Search
  • Follow NativePlanet
Share
» »"ಅಮೇಜ್" ಮಾಡುವ "ವಿಂಟೇಜ್" ಬೆಂಗಳೂರು

"ಅಮೇಜ್" ಮಾಡುವ "ವಿಂಟೇಜ್" ಬೆಂಗಳೂರು

By Vijay

ಯಾರಿಗಾದರೂ ಸರಿ ಬೆಂಗಳೂರಿನ ಹೆಸರು ಕೇಳುತ್ತಲೆ ಎಲ್ಲಿಲ್ಲದ ರೋಮಾಂಚನ ಉಂಟಾಗುತ್ತದೆ. ಕೆಲಸದ ಅವಕಾಶಗಳಿಗಿರಲಿ, ರಜೆಯ ಮಜೆಗಿರಲಿ, ಪ್ರವಾಸದಾನಂದವಿರಲಿ, ಜಗಮಗಿಸುವ ಮಾಯಾ ಲೋಕವಿರಲಿ, ರುಚಿ ರುಚಿಯಾದ ಬೀದಿ ಬದಿಯ ತಿಂಡಿಗಳಿರಲಿ, ಸ್ನೇಹಿತರೊಂದಿಗೆ ಹಾಯಾಗಿ ಹರಟಲು ಆದರ್ಶ ವಾತಾವರಣವಿರಲಿ ಎಲ್ಲದಕ್ಕೂ "ಎನರ್ಜೆಟಿಕ್ ಬೆಂಗಳೂರು" ನಂಬರ್ ವನ್.

ಮೇಕ್ ಮೈ ಟ್ರಿಪ್ ನಿಂದ ಸ್ಥಳೀಯ ಫ್ಲೈಟ್ ಗಳ ಮೇಲೆ 15% ರಷ್ಟು ಕಡಿತ

ಬೆಂಗಳೂರಿನ ವಾತಾವರಣದಲ್ಲಿರುವ ಅದೇನು ಸೆಳೆತವೊ ಗೊತ್ತಿಲ್ಲ, ಎಲ್ಲರನ್ನೂ ಸಂತುಷ್ಟರನ್ನಾಗಿ ಮಾಡಿ ತನ್ನೆಡೆಗೆ ಸೆಳೆಯುತ್ತದೆ. ಇದಕ್ಕೆ ಪೂರಕವೆಂಬಂತೆ ಬೇರೆ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿದವರು ಬೆಂಗಳೂರನ್ನು ಮನೆಯಿಂದಾಚೆ ಇರುವ ನಮ್ಮ ಮನೆ ಎಂತಲೆ ಬಣ್ಣಿಸುವುದನ್ನು ಕಾಣಬಹುದು.

ಬೆಂಗಳೂರು ಮೊದಲಿನಿಂದಲೂ ಇಡಿ ಭಾರತದಲ್ಲಿ ತನ್ನನ್ನು ತಾನು ವರ್ಣಿಸಿಕೊಳ್ಳದೆ ಆದರೂ ವರ್ಣಿಸಲಸಾಧ್ಯವೆನ್ನುವಂತಹ ಸುಂದರ ಪರಿಸರದಿಂದ ತನ್ನ ಘನತೆ, ಜನಪ್ರೀಯತೆಯನ್ನು ಗೌರವದಿಂದ ಇಂದಿಗೂ ಕಾಪಾಡಿಕೊಂಡು ಬಂದಿದೆ. ಇಂದು ಬೆಂಗಳೂರು ಬೇಸಿಗೆಯಲ್ಲಿ ಸಾಕಷ್ಟು ಕಾಯುತ್ತಿದ್ದರೂ ಹಿಂದೆ 90 ರ ದಶಕದಲ್ಲಿ "ಹವಾ ನಿಯಂತ್ರಿತ ನಗರ" ಎಂದೆ ಕರೆಸಿಕೊಳ್ಳುತ್ತಿತ್ತು.

