Search
  • Follow NativePlanet
Share
» »ಬೆಂಗಳೂರಿನಲ್ಲಿರುವ ಇನ್ನೂರು ವರ್ಷಗಳಷ್ಟು ಹಳೆಯ ಜಕ್ಕೂರ್ ಕೆರೆಗೆ ಒಮ್ಮೆ ಭೇಟಿ ಕೊಡಿ

ಬೆಂಗಳೂರಿನಲ್ಲಿರುವ ಇನ್ನೂರು ವರ್ಷಗಳಷ್ಟು ಹಳೆಯ ಜಕ್ಕೂರ್ ಕೆರೆಗೆ ಒಮ್ಮೆ ಭೇಟಿ ಕೊಡಿ

ಎರಡು ಶತಮಾನಗಳ ಹಿಂದೆ ನಿರ್ಮಿಸಲಾದ ಉತ್ತರ ಬೆಂಗಳೂರಿನ ಜಕ್ಕೂರ್ ಲೇಕ್ (ಕೆರೆ) ಜಕ್ಕೂರ್‌ ಭಾಗದಲ್ಲಿದೆ. ಇದನ್ನು ಜಕ್ಕೂರು ಗ್ರಾಮ ಎಂದೂ ಕರೆಯುತ್ತಾರೆ. 160 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಇದು ಬೆಂಗಳೂರಿನ ಈಶಾನ್ಯ ಹೊರವಲಯದಲ್ಲಿ ಉಳಿದುಕೊಂಡಿರುವ ಮತ್ತು ಅಭಿವೃದ್ದಿ ಹೊಂದುತ್ತಿರುವ ಕೆಲವೇ ಕೆಲವು ಕೆರೆಗಳಲ್ಲಿ ಒಂದಾಗಿದೆ.

ಹೆಬ್ಬಾಳದ ಹೆದ್ದಾರಿಯಲ್ಲಿನ ಸದ್ದು ಗದ್ದಲದಿಂದ ಅನತಿ ದೂರದಲ್ಲಿ ಮತ್ತು ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗಿರುವ ಈ ಕೆರೆ ನಗರದ ಮಧ್ಯ ಭಾಗದಲ್ಲಿರುವ ಒಂದು ಸುಂದರವಾದ ಮತ್ತು ಪ್ರಶಾಂತವಾದ ಒಂದು ತಾಣವಾಗಿದೆ.

ಈ ಕೆರೆ ಮತ್ತು ಅದರ ಪರಿಸರವು ಅನೇಕ ಜಾತಿಯ ಪಕ್ಷಿಗಳು ಮತ್ತು ಜೀವಿಗಳಿಗೆ ನೆಲೆಯಾಗಿದೆ. ಇಲ್ಲಿ ಕೆಲವೊಮ್ಮೆ ಜಲಚರ ಪಕ್ಷಿಗಳು ಸ್ವತಂತ್ರವಾಗಿ ಈಜಾಡುತ್ತಿರುವುದು ಮತ್ತು ಸ್ಪಾಟ್ -ಬಿಲ್ಡ್ ಪೆಲಿಕನ್ ಗಳಂತಹ ಜೀವಿಗಳನ್ನೂ ಇಲ್ಲಿ ಕಾಣಬಹುದಾಗಿದೆ.

ಇಂತಹ ನೈಸರ್ಗಿಕವಾಗಿ ಸುಂದರವಾದ ಪ್ರಪಂಚವು ಮಾನವ ನಿರ್ಮಿತ ಕೆರೆ ಮಾನವ ಜಗತ್ತಿನೊಂದಿಗೆ ಸಹಬಾಳ್ವೆ ನಡೆಸುತ್ತದೆ ಎಂದು ನಂಬುವುದು ಅಸಾಧ್ಯ. ನಿಜವಾಗಿಯೂ, ಇಂತಹ ಕೆರೆಯ ಸೌಂದರ್ಯತೆಯ ಸಂರಕ್ಷಣೆ ಮತ್ತು ಬೆಳೆಸಲು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

