Search
  • Follow NativePlanet
Share
» »ಕಾಶ್ಮೀರದಲ್ಲಿ ಸೌಂದರ್ಯಗಳೇ ಅಲ್ಲದೇ ಅದ್ಭುತಗಳು ಸಹ ಅಡಗಿವೆ!!

ಕಾಶ್ಮೀರದಲ್ಲಿ ಸೌಂದರ್ಯಗಳೇ ಅಲ್ಲದೇ ಅದ್ಭುತಗಳು ಸಹ ಅಡಗಿವೆ!!

ಹಿಮಾಲಯದ ಮಡಿಲಲ್ಲಿ ಇರುವ ಜಮ್ಮು ಮತ್ತು ಕಾಶ್ಮೀರವು ದೇಶ ವ್ಯಾಪ್ತಿಯೇ ಅಲ್ಲದೇ ವಿಶ್ವವ್ಯಾಪ್ತಿ ಪ್ರಸಿದ್ಧಿ ಗಳಿಸಿದೆ. ಈ ಸುಂದರವಾದ ಪ್ರದೇಶದಲ್ಲಿ ಅದ್ಭುತವಾದ ದೃಶ್ಯಗಳು, ಆಹ್ಲಾದಕರವಾದ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಈ ರಾಜ್ಯದಲ್ಲಿ ಹಲವಾ

ಹಿಮಾಲಯದ ಮಡಿಲಲ್ಲಿ ಇರುವ ಜಮ್ಮು ಮತ್ತು ಕಾಶ್ಮೀರವು ದೇಶ ವ್ಯಾಪ್ತಿಯೇ ಅಲ್ಲದೇ ವಿಶ್ವವ್ಯಾಪ್ತಿ ಪ್ರಸಿದ್ಧಿ ಗಳಿಸಿದೆ. ಈ ಸುಂದರವಾದ ಪ್ರದೇಶದಲ್ಲಿ ಅದ್ಭುತವಾದ ದೃಶ್ಯಗಳು, ಆಹ್ಲಾದಕರವಾದ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಈ ರಾಜ್ಯದಲ್ಲಿ ಹಲವಾರು ದೇವಾಲಯಗಳು, ಪ್ರವಾಸಿ ತಾಣಗಳು, ಸನ್ಯಾಸಿಗೃಹಗಳು ಇವೆ.

ಈ ಪ್ರದೇಶವು ವಿಶ್ರಾಂತಿಗಾಗಿ ಹೇಳಿ ಮಾಡಿಸಿದ ಸ್ಥಳವಾಗಿದೆ. ಪ್ರಕೃತಿ ಪ್ರೀಯರಿಗೆ ಹಾಗು ಸಾಹಸಮಯ ವ್ಯಕ್ತಿಗಳಿಗೆ ಈ ಪ್ರದೇಶವು ಸೂಕ್ತವಾಗಿದೆ. ಹಾಗಾಗಿ ಈ ಪ್ರದೇಶವನ್ನು ಅತಿ ಹೆಚ್ಚಾಗಿ ಪ್ರವಾಸಿಗರು ಇಷ್ಟ ಪಡುತ್ತಾರೆ.

ಪ್ರಸಿದ್ಧ ಮೊಗಲ್ ಚಕ್ರವರ್ತಿಯಾದ ಜಹಂಗೀರ್, ಈ ಪ್ರದೇಶದ ಸೌಂದರ್ಯಕ್ಕೆ ಮಾರು ಹೋದನಂತೆ. ಭೂಮಿ ಮೇಲೆ ಸ್ವರ್ಗ ಎಂದರೆ ಅದು ಇದೇ ಎಂದು ಹೇಳಿದನಂತೆ. ಇಲ್ಲಿನ ಮೊಗಿಲೆತ್ತರದ ಪರ್ವತಗಳು, ಸ್ವಚ್ಛವಾದ ಸರೋವರಗಳು, ಆನೇಕ ಪುಣ್ಯ ಕ್ಷೇತ್ರಗಳು, ಆನೇಕ ತೋಟಗಳು ಮತ್ತು ಸದಾ ಮಂಜಿನಿಂದ ಕೂಡಿರುವ ವಾತಾವರಣ ಯಾರು ತಾನೆ ಇಷ್ಟ ಪಡುವುದಿಲ್ಲ ಹೇಳಿ?

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ

ಶ್ರೀನಗರ ಎಂಬ ಪ್ರಸಿದ್ಧವಾದ ನಗರ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿನ ಬೇಸಿಗೆಕಾಲದ ರಾಜಧಾನಿಯಾಗಿದೆ. ಇದು ಕಾಶ್ಮೀರದ ಜೀಲಂ ಎಂಬ ನದಿ ತೀರದಲ್ಲಿದೆ.

