Search
  • Follow NativePlanet
Share
» »5 ನೇ ಶತಮಾನದ ಅತ್ಯಂತ ಮಾಹಿಮಾನ್ವಿತ ದೇವಾಲಯವಿದು..

5 ನೇ ಶತಮಾನದ ಅತ್ಯಂತ ಮಾಹಿಮಾನ್ವಿತ ದೇವಾಲಯವಿದು..

ನಮ್ಮ ದೇಶ ದೇವಾಲಯಗಳು ಕೇವಲ ಪೂಜೆ, ಪುನಸ್ಕಾರಕ್ಕೆ ಮಾತ್ರವಲ್ಲ. ಕೆಲವು ದೇವಾಲಯಗಳಲ್ಲಿನ ದೇವತಾ ಮೂರ್ತಿಗಳು ಕೆಲವು ವಿಚಿತ್ರಗಳನ್ನು, ಪವಾಡಗಳನ್ನು ಆಗಾಗ ಮಾಡುತ್ತಿರುತ್ತವೆ. ಅಂತಹ ದೇವಾಲಯಗಳಲ್ಲಿ ಮುಂಬೈನ ದೇವಾಲಯವು ಒಂದು. ಆ ದೇವಾಲಯವು ಅತ್ಯಂ

ನಮ್ಮ ದೇಶ ದೇವಾಲಯಗಳು ಕೇವಲ ಪೂಜೆ, ಪುನಸ್ಕಾರಕ್ಕೆ ಮಾತ್ರವಲ್ಲ. ಕೆಲವು ದೇವಾಲಯಗಳಲ್ಲಿನ ದೇವತಾ ಮೂರ್ತಿಗಳು ಕೆಲವು ವಿಚಿತ್ರಗಳನ್ನು, ಪವಾಡಗಳನ್ನು ಆಗಾಗ ಮಾಡುತ್ತಿರುತ್ತವೆ. ಅಂತಹ ದೇವಾಲಯಗಳಲ್ಲಿ ಮುಂಬೈನ ದೇವಾಲಯವು ಒಂದು. ಆ ದೇವಾಲಯವು ಅತ್ಯಂತ ಮಾಹಿಮಾನ್ವಿತ ಹಾಗು ಪುರಾತನವಾದುದು. ಈ ಪವಿತ್ರವಾದ ದೇವಾಲಯವನ್ನು 5 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನಲಾಗಿದೆ.

ಕಾನ್ಹೇರಿಯ ಗುಹೆ ಆಹಾ ಎಂಥಹ ಸೊಬಗು!ಕಾನ್ಹೇರಿಯ ಗುಹೆ ಆಹಾ ಎಂಥಹ ಸೊಬಗು!

ಇದೊಂದು ಗುಹಾ ದೇವಾಲಯ ಕೂಡ ಆಗಿದೆ. ಈ ಸನ್ನಿಧಿಯಲ್ಲಿ ನೆಲೆಸಿರುವವಳು ಜೋಗೇಶ್ವರಿ ದೇವಿ. ಈ ತಾಯಿ ಇರುವ ಗುಹೆಯು ಹಿಂದು ಹಾಗು ಬೌದ್ಧ ಮಹಾಯಾನಗಳ ನಂಟನ್ನು ಹೊಂದಿದೆ. ಈ ಗುಹಾ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿದರೆ ಮನಸ್ಸು ಪ್ರಶಾಂತವಾಗುತ್ತದೆ.

ಭಾರತದ ವಿಸ್ಮಯ ಪ್ರಕೃತಿಯ ಅನಾವರಣ: ಒಮ್ಮೆ ಭೇಟಿ ಕೊಡಿಭಾರತದ ವಿಸ್ಮಯ ಪ್ರಕೃತಿಯ ಅನಾವರಣ: ಒಮ್ಮೆ ಭೇಟಿ ಕೊಡಿ

ಪ್ರಸ್ತುತ ಲೇಖನದಲ್ಲಿ ಜೋಗೇಶ್ವರಿ ಗುಹಾ ದೇವಾಲಯದ ಬಗ್ಗೆ ಮತಷ್ಟು ಮಾಹಿತಿಯನ್ನು ಪಡೆಯೋಣ.

