Search
  • Follow NativePlanet
Share
» »ಪುರಿ ಜಗನ್ನಾಥ ರಥಯಾತ್ರೆ ನಡೇತಿದೆ, ಈ ಬಾರಿಯಂತೂ ಮಿಸ್‌ ಮಾಡ್ಕೋಬೇಡಿ

ಪುರಿ ಜಗನ್ನಾಥ ರಥಯಾತ್ರೆ ನಡೇತಿದೆ, ಈ ಬಾರಿಯಂತೂ ಮಿಸ್‌ ಮಾಡ್ಕೋಬೇಡಿ

ಇಡೀ ಭಾರತದಲ್ಲಿ ಎಲ್ಲೆಲ್ಲಾ ಜಗನ್ನಾಥನ ಮಂದಿರಗಳಿವೆಯೋ ಅಲ್ಲೆಲ್ಲಾ ರಥಯಾತ್ರೆ ನಡೆಯುತ್ತದೆ. ಆದರೆ ಜಗನ್ನಾಥ ಪುರಿಯ ಯಾತ್ರೆ ಮಾತ್ರ ಎಲ್ಲದಕ್ಕಿಂತಲೂ ವಿಶೇಷವಾದುದಾಗಿದೆ.

ಓಡಿಶಾದ ಜಗನ್ನಾಥ ಪುರಿ ಮಂದಿರದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೇಶದ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಜಗನ್ನಾಥ ಪುರಿ ಕೂಡಾ ಒಂದು. ಸಾಂಪ್ರದಾಯಿಕ ಒಡಿಯಾ ಕ್ಯಾಲೆಂಡರ್ ಪ್ರಕಾರ, ರಥಯಾತ್ರೆ ಜುಲೈ 4, 2019 ರಂದು ಪ್ರಾರಂಭವಾಗಿ ಜುಲೈ 15, 2019 ಕ್ಕೆ ಕೊನೆಗೊಳ್ಳುತ್ತದೆ.ಪುರಿಯಲ್ಲಿ ರಥಯಾತ್ರೆ ಪ್ರಾರಂಭವಾಗಿದೆ. 14 ದಿನಗಳ ಕಾಲ ಈ ರಥಯಾತ್ರೆ ಉತ್ಸವ ನಡೆಯುತ್ತದೆ. ಈ ರಥಯಾತ್ರೆಯಯ ಆಶಾಢ ಮಾಸದ ಶುಕ್ಷಪಕ್ಷದ ಸಂದರ್ಭದಲ್ಲಿ ನಡೆಯುತ್ತದೆ. ಇಡೀ ಭಾರತದಲ್ಲಿ ಎಲ್ಲೆಲ್ಲಾ ಜಗನ್ನಾಥನ ಮಂದಿರಗಳಿವೆಯೋ ಅಲ್ಲೆಲ್ಲಾ ರಥಯಾತ್ರೆ ನಡೆಯುತ್ತದೆ. ಆದರೆ ಜಗನ್ನಾಥ ಪುರಿಯ ಯಾತ್ರೆ ಮಾತ್ರ ಎಲ್ಲದಕ್ಕಿಂತಲೂ ವಿಶೇಷವಾದುದಾಗಿದೆ. ಈ ಪ್ರಸಿದ್ಧ ರಥಯಾತ್ರೆಯಲ್ಲಿ ಭಾಗಿಯಾಗಲು ದೇಶದಾದ್ಯಂತ ಭಕ್ತರು ಆಗಮಿಸುತ್ತಾರೆ.

ರಥಯಾತ್ರೆ

ರಥಯಾತ್ರೆ

PC: Sidsahu

ಜಗನ್ನಾಥನನ್ನು ಈ ಸೃಷ್ಠಿಯ ದೇವರು ಎಂದು ನಂಬಲಾಗುತ್ತದೆ. ಜಗನ್ನಾಥ ಭಗವಾನ್ ಶ್ರೀಕೃಷ್ಣನ ಒಂದು ರೂಪವಾಗಿದೆ. ಈ ರಥಯಾತ್ರೆಯನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ದೇವರ ಮೂರ್ತಿಯನ್ನು ಅಲಂಕರಿಸಿ ರಥದಲ್ಲಿ ಕುಳ್ಳಿರಿಸಲಾಗುತ್ತದೆ. ನಂತರ ವಾದ್ಯಗಳು, ಮಂತ್ರಘೋಷಗಳ ಮೂಲಕ ದಪ್ಪಗಿನ ಹಗ್ಗದ ಮೂಲಕ ರಥವನ್ನು ಎಳೆಯಲಾಗುತ್ತದೆ. ಈ ರಥವನ್ನು ಸಾವಿರಾರು ಭಕ್ತರು ಸೇರಿ ಎಳೆಯುತ್ತಾರೆ. ಪರಂಪರೆಯ ಪ್ರಕಾರ ಮೊದಲ ರಥ ಬಲಭದ್ರನದಾಗಿರುತ್ತದೆ. ನಂತರ ಸುಭದ್ರ ಹಾಗೂ ಕೊನೆಗೆ ಜಗನ್ನಾಥನ ರಥವನ್ನು ಎಳೆಯಲಾಗುತ್ತದೆ.