ಜಕ್ಕೂರು, ಏರೋಡ್ರೋಮ್‌ಗೆ (ವಿಮಾನ ನಿಲ್ದಾಣ) ಹೆಸರುವಾಸಿಯಾಗಿದೆ. ಬೆಂಗಳೂರು ನಗರಕ್ಕೆ ಮೀಸಲಾಗಿರುವ ಏಕೈಕ ಸಾಮಾನ್ಯ ವಿಮಾನಯಾನ ಕ್ಷೇತ್ರ ಇದಾಗಿದೆ. ಜಕ್ಕೂರ್ ಏರೋಡ್ರಮ್, ಪ್ಯಾರಾಸೈಲಿಂಗ್ ಹಾಟ್ ಏರ್ ಬಲೂನ್ ಸವಾರಿ, ಮೈಕ್ರೋಲೈಟ್ ಫ್ಲೈಯಿಂಗ್ ಮತ್ತು ಇನ್ನಿತರ ವೈಮಾನಿಕ ಕ್ರೀಡೆಗಳ ಚಟುವಟಿಕೆಗಳ ತಾಣವಾಗಿರುವುದರಿಂದ ಈ ಸ್ಥಳವು ಸದಾ ಉತ್ಸಾಹಿ ಜನರಿಂದ ತುಂಬಿರುತ್ತದೆ.

ಜಕ್ಕೂರ್ ಲೇಕ್ ಗೆ ತಲುಪುವುದು ಹೇಗೆ?

ಜಕ್ಕೂರ್ ಲೇಕ್ ಗೆ ತಲುಪುವುದು ಹೇಗೆ?

ಜಕ್ಕೂರು ಕೆರೆ ಹೆಬ್ಬಾಳ ಮತ್ತು ಯಲಹಂಕದ ಮಧ್ಯೆ ಇದ್ದು ರಾ.ಹೆ 44ರ ಪೂರ್ವ ದಿಕ್ಕಿನಲ್ಲಿ ಇದೆ. ಈ ಲೇಕ್ ಅನ್ನು ಹೆಬ್ಬಾಳದ ಮೂಲಕ ಅಥವಾ ಜಕ್ಕೂರು ಹೊರವಲಯದಲ್ಲಿರುವ ರಿಂಗ್ ರೋಡ್ ನಿಂದ ಸುಲಭವಾಗಿ ತಲುಪಬಹುದಾಗಿದೆ.

ನಗರದಿಂದ ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸುವುದಾದಲ್ಲಿ ಹೆಬ್ಬಾಳ ರಿಂಗ್ ರೋಡ್ (ವರ್ತುಲ ರಸ್ತೆ), ಜಕ್ಕೂರು ಅಥವಾ ವಿಮಾನ ನಿಲ್ದಾಣಗಳ ಕಡೆಗೆ ಸಾಗುವ ಹಲವಾರು ಬಸ್ಸುಗಳ ಸೌಲಭ್ಯವಿದ್ದು ಇಲ್ಲಿಗೆ ಸುಲಭವಾಗಿ ಈ ದಾರಿಯ ಮೂಲಕ ತಲುಪಬಹುದಾಗಿದೆ.

ಇದಲ್ಲದೆ ಇಲ್ಲಿಗೆ ಆಟೋ ರಿಕ್ಷಾಗಳು, ಕ್ಯಾಬ್ ಗಳ ಮೂಲಕವೂ ಹೋಗಬಹುದಾಗಿದೆ. ಅಲ್ಲದೆ ಸದ್ದು ಗದ್ದಲವಿಲ್ಲದೆ ಸ್ವಂತ ವಾಹನದಲ್ಲಿ ಜಕ್ಕೂರು ಕೆರೆಗೆ ಹೋಗುವುದು ಒಂದು ಉತ್ತಮ ಆಯ್ಕೆ. ಈ ಸರೋವರವು ಹೆಬ್ಬಾಳದಿಂದ ಸುಮಾರು 10 ಕಿ.ಮೀ, ಜಕ್ಕೂರು ಏರೋಡ್ರೋಮ್‌ನಿಂದ 3 ಕಿ.ಮೀ ಮತ್ತು ಜಕ್ಕೂರು ಪೋಸ್ಟ್ ಆಫೀಸ್‌ನಿಂದ ಒಂದು ಕಿಲೋಮೀಟರ್‌ ಅಂತರದಲ್ಲಿದೆ.