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಈ ಪುರಾತನವಾದ ಜೋಗೇಶ್ವರಿ ದೇವಾಲಯವು ಮುಂಬೈ ಮಹಾನಗರದ ಪ್ರಸಿದ್ಧ ಸ್ಥಳವೊಂದರ ಹೆಸರಾಗಿದ್ದು, ಆ ಹೆಸರು ಅಲ್ಲಿರುವ ಅತಿ ಹಳೆಯದಾದ ಜೋಗೇಶ್ವರಿ ಗುಹೆಗಳ ಸಮೂಹದಿಂದಲೇ ಬಂದಿರುವುದಾಗಿದೆ.


Aalokmjoshi

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಮೂಲತಃ ಜೋಗೇಶ್ವರಿ ದೇವಿಯು ಅತ್ಯಂತ ಮಾಹಿಮಾನ್ವಿತ ದೇವಿ ಎಂದು ಇಲ್ಲಿ ಪೂಜಿಸಲಾಗುತ್ತದೆ. ಪಾರ್ವತಿ ಅವತಾರವಾದ ಜೋಗೇಶ್ವರಿಯನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಪೂಜಿಸುತ್ತಾರೆ. ಹಾಗಾಗಿಯೇ ಈ ಪ್ರದೇಶಕ್ಕೆ ಜೋಗೇಶ್ವರಿ ಎಂಬ ಹೆಸರು ಬಂದಿದೆ.


Vks0009

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಿಯು ಎಷ್ಟು ಪ್ರಸಿದ್ಧವಾದವಳು ಎಂದರೆ ಮುಂಬೈ ನಗರ ಹಾಗು ಸುತ್ತಮುತ್ತಲಿನ ಕೆಲವು ಸ್ಥಳೀಯ ಮರಾಠಿ ಕುಟುಂಬದವರ ಕುಲದೇವಿಯಾಗಿ ಜೋಗೇಶ್ವರಿಯನ್ನು ಆರಾಧಿಸುತ್ತಾರೆ. ಹಾಗೆಯೇ ಗುಜರಾತಿನಲ್ಲಿಯೂ ಕೂಡ ಈ ತಾಯಿಯನ್ನು ಆರಾಧಿಸುತ್ತಾರೆ.

Aalokmjoshi

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಕೆಲವು ಇತಿಹಾಸದ ಪ್ರಕಾರ, ಈ ಗುಹಾ ದೇವಾಲಯವು ಭಾರತದ ಅತ್ಯಂತ ಪುರಾತನವಾದ ಹಾಗು ಬೃಹತ್ ಗಾತ್ರದ ಗುಹಾ ದೇವಾಲಯವಾಗಿದೆ. ಈ ಗುಹಾ ದೇವಾಲಯವು ಅತ್ಯಂತ ವಿಶೇಷವಾಗಿದ್ದು, ಹಲವಾರು ಭಕ್ತರು ಇಲ್ಲಿ ತಾಯಿಯನ್ನು ಆರಾಧಿಸುತ್ತಾರೆ.


Vks0009

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಒಂದು ಕಾಲದಲ್ಲಿ ಅಂದರೆ 5 ನೇ ಶತಮಾನದಲ್ಲಿ ವಕಟಕ ಎಂಬ ಸಾಮ್ರಾಜ್ಯದ ಅಧಿಪತ್ಯದಲ್ಲಿ ಬೌದ್ಧ ಗುಹೆಗಳ ನಿರ್ಮಾಣವಾಗಿತ್ತು. ಇದೇ ಸಮಯದಲ್ಲಿ ಮಹಾರಾಷ್ಟ್ರದ ಅಜಂತಾ ಮತ್ತು ಎಲ್ಲೋರ ಗುಹೆಗಳ ರಚನ ಕಾರ್ಯಗಳು ಸ್ಥಗಿತಗೊಂಡು ಶಿಲ್ಪಕಾರರು ಮುಂಬೈ ಪ್ರದೇಶದತ್ತ ಸಾಗಿದರಂತೆ.


