Search
  • Follow NativePlanet
Share
» »ಹುಣ್ಣಿಮೆಯಂದು ಅರಸಿಕೆರೆಯ ಅಜ್ಜಯ್ಯನ ದರ್ಶನ ಪಡೆದ್ರೆ ನೀವೇ ಪುಣ್ಯವಂತರು

ಹುಣ್ಣಿಮೆಯಂದು ಅರಸಿಕೆರೆಯ ಅಜ್ಜಯ್ಯನ ದರ್ಶನ ಪಡೆದ್ರೆ ನೀವೇ ಪುಣ್ಯವಂತರು

ಜೇನುಕಲ್ಲು ಸಿದ್ದೇಶ್ವರ ದೇವಸ್ಥಾನವು ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಯಾದಪುರ, ಅರಸಿಕೆರೆ ತಾಲ್ಲೂಕಿನಲ್ಲಿದೆ. ಈ ದೇವಾಲಯವು ಬಹಳ ಪ್ರಸಿದ್ಧವಾಗಿದೆ.

ಅಮಾವಾಸ್ಯೆ, ಹುಣ್ಣಿಮೆಯಂದು ನೀವು ಈ ಅಜ್ಜಯ್ಯನ ದೇವಸ್ಥಾನಕ್ಕೆ ಭೇಟಿ ನೀಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತಂತೆ. ಇಲ್ಲಿನ ಉತ್ಸವಗಳಲ್ಲಿ ಭಾಗಿಯಾದರೆ ನಿಮ್ಮ ಪಾಪವೆಲ್ಲಾ ಪರಿಹಾರವಾಗುತ್ತದಂತೆ. ಅಂತಹದ್ದೊಂದು ವಿಶೇಷವಾದ ಅಜ್ಜಯ್ಯನ ದೇವಸ್ಥಾನದ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಅಜ್ಜಯ್ಯ ಹೆಸರನ್ನು ನೀವು ಕೇಳಿರಬೇಕಲ್ಲ. ಆದರೆ ಅಜ್ಜಯ್ಯ ಅಂದರೆ ಯಾವ ದೇವರನ್ನು ಹೇಳುತ್ತಾರೆ ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿದ್ದಿರಬಹುದು. ಹಾಗಾದರೆ ಆ ಅಜ್ಜಯ್ಯನ ದೇವಸ್ಥಾನ ಯಾವುದು ಅನ್ನೋದನ್ನು ತಿಳಿಯೋಣ.

ಜೇನುಕಲ್ಲು ಸಿದ್ದೇಶ್ವರ ದೇವಸ್ಥಾನ

ಜೇನುಕಲ್ಲು ಸಿದ್ದೇಶ್ವರ ದೇವಸ್ಥಾನ

PC: Sri Jenukal Siddeshwara Bhakthara Balaga FB

ಜೇನುಕಲ್ಲು ಸಿದ್ದೇಶ್ವರ ದೇವಸ್ಥಾನವು ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಯಾದಪುರ, ಅರಸಿಕೆರೆ ತಾಲ್ಲೂಕಿನಲ್ಲಿದೆ. ಈ ದೇವಾಲಯವು ಬಹಳ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಈ ದೇವಸ್ಥಾನದ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ದೇವರು ಜೇನುಕಲ್ಲು ಸಿದ್ದೇಶ್ವರನು ಅಜ್ಜಯ್ಯಾ, ಸಿದ್ದೇಶ್ವರ ಮುಂತಾದ ಹೆಸರುಗಳಿಂದ ಪ್ರಸಿದ್ಧವಾಗಿದ್ದಾನೆ. ಜನರು ಅಗಾಧವಾದ ಭಕ್ತಿಯಿಂದ, ಈ ದೇವರ ಮೇಲೆ ನಂಬಿ ಇಟ್ಟರೆ ಭಕ್ತರನ್ನು ಖಂಡಿತಾ ಹರಸುತ್ತಾನೆ ಎನ್ನುವುದು ಜನರ ನಂಬಿಕೆ.