ಜಕ್ಕೂರು ಕೆರೆಯ ಸುತ್ತಮುತ್ತ ಮಾಡಬಹುದಾದ ಚಟುವಟಿಕೆಗಳು

ಜಕ್ಕೂರು ಕೆರೆಯ ಸುತ್ತಮುತ್ತ ಮಾಡಬಹುದಾದ ಚಟುವಟಿಕೆಗಳು

ಜಕ್ಕೂರು ಕೆರೆಯಲ್ಲಿ ಹೆಚ್ಚಿನ ಚಟುವಟಿಕೆ ಮಾಡಲು ಅವಕಾಶವಿಲ್ಲ. ಆದರೆ, ಇಲ್ಲಿ ವಿಶ್ರಾಂತಿ ಮತ್ತು ಮನಃಶಾಂತಿ, ಅಪರೂಪಕ್ಕೆ ವಿಶ್ರಾಂತಿ ಬಯಸುವಂತವರಿಗೆ ಇದು ಅತ್ಯಂತ ಯೋಗ್ಯ ಸ್ಥಳ. ಕೆಲವೊಮ್ಮ ಕೆಲವು ಕ್ಲಬ್ ಗಳು ಛಾಯಾಗ್ರಹಣ ಅಥವಾ ಪಕ್ಷಿ ವೀಕ್ಷಣೆ ಕಾರ್ಯಾಗಾರಗಳನ್ನು ಇಲ್ಲಿ ಆಯೋಜಿಸುತ್ತದೆ. ಇದು ಸಾರ್ವಜನಿಕರಿಗೆ ಮುಕ್ತವಾಗಿರುಗ ಕೆರೆ.

ಕುಟುಂಬದವರು ಅಥವಾ ಸ್ನೇಹಿತರ ಜೊತೆ ಒಂದು ಅಥವಾ ಅರ್ಧ ದಿನ ಪಿಕ್ ನಿಕ್ ಹೋಗಲು ಇಚ್ಚಿಸಿದಲ್ಲಿ ಈ ಜಾಗವು ಸೂಕ್ತವಾದುದಾಗಿದೆ. ಇಲ್ಲಿಗೆ ಹೋಗುವಾಗ ಇದರ ಜೊತೆಗೆ ಜಕ್ಕೂರ್ ಏರೋಡ್ರಮ್ ಗೆ ಕೂಡ ಹೋಗುವುದನ್ನು ಆಯೋಜಿಸಬಹುದು.

ಪಕ್ಷಿ ವೀಕ್ಷಣೆ

ಪಕ್ಷಿ ವೀಕ್ಷಣೆ

ಪ್ರಕೃತಿ ಮತ್ತು ವನ್ಯಜೀವಿ ಪ್ರೇಮಿಗಳುರೆ ಒಂದು ದಿನಕ್ಕಾಗುವಷ್ಟು ತಿಂಡಿಯನ್ನು ಪ್ಯಾಕ್ ಮಾಡಿಕೊಂಡು ಅದರ ಜೊತೆಗೆ ಒಂದು ಜೋಡಿ ಬೈನಾಕ್ಯುಲರ್ ಹಿಡಿದು ಮುಂಜಾನೆ ಜಕ್ಕೂರು ಕೆರೆಗೆ ಹೊರಡಬಹುದಾಗೊದೆ.
ಇಲ್ಲಿ ಹಲವಾರು ಪಕ್ಷಿಗಳು ಸರೋವರದ ಸುತ್ತ ಮತ್ತು ಮರಗಿಡಗಳ ಸುತ್ತ ಹಾರಾಡುವುದನ್ನು ಕಾಣಬಹುದಾಗಿದೆ. ಈ ಸರೋವರದಲ್ಲಿ ಸಾಕಷ್ಟು ಮೀನುಗಳು, ಬಾತುಕೋಳಿಗಳು, ಹೆಬ್ಬಾತುಗಳು, ಪೆಲಿಕನ್ ಗಳು, ಕೊಕ್ಕರೆಗಳು ಸೇರಿದಂತೆ ಅನೇಕ ಸುಂದರವಾದ ಜಲಚರಗಳನ್ನು ಕಾಣಬಹುದಾಗಿದೆ.