ವಿಶೇಷ ಲೇಖನ : ಭಾರತದ ಪುರಾತನ ತಾರಾಲಯ

ಇದಕ್ಕೂ ಹಿಂದೆ ಅಂದರೆ 18 ನೆಯ ಹಾಗೂ 19 ನೆಯ ಶತಮಾನಗಳಲ್ಲಿ ಬೆಂಗಳೂರು ಸಾಕಷ್ಟು ಕೆರೆಗಳು, ದಟ್ಟವಾದ ಗಿಡ ಮರಗಳಿಂದ ಕೂಡಿತ್ತು ಹಾಗೂ ಹಿತಕರವಾದ ಸಮತೋಲನದ ವಾತಾವರಣ ಹೊಂದಿತ್ತು. ಮುಂದೆ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉದ್ಯಾನಗಳು ನಿರ್ಮಾಣವಾಗಿ ಈ ಒಂದು ಕಾರಣದಿಂದಲೂ ಸಹ ಬೆಂಗಳೂರು "ಉದ್ಯಾನ ನಗರಿ" ಎಂಬ ಬಿರುದನ್ನೂ ಸಹ ಪಡೆಯಿತು.

ವಿಶೇಷ ಲೇಖನ : ಭಾರತದ ಅತಿ ಪುರಾತನ ಕೋಟೆ

ಇಂದಿಗೂ ಹಳೆಯ ಅಂದರೆ 18 ನೆಯ ಹಾಗೂ 19 ನೆಯ ಶತಮಾನದಲ್ಲಿದ್ದ ಬೆಂಗಳೂರಿನ ಚಿತ್ರಗಳನ್ನು ನೋಡುವುದೆಂದರೆ ಎಲ್ಲ ಬೆಂಗಳೂರಿಗರಿಗೂ ಬಲು ಇಷ್ಟ. ಇದಕ್ಕೆ ಪ್ರಯತ್ನವೆಂಬಂತೆ ಪ್ರಸ್ತುತ ಲೇಖನವು, ಬೆಂಗಳೂರಿನ ಕೆಲವು ಹಳೆಯ ಚಿತ್ರಗಳನ್ನು ಓದುಗರ ಮುಂದೆ ತೆರೆದಿಡುತ್ತದೆ. ಇವುಗಳಲ್ಲಿ ಕೆಲವು ವರ್ಣ/ತೈಲ ಚಿತ್ರಗಳೂ ಸಹ ಒಳಗೊಂಡಿವೆ. ಅಂದಿನ ಬೆಂಗಳೂರನ್ನು ಇಂದಿನ ಈ ಲೇಖನದಲ್ಲಿ ನೋಡಿ ಆನಂದಿಸಿ.

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಏನೀದು ಉಹಿಸಬಲ್ಲಿರಾ? ಹೌದು, ಇದು ಬೆಂಗಳೂರಿನ ಪ್ರತಿಷ್ಠಿತ ಹೆಚ್ ಎ ಎಲ್ ವಿಮಾನ ನಿಲ್ದಾಣ. 1947 ರಲ್ಲಿ ಹಾಲ್ ವಿಮಾನ ನಿಲ್ದಾಣ ಈ ರೀತಿ ಇತ್ತು.

ಚಿತ್ರಕೃಪೆ: Challiyan

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಬೆಂಗಳೂರಿನ ಬ್ಯಾಂಡ್ ಸ್ಟ್ಯಾಂಡ್ ಹಾಗೂ ಸೇಂಟ್ ಮಾರ್ಕ್ಸ್ ಚರ್ಚ್, 1870 ರ ಸಮಯದಲ್ಲಿ.