ಕುಣಿಗಲ್‌ ಕೆರೆ ಜೊತೆ ಸುತ್ತಮುತ್ತಲಿನ ಈ ತಾಣಗಳನ್ನೆಲ್ಲಾ ನೋಡಿಕುಣಿಗಲ್‌ ಕೆರೆ ಜೊತೆ ಸುತ್ತಮುತ್ತಲಿನ ಈ ತಾಣಗಳನ್ನೆಲ್ಲಾ ನೋಡಿ

ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಭಕ್ತರು ದಂಡು

ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಭಕ್ತರು ದಂಡು

PC: Sri Jenukal Siddeshwara Bhakthara Balaga FB
ಪ್ರತಿ ತಿಂಗಳು ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಈ ಮಂದಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಭಕ್ತರು ಆಗಮಿಸುತ್ತಾರೆ . ಈ ವಿಶೇಷ ದಿನದಂದು ಸಿದ್ದೇಶ್ವರನ ದರ್ಶನ ಪಡೆದ್ರೆ ನಿಮ್ಮ ಇಚ್ಛೆಗಳೆಲ್ಲಾ ಈಡೇರುತ್ತವಂತೆ. 1101 ಮೆಟ್ಟಿಲುಗಳನ್ನು ಹತ್ತಿ ಇಲ್ಲಿನ ಬೆಟ್ಟ ಹತ್ತಿದರೆ ನೀವು ಸಿದ್ದೇಶ್ವರನ ಎರಡು ಪಾದದ ಗುರುತಿನ ದರ್ಶನ ಪಡೆಯಬಹುದು.

ದಂತ ಕಥೆಯ ಪ್ರಕಾರ

ದಂತ ಕಥೆಯ ಪ್ರಕಾರ

PC:Karsolene
ಒಂದು ದಂತಕಥೆಯ ಪ್ರಕಾರ, ಒಮ್ಮೆ ಒಬ್ಬ ಸನ್ಯಾಸಿಯು ಈ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದಾಗ ಓರ್ವ ಮಹಿಳೆಯು ತನ್ನ ಮಗುವನ್ನು ಕಳೆದುಕೊಂಡು ದುಃಖಿಸುತ್ತಿರುತ್ತಾಳೆ. ಆಕೆಯ ಮಗುವಿನ ಸಾವಿಗೆ ಕಾರಣ ತಿಳಿದಾಗ ಗ್ರಾಮಸ್ಥರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ. ಅದನ್ನು ತೊಡೆದುಹಾಕಲು ಸನ್ಯಾಸಿಯು ಸಿದ್ದೇಶ್ವರನನ್ನು ಕುರಿತು ತಪಸ್ಸು ಮಾಡಿ ಜೇನುಕಲ್ಲು ಸಿದ್ಧೇಶ್ವರನನ್ನು (ಶಿವ) ಮೆಚ್ಚಿಸಲು ಸಾಧ್ಯವಾಗುತ್ತದೆ. ಆ ಊರಿನಲ್ಲಿರುವ ಆರೋಗ್ಯದ ಸಮಸ್ಯೆಗಳನ್ನು ತೊಡೆದುಹಾಕುವ ವರವನ್ನು ಕೇಳುತ್ತಾರೆ. ಹೀಗಾಗಿ, ವಿವಿಧ ರೋಗಗಳಿಂದ ಬಳಲುತ್ತಿರುವ ಜನರು ಈ ಸ್ಥಳಕ್ಕೆ ಬಂದರೆ ಗುಣಮುಖರಾಗುತ್ತಾರಂತೆ.

ಜೇನು ಕಲ್ಲು ಹೆಸರು ಬಂದಿದ್ದು ಹೇಗೆ?

ಜೇನು ಕಲ್ಲು ಹೆಸರು ಬಂದಿದ್ದು ಹೇಗೆ?

ಹಿಂದೆ ಎತ್ತರವಾದ ಬೆಟ್ಟದಲ್ಲಿ ಶ್ರೀಯವರ ಸನ್ನಿಧಾನದ ಪಕ್ಕದಲ್ಲಿ ಜೇನುಗೂಡು ಸದಾಕಾಲ ಕಟ್ಟಿರುವುದರಿಂದ ಈ ಕ್ಷೇತ್ರಕ್ಕೆ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಕ್ಷೇತ್ರವೆಂದು ಹೆಸರು ಬಂದಿದೆ. ದೇವತೆಗಳು ಜೇನು ಹುಳುಗಳ ರೂಪದಲ್ಲಿ ಪ್ರತಿಯೊಬ್ಬರನ್ನು ನೋಡುತ್ತಿದ್ದಾರೆ. ಒಂದು ವೇಳೆ ಈ ಕ್ಷೇತ್ರಕ್ಕೆ ಬರುವ ಭಕ್ತರು ಅಪವಿತ್ರವಾಗಿ ಬಂದರೆ ಜೇನುಗೂಡುಗಳು ಎದ್ದು ತೊಂದರೆ ಕೊಡುತ್ತವೆ ಎನ್ನುವುದು ಜನರ ನಂಬಿಕೆ.