ಕಾಶ್ಮೀರ ಕಣಿವೆ

ಕಾಶ್ಮೀರ ಕಣಿವೆ

ಈ ನಗರವು ಸರೋವರ ಮೇಲೆ ತೇಲುವ ಹಾಗೆ ಮನೆಗಳನ್ನು ನಿರ್ಮಾಣ ಮಾಡುವುದು ಅಲ್ಲಿನ ಪ್ರಸಿದ್ಧಿಯಾಗಿದೆ. ಇದು ಕಾಶ್ಮೀರದ ಕಣಿವೆಯ ಮಧ್ಯೆ ಭಾಗದಲ್ಲಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯ

ಜಮ್ಮು ಮತ್ತು ಕಾಶ್ಮೀರ ರಾಜ್ಯ

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ಜಿಲ್ಲೆಗಳಲ್ಲಿ ಶ್ರೀನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ.

ಶೀತಕಾಲ

ಶೀತಕಾಲ

ಮೊದಲ ಸ್ಥಾನದಲ್ಲಿ ಜಮ್ಮು ಜಿಲ್ಲೆ ಇದೆ. ಇದು ಜಮ್ಮು ಕಾಶ್ಮೀರ ರಾಜ್ಯದ ಬೇಸಿಗೆ ಕಾಲದ ರಾಜಧಾನಿಯಾಗಿದೆ. ಶೀತಕಾಲದಲ್ಲಿ ರಾಜಧಾನಿ ಜಮ್ಮುವಾಗಿ ಸ್ಥಳಾಂತರವಾಗುತ್ತದೆ.

ಡಾಲ್ ಲೇಕ್

ಡಾಲ್ ಲೇಕ್

ಅತಿ ದೊಡ್ಡ ನಗರವಾದ ಶ್ರೀನಗರದಲ್ಲಿ ಪ್ರಸಿದ್ಧ ಪ್ರವಾಸಿ ತಾಣ ಡಾಲ್ ಲೇಕ್ ಇದೆ.

ಸೌಂದರ್ಯಕ್ಕೆ ಕನ್ನಡಿ

ಸೌಂದರ್ಯಕ್ಕೆ ಕನ್ನಡಿ

ಕಾಶ್ಮೀರವು ಸೌಂದರ್ಯಕ್ಕೆ ಅಲ್ಲ ಅದ್ಭುತಗಳೂ ಅಡಗಿಸಿಕೊಂಡಿರುವ ಸುಂದರವಾದ ಪ್ರದೇಶ ಇದಾಗಿದೆ.

ರಮಣೀಯತೆ

ರಮಣೀಯತೆ

ಹಚ್ಚ ಹಸಿರಿನಿಂದ ಕೂಡಿದ ಗಿಡ, ಮರಗಳು, ಮನಸ್ಸಿಗೆ ಆನಂದವನ್ನು ನೀಡುವ ಪ್ರಕೃತಿಯ ರಮಣೀಯತೆಯನ್ನು ಇಲ್ಲಿ ಮನಸೊರೆಗೊಳಿಸಿಕೊಳ್ಳಬಹುದಾಗಿದೆ.

ಭೂಲೋಕ ಸ್ವರ್ಗ ಕಾಶ್ಮೀರ

ಭೂಲೋಕ ಸ್ವರ್ಗ ಕಾಶ್ಮೀರ

ಅದ್ದರಿಂದಲೇ ನಮ್ಮ ಕಾಶ್ಮೀರದ ಬಗ್ಗೆ ಎಷ್ಟು ಹೊಗಳಿದರು ಸಾಲದು. ಮಂತ್ರಮುಗ್ಧರನ್ನಾಗಿಸುವ ಈ ಸುಂದರವಾದ ಪ್ರದೇಶವು ಭೂಲೋಕದ ಸ್ವರ್ಗವಾಗಿದೆ. ಜಮ್ಮು ಮತ್ತು ಕಾಶ್ಮೀರ ಭಾರತ ದೇಶದಲ್ಲಿರುವುದು ನಮ್ಮ ಪುಣ್ಯವೇ ಸರಿ. ದೇಶದಲ್ಲಿಯೇ ಅತ್ಯಂತ ಸುಂದರವಾದ ಪ್ರದೇಶವೆಂದರೆ ಅದು ಕಾಶ್ಮೀರವಾಗಿದೆ.

