Search
  • Follow NativePlanet
Share
» »ಹೊಸಪೇಟೆಯಲ್ಲಿನ ಕಾಂಚನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆ

ಹೊಸಪೇಟೆಯಲ್ಲಿನ ಕಾಂಚನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆ

ಹೊಸಪೇಟೆಯಲ್ಲಿರುವ ಕಾಂಚನ ತೀರ್ಥದಲ್ಲಿ 5 ವಾರಗಳ ಕಾಲ ಸ್ನಾನ ಮಾಡಿದ್ರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತಂತೆ. ಅಂತಹ ಪವಿತ್ರವಾದ ನೀರು ಲೋಹಾದ್ರಿ ಬೆಟ್ಟದ ಮೇಲಿದೆ. ಈ ಬಾವಿಯಲ್ಲಿ ವರ್ಷವಿಡೀ ನೀರು ಇರುತ್ತದೆ. ಸಾಕಷ್ಟು ಮಂದಿ ಭಕ್ತರು ಈ ದೇವಾಲಯಕ್ಕೆ ಬಂದು ತೀರ್ಥದಲ್ಲಿ ಸ್ನಾನ ಮಾಡುತ್ತಾರೆ. ಹಾಗಾದರೆ ಬನ್ನಿ ಈ ವಿಶೇಷ ತೀರ್ಥದ ಬಗ್ಗೆ ತಿಳಿಯೋಣ.

ಎಲ್ಲಿದೆ ಈ ತೀರ್ಥ

ಎಲ್ಲಿದೆ ಈ ತೀರ್ಥ

PC: youtube

ಕಾಂಚನಾ ತೀರ್ಥವು ಹೊಸಪೇಟೆ ಬಳಿಯ ಜಂಬುನಾಥ ಸ್ವಾಮಿ ದೇವಾಲಯದಲ್ಲಿದೆ.. ಲೋಹಾದ್ರಿ ಬೆಟ್ಟದ ಮೇಲಿರುವ ಈ ದೇವಾಲಯದಲ್ಲಿ ರುವ ಬಾವಿಯಲ್ಲಿನ ಪವಿತ್ರ ನೀರನ್ನು ಕಾಂಚನಾ ತೀರ್ಥ ಎನ್ನಲಾಗುತ್ತದೆ.

ಕಮಲಶಿಲೆಯಲ್ಲಿ ಲಿಂಗರೂಪದಲ್ಲಿ ನೆಲೆನಿಂತಿದ್ದಾಳೆ ದುರ್ಗಾಪರಮೇಶ್ವರಿ ಕಮಲಶಿಲೆಯಲ್ಲಿ ಲಿಂಗರೂಪದಲ್ಲಿ ನೆಲೆನಿಂತಿದ್ದಾಳೆ ದುರ್ಗಾಪರಮೇಶ್ವರಿ

ಸ್ವಯಂ ಭೂ ಶಿವ

ಸ್ವಯಂ ಭೂ ಶಿವ

PC: youtube
ಹೊಸಪೇಟೆಯಿಂದ 1 ಕಿ.ಮೀ ದೂರದಲ್ಲಿ ಜಂಬುನಾಥ ಸ್ವಾಮಿ ದೇಗುಲವಿದೆ. ಇಲ್ಲಿ ಈಶ್ವರನು ಸ್ವಯಂ ಭೂವಾಗಿದ್ದಾನೆ.

ಶಾಪ ವಿಮೋಚನೆ

ಶಾಪ ವಿಮೋಚನೆ

PC: youtube
ಕಾಂಚನ ಮಾಲಿನಿ ಎನ್ನುವ ಸ್ತ್ರೀ ಇಲ್ಲಿ ಶಾಪ ವಿಮೋಚನೆ ಪಡೆದಿದ್ದಳಂತೆ. ಅನೇಕ ಅಸುರರು ಶಾಪ ವಿಮೋಚನೆಗಾಗಿ ಈ ತೀರ್ಥದಲ್ಲಿ ಸ್ನಾನ ಮಾಡುತ್ತಿದ್ದರು ಎನ್ನಲಾಗಿದೆ.