ಚಿತ್ರಕೃಪೆ: Albert Thomas Watson Penn

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಬೆಂಗಳೂರಿನ ಪ್ರತಿಷ್ಠಿತ ಕಬ್ಬನ್ ಉದ್ಯಾನದ ಆವರಣದಲ್ಲಿರುವ ಅಟ್ಟಾರಾ ಕಚೇರಿ, 1900 ರಲ್ಲಿ.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಬೆಂಗಳೂರಿನಲ್ಲಿರುವ ಸರ್ಕಾರಿ ಸಂಗ್ರಹಾಲಯ 1890 ರ ಸಮಯದಲ್ಲಿ.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಇಂದಿನ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿರುವ (ಕೆ.ಆರ್ ಮಾರ್ಕೆಟ್) ಬೆಂಗಳೂರಿನ ಕೋಟೆ. 1860 ರ ಸಮಯದಲ್ಲಿ.

ಚಿತ್ರಕೃಪೆ: Nicholas Bros

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲೊಂದಾದ ಪ್ರಸಿದ್ಧ ಲಾಲ್ ಬಾಗ್ ಉದ್ಯಾನ 1860 ರ ಸಮಯದಲ್ಲಿ.

ಚಿತ್ರಕೃಪೆ: Nicholas Bros

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಬೆಂಗಳೂರು ಕೋಟೆಯು ನಾಲ್ಕು ಮುಖ್ಯ ದ್ವಾರಗಳನ್ನು ಒಳಗೊಂಡಿತ್ತು ಹಾಗೂ ಇಂದು ಕಾಣಬಹುದಾದ ಬೆಂಗಳೂರು ವೈದ್ಯಕೀಯ ಕಾಲೇಜು, ಕಿಮ್ಸ್ ಆಸ್ಪತ್ರೆ, ಮಕ್ಕಳ ಕೂಟ, ಕೋಟೆ ವೆಂಕಟರಮಣ ದೇವಸ್ಥಾನ, ಮಿಂಟೊ ಹಾಗೂ ವಾಣಿ ವಿಲಾಸ ಆಸ್ಪತ್ರೆ ಕೋಟೆಯ ಒಳಗಡೆ ಬರುತ್ತಿದ್ದವು. ಚಿತ್ರದಲ್ಲಿರುವುದು ಬೆಂಗಳೂರು ಕೋಟೆಯ ಉತ್ತರದ ಪ್ರವೇಶ ದ್ವಾರ. 1792 ರಲ್ಲಿ ಜೇಮ್ಸ್ ಹಂಟರ್ ಎಂಬುಅವವರಿಂದ ಈ ವರ್ಣಚಿತ್ರ ಬಿಡಿಸಲಾಗಿದೆ.

ಚಿತ್ರಕೃಪೆ: wikipedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಬೆಂಗಳೂರು ಕೋಟೆಯ ದಕ್ಷಿಣದ ಪ್ರವೇಶ ದ್ವಾರ. 1792 ರಲ್ಲಿ ಜೇಮ್ಸ್ ಹಂಟರ್ ಎಂಬುಅವವರಿಂದ ಈ ವರ್ಣಚಿತ್ರ ಬಿಡಿಸಲಾಗಿದೆ.

ಚಿತ್ರಕೃಪೆ: wikipedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಬೆಂಗಳೂರು ಕೋಟೆಯ ಮೈಸೂರು ದ್ವಾರ. 1792 ರಲ್ಲಿ ಜೇಮ್ಸ್ ಹಂಟರ್ ಎಂಬುಅವವರಿಂದ ಈ ವರ್ಣಚಿತ್ರ ಬಿಡಿಸಲಾಗಿದೆ.

ಚಿತ್ರಕೃಪೆ: wikipedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಬೆಂಗಳೂರು ಕೋಟೆಯ ದೆಹಲಿ ದ್ವಾರ. 1792 ರಲ್ಲಿ ಜೇಮ್ಸ್ ಹಂಟರ್ ಎಂಬುಅವವರಿಂದ ಈ ವರ್ಣಚಿತ್ರ ಬಿಡಿಸಲಾಗಿದೆ.

ಚಿತ್ರಕೃಪೆ: wikipedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಪ್ರತಿಷ್ಠಿತ ಬೆಂಗಳೂರು ಅರಮನೆ 1890 ದಶಕದಲ್ಲಿ...