ಪೌರಾಣಿಕ ಮಾನ್ಯತೆಯ ಪ್ರಕಾರ ಗುಡಿಯಾ ಮಂದಿರವನ್ನು ಜಗನ್ನಾಥನ ಚಿಕ್ಕಮ್ಮನ ಮನೆ ಎನ್ನಲಾಗುತ್ತದೆ. ಅಲ್ಲಿಗೆ ರಥಯಾತ್ರೆಯು ಸಂಪೂರ್ಣವಾಗುತ್ತದೆ. ಗುಡಿಯಾ ಮಂದಿರವು ಒಂದು ಪೌರಾಣಿಕ ಸ್ಥಳವಾಗಿದ್ದು, ವಿಶ್ವಕರ್ಮನ ಮೂಲಕ ಮೂರು ದೇವತೆಗಳನ್ನು ಪ್ರತಿಮೆಯನ್ನು ಇಲ್ಲಿ ನಿರ್ಮಿಸಲಾಗಿತ್ತು.

ಜಗನ್ನಾಥ ಮಂದಿರ

ಜಗನ್ನಾಥ ಮಂದಿರ

PC: BOMBMAN

ನೀವು ಪುರಿ ಜಗನ್ನಾಥ ಮಂದಿರಕ್ಕೆ ಯಾವಾಗ ಬೇಕಾದರೂ ಬೇಟಿ ನೀಡಬಹುದು. ಆದರೆ ಈ ಮಂದಿರದ ರಥಯಾತ್ರೆಯ ಸಂದರ್ಭ ಸಾಕಷ್ಟು ನೋಡಲು ಸಿಗುತ್ತದೆ. ಈ ಮಂದಿರವನ್ನು ಆಕರ್ಷಕ ರೂಪದಲ್ಲಿ ಅಲಂಕರಿಸಲಾಗುತ್ತದೆ. ರಾತ್ರಿ ಸಮಯದಲ್ಲಿ ಈ ಮಂದಿರದ ಭವ್ಯತೆಯನ್ನು ನೋಡಲು ಅದ್ಭುತವಾಗಿದೆ. ಈ ಮಂದಿರವನ್ನು 11 ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು.

ಸಾಕ್ಷಿ ಗೋಪಾಲ ಮಂದಿರ

ಸಾಕ್ಷಿ ಗೋಪಾಲ ಮಂದಿರ

ಜಗನ್ನಾಥನ ರಥಯಾತ್ರೆಯ ಸಂದರ್ಭದಲ್ಲಿ ನೀವು ಅಲ್ಲಿನ ಸುತ್ತಲಿನ ಸ್ಥಳಗಳನ್ನು ಭೇಟಿಯಾಗಬಹದು. ಈ ಮಂದಿರವು 20 ಕಿ.ಮೀ ದೂರದಲ್ಲಿರುವ ಸಾಕ್ಷಿ ಗೋಪಾಲ ಮಂದಿರದ ದರ್ಶನ ಮಾಡಬಹುದು. ಪೌರಾಣಿಕ ಮಾನ್ಯತೆಯ ಪ್ರಕಾರ ಇಲ್ಲಿ ಸ್ಥಾಪಿಸಲಾಗಿರುವ ಪ್ರತಿಮೆ ಶ್ರೀ ಕೃಷ್ಣನ ಮೊಮ್ಮಗ ವಜ್ರ ಹಲವಾರು ವರ್ಷಗಳ ಮೊದಲೇ ವೃಂದಾವನದಲ್ಲಿ ಇಟ್ಟಿದ್ದರು. ಆ ನಂತರ ಶ್ರೀಕೃಷ್ಣ ಸ್ವತಃ ವೃಂದಾವನದಿಂದ ಇಲ್ಲಿಗೆ ಬಂದಿದ್ದರು. ಈ ಮಂದಿರದ ಕಟ್ಟಡವು ಜಗನ್ನಾಥ ಪುರಿಯ ಮಂದಿರವನ್ನೇ ಹೋಲುತ್ತದೆ.