ಉತ್ತರಾಭಾದ್ರ ನಕ್ಷತ್ರಕ್ಕೂ ಇಲ್ಲಿಗೂ ಏನ್ ಸಂಬಂಧ ? ಇಲ್ಲಿನ ನೈವೇದ್ಯ ಸೇವಿಸಿದ್ರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತಂತೆ !ಉತ್ತರಾಭಾದ್ರ ನಕ್ಷತ್ರಕ್ಕೂ ಇಲ್ಲಿಗೂ ಏನ್ ಸಂಬಂಧ ? ಇಲ್ಲಿನ ನೈವೇದ್ಯ ಸೇವಿಸಿದ್ರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತಂತೆ !

ಕಂಕಣ ಭಾಗ್ಯ

ಕಂಕಣ ಭಾಗ್ಯ

PC: youtube
ಇಲ್ಲಿ ಸಾಕಷ್ಟು ಭಕ್ತರು ಕಂಕಣ ಭಾಗ್ಯಕ್ಕೆ, ಸಂತಾನ ಪ್ರಾಪ್ತಿಗಾಗಿ, ಚರ್ಮ ರೋಗ ನಿವಾರಣೆಗಾಗಿ ಇಲ್ಲಿನ ನೀರಿನಲ್ಲಿ ಸ್ನಾನ ಮಾಡುತ್ತಾರೆ.

5 ವಾರ ಸ್ನಾನ ಮಾಡಬೇಕು

5 ವಾರ ಸ್ನಾನ ಮಾಡಬೇಕು

PC: youtube
ಇಲ್ಲಿನ ತೀರ್ಥದಲ್ಲಿ 5 ವಾರ ಸ್ನಾನ ಮಾಡಿ ಈ ದೇವಸ್ಥಾನದಲ್ಲಿ ಪೂಜೆ ಮಾಡುವುದರಿಂದ ಹೀಗೆ ಮಾಡೋದರಿಂದ ತಮ್ಮ ಹರಕೆ ನೆರವೇರುತ್ತೆ ಎನ್ನುವುದು ಭಕ್ತರ ನಂಬಿಕೆ.

ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?

ಬ್ರಹ್ಮ ಹಾಗೂ ಶಿವ

ಬ್ರಹ್ಮ ಹಾಗೂ ಶಿವ

PC: youtube

ಬ್ರಹ್ಮ ಹಾಗೂ ಶಿವನಿಗೆ ಪೂಜೆ ನೆರವೇರುತ್ತದೆ. ಶಿವನ ಕೋರಿಕೆಯಿಂದ ಇಲ್ಲಿ ಬ್ರಹ್ಮ ನೆಲೆಸಿದ್ದಾನೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಬ್ರಹ್ಮನಿಗೆ 4 ಮುಖಗಳಿರುತ್ತದೆ. ಆದರೆ ಇಲ್ಲಿ ಬ್ರಹ್ಮನು ಏಕಮುಖನಾಗಿದ್ದಾನೆ.

ಮೂವರು ರಾಜರು ನಿರ್ಮಿಸಿದ್ದು

ಮೂವರು ರಾಜರು ನಿರ್ಮಿಸಿದ್ದು

PC: youtube
ಚೋಳ, ಪೌಳ, ತ್ರಿಶಂಕು ಎಂಬ ಮೂರು ರಾಜರು ಸೇರಿ ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗುತ್ತದೆ. ಚೋಳ, ಪೌಳಿ ರಾಜ, ತ್ರಿಶಂಕು ನಿರ್ಮಿಸಿದ ದೇವಸ್ಥಾನವಾಗಿರುವುದರಿಂದ ಗರ್ಭಗುಡಿ ಮುಂದೆ ಮೂರು ನಂದಿ ವಿಗ್ರಹಗಳಿವೆ.

ಹನಿಮೂನ್‌ಗೆ ಹೊಟೇಲ್ ಬುಕ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿಹನಿಮೂನ್‌ಗೆ ಹೊಟೇಲ್ ಬುಕ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ಜಾಂಬವಂತ ತಪಸ್ಸು ಮಾಡಿದ್ದ

ಜಾಂಬವಂತ ತಪಸ್ಸು ಮಾಡಿದ್ದ

PC: youtube
ಜಾಂಬವಂತ ಇಲ್ಲಿ ಹಲವು ವರ್ಷಗಳ ಕಾಲ ತಪಸ್ಸು ಮಾಡಿದುದರಿಂದ ಈ ಕ್ಷೇತ್ರವು ಜಂಬುನಾಥ ಎಂದೇ ಪ್ರಸಿದ್ಧಿ ಪಡೆಯಿತು ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X