Search
  • Follow NativePlanet
Share
» »ಈ ಮಸೀದಿಯಲ್ಲಿದೆ ಅಗೋಚರ ಶಕ್ತಿಗಳ ಸಂಚಾರ

ಈ ಮಸೀದಿಯಲ್ಲಿದೆ ಅಗೋಚರ ಶಕ್ತಿಗಳ ಸಂಚಾರ

ಸಾಮಾನ್ಯವಾಗಿ ಮಸೀದಿಗಳು ಎಂದರೆ ಇಸ್ಲಾಂ ಧರ್ಮದ ಪ್ರಕಾರ ಪವಿತ್ರವಾದ ಸ್ಥಳಗಳು. ಹಿಂದೂಗಳಿಗೆ ದೇವಾಲಯಗಳು ಹೇಗೆ ಪವಿತ್ರವು ಹಾಗೆಯೇ ಇಸ್ಲಾಂ ಧರ್ಮದವರಿಗೆ ಮಸೀದಿ ಅಷ್ಟೇ ಪವಿತ್ರವಾದುದು. ನಿಮಗೆ ದೆವ್ವ, ಭೂತಗಳಲ್ಲಿ ನಂಬಿಕೆ ಇದೆಯೋ ಇಲ್ಲವೋ ಎಂಬುದ

ಸಾಮಾನ್ಯವಾಗಿ ಮಸೀದಿಗಳು ಎಂದರೆ ಇಸ್ಲಾಂ ಧರ್ಮದ ಪ್ರಕಾರ ಪವಿತ್ರವಾದ ಸ್ಥಳಗಳು. ಹಿಂದೂಗಳಿಗೆ ದೇವಾಲಯಗಳು ಹೇಗೆ ಪವಿತ್ರವು ಹಾಗೆಯೇ ಇಸ್ಲಾಂ ಧರ್ಮದವರಿಗೆ ಮಸೀದಿ ಅಷ್ಟೇ ಪವಿತ್ರವಾದುದು. ನಿಮಗೆ ದೆವ್ವ, ಭೂತಗಳಲ್ಲಿ ನಂಬಿಕೆ ಇದೆಯೋ ಇಲ್ಲವೋ ಎಂಬುದು ನಿಮಗೆ ಬಿಟ್ಟಿದ್ದು. ಕೆಲವು ಸ್ಥಳಗಳು ನೋಡಿದಷ್ಟು ಅದ್ಭುತ ಅಲ್ಲದೇ ಇರಬಹುದು. ಕೆಲವೊಮ್ಮೆ ಅಂತಹ ಭಯಾನಕವಾದ ಸ್ಥಳಗಳಿಗೆ ತೆರಳುವ ಮುಂಚೆ ಯೋಚಿಸಿಯೇ ತೆರಳಬೇಕು.

ಏಕೆಂದರೆ ಕೆಲವೊಮ್ಮೆ ಅದು ನಮ್ಮ ಪ್ರಾಣಕ್ಕೆ ಕುತ್ತು ತಂದು ಒದಗಬಹುದು. ಕೆಲವು ಸಾಹಸಿಗಳು ಮಾತ್ರ ಇಂತಹ ತಾಣಕ್ಕೆ ಹೋಗಲೇಬೇಕು ಎಂಬ ನಿರ್ಧಾರಕ್ಕೆ ಬರುವುದು ಸಾಮಾನ್ಯ. ಆದರೆ ಆ ತಾಣಕ್ಕೆ ಭೇಟಿ ಮಾಡುವುದಕ್ಕೂ ಮುಂಚೆ ಆ ಸ್ಥಳದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆಯುವುದು ಉತ್ತಮ.

ಪ್ರಸ್ತುತ ಲೇಖನದಲ್ಲಿ ದೆಹಲಿಯಲ್ಲಿನ ಒಂದು ಭಯಾನಕವಾದ ಮಸೀದಿಯ ಬಗ್ಗೆ ಮಾಹಿತಿಯನ್ನು ಪಡೆಯೋಣ.

