Search
  • Follow NativePlanet
Share
» »ಮುಂಬೈನ ಏಕೈಕ ಝೂ ಇದು, ಎಂಟ್ರಿ ಟಿಕೇಟ್ ಎಷ್ಟು?

ಮುಂಬೈನ ಏಕೈಕ ಝೂ ಇದು, ಎಂಟ್ರಿ ಟಿಕೇಟ್ ಎಷ್ಟು?

ಮುಂಬೈ ಸುತ್ತಾಡಲು ಹೋಗಿರುವವರು ಅಲ್ಲಿನ ಮೃಗಾಲಯವನ್ನು ನೋಡಿರದೇ ಇರಲಿಕ್ಕಿಲ್ಲ. ಕ್ವೀನ್ಸ್ ಗಾರ್ಡನ್ಸ್ ಎಂದೇ ಕರೆಯಲ್ಪಡುವ ರಣಚಿ ಬಾಘ್ ಎಂದು ಹಿಂದೆ ಕರೆಯಲಾಗುತ್ತಿದ್ದ ಜಿಜಾಬಾಯಿ ಉದ್ಯಾನ ಮುಂಬೈ ನಗರದ ಏಕೈಕ ಮೃಗಾಲಯವಾಗಿದೆ. ಇದರ ಹಿಂದಿನ ಹೆಸರು ಮೂಲ ಬ್ರಿಟಿಷ್ ಹೆಸರು ವಿಕ್ಟೋರಿಯಾ ಗಾರ್ಡನ್. ಈಗ ಇದನ್ನು ವೀರಮಾತ ಜಿಜಾಬಾಯಿ ಭೋಸ್ಲೆ ಉದ್ಯಾನವನ ಮತ್ತು ಝೂ ಎಂದು ಕರೆಯಲಾಗುತ್ತದೆ.

ಶಿವಾಜಿ ಮಹಾರಾಜ್‌ರ ತಾಯಿ ಹೆಸರು

ಶಿವಾಜಿ ಮಹಾರಾಜ್‌ರ ತಾಯಿ ಹೆಸರು

PC: Mayurhulsar

ಮರಾಠ ಸಾಮ್ರಾಜ್ಯದ ನಾಯಕ ಶಿವಾಜಿಯ ತಾಯಿಯ ಹೆಸರಿಡಲಾಗಿದೆ. ಮೃಗಾಲಯವು ನಗರದ ಹೃದಯ ಭಾಗದಲ್ಲಿರುವ ಬೈಕುಲಾದಲ್ಲಿದೆ . 1861 ರಲ್ಲಿ ನಿರ್ಮಾಣಗೊಂಡ ಇದು ಮುಂಬೈನ ಏಕೈಕ ಮೃಗಾಲಯವಾಗಿದ್ದು, ಭಾರತದಲ್ಲೇ ಅತ್ಯಂತ ಹಳೆಯದಾಗಿದೆ.

ಮುತ್ಯಾಲ ಮಡುವು ಬೆಂಗಳೂರಿಗರಿಗೆ ವೀಕೆಂಡ್‌ ಕಳೆಯಲು ಬೆಸ್ಟ್ ಸ್ಪಾಟ್ ಮುತ್ಯಾಲ ಮಡುವು ಬೆಂಗಳೂರಿಗರಿಗೆ ವೀಕೆಂಡ್‌ ಕಳೆಯಲು ಬೆಸ್ಟ್ ಸ್ಪಾಟ್

ಕಾಡುಪ್ರಾಣಿಗಳು

ಕಾಡುಪ್ರಾಣಿಗಳು

PC: Elroy Serrao

ಮೃಗಾಲಯದಲ್ಲಿ, ನೀವು ಸಿಂಹ, ಮಂಗಗಳು, ಮೊಸಳೆಗಳು, ಆನೆಗಳು ಮತ್ತು ಸಿಂಹ, ಹುಲಿ ಇನ್ನಿತರ ಅನೇಕ ಕಾಡು ಪ್ರಾಣಿಗಳನ್ನು ವೀಕ್ಷಿಸಬಹುದು. ಈ ಮೃಗಾಲಯವು ಪಕ್ಷಿಗಳ ಉತ್ತಮ ಸಂಗ್ರಹವನ್ನು ಹೊಂದಿದೆ.

48 ಎಕರೆ ಪ್ರದೇಶದಲ್ಲಿದೆ ಮೃಗಾಲಯ

48 ಎಕರೆ ಪ್ರದೇಶದಲ್ಲಿದೆ ಮೃಗಾಲಯ

PC: Elroy Serrao

ಮೃಗಾಲಯವು ಸುಮಾರು 180 ಸಸ್ತನಿಗಳು, 500 ಹಕ್ಕಿಗಳು, ಮತ್ತು 40 ಸರೀಸೃಪಗಳಿಗೆ ಒಂದು ಧಾಮವಾಗಿದೆ. 48 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಮೃಗಾಲಯ ಸುಮಾರು 3000 ಜಾತಿಯ ಮರಗಳನ್ನು ಹೊಂದಿದೆ. ಅವುಗಳಲ್ಲಿ ಹೆಚ್ಚಿನವು ಅಪರೂಪದವುಗಳಾಗಿವೆ.