Vks0009

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಈ ಸಮಯದಲ್ಲಿ ಮುಂಬೈನ ಈ ಪ್ರದೇಶದಲ್ಲಿ ಬಂಡೆ ಕಡೆದು ದೇವಾಲಯವನ್ನು ನಿರ್ಮಣ ಮಾಡುವುದಕ್ಕೆ ಹೆಚ್ಚು ಮಹತ್ವ ಪಡೆದುದ್ದರಿಂದ ಆ ಸಮಯದಲ್ಲಿ ಜೋಗೇಶ್ವರಿ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ ಎಂದು ಭಾವಿಸಲಾಗಿದೆ.


Aalokmjoshi

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಪ್ರಸ್ತುತ ಮುಂಬೈ ನಗರದ ಜೋಗೇಶ್ವರಿ ಬಡಾವಣೆಯ ಹೃದಯ ಭಾಗದಲ್ಲಿ ಈ ಪ್ರಸಿದ್ಧವಾದ ದೇವಾಲಯವಿದ್ದು, ಸಾಕಷ್ಟು ಇತಿಹಾಸ ಪ್ರಿಯರು ಕೂಡ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.


Vks0009

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಅಂದೇರಿಯ ಉತ್ತರ ದಿಕ್ಕಿನಲ್ಲಿ ಸ್ಥಿತವಿರುವ ಜೋಗೇಶ್ವರಿ ತೆರಳಲು ಬಸ್ಸು ನಿಲ್ದಾಣ, ರೈಲು ನಿಲ್ದಾಣ ಹಾಗು ವಿಮಾನ ನಿಲ್ದಾಣಗಳಿಂದ ಸಾಕಷ್ಟು ಬಾಡಿಗೆ ರಿಕ್ಷಾಗಳು ಹಾಗು ಟ್ಯಾಕ್ಸಿಗಳು ದೊರೆಯುತ್ತವೆ.

Vks0009

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಈ ದೇವಾಲಯದಲ್ಲಿ ಜೋಗೇಶ್ವರಿ ದೇವಿಯೊಬ್ಬಳೇ ಅಲ್ಲದೇ ಮಹಾ ಶಿವನು ಕೂಡ ನೆಲೆಸಿದ್ದಾನೆ. ಹಾಗಾಗಿಯೇ ದೇವಿಯ ಭಕ್ತರ ಜೊತೆ ಜೊತೆಗೆ ಪರಮಶಿವನ ಅನುಯಾಯಿಗಳೂ ಕೂಡ ಈ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಮಾಡುವುದುಂಟು.


Vks0009

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಒಂದು ಕಾಲದಲ್ಲಿ ಈ ಗುಹೆಗಳನ್ನು ಅಂಬೋಲಿ ಗುಹೆ ಎಂದು ಕರೆಯಲಾಗುತ್ತಿತ್ತು. ಇದಕ್ಕೆ ಪ್ರಬಲವಾದ ಕಾರಣ ಸಮೀಪದಲ್ಲಿಯೇ ಇರುವ ಅಂಬೋಲಿ ಎಂಬ ಹೆಸರು. ನಂತರ ಇದು ಕ್ರಮೇಣವಾಗಿ ಜೋಗೇಶ್ವರಿ ಎಂಬ ಹೆಸರು ಚಾಲ್ತಿಯಲ್ಲಿ ಬಂದಿತು.

