Search
  • Follow NativePlanet
Share
» »ಏಕೈಕ ಗರುಡನ ದೇವಾಲಯ ಎಲ್ಲಿದೆ ಗೊತ್ತ?

ಏಕೈಕ ಗರುಡನ ದೇವಾಲಯ ಎಲ್ಲಿದೆ ಗೊತ್ತ?

ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ಜೀವಿ ಹಾಗು ವಸ್ತುವಿನಲ್ಲಿಯುದೈವತ್ವವನ್ನು ಕಾಣುವುದು ಸಾಮಾನ್ಯವಾದುದು. ಗರುಡ ಒಂದು ಜಾತಿಯ ಪಕ್ಷಿ. ಪುರಾಣಗಳಪ್ರಕಾರ ಗರುಡ ಶ್ರೀ ಮಹಾವಿಷ್ಣುವಿನ ವಾಹನ ಎಂದೇ ಗುರುತಿಸಿಕೊಂಡಿದೆ. ಗರುಡನಿಗೂ ಕೂಡಒಂದು ಮ

By Sowmyabhai

ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ಜೀವಿ ಹಾಗು ವಸ್ತುವಿನಲ್ಲಿಯು ದೈವತ್ವವನ್ನುಕಾಣುವುದು ಸಾಮಾನ್ಯವಾದುದು. ಗರುಡ ಒಂದು ಜಾತಿಯ ಪಕ್ಷಿ. ಪುರಾಣಗಳ ಪ್ರಕಾರ ಗರುಡ ಶ್ರೀಮಹಾವಿಷ್ಣುವಿನ ವಾಹನ ಎಂದೇ ಗುರುತಿಸಿಕೊಂಡಿದೆ. ಗರುಡನಿಗೂ ಕೂಡ ಒಂದು ಮಹಿಮಾನ್ವಿತವಾದದೇವಾಲಯವಿದೆ. ಆ ದೇವಾಲಯಕ್ಕೆ ಭೇಟಿ ನೀಡಿದರೆ ಸಂತಾನ ಇಲ್ಲದೇ ಇರುವವರಿಗೆಸಂತಾನವಾಗುತ್ತದೆ ಎಂದು ನಂಬಲಾಗಿದೆ.

ಹಾಗಾಗಿಯೇ ಆ ದೇವಾಲಯಕ್ಕೆ ದಿನನಿತ್ಯವು ನೂರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ.ಅಸಲಿಗೆ ಆ ದೇವಾಲಯ ಇರುವುದು ಬೇರೆ ಎಲ್ಲೂ ಅಲ್ಲ, ನಮ್ಮ ಕರ್ನಾಟಕದ ಕೋಲಾರಜಿಲ್ಲೆಯಲ್ಲಿ. ಕೋಲಾರದ ಮುಳಬಾಗಿಲು ತಾಲೂಕಿನಿಂದ 18 ಕಿ.ಮೀ ದೂರದಲ್ಲಿರುವ ಒಂದುಗ್ರಾಮದಲ್ಲಿ. ಈ ದೇವಾಲಯದಲ್ಲಿರುವ ವಿಗ್ರಹದ ಹಾಗೆ ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲ ಎಂದು ಗುರುತಿಸಲಾಗಿದೆ.

ಹಾಗಾದರೆ ಬನ್ನಿ ಆ ದೇವಾಲಯದ ಮಹಿಮೆಯ ಬಗ್ಗೆ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ.

1.ಇದು ಗರುಡನ ಮಹಿಮಾನ್ವಿತವಾದ ದೇವಾಲಯ

1.ಇದು ಗರುಡನ ಮಹಿಮಾನ್ವಿತವಾದ ದೇವಾಲಯ

ಭಾರತ ದೇಶದ ಪ್ರತಿ ಗ್ರಾಮದಲ್ಲಿಯು ವಿಷ್ಣುವಿನ ದೇವಾಲಯ ಇರುವುದು ಸರ್ವೆ ಸಾಮಾನ್ಯ. ಅದೇವಿಷ್ಣುವಿನ ವಾಹನವಾದ ಗರುಡನಿಗೆ ಇರುವ ದೇವಾಲಯಗಳು ಕೆಲವು ಮಾತ್ರ ಎಂದೇ ಹೇಳಬಹುದು.ಅಂತಹ ದೇವಾಲಯಗಳಲ್ಲಿ ಕರ್ನಾಟಕದಲ್ಲಿನ ದೇವಾಲಯವು ಒಂದು. ಈ ದೇವಾಲಯದ ಬಗ್ಗೆ ಅಷ್ಟುಪ್ರಚಾರ ಇಲ್ಲದೆ ಇರುವ ಕಾರಣದಿಂದ ಅಷ್ಟು ಪ್ರಾಮುಖ್ಯತೆಯನ್ನು ಪಡೆದಿರಲಿಲ್ಲ. ಆದರೆಪ್ರಸ್ತುತ ಉತ್ತಮವಾದ ಸಾರಿಗೆ ಸಂಪರ್ಕ ಹೊಂದುತಿರುವುದರಿಂದ ಇತ್ತೀಚೆಗೆ ಭಕ್ತರ ಸಂಖ್ಯೆ ಕೂಡ ಹೆಚ್ಚಾಗುತ್ತಾ ಇದೆ.