ಹನುವಾಂಟಿಯ ದ್ವೀಪದಲ್ಲಿ ಒಂದು ದಿನ ಕಳೆದು ನೋಡಿ ಹನುವಾಂಟಿಯ ದ್ವೀಪದಲ್ಲಿ ಒಂದು ದಿನ ಕಳೆದು ನೋಡಿ

ನೆರಳು ನೀಡುವ ಮರಗಳು

ನೆರಳು ನೀಡುವ ಮರಗಳು

PC: Camaal Mustafa Sikan...

ಪ್ರಾಣಿಗಳ ಸಂಖ್ಯೆಯನ್ನು ಹೋಲಿಸಿದರೆ ಬೊಟಾನಿಕಲ್ ಗಾರ್ಡನ್ ಹೆಚ್ಚಿನ ಸಂಖ್ಯೆ ಮತ್ತು ವೈವಿಧ್ಯತೆಯನ್ನು ಹೊಂದಿದೆ. ಇಲ್ಲಿ ಸಾಕಷ್ಟು ವಿವಿಧ ಜಾತಿಗಳ ದೊಡ್ಡ ಮರಗಳಿದ್ದು, ಪ್ರಾಣಿಗಳಿಗೆ ನೆರಳು ನೀಡುತ್ತವೆ ಜೊತೆಗೆ ಇಲ್ಲಿಗೆ ಭೇಟಿ ನಿಡುವ ಪ್ರವಾಸಿಗರಿಗೂ ನೆರಳನ್ನು ಒದಗಿಸುತ್ತದೆ.

ಟಿಕೇಟ್ ಎಷ್ಟು

ಟಿಕೇಟ್ ಎಷ್ಟು

PC: Rangakuvara

ಈ ಮೃಗಾಲಯವು ಪ್ರತಿದಿನವು ಬೆಳಗ್ಗೆ 9:00 ರಿಂದ ಸಂಜೆ 6:00 ಗಂಟೆ ವರೆಗೆ ತೆರೆದಿರುತ್ತದೆ. ಮುಂಬೈ ಮೃಗಾಲಯದ ಟಿಕೇಟ್ ಶುಲ್ಕಗಳು 3-12 ವರ್ಷದ ಪ್ರತಿ ಮಗುವಿಗೆ 25 ರೂ.12 ವರ್ಷಕ್ಕಿಂತ ಮೇಲ್ಪಟ್ಟವರಿಗೆ 50ರೂ. ನಾಲ್ಕು ಜನರ ಒಂದು ಕುಟುಂಬಕ್ಕೆ 100ರೂ. ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳಿದ್ದ ಸಂದರ್ಭದಲ್ಲಿ ಸಾಮಾನ್ಯ ದರಗಳನ್ನು ವಿಧಿಸಲಾಗುವುದು.

ಪ್ರಿಯಾಂಕಾ ಚೋಪ್ರಾ ವಿವಾಹ ನಡೆದ ಉಮೇದ್ ಭವನ ಅರಮನೆಯಲ್ಲಿ 1 ರಾತ್ರಿ ತಂಗಲು ಬೆಲೆ ಎಷ್ಟು ಗೊತ್ತಾ?ಪ್ರಿಯಾಂಕಾ ಚೋಪ್ರಾ ವಿವಾಹ ನಡೆದ ಉಮೇದ್ ಭವನ ಅರಮನೆಯಲ್ಲಿ 1 ರಾತ್ರಿ ತಂಗಲು ಬೆಲೆ ಎಷ್ಟು ಗೊತ್ತಾ?

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Rangakuvara

ಮೃಗಾಲಯವು ಬೈಕುಲ್ಲಾ ರೈಲ್ವೆ ನಿಲ್ದಾಣಕ್ಕೆ ನಿಖರವಾಗಿ ಮುಂದೆಯೇ ಇದೆ. ಆದ್ದರಿಂದ ಕೇಂದ್ರ ರೈಲ್ವೆ ಮಾರ್ಗವನ್ನು ಬಳಸುವ ಪ್ರವಾಸಿಗರು ಬರೀ ಕೆಲವೇ ಕೆಲವು ನಿಮಿಷಗಳ ಕಾಲ್ನಡಿಗೆಯಲ್ಲಿ ಮೃಗಾಲಯವನ್ನು ತಲುಪುತ್ತೀರಿ. ಪಶ್ಚಿಮ ರೈಲ್ವೇ ಮಾರ್ಗದಲ್ಲಿ ಮುಂಬಯಿ ಸೆಂಟ್ರಲ್ ಹತ್ತಿರದ ಟ್ಯಾಕ್ಸಿ ಆಗಿದ್ದು, ನಿಮ್ಮನ್ನು 10 ರಿಂದ 15 ನಿಮಿಷಗಳಲ್ಲಿ ಮೃಗಾಲಯವನ್ನು ತಲುಪುತ್ತೀರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X