"ಖೂನಿ ದರ್ವಾಜಾ"

ಈ ಭಯಾನಕವಾದ ಮಸೀದಿ ಇರುವುದು ದೆಹಲಿಯಲ್ಲಿ ಆ ಮಸೀದಿಯ ಹೆಸರು ಜಮಾಲಿ-ಕಾಮಾಲಿ ಮಸೀದಿ ಎಂದು. ದೆಹಲಿಯಲ್ಲಿನ ಅತ್ಯಂತ ಭಯಂಕರವಾದ ಸ್ಥಳ ಎಂದೇ ಖ್ಯಾತಿಯಾಗಿದೆ. ಇಲ್ಲಿ ಇಬ್ಬರ ಸಮಾಧಿ ಇದ್ದು, ಆ ಸ್ಥಳವೇ ಇಂದು ಮೋಸ್ಟ್ ಹಂಟೆಡ್ ಪ್ಲೇಸ್ ಆಗಿ ಮಾರ್ಪಾಟಾಗಿದೆ. ಇದು ಪ್ರಸ್ತುತ ಮೆಹ್ರಾಲಿ ಆರ್ಕಿಯಾಲಾಜಿಕಲ್ ಪಾರ್ಕ್‍ನಲ್ಲಿದೆ.


PC:: Anupamg

"ಖೂನಿ ದರ್ವಾಜಾ"

ಈ ಮಸೀದಿ ಎಷ್ಟು ಭಯಾನಕವೂ ಅದರ ವಾಸ್ತುಶಿಲ್ಪ ಅಷ್ಟೇ ಅದ್ಭುತವಾದುದು. ಒಂದು ಕಾಲದಲ್ಲಿ ಸಂತನಾದ ಜಾಮಾಲಿಯ ಮರಣದ ನಂತರ ಈ ಮಸೀದಿಯನ್ನು ನಿರ್ಮಣ ಮಾಡಲಾಯಿತು. ಸುಂದರವಾದ ವಿನ್ಯಾಸಗೊಳಿಸಲಾದ ರಚನೆಯು ಕಣ್ಮನ ಸೆಳೆಯುತ್ತದೆ. ಇದನ್ನು 1528 ರಿಂದ 1529 ರ ಅವಧಿಯಲ್ಲಿ ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗಿದೆ.

PC:Varun Shiv Kapur

"ಖೂನಿ ದರ್ವಾಜಾ"

ವಿಶಾಲವಾದ ಅಂಗಳ, ಕಮಾನು ಆಕಾರದ ದಾರಿಗಳು ಮತ್ತು ಸುಂದರವಾದ ಗುಮ್ಮಟವನ್ನು ಕಾಣಬಹುದು. ಈ ವಾಸ್ತುಶಿಲ್ಪವು ಆ ಕಾಲದಲ್ಲಿನ ಪ್ರತಿಫಲನ ಎಂದೇ ಬಿಂಬಿಸಬಹುದು. ಮಸೀದಿಯೊಳಗೆ ಸಂಕೀರ್ಣವಾಗಿ ಕೆತ್ತನೆ ಮಾಡಿದ ಶಿಲ್ಪಗಳು, ಅಲಂಕಾರಿಕ ಸ್ಪರ್ಶಗಳು ಇವೆಲ್ಲಾ ಶ್ರೀಮಂತವಾದ ಸೌಂದರ್ಯವನ್ನು ಇಲ್ಲಿ ಕಾಣಬಹುದು.

PC:: Anupamg

"ಖೂನಿ ದರ್ವಾಜಾ"

ಲ್ಲಿ ಸೂಫಿ ಸಂತರಾದ ಜಮಾಲಿ ಮತ್ತು ಕಾಮಾಲಿಯವರ ಗೋರಿಗಳನ್ನು ಕಾಣಬಹುದು. ಇಂದು ಈ ಜಮಾಲಿ-ಕಾಮಾಲಿ ಗೋರಿಯು ದೆಹಲಿಯ ಪುರಾತತ್ವ ಸ್ಥಳಗಳ ಸ್ಮಾರಕಗಳಲ್ಲಿ ಒಂದಾಗಿದೆ. ಇದು ಭಯಾನಕವಾದ ಸ್ಥಳವಾದ್ದರಿಂದ ಕಡಿಮೆ ಪ್ರಸಿದ್ಧ ಪ್ರವಾಸಿ ತಾಣವೇಂದೆ ಹೇಳಬಹುದು.


PC:Varun Shiv Kapur

"ಖೂನಿ ದರ್ವಾಜಾ"

ಈ ಪ್ರದೇಶದಲ್ಲಿ ಆನೇಕ ಭಯಾನಕ ಘಟನೆಗಳು ವರದಿಯಾಗಿದೆ. ಹೆಚ್ಚಾಗಿ ಬಿಳಿ ಬಣ್ಣದ ಉಡುಪಿನ ಮಹಿಳೆ ಇಲ್ಲಿ ಕಾಣಿಸಿಕೊಳ್ಳುತ್ತಾಳೆ. ಇಲ್ಲಿ ವಿಚಿತ್ರವಾದ ಶಬ್ಧಗಳು ಕೇಳಿಸುತ್ತವೆ ಎಂದು ಅನುಭವಿಗಳು ಹೇಳುತ್ತಾರೆ. ಆಶ್ಚರ್ಯ ಏನಪ್ಪ ಎಂದರೆ ನೀವು ಈ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ಮೊಬೈಲ್‍ನಲ್ಲಿನ ನೆಟ್‍ವರ್ಕ್ ಕಳೆದು ಹೋಗುತ್ತದೆ.