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಬೆಂಗಳೂರು ಅರಮನೆಯ ಒಳಾಂಗಣ, ದರ್ಬಾರ್ ಹಾಲ್ ನೋಟ, 1890 ದಶಕದಲ್ಲಿ.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

1890 ರ ಸಮಯದಲ್ಲಿನ ಬೆಂಗಳೂರಿನ ಹೈ ಕೋರ್ಟ್.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

1950 ರ ಸಂದರ್ಭದಲ್ಲಿ ಬೆಂಗಳೂರಿನ ಇಂದಿನ ಪ್ರತಿಷ್ಠಿತ ಎಂ.ಜಿ ರಸ್ತೆಯು ಹೀಗಿತ್ತು.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಬೆಂಗಳೂರು ಡೇರಿ, 1927 ರಲ್ಲಿ. ಅಂದಿನ ಬ್ರಿಟೀಷ್ ವೈಸ್ ರಾಯ್ ಡೇರಿಯ ಮಿಶ್ರ ತಳಿಗಳ ದನಗಳನ್ನು ಪರೀಕ್ಷಿಸುತ್ತಿರುವುದು.

ಚಿತ್ರಕೃಪೆ: Shyamal

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಕ್ವಿಟ್ ಇಂಡಿಯಾ ಚಳುವಳಿ ನಡೆಯುತ್ತಿದ್ದ 1930 ರ ಒಂದು ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿ ನೆರೆದಿದ್ದ ಅಪಾರ ಜನಸ್ತೋಮ.

ಚಿತ್ರಕೃಪೆ: Dore chakravarty

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಬೆಂಗಳೂರಿನ ಲೇಡಿ ಕರ್ಜನ್ ಆಸ್ಪತ್ರೆ, 1916 ರ ಸಂದರ್ಭದಲ್ಲಿ.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಇಂದಿನ ಪ್ರತಿಷ್ಠಿತ ಬೆಂಗಳೂರು ಕ್ಲಬ್. ವಿನ್ಸ್ ಟನ್ ಚರ್ಚಿಲ್ ನಂತಹ ಅತಿರಥ ಮಹಾರಥರು ಇಲ್ಲಿ ವಾಸ್ತವ್ಯ ಹೂಡಿದ್ದ ದಾಖಲೆಗಳಿವೆ. 1902 ರ ಸಂದರ್ಭದ ಚಿತ್ರ. ಅಂದು ಇದು ಯುನೈಟೆಡ್ ಸರ್ವಿಸಸ್ ಕ್ಲಬ್ ಎಂದು ಕರೆಯಲ್ಪಡುತ್ತಿತ್ತು.

ಚಿತ್ರಕೃಪೆ: Macnabb Collection

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

1902 ರಲ್ಲಿ ಬೆಂಗಳೂರಿನ ಅಲಸೂರು ಕೆರೆಯು ಈ ರೀತಿ ಕಂಡು ಬರುತ್ತಿತ್ತು.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಒಮ್ಮೆ ನೆನೆಸಿ ಕೊಳ್ಳಿ ಇಂದಿನ ಕಮರ್ಷಿಯಲ್ ಸ್ಟ್ರೀಟ್ ಅನ್ನು. ಹೇಗಿದೆ ಅಲ್ವಾ? ಇದೆ ಕಮರ್ಷಿಯಲ್ ಸ್ಟ್ರೀಟ್ ರಸ್ತೆಯು 1900 ರಲ್ಲಿ ಈ ರೀತಿ ಇತ್ತೆಂದರೆ ಊಹಿಸಲೂ ಅಸಾಧ್ಯ ಅಲ್ಲವೆ...

