Search
  • Follow NativePlanet
Share
» »ಚಿತ್ರದುರ್ಗ : ಜಡೆ ಗಣೇಶನ ವಿಶೇ‍ಷತೆ ಏನು ಗೊತ್ತಾ? ಏಕೆ ಜಡೆ ಗಣೇಶ ಎನ್ನಲಾಗುತ್ತದೆ ಇಲ್ಲಿ ತಿಳಿಯಿರಿ

ಚಿತ್ರದುರ್ಗ : ಜಡೆ ಗಣೇಶನ ವಿಶೇ‍ಷತೆ ಏನು ಗೊತ್ತಾ? ಏಕೆ ಜಡೆ ಗಣೇಶ ಎನ್ನಲಾಗುತ್ತದೆ ಇಲ್ಲಿ ತಿಳಿಯಿರಿ

ಚಿತ್ರದುರ್ಗದಲ್ಲಿರುವ ಈ ಪ್ರಸಿದ್ಧ ಬಯಲು ಗಣಪತಿಗೆ ಕೂದಲುಗಳಿರುವುದರಿಂದ ಇದನ್ನು ಜಡೆ ಗಣಪತಿ ಎಂದೂ ಕರೆಯುತ್ತಾರೆ.

ಬಯಲು ಗಣಪತಿ ಎಂದ ತಕ್ಷಣ ಹೆಚ್ಚಿನವರಿಗೆ ಹೊಳೆಯುವುದು ಸೌತಡ್ಕದ ಬಯಲು ಗಣೇಶ. ಆದರೆ ನಾವಿಂದು ಇನ್ನೊಂದು ಬಯಲು ಗಣೇಶನ ಬಗ್ಗೆ ತಿಳಿಸಲಿದ್ದೇವೆ. ಇದನ್ನು ಜಡೆ ಗಣೇಶ ಎಂದೂ ಕರೆಯುತ್ತಾರೆ. ಹಾಗೆಯೇ ಮಳೆ ಗಣಪತಿ ಎಂದೂ ಕರೆಯುತ್ತಾರೆ.

 ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

PC: Pradeep DS

ಈ ಜಡೆ ಗಣೇಶನ ದೇವಾಲಯವು ಚಿತ್ರದುರ್ಗಜಿಲ್ಲೆಯ ಹೊಳಲ್ಕೆರೆಯಲ್ಲಿದೆ. ಹೊಳಲ್ಕೆರೆಯು ಚಿತ್ರದುರ್ಗದಿಂದ ಸುಮಾರು ೩೫ ಕಿ.ಮೀ ದೂರದಲ್ಲಿದೆ.

20 ಫೀಟ್ ಎತ್ತರದ ಗಣೇಶ

20 ಫೀಟ್ ಎತ್ತರದ ಗಣೇಶ

PC: Pradeep DS
ಸುಮಾರು 20 ಫೀಟ್ ಎತ್ತರದಲ್ಲಿರುವ ಈ ಗಣೇಶನನ್ನು 1475ನೇ ಇಸವಿಯಲ್ಲಿ ನಿರ್ಮಿಸಲಾಗಿದೆ. ನೂರಾರು ವರ್ಷಗಳ ವರೆಗೆ ಇದು ಯಾವುದೇ ಮಂದಿರವಿಲ್ಲದೆ ಬಯಲಿನಲ್ಲಿತ್ತು. ಆದ್ದರಿಂದ ಇದನ್ನು ಬಯಲು ಗಣೇಶ ಎಂದು ಕರೆಯಲಾಗುತ್ತದೆ.

ಜಡೆ ಗಣಪತಿ

ಜಡೆ ಗಣಪತಿ

PC: Pradeep DS
ಚಿತ್ರದುರ್ಗದಲ್ಲಿರುವ ಈ ಪ್ರಸಿದ್ಧ ಬಯಲು ಗಣಪತಿಗೆ ಕೂದಲುಗಳಿರುವುದರಿಂದ ಇದನ್ನು ಜಡೆ ಗಣಪತಿ ಎಂದೂ ಕರೆಯುತ್ತಾರೆ. ಈ ಊರಿಗೆ ಬರಗಾಲ ಬಂದರೆ ಇಲ್ಲಿನ ಗಣೇಶನಿಗೆ ನೀರಿನ ಅಭಿಷೇಕ ಮಾಡಿದರೆ ಮಳೆಯಾಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ಈ ಗಣೇಶನನ್ನು ಮಳೆ ಗಣಪತಿ ಎಂದೂ ಕರೆಯುತ್ತಾರೆ.