PC:Varun Shiv Kapur

"ಖೂನಿ ದರ್ವಾಜಾ"

ಈ ವಿಭಿನ್ನವಾದ ಸ್ಥಳದಲ್ಲಿ ಯಾರೊ ನಿಮ್ಮನ್ನು ಹಿಂಬಾಲಿಸಿದಂತೆ ಅನುಭವವಾಗುತ್ತದೆ ಎಂತೆ. ವಿಚಿತ್ರವಾದ ಭಾಷೆಗಳನ್ನು ಬಳಸುವ ಪ್ರಾಣಿಗಳ ಧ್ವನಿಯಲ್ಲಿ ಕಿರಚುವುದು, ಯಾವುದು ಅನಾಮಿಕ ವ್ಯಕ್ತಿಗಳು ಮಾತಾನಾಡುವುದು ಎಲ್ಲಾ ಭಯವನ್ನು ಸಹಜವಾಗಿಯೇ ಹುಟ್ಟಿಸುತ್ತದೆ.

"ಖೂನಿ ದರ್ವಾಜಾ"

ಈ ಮಸೀದಿಯು 3 ಹಂತಗಳ ಮೆಟ್ಟಿಲುಗಳನ್ನು ಹೊಂದಿದೆ. ಐತಿಹಾಸಿಕ ಕಾಲದಲ್ಲಿ ನಡೆದ ಕೆಲವು ಘಟನೆಗಳಿಂದ ಇಲ್ಲಿ ದೆವ್ವಗಳು ಇವೆ ಎಂದು ಹೇಳಲಾಗುತ್ತದೆ. ಇಲ್ಲಿನ ಕೆಂಪು ಬಣ್ಣದ ಕಲ್ಲುಗಳನ್ನು ರಕ್ತದ ಬಣ್ಣದ್ದಾಗಿವೆ ಎಂದು ಹೇಳಲಾಗುತ್ತದೆ.

"ಖೂನಿ ದರ್ವಾಜಾ"

ಮಸೀದಿಯ ಸಮೀಪದಲ್ಲಿಯೇ ಫಿರೋಜ್ ಷಾ ಕೋಟ್ಲಾ ಎಂದು ಕರೆಯಲ್ಪಡುವ ಒಂದು ಕೋಟೆ ಇದೆ. ಈ ಕೋಟೆಯು ಅತ್ಯಂತ ತಂಪಾದ ಗಾಳಿಯನ್ನು ಬೀಸುತ್ತಾ ಇರುತ್ತದೆ. ಸ್ಥಳೀಯರು ಇಲ್ಲಿ ಹಾಲು ಮತ್ತು ದೀಪದ ಮೇಣದ ಬತ್ತಿಗಳನ್ನು ಇಲ್ಲಿ ಉರಿಸುತ್ತಾರೆ. ಇದಕ್ಕೆ ಕಾರಣವೆನೆಂದರೆ ಅಲ್ಲಿನ ಅತೃಪ್ತ ಆತ್ಮಗಳನ್ನು ಸಂತೋಷ ಪಡಿಸುವುದೇ ಆಗಿದೆ.

"ಖೂನಿ ದರ್ವಾಜಾ"

ಸಂಜಯ್ ವ್ಯಾನ್‍ದಿಂದ ಸುಮಾರು 10 ಕಿ.ಮೀ ದೂರದಲ್ಲಿ ಒಂದು ಮರವಿದೆ. ಆ ಮರದ ಬಳಿ ಒಂದು ಮಹಿಳಾ ಆತ್ಮ ತಿರುಗುತ್ತಿರುತ್ತದೆ ಎಂದು ವರದಿಯಾಗಿದೆ. ಇಲ್ಲಿನ ಮಹಿಳಾ ಆತ್ಮವು ಕಾರು ಅಪಘಾತದಿಂದ ಮೃತಳಾದವಳು ಎಂದು ಕೆಲವರು ಹೇಳುತ್ತಾರೆ.