ಆಧ್ಯಾತ್ಮಿಕವಾದ ಅನುಭವ

ಆಧ್ಯಾತ್ಮಿಕವಾದ ಅನುಭವ

ಭೂಲೇಕ ಸ್ವರ್ಗ ಕಾಶ್ಮೀರ ಎಂದು ವರ್ಣಿಸುತ್ತಾರೆ. ಕಾಶ್ಮೀರವನ್ನು ತಲುಪಿದ ನಂತರ ಒಂದು ರೀತಿಯ ಅಧ್ಯಾತ್ಮಿಕವಾದ ಅನುಭವ ಉಂಟಾಗುತ್ತದೆ ಎಂದು ಸಾಧಾರಣಾವಾಗಿ ಹಲವಾರು ಜನರು ಹೇಳುತ್ತಿರುತ್ತಾರೆ. ಅದು ವಾಸ್ತವವೇ ಏಕೆಂದರೆ ಅಲ್ಲಿ ಆನೇಕ ಮಂದಿ ಪವಿತ್ರವಾದ ವ್ಯಕ್ತಿಗಳನ್ನು ಕಾಣಬಹುದಾಗಿದೆ.

ಸಿನಿಮಾ ಶೋಟಿಂಗ್

ಸಿನಿಮಾ ಶೋಟಿಂಗ್

ಪ್ರಕೃತಿಯ ಸೌಂದರ್ಯವನ್ನು ಕಾಣಬೇಕಾದರೆ ಒಮ್ಮೆ ಕಾಶ್ಮೀರಕ್ಕೆ ತೆರಳಬೇಕು. ಹಾಗಾಗಿ ಇಲ್ಲಿನ ಸೌಂದರ್ಯ ಎಂಥವರನ್ನು ಮಂತ್ರ ಮುಗ್ಧರನ್ನಾಗಿಸುವುದರಿಂದ ಇಲ್ಲಿಗೆ ಹಲವಾರು ಸಿನಿಮಾ ಶೋಟಿಂಗ್ ತೆಗೆಯಲು ಭೇಟಿ ನೀಡುತ್ತಾರೆ. ವಿದೇಶದ ಅದ್ಭುತವಾದ ಸೌಂದರ್ಯಕ್ಕೆ ನಮ್ಮ ಕಾಶ್ಮೀರ ಸೆಡ್ಡು ಹೊಡೆದು ನಿಲ್ಲುತ್ತದೆ.

ಕಾಶ್ಮೀರ

ಕಾಶ್ಮೀರ

ಪ್ರಪಂಚದಲ್ಲಿನ ಹಲವಾರು ಮಂದಿ ನಮ್ಮ ಭಾರತ ದೇಶದ ಕಾಶ್ಮೀರವನ್ನು ಜೀವನದಲ್ಲಿ ಒಮ್ಮೆಯಾದರು ಕಾಣಬೇಕು ಎಂದು ಭಾವಿಸುತ್ತಾರೆ. ಯಾವುದೇ ಧರ್ಮ, ಜಾತಿ ಎಂಬ ಭೇಧ-ಭಾವವಿಲ್ಲದೇ ಎಲ್ಲರಿಗೂ ಸಮಾನವಾಗಿ ಕಾಣುತ್ತಾರೆ.

ಅಥಿತಿಗಳು

ಅಥಿತಿಗಳು

ನಮ್ಮ ಭಾರತದಲ್ಲಿ ಸಾಮಾನ್ಯವಾಗಿ ಅತಿಥಿ ದೇವೋಭವ ಎಂಬ ತತ್ವವನ್ನು ಅಳವಡಿಸಿಕೊಂಡಿದ್ದಾರೆ. ಯಾರೇ ಕಾಶ್ಮೀರಕ್ಕೆ ಭೇಟಿ ನೀಡಿದರು ಕೂಡ ಎಲ್ಲರಿಗೂ ಆಪ್ಯಾಯಮಾನವಾಗಿ ಕಾಣುತ್ತಾರೆ.

ಅದ್ಭುತಗಳು

ಅದ್ಭುತಗಳು

ಇಲ್ಲಿನ ಸುಂದರವಾದ ಸೌಂದರ್ಯಗಳನ್ನು ಕಂಡರೆ ಜೀವನದಲ್ಲಿ ಎಂದೂ ಮರೆಯಲಾಗದ ಅನುಭೂತಿಯನ್ನು ಪಡೆಯಬಹುದಾಗಿದೆ. ಈ ಸೌಂದರ್ಯವೇ ಅಲ್ಲದೇ ಕಾಶ್ಮೀರದ ಬಗ್ಗೆ "ಸರ್ ಫ್ರೈಸಿಂಗ್ ಫ್ಯಾಕ್ಟ್ಸ್" ಕೂಡ ಇವೆ.

2 ರಾಜಧಾನಿಗಳು

2 ರಾಜಧಾನಿಗಳು

ಕಾಶ್ಮೀರಕ್ಕೆ 2 ರಾಜಧಾನಿಗಳು ಇವೆ. ಅವುಗಳೆಂದರೆ ಬೇಸಿಗೆ ಕಾಲದಲ್ಲಿ ಶ್ರೀನಗರ ರಾಜಧಾನಿಯಾಗಿದ್ದರೆ ಚಳಿಗಾಲದಲ್ಲಿ ಜಮ್ಮು ರಾಜಧಾನಿಯಾಗಿರುತ್ತದೆ.

