಯವಾಗಿದೆ. ಇದೊಂದು ಗುಹಾಲಯವಾಗಿದೆ. ಈ ದೇವಾಲಯದಿಂದಾಗಿ ಆ ಊರಿಗೆ ಜೋಗೇಶ್ವರಿ ಎನ್ನುವ ಹೆಸರು ಬಂದಿತು. ಇಲ್ಲಿನ ದೇವಿಯು ಅತ್ಯಂತ ಮಹಿಮಾನ್ವಿತಳು ಎನ್ನುವುದು ಇಲ್ಲಿನ ಜನರ ನಂಬಿಕೆ.

ಇಲ್ಲಿ ತಮ್ಮ ಕೋರಿಕೆ ಈಡೇರಿದರೆ ಮಣ್ಣಿನ ಗೊಂಬೆಯನ್ನು ಹರಕೆ ಸಲ್ಲಿಸುತ್ತಾರೆ ಭಕ್ತರುಇಲ್ಲಿ ತಮ್ಮ ಕೋರಿಕೆ ಈಡೇರಿದರೆ ಮಣ್ಣಿನ ಗೊಂಬೆಯನ್ನು ಹರಕೆ ಸಲ್ಲಿಸುತ್ತಾರೆ ಭಕ್ತರು

ಜನರ ನಂಬಿಕೆ

ಜನರ ನಂಬಿಕೆ

PC: youtube

ಈ ದೇವಿಯು ತಮ್ಮ ಮಾಂಗಲ್ಯವನ್ನು ಗಟ್ಟಿಯಾಗಿಸುತ್ತಾಳೆ ಎನ್ನುವ ನಂಬಿಕೆ ಮಹಿಳೆಯರದ್ದು. ಹಾಗಾಗಿ ಮುಂಬೈ ಮಾತ್ರವೇ ಅಲ್ಲ ದೇಶದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಮಾಡುತ್ತಾರೆ.

೫ನೇ ಶತಮಾನದಲ್ಲಿ ನಿರ್ಮಿಸಿದ್ದು

೫ನೇ ಶತಮಾನದಲ್ಲಿ ನಿರ್ಮಿಸಿದ್ದು

PC: youtube

ಈ ದೇವಿಯು ಮುಂಬೈನ ಹಲವು ಪ್ರಾಂತ್ಯದ ಜನರಿಗೆ ಕುಲದೈವವಾಗಿದೆ. ಈ ದೇವಾಲಯವನ್ನು ಯಾವಾಗ ನಿರ್ಮಿಸಿದರು ಎನ್ನುವ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಆದರೆ ಅಲ್ಲಿ ದೊರೆತಿರುವ ಕೆಲವು ಆಧಾರದ ಮೇಲೆ ಆ ದೇವಾಲಯವನ್ನು ೫ ನೇಶ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.

ನಂದಿಹಿಲ್ಸ್‌ನಲ್ಲಿ ಬೆಳ್ಳಂಬೆಳಗ್ಗೆ ಬೆಟ್ಟದ ಬಿರಿಯಾನಿನಂದಿಹಿಲ್ಸ್‌ನಲ್ಲಿ ಬೆಳ್ಳಂಬೆಳಗ್ಗೆ ಬೆಟ್ಟದ ಬಿರಿಯಾನಿ

ಅಜಂತಾ, ಎಲ್ಲೋರ ಗುಹೆ

ಅಜಂತಾ, ಎಲ್ಲೋರ ಗುಹೆ

PC: youtube

ಇನ್ನೂ ಕೆಲವು ಇದು ಅಜಂತಾ, ಎಲ್ಲೋರ ಗುಹೆಯನ್ನು ನಿರ್ಮಿಸಿದ ಸಂದರ್ಭದಲ್ಲಿ ನಿರ್ಮಿಸಲಾಗಿದ್ದು ಎನ್ನುತ್ತಾರೆ. ಇದಕ್ಕೆ ಕಾರಣ ಈ ದೇವಾಲಯವು ಅಜಂತಾ , ಎಲ್ಲೋರ ಗುಹೆಯನ್ನೇ ಹೋಲುತ್ತದೆ.

ಶಿಲ್ಪಕಲಾಕೃತಿಗಳು

ಶಿಲ್ಪಕಲಾಕೃತಿಗಳು

PC: youtube

ಅಜಂತಾ, ಎಲ್ಲೋರ ಗುಹೆಯೊಳಗೆ ಇರುವ ಶಿಲ್ಪ ಕಲಾಕೃತಿಯು, ಈ ದೇವಾಲಯದಲ್ಲಿರುವ ಶಿಲ್ಪಕಲಾಕೃತಿಯನ್ನು ಹೋಲುತ್ತದೆ. ಜೊತೆಗೆ ಅಜಂತಾ, ಎಲ್ಲೋರ ಗುಹೆಯನ್ನು ನಿರ್ಮಿಸಿದ ಕಾರ್ಮಿಕರೇ ಈ ಗುಹೆಯನ್ನು ನಿರ್ಮಿಸಿದರು ಎನ್ನಲಾಗುತ್ತದೆ.

ಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದುಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದು

ಇತರ ದೇವರುಗಳು

ಇತರ ದೇವರುಗಳು

PC: youtube

ಜೋಗೇಶ್ವರಿ ಮಂದಿರಕ್ಕೆ ಬರಲು ಮುಂಬೈನ ಹಲವು ಪ್ರಾಂತ್ಯಗಳಿಂದ ಬಸ್‌ ವ್ಯವಸ್ಥೆಗಳಿವೆ. ಲೋಕಲ್ ಟ್ರಾನ್ಸ್‌ಪೋರ್ಟ್‌ಗಳೂ ಇವೆ. ಇಲ್ಲಿ ಜೋಗೇಶ್ವರಿ ದೇವಿಯ ಜೊತೆಗೆ ಪರಮೇಶ್ವರ ಹಾಗೂ ಗಣೇಶನ ವಿಗ್ರಹವನ್ನೂ ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X