Search
  • Follow NativePlanet
Share
» »ಇಲ್ಲಿ ದೇವರ ಮೂರ್ತಿ ಇಲ್ಲ, ಫೋಟೋ ಇಲ್ಲ... ಬರೀ ಉರಿಯುತ್ತೆ ನೀಲಿ ಜ್ವಾಲೆ !

ಇಲ್ಲಿ ದೇವರ ಮೂರ್ತಿ ಇಲ್ಲ, ಫೋಟೋ ಇಲ್ಲ... ಬರೀ ಉರಿಯುತ್ತೆ ನೀಲಿ ಜ್ವಾಲೆ !

ಹಿಮಾಚಲ ಪ್ರದೇಶದಲ್ಲಿ ಎಷ್ಟು ರಹಸ್ಯಮಯ ಸಂಗತಿಗಳಿವೆಯೆಂದರೆ ಹೇಳಿ ತೀರದು. ಕೆಲವು ಸ್ಥಳಗಳೂ ಭಯಾನಕ, ರಹಸ್ಯಮಯ ಸ್ಥಳಗಳಿಗೆ ಹೆಸರುವಾಸಿಯಾಗಿದ್ದರೆ, ಇನ್ನೂ ಕೆಲವು ಸ್ಥಳಗಳು ದೇವರ ಲೀಲೆಗೆ ಹೆಸರುವಾಸಿಯಾಗಿದೆ. ಇಂದು ನಾವು ನಿಮಗೆ ಹೇಳುತ್ತಿರುವುದು ಹಿಮಾಚಲ ಪ್ರದೇಶದಲ್ಲಿರುವ ಜ್ವಾಲಾ ಮಂದಿರದ ಬಗ್ಗೆ.

ಸತ್ತವರ ಜೊತೆ ಟೀ ಕುಡಿಬೇಕಾ...ತಿಂಡಿ ತಿನ್ನಬೇಕಾ...ಹಾಗಾದ್ರೆ ಈ ರೆಸ್ಟೋರೆಂಟ್‌ಗೆ ಹೋಗಿಸತ್ತವರ ಜೊತೆ ಟೀ ಕುಡಿಬೇಕಾ...ತಿಂಡಿ ತಿನ್ನಬೇಕಾ...ಹಾಗಾದ್ರೆ ಈ ರೆಸ್ಟೋರೆಂಟ್‌ಗೆ ಹೋಗಿ

ಜ್ವಾಲಾ ದೇವಾಲಯ

ಜ್ವಾಲಾ ದೇವಾಲಯ

PC: Nswn03
ಜ್ವಾಲ ಎನ್ನುವುದು ಒಂದು ದೇವಾಲಯವಾಗಿದೆ. ಇದು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎನ್ನುವ ಪ್ರದೇಶದಲ್ಲಿದೆ . ಜ್ವಾಲಾ ಎನ್ನುವ ದೇವಿಗೆ ಈ ಮಂದಿರ ಸಮರ್ಪಿತವಾಗಿದೆ. ಇದು ಭಾರತದಲ್ಲಿರುವ ಬಹಳ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಮಹಾಭಾರತದಲ್ಲೂ ಇದರ ಉಲ್ಲೇಖವಿದೆ. ಇತರ ದೇವಾಲಯಗಳಂತೆ ಈ ದೇವಾಲಯದಲ್ಲಿ ಯಾವುದೇ ದೇವರ ಮೂರ್ತಿಯಾಗಲೀ, ಫೋಟೋವಾಗಲಿ ಇಲ್ಲ. ಇಲ್ಲಿ ಇರುವುದು ಬರೀ ನೀಲಿ ಬಣ್ಣದ ಜ್ವಾಲೆ.

 ವಿಜ್ಞಾನಕ್ಕೂ ದೊರೆಯದ ಸತ್ಯ

ವಿಜ್ಞಾನಕ್ಕೂ ದೊರೆಯದ ಸತ್ಯ

PC: Mani kopalle
ಬಂಡೆಗಳ ನಡುವಿನಿಂದ ಕಾಣಿಸುವ ಈ ಜ್ವಾಲೆ ಈ ದೇವಾಲಯದ ಹಲವು ಕಡೆಗಳಲ್ಲಿ ಕಾಣಿಸುತ್ತದೆ. ಈ ಬಗ್ಗೆ ಅನೇಕ ವೈಜ್ಞಾನಿಕ ಸಂಶೋಧನೆಗಳನ್ನೂ ನಡೆಸಿದರೂ ಈ ಜ್ವಾಲೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ. ಈ ಜ್ವಾಲೆಯನ್ನು ಹಿಂದೂಗಳು ಜ್ವಾಲಾ ದೇವತೆ ಎಂದು ಪೂಜಿಸುತ್ತಿದ್ದಾರೆ.