"ಖೂನಿ ದರ್ವಾಜಾ"

ಆ ಮಸೀದಿಯ ದಾರಿಯಲ್ಲಿ ಲಿಫ್ಟ್‍ಗಾಗಿ ವಾಹನದಲ್ಲಿ ತೆರಳುವವರಿಗೆ ಕೇಳಿಕೊಳ್ಳುತ್ತಾಳೆ. ವಾಹನ ನಿಂತ ಮರುಕ್ಷಣವೇ ಬಿಳಿ ಸೀರೆ ಧರಿಸಿದ್ದ ಆ ಮಹಿಳೆ ಕ್ಷಣ ಮಾತ್ರದಲ್ಲಿ ಮಾಯವಾಗುತ್ತಳಂತೆ. ಇಂತಹ ಸನ್ನಿವೇಶದ ಅನುಭವವನ್ನು ಹಲವಾರು ಜನರು ಅನುಭವಿಸುರುವುದನ್ನು ಹೇಳುತ್ತಾರೆ.

"ಖೂನಿ ದರ್ವಾಜಾ"

ಬಧುರ್ ಷಾ ಜಾಫರ್ ಅವರ ಮೂರು ಜನ ಪುತ್ರರಾದ ಮಿರ್ಜಾ ಮೊಘಲ್, ಕಿರೀಸ್ ಸುಲ್ತಾನ್ ಮತ್ತು ಅಬು ಬಕ್ರ್ ಅವರನ್ನು ಬ್ರಿಟಿಷ್ ಜನರಲ್ ಮಿಲಯನ್ ಹಡ್ಸನ್ ಎಂಬವವನು ಈ ಸ್ಥಳದಲ್ಲಿಯೇ ಮರಣದಂಡನೆ ವಿಧಿಸಿದ್ದನಂತೆ. ಹಾಗಾಗಿಯೇ ಈ ಬಾಗಿಲನ್ನು "ಖೂನಿ ದರ್ವಾಜಾ" ಎಂದು ಕರೆಯಲಾಗುತ್ತದೆ.

"ಖೂನಿ ದರ್ವಾಜಾ"

ಹೀಗೆ ಮರಣದಂಡನೆಗೆ ಗುರಿಯಾದ ಆ ಮೂವರು ಸಹೋದರರೇ ತಮ್ಮ ಮರಣದ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ನಂಬಲಾಗಿದೆ. ಇಲ್ಲಿ ದೆವ್ವಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಚಿತ್ರಗಳು ಹಾಗು ವರದಿಗಳು ಕೂಡ ಆಗಿವೆ ಆಗಿವೆ ಎಂತೆ. ಹಾಗಾಗಿಯೇ ಈ ಸ್ಥಳದಲ್ಲಿ ಸಂಜೆಯಾಗುತ್ತಿದ್ದಂತೆ ಪ್ರವಾಸಿಗರು ಜಾಗ ಖಾಲಿ ಮಾಡುತ್ತಾರೆ. ಏಕೆಂದರೆ ಆ ಸಮಯದಲ್ಲಿ ಅತೃಪ್ತ ಆತ್ಮಗಳ ಸಂಚಾರವಿರುತ್ತದೆ ಎಂದು ನಂಬಲಾಗಿದೆ.

ಪ್ರವೇಶ ಸಮಯ

ಪ್ರವೇಶ ಸಮಯ

ಈ ಜಮಾಲಿ-ಕಾಮಾಲಿ ಮಸೀದಿಗೆ ಪ್ರವಾಸಿಗರ ಪ್ರವೇಶವಿದೆ. ಅದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವೆರೆಗೆ. ಮೆಹ್ರೌಲಿ ಪಾರ್ಕ್‍ನ ಬಳಿ ಈ ಜಮಾಲಿ-ಕಾಮಾಲಿ ಮಸೀದಿ ಇದೆ. ಇಲ್ಲಿ ಯಾವುದೇ ಪ್ರವೇಶ ಶುಲ್ಕವನ್ನು ವಿಧಿಸುವುದಿಲ್ಲ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಜಮಾಲಿ-ಕಮಾಲಿ ಮಸೀದಿಗೆ ಸಮೀಪದ ಮೆಟ್ರೋ ನಿಲ್ದಾಣವೆಂದರೆ ಅದು ಕುತುಬ್ ಮಿನಾರ್ ಮೆಟ್ರೋ ನಿಲ್ದಾಣವಾಗಿದೆ. ಇಲ್ಲಿಂದ ಆಟೋದ ಮೂಲಕ ಸುಲಭವಾಗಿ ಈ ಭಯಾನಕವಾದ ಮಸೀದಿಗೆ ತಲುಪಬಹುದಾಗಿದೆ.

ಸಮೀಪದ ವಿಮಾನ ನಿಲ್ದಾಣವೆಂದರೆ ಅದು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸಮಾಧಿಗೆ ಕೇವಲ 9.4 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X