ಅಬ್ಬಾ ಈ ಅದ್ಭುತ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು ಅಬ್ಬಾ ಈ ಅದ್ಭುತ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು

ಭಕ್ತರಿಗಾಗಿ ವಿಶೇಷ ಬಸ್‌ ಸೌಲಭ್ಯ

ಭಕ್ತರಿಗಾಗಿ ವಿಶೇಷ ಬಸ್‌ ಸೌಲಭ್ಯ

PC: Sri Jenukal Siddeshwara Bhakthara Balaga FB
ಯಾದಪುರವು ಅರಸಿಕೆರೆಯಿಂದ 6 ಕಿ.ಮೀ ದೂರದಲ್ಲಿದೆ. ಇಲ್ಲಿ ನೀವು ಸರ್ಕಾರಿ ಬಸ್ಸುಗಳು ಅಥವಾ ಆಟೋಗಳ ಮೂಲಕ ತಲುಪಬಹುದು. ಹುಣ್ಣಿಮೆ ಅಥವಾ ಅಮವಾಸ್ಯೆಯ ಸಂದರ್ಭದಲ್ಲಿ, ಇಲ್ಲಿಗೆ ಬರುವ ಭಕ್ತರಿಗಾಗಿ ವಿಶೇಷ ಸರ್ಕಾರಿ ಬಸ್ಗಳನ್ನು ಅಳವಡಿಸಲಾಗುತ್ತದೆ. 3 ಹುಣ್ಣಿಮೆಗೆ ಈ ಕ್ಷೇತ್ರಕ್ಕೆ ಬಂದು ಹರಕೆ ಮಾಡಿಕೊಂಡು ಹೋದರೆ ಅವರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ಹೀಗಾಗಿ ಪ್ರತಿ ಹುಣ್ಣಿಮೆ ಹಾಗೂ ಚೈತ್ರಮಾಸದಲ್ಲಿ ನಡೆಯುವ ಗುರುವಿನ ವೈಭವದ ಜಾತ್ರೆಗೆ ಅಸಂಖ್ಯಾ ಭಕ್ತ ಸಮೂಹವೇ ಇಲ್ಲಿ ಸೇರುತ್ತದೆ.

ಸಿದ್ದೇಶ್ವರ ಉತ್ಸವ

ಸಿದ್ದೇಶ್ವರ ಉತ್ಸವ

PC: Sri Jenukal Siddeshwara Bhakthara Balaga FB
ಪ್ರತಿ ವರ್ಷ ಪ್ರಸಿದ್ಧವಾದ ಶ್ರೀ ಜೇನುಕಲ್ಲು ಸಿದ್ದೇಶ್ವರ ಉತ್ಸವವನ್ನು ಏಪ್ರಿಲ್ / ಜೂನ್ ತಿಂಗಳಲ್ಲಿ ನಡೆಸಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ನಡೆಯುವ ರಥೋತ್ಸವ, ಆರತಿ ಪೂಜೆ ಮತ್ತು ಕೆಂಡಾ ತುಳಿತಗಳನ್ನು ನೋಡಿ, ಉತ್ಸವದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರೆ ನಮ್ಮ ಎಲ್ಲಾ ಪಾಪಗಳು ದೂರವಾಗುತ್ತವಂತೆ.

ಕರ್ಪಾಕ ವಿನಾಯಕ ದೇವಸ್ಥಾನಕ್ಕೆ ಹೋದ್ರೆ ವಿವಾಹ, ಸಂತಾನ, ಉದ್ಯೋಗ ಭಾಗ್ಯ ನಿಮ್ಮದಾಗುತ್ತೆಕರ್ಪಾಕ ವಿನಾಯಕ ದೇವಸ್ಥಾನಕ್ಕೆ ಹೋದ್ರೆ ವಿವಾಹ, ಸಂತಾನ, ಉದ್ಯೋಗ ಭಾಗ್ಯ ನಿಮ್ಮದಾಗುತ್ತೆ

ಪ್ರತಿದಿನ ಅನ್ನ ಪ್ರಸಾದ

ಪ್ರತಿದಿನ ಅನ್ನ ಪ್ರಸಾದ

PC: Sri Jenukal Siddeshwara Bhakthara Balaga FB
ಅಜ್ಜಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರತಿದಿನ ಅನ್ನ ಪ್ರಸಾದವನ್ನು ನೀಡಲಾಗುತ್ತದೆ. ಮತ್ತು ಆಹಾರವನ್ನು ವ್ಯರ್ಥ ಮಾಡದಿರುವ ಸುಂದರವಾದ ಸಂದೇಶವನ್ನು ಸಾರಲಾಗುತ್ತದೆ. ಇಲ್ಲಿ ದೇವರಿಗೆ ಬಹಳಷ್ಟು ಸೇವೆಗಳನ್ನು ನೀಡಲಾಗುತ್ತದೆ. ಈ ಸೇವೆಗಳ ಬಗ್ಗೆ ನೀವು ಪುರೋಹಿತರಲ್ಲಿ ಕೇಳಿ ತಿಳಿದುಕೊಂಡು ಮತ್ತು ಅರ್ಚನೆ, ಸೇವೆಗಳನ್ನು ಮಾಡಿಸಿಕೊಳ್ಳಬಹುದು.