ನಂದಿಸಲು ನಡೆಸಿದ ಪ್ರಯತ್ನ ವಿಫಲ

ನಂದಿಸಲು ನಡೆಸಿದ ಪ್ರಯತ್ನ ವಿಫಲ

PC: Pdogra2011
ಮೊಘಲ್ ದೊರೆ ಅಕ್ಬರ್ ಹಿಂದೊಮ್ಮೆ ಆ ಜ್ವಾಲೆಯನ್ನು ನಂದಿಸಲು ಅದಕ್ಕೆ ಕಬ್ಬಿಣದ ಡಿಸ್ಕ್‌ನ್ನು ತಂದಿಟ್ಟನು. ನೀರನ್ನು ಚೆಲ್ಲಿ ನಂದಿಸಲು ಪ್ರಯತ್ನಿಸಿದನು. ಆದರೆ ಆತನ ಪ್ರಯತ್ನವೆಲ್ಲಾ ವ್ಯರ್ಥವಾಗಿತ್ತು. ಜ್ವಾಲಾ ಮಾತೆಯ ಶಕ್ತಿಯನ್ನ ಅರಿತು ಔರಂಗಜೇಬನು ದೆಹಲಿಗೆ ಹಿಂದಿರುಗಿದ್ದನು.

 ಜ್ವಾಲಾ ದೇವಿಯ ಕಥೆ

ಜ್ವಾಲಾ ದೇವಿಯ ಕಥೆ

PC: Mani kopalle
ಈ ಕಥೆಯು ಶಿವನ ಪತ್ನಿ ಸತಿಯನ್ನೊಳಗೊಂಡಿದೆ. ಸತಿಯ ನಾಲಗೆ ಬಿದ್ದಿದ್ದು ಅದುವೇ ಜ್ವಾಲೇಯ ರೂಪದಲ್ಲಿ ಕಾಣಿಸುತ್ತಿರುವುದು ಎನ್ನಲಾಗುತ್ತಿದೆ. ದಂತಕಥೆಯ ಪ್ರಕಾರ, ಶಿವನನ್ನು ತಂದೆ ಅವಮಾನ ಮಾಡಿರುವುದಕ್ಕೆ ಸತಿ ಅಗ್ನಿಗೆ ಹಾರಿ ಪ್ರಾಣತ್ಯಾಗ ಮಾಡಿಕೊಳ್ಳುತ್ತಾಳೆ. ಪತ್ನಿಯನ್ನು ಕಳೆದುಕೊಂಡ ಶಿವ ಕ್ರೋದಿತನಾಗಿ ಸತಿಯ ಸುಟ್ಟ ದೇಹವನ್ನು ತನ್ನ ಹೆಗಲ ಮೇಲೆ ಇಟ್ಟು ಶಿವತಾಂಡವವನ್ನು ಮಾಡುತ್ತಾನೆ. ಈ ನೃತ್ಯದ ಸಂದರ್ಭ ಸತಿಯ ದೇಹವು ಸಣ್ಣ ಸಣ್ಣ ತುಂಡುಗಳಾಗಿ ಭೂಮಿಯ ಮೇಲೆ ಬೀಳುತ್ತದೆ. ಹೀಗೆ ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಕಥೆಗಳಿವೆ. ಭೂಮಿಯ ಮೇಲೆ ಬಿದ್ದಿರುವ ಸತಿಯ ದೇಹದ ತುಂಡುಗಳೇ ಈಗ ಶಕ್ತಿ ಪೀಠಗಳು ಎನ್ನಲಾಗುತ್ತಿದೆ. ಸತಿಯ ನಾಲಗೆ ಬಿದ್ದಿರುವ ಜಾಗದಲ್ಲಿ ಈಗ ಜ್ವಾಲಾ ಜಿ ದೇವಸ್ಥಾನ ಇದೆ ಎನ್ನಲಾಗುತ್ತದೆ.

 ಈ ದೇವಾಲಯ ನಿರ್ಮಿಸಿದ್ದು ಯಾರು ?

ಈ ದೇವಾಲಯ ನಿರ್ಮಿಸಿದ್ದು ಯಾರು ?

PC:Baneesh
ಈ ದೇವಸ್ಥಾನವನ್ನು ಮೊದಲಿಗೆ ರಾಜಾ ಭೂಮಿ ಚಂದ್ರ ನಿರ್ಮಿಸಿದನು. ನಂತರ ಪಾಂಡವರು ಬಂದು ಈ ದೇವಾಲಯದ ಪುನನಿರ್ಮಾಣವನ್ನು ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X