ಛಾಯಾಗ್ರಹಣ ಮಾಡಲು ಉತ್ತಮವಾದ ಸ್ಥಳ

ಛಾಯಾಗ್ರಹಣ ಮಾಡಲು ಉತ್ತಮವಾದ ಸ್ಥಳ

ವನ್ಯಜೀವಿ ಮತ್ತು ಪ್ರಕೃತಿಯ ಛಾಯಾಗ್ರಹಣ ಮಾಡಲು ಇದು ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವು ಉತ್ತಮ ಅನುಭವವನ್ನು ನೀಡುತ್ತದೆ . ಇದು ಕಡಿಮೆ ಜನದಟ್ಟಣೆಯ ಇರುವ ಸ್ಥಳವಾಗಿದ್ದು, ಕೆಲವೇ ಕೆಲವು ಸಂದರ್ಶಕರು ಅಥವಾ ಜಾಗಿಂಗ್ ಮಾಡುವವರನ್ನು ಇಲ್ಲಿ ಕಾಣಬಹುದಾಗಿದೆ. ಆದ್ದರಿಂದ ಯಾವುದೇ ತೊಂದರೆಯಿಲ್ಲದೆ ಛಾಯಾಗ್ರಹಣವನ್ನು ಯಾವುದೇ ತೊಂದರೆಯಿಲ್ಲದೇ ಅಭ್ಯಾಸ ಮಾಡಬಹುದು.

ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಇಲ್ಲಿ ವೀಕ್ಷಿಸಿ

ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಇಲ್ಲಿ ವೀಕ್ಷಿಸಿ

ಬೆಳಗ್ಗೆ ಬೇಗ ಏಳುವ ಅಭ್ಯಾಸ ಉಳ್ಳವರಾಗಿದ್ದಲ್ಲಿ, ಮುಂಜಾನೆಯ ಸಮಯದಲ್ಲಿ ಕೆರೆಯ ಕಡೆಗೆ ಪ್ರಯಾಣ ಬೆಳೆಸಬಹುದು. ಮತ್ತು ಅಲ್ಲಿ ಮನಮೋಹಕ ಸೂರ್ಯೋದಯವನ್ನು ಆನಂದಿಸಬಹುದಾಗಿದೆ.

ದಿನ ಪೂರ್ತಿ ಕೆರೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೇಷಿಸುವ ಮೂಲಕ ಆನಂದಿಸಬಹುದಾಗಿದೆ, ಇದರ ಜೊತೆಗೆ ಜಕ್ಕೂರ್ ಏರೋಡ್ರೋಮ್‌ನಲ್ಲಿ ಏರೋಸ್ಪೋರ್ಟ್‌ಗಳಲ್ಲಿ ಪಾಲ್ಗೊಳ್ಳಬಹುದಾಗಿದೆ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದಾಗಿದೆ.

ಲೇಕ್ ಹಾಪಿಂಗ್

ಲೇಕ್ ಹಾಪಿಂಗ್

ಈ ಪ್ರದೇಶದ ಸುತ್ತಮುತ್ತ ಹಲವಾರು ಇತರ ಸರೋವರಗಳನ್ನು ನೋಡಬಹುದು. ಆಸಕ್ತರು, ಈ ಸರೋವರಗಳಿಗೂ ಭೇಟಿ ನೀಡಬಹುದಾಗಿದೆ. ಅವುಗಳಲ್ಲಿ ಹೆಬ್ಬಾಳ ಕೆರೆ , ನಾಗಾವರ ಕೆರೆ , ರಾಚೇನಹಳ್ಳಿ ಕೆರೆಮತ್ತು ಪುಟ್ಟೇನಹಳ್ಳಿ ಕೆರೆ. ಯಲಹಂಕ ಕೆರೆಗಳೂ ಇವೆ.

ಇವುಗಳಲ್ಲಿ ಕೆಲವು ಕೆರೆಗಳು. ಸಂತಾನೋತ್ಪತ್ತಿಯ ನೈಸರ್ಗಿಕ ಅವಧಿಯ ವೇಳೆ, ಪುಟ್ಟೇನಹಳ್ಳಿ ಮತ್ತು ಯಲಹಂಕ ಕೆರೆಗಳಲ್ಲಿ 7000 ಪಕ್ಷಿಗಳನ್ನು ನೋಡಬಹುದಾಗಿದೆ. ಈ ಕೆರೆಯು ಉತ್ತರ ಹಿಮಾಲಯ ಮತ್ತು ಸೈಬೀರಿಯಾದ ಕೆಲವು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಕೆಲವು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ ಕೂಡಾ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X