1101 ಮೆಟ್ಟಿಲು

1101 ಮೆಟ್ಟಿಲು

PC: Sri Jenukal Siddeshwara Bhakthara Balaga FB

ಈ ಬೆಟ್ಟದ ತುದಿಯಲ್ಲಿ ಒಂದು ಗೋಪೂರವನ್ನು ನೀವು ನೋಡಬಹುದು. 1101 ಮೆಟ್ಟಿಲು ಹತ್ತಿ ಬೆಟ್ಟ ಹತ್ತಿದರೆ ಇಲ್ಲಿ ನೀವು ಸಿದ್ದೇಶ್ವರ ಸ್ವಾಮಿಯ ಪಾದದ ಗುರುತನ್ನು ನೋಡಬಹುದು. ಅಲ್ಲೇ ಪಕ್ಕದಲ್ಲಿ ಗಂಗಮ್ಮ ಕೊಳ ಇದೆ. ಭಕ್ತರು ಗಂಗಮ್ಮಾ ಕೊಳದಲ್ಲಿ ಪ್ರಾರ್ಥನೆ ಮಾಡಬಹುದು.

ಚೆನ್ನೈಗೆ ಹೋದಾಗ ನೀವು ಇದನ್ನ ಅಪ್ಪಿತಪ್ಪಿಯೂ ಮಾಡಬೇಡಿಚೆನ್ನೈಗೆ ಹೋದಾಗ ನೀವು ಇದನ್ನ ಅಪ್ಪಿತಪ್ಪಿಯೂ ಮಾಡಬೇಡಿ

ಬಸವಣ್ಣನ ಗುಡಿ

ಬಸವಣ್ಣನ ಗುಡಿ

PC: Sri Jenukal Siddeshwara Bhakthara Balaga FB
ಬೆಟ್ಟದ ಕೆಳಗೆ ಒಂದು ಬಸವಣ್ಣನ ಗುಡಿ ಇದೆ. ಈ ಗುಡಿಯ ವಿಶೇಷತೆ ಏನೆಂದರೆ ನಿಮ್ಮ ಯಾವುದೇ ಕೆಲಸವಾಗಬೇಕಿದ್ದರೆ ಆ ಕೆಲಸಕ್ಕೆ ಕೈ ಹಾಕಬಹುದೋ ಇಲ್ಲವೋ, ಎನ್ನುವುದನ್ನು ಪ್ರಶ್ನೆಯ ಮೂಲಕ ಈ ಗುಡಿಯಲ್ಲಿ ಕೇಳುತ್ತಾರೆ. ಹೂವುಗಳ ಮೂಲಕ ಬಸವ ಉತ್ತರ ನೀಡುತ್ತಾನಂತೆ. ಕೆಲಸ ಕೈಗೂಡುವುದಾದರೆ ಸಮ ಸಂಖ್ಯೆಯ ಹೂವು, ಕೆಲಸ ಕೈಗೂಡದಿದ್ದರೆ ಬೆಸ ಸಂಖ್ಯೆಯ ಹೂವಿನ ಮೂಲಕ ಉತ್ತರ ನೀಡುತ್ತಾನಂತೆ. ಇಲ್ಲಿಯ ದೇವರು ಬಹಳ ಶಕ್ತಿಶಾಲಿಯಾಗುದ್ದು, ಭಕ್ತರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಾನಂತೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Sri Jenukal Siddeshwara Bhakthara Balaga FB
ಈ ದೇವಾಲಯಕ್ಕೆ ಯಾವ ಕಾಲದಲ್ಲಿ ಬೇಕಾದರೂ ಭೇಟಿ ನೀಡಬಹುದು. ಮೈಸೂರು ವಿಮಾನ ನಿಲ್ದಾಣ ಇಲ್ಲಿಗೆ ಸಮೀಪವಿರುವ ವಿಮಾನ ನಿಲ್ದಾಣವಾಗಿದೆ. ಇನ್ನು ಹಾಸನ ಜಂಕ್ಷನ್ ಇಲ್ಲಿಗೆ ಸಮೀಪ ಇರುವ ರೈಲು ನಿಲ್ದಾಣವಾಗಿದೆ. ನೀವು ಸಾರ್ವಜನಿಕ ಸಾರಿಗೆಯ ಮೂಲಕವೂ ಇಲ್ಲಿಗೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X