ಕೋಣಾರ್ಕ್ ಸೂರ್ಯ ಮಂದಿರ

ಕೋಣಾರ್ಕ್ ಸೂರ್ಯ ಮಂದಿರ

PC- Subhrajyoti07

ಸಾಕ್ಷಿ ಗೋಪಾಲ್ ಮಂದಿರವನ್ನು ಹೊರತುಪಡಿಸಿ ಓಡಿಶಾ ಪ್ರಸಿದ್ಧ ಮಂದಿರವೆಂದರೆ ಕೋಣಾರ್ಕ್ ಸೂರ್ಯ ದೇವಾಲಯ. 13 ನೇ ಶತಮಾನದಲ್ಲಿ ರಾಜ ನರಸಿಂಹ ಈ ಮಂದಿರವನ್ನು ನಿರ್ಮಿಸಿದ್ದ. ಈ ಮಂದಿರವು ತನ್ನ ಅದ್ಭುತ ವಾಸ್ತುಶಿಲ್ಪಗಳಿಂದಾಗಿ ಪ್ರಸಿದ್ಧಿಹೊಂದಿದೆ. ಈ ಮಂದಿರವು ಒಂದು ವಿಶಾಲ ರಥದಂತೆ ಕಾಣಿಸುತ್ತದೆ.

ಚಿಲ್ಕಾ ಕೆರೆ

ಚಿಲ್ಕಾ ಕೆರೆ

PC: Krupasindhu Muduli

ನೀವು ಒಡಿಶಾದ ಪ್ರಸಿದ್ಧ ಚಿಲ್ಕಾ ಕೆರೆಯನ್ನೂ ಭೇಟಿ ನೀಡಬಹುದು. 110 ಕಿ.ಮೀ ವಿಸ್ತೀರ್ಣದಲ್ಲಿರುವ ಚಿಲ್ಕಾ ಕೆರೆಯು ವಿಶ್ವದ ಎರಡನೇ ಅತೀ ದೊಡ್ಡ ಸಮುದ್ರೀಯ ಕೆರೆ ಎನ್ನಲಾಗುತ್ತದೆ. ಈ ಕೆರೆಯು ಅಸಂಖ್ಯಾತ ಜೀವಚರಗಳ ವಾಸಸ್ಥಾನವಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಸಮೀಪದ ವಿಮಾನ ನಿಲ್ದಾಣ ಭುವನೇಶ್ವರ. ಭುವನೇಶ್ವರದಿಂದ ಒಂದು ಗಂಟೆ ಪ್ರಯಾಣಿಸಿದರೆ 56 ಕಿ.ಮೀ. ದೂರದಲ್ಲಿರುವ ಪುರಿಗೆ ತಲುಪಬಹುದು. ಭುವನೇಶ್ವರ ವಿಮಾನ ನಿಲ್ದಾಣದಕ್ಕೆ ಒಡಿಶಾದ ಇತರ ಭಾಗಗಳು ಮತ್ತು ಭಾರತದ ವಿವಿಧ ನಗರಗಳ ಸಂಪರ್ಕವಿದೆ. ವಿಮಾನ ನಿಲ್ದಾಣದಿಂದ ಪುರಿಗೆ ಬಸ್ ಮತ್ತು ಟ್ಯಾಕ್ಸಿಗಳು ಲಭ್ಯವಿದೆ.
ಪುರಿಯಲ್ಲಿ ಒಂದು ರೈಲು ನಿಲ್ದಾಣವಿದೆ. ಪುರಿ ವಿಮಾನ ನಿಲ್ದಾಣದಿಂದ ಒಡಿಸ್ಸಾ ಹಾಗೂ ಕೊಲ್ಕತ್ತಾ, ದೆಹಲಿ, ಗುವಾಹಟಿ, ಬೆಂಗಳೂರು, ಚೆನ್ನೈ ಸಹಿತ ರಾಷ್ಟ್ರದ ವಿವಿಧ ಭಾಗಗಳಿಗೆ ರೈಲು ಸೇವೆಯಿದೆ.
ಉತ್ತಮವಾಗಿ ನಿರ್ವಹಣೆ ಮಾಡಿರುವಂತಹ ರಸ್ತೆಗಳು ಪುರಿಗೆ ಸಂಪರ್ಕ ಕಲ್ಪಿಸುತ್ತದೆ. ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ಬಸ್ ಗಳು ಒಡಿಸ್ಸಾ ಮತ್ತು ಕೊಲ್ಕತ್ತಾದಿಂದ ಲಭ್ಯವಿದೆ. ಪುರಿಯಲ್ಲಿ ಪ್ರಕೃತಿ ವೀಕ್ಷಣೆ ಮತ್ತು ಇತರ ಪ್ರವಾಸಿ ಚಟುವಟಿಕೆಗಳಿಗೆ ಒಡಿಸ್ಸಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಒಟಿಡಿಸಿ)ದ ಡಿಲಕ್ಸ್ ಬಸ್ ಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X