Vks0009

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಪ್ರತಿ ಶಿವಾರಾತ್ರಿ ಹಬ್ಬ ಹಾಗು ಕಾರ್ತಿಕ ಸೋಮವಾರಗಳಂದು ಇಲ್ಲಿ ಜನಸಾಗರವೇ ನೆರೆದಿರುತ್ತದೆ. ಉಳಿದ ಸಾಮಾನ್ಯ ದಿನಗಳಲ್ಲಿಯೂ ಕೂಡ ಹಲವಾರು ಭಕ್ತರು ಆಗಾಗ ಭೇಟಿ ನೀಡುತ್ತಿರುತ್ತಾರೆ.

vks0009

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಇಲ್ಲಿ ಶಿವನಿಗೆ ನೆಚ್ಚಿನ ವಸ್ತುಗಳಾದ ಬಿಲ್ವ ಪತ್ರೆ, ಹಾಲು ಮುಂತಾದವುಗಳು ಈ ಗುಹಾ ಸಂಕೀರ್ಣ ಪ್ರವೇಶಿಸುವ ಮೊದಲೇ ದೊರೆಯುತ್ತದೆ. ಈ ಗುಹಾ ದೇವಾಲಯದ ಸುತ್ತಲೂ ಬಂಡೆಗಳಿಂದ ಅವೃತ್ತಗೊಂಡಿರುವುದನ್ನು ಕಾಣಬಹುದಾಗಿದೆ.

Vks0009

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಗುಹಾ ದೇವಾಲಯವನ್ನು ಪ್ರವೇಶಿಸುತ್ತಿದಂತೆ ಮೊದಲು ಜೋಗೇಶ್ವರಿ ದೇವಿಯ ದರ್ಶನ ಭಾಗ್ಯ ಪಡೆಯಬಹುದು. ತದನಂದರ ಮುಂದೆ ಸಾಗಿದರೆ ಶಿವನ ಗುಡಿ, ಇನ್ನು ಹಲವಾರು ಹಿಂದು ದೇವತೆಗಳ ಗುಡಿಗಳನ್ನು ಸಹ ಇಲ್ಲಿ ಕಂಡು ಆನಂದಿಸಬಹುದಾಗಿದೆ.

Aalokmjoshi

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ಈ ಗುಹಾ ದೇವಾಲಯದಲ್ಲಿ ಜೋಗೇಶ್ವರಿ ದೇವಿಯ ಜೊತೆ ಜೊತೆಗೆ ಗಣೇಶ, ದತ್ತಾತ್ರೇಯ ಹಾಗು ಆಂಜನೇಯನ ಸನ್ನಿಧಿಗಳನ್ನು ಕೂಡ ಭಕ್ತಾಧಿಗಳು ದರ್ಶನ ಮಾಡಬಹುದು. ಈ ಗುಹೆಯಲ್ಲಿ ಭಕ್ತಿಯು ಅವರಿಸುತ್ತದೆ.

Sainath468

ಜೋಗೇಶ್ವರಿ ದೇವಾಲಯ

ಜೋಗೇಶ್ವರಿ ದೇವಾಲಯ

ನೀವು ಸಹ ಈ ಮಾಹಿಮಾನ್ವಿತವಾದ ದೇವಾಲಯಕ್ಕೆ ತೆರಳಬೇಕಾದರೆ ಒಮ್ಮೆ ಮಹಾರಾಷ್ಟ್ರಕ್ಕೆ ತೆರಳಿದಾಗ ತಪ್ಪದೇ ಈ ಜೋಗೇಶ್ವರಿ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ಬನ್ನಿ. ಮಹಾರಾಷ್ಟ್ರಕ್ಕೆ ಬೆಂಗಳೂರಿನಿಂದ ಹಲವಾರು ರೈಲ್ವೆ, ವಿಮಾನ ಸಂಪರ್ಕಗಳು ಇದ್ದು, ಸುಲಭವಾಗಿ ಈ ದೇವಾಲಯಕ್ಕೆ ತೆರಳಬಹುದಾಗಿದೆ.


Vks0009

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X