ಮನೋಕಾಮನೆಗಳು ಈಡೇರುತ್ತವೆ

ಮನೋಕಾಮನೆಗಳು ಈಡೇರುತ್ತವೆ

PC: Pradeep DS
ಈ ಬಯಲು ಗಣೇಶನನ್ನು ಯಾರು ಶ್ರದ್ಧಾ, ಭಕ್ತಿಯಿಂದ ಈ ಗಣೇಶನನ್ನು ಪ್ರಾರ್ಥಿಸುತ್ತಾರೋ, ಪೂಜಿಸುತ್ತಾರೋ ಅವರ ಮನೋಕಾಮನೆಗಳು ಈಡೇರುತ್ತವೆ ಎನ್ನಲಾಗುತ್ತದೆ.

ಒಂಟಿ ಕಂಬದ ಮಠ

ಒಂಟಿ ಕಂಬದ ಮಠ

PC: youtube

ಇಲ್ಲಿ ಒಂಟಿ ಕಂಬದ ಮಠವಿದೆ. ಮುರುಗ ಮಠದ ಪ್ರಸಿದ್ಧ ಶಾಖೆ ಇದಾಗಿದೆ. ಈ ಮಠಕ್ಕೆ ಸುಮಾರು 300 ವರ್ಷಗಳ ಇರಿಹಾಸವಿದೆ. ಈ ಮಠದ ಮಂಟಪವು ಬರೀ ಒಂದೇ ಒಂದು ಕಂಬದ ಮೇಲೆ ನಿಂತಿದೆ ಹಾಗಾಗಿ ಒಂಟಿ ಕಂಬದ ಮಠ ಎಂಬ ಹೆಸರು ಪಡೆದಿದೆ. ಈ ಮಂಟಪದ ಮುಂದೆ ಒಂದು ಕಲ್ಯಾಣಿ ಇದೆ.

ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನ, ಹೊರಕೆರೆದೇಪುರ

ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನ, ಹೊರಕೆರೆದೇಪುರ

PC: youtube

ಇದು ವೇಷ್ಣವರ ಪ್ರಮುಖ ಧಾರ್ಮಿಕ ತಾಣವಾಗಿದೆ. ಈ ದೇವಾಲಯವನ್ನು ವಿಜಯನಗರದ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ಗರ್ಭಗುಡಿಯನ್ನು 1348ರಲ್ಲಿ ಡಮ್ಮಿ ವೀರಪ್ಪ ನಾಯಕನು ನಿರ್ಮಿಸಿದನು.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಕರ್ನಾಟಕ ರಾಜ್ಯದಲ್ಲಿ, ಹೊಳಲ್ಕೆರೆ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ನೀವು ದೇಶದ ಇತರ ಪ್ರಮುಖ ನಗರಗಳಿಂದ ಸುಲಭವಾಗಿ ಹೊಳಲ್ಕೆರೆಗೆ ಸಾಮಾನ್ಯ ರೈಲುಗಳನ್ನು ಪಡೆಯಬಹುದು. ಹೊಳಲ್ಕೆರೆ ರೈಲು ನಿಲ್ದಾಣ, ಚಿಕ್ಕಜಜೂರ್ ಜಂಕ್ಷನ್ ರೈಲು ನಿಲ್ದಾಣವು ತುಪ್ಪದಹಳ್ಳಿಗೆ ಹತ್ತಿರದ ರೈಲು ನಿಲ್ದಾಣಗಳಾಗಿವೆ. ಚಿತ್ರದುರ್ಗ ರೈಲು ಮಾರ್ಗ ನಿಲ್ದಾಣ , ಹಲಿಯೂರು ರೈಲು ಮಾರ್ಗ ನಿಲ್ದಾಣ, ಹೊಳಲ್ಕೆರೆ ರೈಲು ಮಾರ್ಗ ನಿಲ್ದಾಣಗಳ ಮೂಲಕ ತಲುಪಬಹುದು.
ಹೊಳಲ್ಕೆರೆಗೆ ವಿಮಾನ ನಿಲ್ದಾಣವಿಲ್ಲ. ಹತ್ತಿರದ ವಿಮಾನ ನಿಲ್ದಾಣವೆಂದರೆ ಬಜ್ಪೆ ವಿಮಾನ ನಿಲ್ದಾಣ, ಅಥವಾ ಹುಬ್ಬಳ್ಳಿ ವಿಮಾನ ನಿಲ್ದಾಣ. ಅಲ್ಲಿಂದ ನಂತರ ಬಸ್ ಅಥವಾ ಖಾಸಗಿ ವಾಹನಗಳ ಮೂಲಕ ಪ್ರಯಾಣಿಸಬೇಕು. ದೇಶದ ಇತರ ಪ್ರಮುಖ ನಗರಗಳಿಂದ ಹೊಳಲ್ಕೆರೆಗೆ ಸಾಮಾನ್ಯ ಬಸ್ಸುಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X