ಅಕ್ಷರಸ್ಥರು

ಅಕ್ಷರಸ್ಥರು

ಕಾಶ್ಮೀರದಲ್ಲಿ ಹೆಚ್ಚಾಗಿ ಎಲ್ಲರೂ ಅಕ್ಷರಸ್ಥರೇ ಹೆಚ್ಚಾಗಿದ್ದಾರೆ. ಕಾಶ್ಮೀರದ ಜನಸಂಖ್ಯೆಯು 16 ಮಿಲಿಯನ್. ಹಾಗಾಗಿ ಇಲ್ಲಿ ಎಲ್ಲರೂ ತಿಳಿದವರೇ ಆಗಿದ್ದಾರೆ.

ಭೂಮಿಯನ್ನು ಖರೀದಿಸುವ ಹಾಗಿಲ್ಲ

ಭೂಮಿಯನ್ನು ಖರೀದಿಸುವ ಹಾಗಿಲ್ಲ

ಆರ್ಟಿಕಲ್ 370 ಪ್ರಕಾರ ಕಾಶ್ಮೀರದಲ್ಲಿ ಇತರೆ ಪ್ರದೇಶದವರು ಭೂಮಿಯನ್ನು ಖರೀದಿಸುವ ಹಾಗಿಲ್ಲ.

ವಿವಾಹ

ವಿವಾಹ

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂದಿಸಿದ ಯಾವುದೇ ಮಹಿಳೆಯು ಭಾರತ ದೇಶದಲ್ಲಿನ ಇತರ ಪ್ರದೇಶ ಅಥವಾ ಬೇರೆ ದೇಶದವರನ್ನು ವಿವಾಹ ಮಾಡಿಕೊಳ್ಳಲು ಅವಕಾಶಗಳು ಇಲ್ಲ. ಒಂದು ವೇಳೆ ಹಾಗೇನಾದರೂ ಬೇರೆ ದೇಶದ ಅಥವಾ ಪ್ರದೇಶದವರನ್ನು ವಿವಾಹ ಮಾಡಿಕೊಂಡರೆ ಆ ಮಹಿಳೆಯು ಕಾಶ್ಮೀರ ಸಿಟಿಜನ್ ಷಿಪ್ ಕಳೆದುಕೊಳ್ಳಬೇಕಾಗುತ್ತದೆ. ಶ್ರೀನಗರವನ್ನು "ಸಿಟಿ ಆಫ್ ಲಕ್ಷ್ಮೀ" ಎಂದು ಕರೆಯುತ್ತಾರೆ.

3000 ವರ್ಷಗಳ ಹಿಂದೆ

3000 ವರ್ಷಗಳ ಹಿಂದೆ

ಈ ಸುಂದರವಾದ ಪ್ರದೇಶವನ್ನು ಅಶೋಕ ಚಕ್ರವರ್ತಿಯು ಕಂಡುಹಿಡಿದನು. ಜಮ್ಮುವನ್ನು 3000 ವರ್ಷಗಳ ಹಿಂದೆ ಗುರುತಿಸಲಾಗಿದೆ. ಕಾಶ್ಮೀರದಲ್ಲಿ ಮುಸ್ಲಿಂರು ಹೆಚ್ಚಾಗಿ ಇದ್ದರೆ, ಜಮ್ಮುವಿನಲ್ಲಿ ಹಿಂದೂಗಳೇ ಹೆಚ್ಚಾಗಿ ಇದ್ದಾರೆ. ಹಾಗೆಯೇ ಲಡಾಕ್‍ನಲ್ಲಿ ಬೌದ್ಧ ಸನ್ಯಾಸಿಗಳು ಹೆಚ್ಚಾಗಿ ಇರುತ್ತಾರೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಶ್ರೀನಗರಕ್ಕೆ ವಿಮಾನ ನಿಲ್ದಾಣವಿದೆ. ಆದರೆ ಈ ಪ್ರದೇಶದಲ್ಲಿ ಭಧ್ರತೆಯ ದೃಷ್ಠಿ ಅಧಿಕವಾಗಿರುತ್ತದೆ. ಜಮ್ಮುವಿನಲ್ಲಿ ರೈಲ್ವೆ ನಿಲ್ದಾಣವಿದೆ. ಈ ರೈಲ್ವೆಯು ದೇಶದ ಪ್ರಧಾನ ನಗರಗಳ ಸಂಪರ್ಕದೊಂದಿಗೆ ತಲುಪುತ್ತದೆ. ಇಲ್ಲಿ ತಲುಪಿದ ನಂತರ ಟ್ಯಾಕ್ಸಿ ಅಥವಾ ಕ್ಯಾಬ್‍ನಲ್ಲಿ ಹಲವಾರು ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X