ಚಿತ್ರಕೃಪೆ: CH Doveton

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

1900 ರಲ್ಲಿ ಬೆಂಗಳೂರಿನ ಸೇಂಟ್ ಮಾರ್ಕ್ ಚರ್ಚ್.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

1900 ರಲ್ಲಿ ಬೆಂಗಳೂರಿನ ಸೇಂಟ್ ಆಂಡ್ರೀವ್ ಚರ್ಚ್.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು:

ಹಳೆಯ ನಮ್ಮ ಬೆಂಗಳೂರು:

ಎಂ.ಜಿ ರಸ್ತೆ ಬಳಿಯಿರುವ ಮಾಯೊ ಹಾಲ್, 1895 ರ ಸಮಯದಲ್ಲಿ.

ಚಿತ್ರಕೃಪೆ: Shyamal

ಹಳೆಯ ನಮ್ಮ ಬೆಂಗಳೂರು

ಹಳೆಯ ನಮ್ಮ ಬೆಂಗಳೂರು

1895 ರ ಸಮಯದಲ್ಲಿ ಬೆಂಗಳೂರು ಕ್ಯಾಂಟೊನ್ಮೆಂಟ್.

ಚಿತ್ರಕೃಪೆ: Shyamal

ಹಳೆಯ ನಮ್ಮ ಬೆಂಗಳೂರು

ಹಳೆಯ ನಮ್ಮ ಬೆಂಗಳೂರು

1895 ರ ಸಮಯದಲ್ಲಿ ಬೆಂಗಳೂರು ರೆಸಿಡೆನ್ಸಿ. ಇಂದು ಇದು ಪ್ರತಿಷ್ಠಿತ ರಾಜ್ಯಪಾಲರ ಕಾರ್ಯಾಲಯವಾಗಿ ಕಾರ್ಯ ನಿರ್ವಹಿಸುತ್ತಿದೆ.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು

ಹಳೆಯ ನಮ್ಮ ಬೆಂಗಳೂರು

ಬೆಂಗಳೂರಿನ ಪುರಾತನ ದೇವಾಲಯಗಳಲ್ಲೊಂದಾದ ಹಲಸೂರು ಸೋಮೇಶ್ವರ ದೇವಸ್ಥಾನ, 1868 ರಲ್ಲಿ.

ಚಿತ್ರಕೃಪೆ: Henry Dixon

ಹಳೆಯ ನಮ್ಮ ಬೆಂಗಳೂರು

ಹಳೆಯ ನಮ್ಮ ಬೆಂಗಳೂರು

1890 ರ ಸಮಯದಲ್ಲಿ ಹೀಗೊಂದು ಬೆಂಗಳೂರಿನ ಬೀದಿ. ಇದು ಬೆಂಗಳೂರು ಪೇಟೆ ಅರ್ಥಾತ್ ಇಂದಿನ ಅವೆನ್ಯೂ ರಸ್ತೆಯ ಆಸು ಪಾಸಿನ ಒಂದು ಸ್ಥಳ.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು

ಹಳೆಯ ನಮ್ಮ ಬೆಂಗಳೂರು

1895 ರಲ್ಲಿ ಬೆಂಗಳೂರಿನ ಕಬ್ಬನ್ ಉದ್ಯಾನ.

ಚಿತ್ರಕೃಪೆ: wikimedia

ಹಳೆಯ ನಮ್ಮ ಬೆಂಗಳೂರು

ಹಳೆಯ ನಮ್ಮ ಬೆಂಗಳೂರು

ಇಂದಿನ ಬೆಂಗಳೂರು ಅರಮನೆಯು ಅಂದಿನ ಮೈಸೂರು ಮಹಾರಾಜರ ಖಾಸಗಿ ಅರಮನೆಯಾಗಿತ್ತು. ಇಂದಿಗೂ ಮೈಸೂರು ರಾಜವಂಶಸ್ಥರ ಸುಪರ್ದಿಯಲ್ಲಿರುವ ಈ ಅರಮನೆಯು 1894 ರಲ್ಲಿ ದೂರದಿಂದ ನೋಡಿದಾಗ ಈ ರೀತಿ ಕಂಡುಬರುತ್ತಿತ್ತು.

ಚಿತ್ರಕೃಪೆ: wikimedia

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X