2.ವಿಷ್ಣುವಿನ ವಾಹನ

2.ವಿಷ್ಣುವಿನ ವಾಹನ

ಈ ದೇವಾಲಯದಲ್ಲಿ ಪ್ರಧಾನವಾಗಿ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿರುವುದು ವಿಷ್ಣುವಿನವಾಹನವಾದ ಗರುಡ. ಇಲ್ಲಿರುವ ಹಾಗೆ ಗರುಡ ಮೂರ್ತಿಯು ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿ ಗರುಡನು ಒಂದು ಕಾಲನ್ನು ಕೆಳಗೆ ಮಡಚಿ, ಮತ್ತೊಂದುಕಾಲಿನ ಮೇಲೆ ನಿಂತು, ಎಡ ಭುಜದ ಮೇಲೆ ಲಕ್ಷ್ಮೀ ದೇವಿಯನ್ನು ಹೊಂದಿದ್ದಾನೆ. ಅಷ್ಟೇ ಅಲ್ಲಇಲ್ಲಿನ ವಿಗ್ರಹಕ್ಕೆ ಹಾವುಗಳು ಆಭರಣಗಳಾಗಿವೆ.

3.ಸ್ಥಳ ಪುರಾಣ

3.ಸ್ಥಳ ಪುರಾಣ

ರಾವಣಾಸುರನು ಸೀತಾ ದೇವಿಯನ್ನು ಅಪಹರಿಸುತ್ತಿದ್ದ ಸಮಯದಲ್ಲಿ ಒಂದು ಗರುಡ ಪಕ್ಷಿಯುರಾವಣನ ಜೊತೆ ಪ್ರಸ್ತುತ ದೇವಾಲಯವಿರುವ ಪ್ರದೇಶದಲ್ಲಿ ಹೋರಾಟ ಪ್ರಾರಂಭ ಮಾಡಿ, ಕೊನೆಗೆ ಆಹೋರಾಟದಲ್ಲಿ ಮರಣ ಹೊಂದುತ್ತದೆ. ಗರುಡ ಪಕ್ಷಿಯ ಕೊನೆಯ ಕ್ಷಣದಲ್ಲಿ ರಾಮ... ರಾಮ....ಎಂದು ಕರೆಯಿತಂತೆ. ಈ ವಿಷಯವನ್ನು ದೂರದೃಷ್ಟಿಯಿಂದ ನೋಡಿದ ರಾಮನು ಆ ಗರುಡ ಪಕ್ಷಿಗೆಮೋಕ್ಷವನ್ನು ಪ್ರಸಾದಿಸಿದ್ದಲ್ಲದೆ ಆ ಪ್ರದೇಶವನ್ನು ಪ್ರಮುಖ ಪುಣ್ಯಕ್ಷೇತ್ರವಾಗಿಕಂಗೊಳಿಸಲಿ ಎಂದು ವರವನ್ನು ನೀಡಿದನಂತೆ. ಅಂದಿನಿಂದ ಈ ಪ್ರದೇಶವು ಪುಣ್ಯಕ್ಷೇತ್ರವಾಗಿ ಹೆಸರುವಾಸಿಯಾಯಿತು.

4.ಕೋರಿಕೆಗಳು ನೆರವೇರುತ್ತವೆ

4.ಕೋರಿಕೆಗಳು ನೆರವೇರುತ್ತವೆ

ಸಾಧಾರಣವಾಗಿ ಈ ದೇವಾಲಯಕ್ಕೆ ಸಂತಾನ ಇಲ್ಲದೇ ಇರುವ ದಂಪತಿಗಳು ಹೆಚ್ಚಾಗಿ ಭೇಟಿನೀಡುತ್ತಿರುತ್ತಾರೆ. ಈ ದೇವಾಲಯದಲ್ಲಿ ಪೂಜೆ ಮಾಡಿದವರಿಗೆ ತಪ್ಪದೇ ಸಂತಾನ ಉಂಟಾಗುತ್ತದೆಎಂದು ಕೇವಲ ಸ್ಥಳೀಯರೇ ಅಲ್ಲದೇ, ಸುತ್ತ-ಮುತ್ತಲಿನ ಗ್ರಾಮದವರು ಕೂಡ ನಂಬುತ್ತಾರೆ.

5.ಭಕ್ತಿ-ಭಾವ ಉಕ್ಕಿಸುವ ಹನುಮನ ವಿಗ್ರಹ

5.ಭಕ್ತಿ-ಭಾವ ಉಕ್ಕಿಸುವ ಹನುಮನ ವಿಗ್ರಹ

ಈ ದೇವಾಲಯದ ಅವರಣದಲ್ಲಿ ಭಕ್ತಿ-ಭಾವವನ್ನು ಹೆಚ್ಚಿಸುವ ಹನುಮಂತನ ವಿಗ್ರಹವಿದೆ. ಈವಿಗ್ರಹವು ನೇರವಾಗಿ ಗರುಡ ವಿಗ್ರಹದ ಎದುರಿಗೆ ಇದ್ದು, ಒಂದೊಕ್ಕೊಂದು ನೋಡುತ್ತಿರುವ ಹಾಗೆ ಭಾಸವಾಗುತ್ತದೆ.

6.ಎಲ್ಲಿದೆ?

6.ಎಲ್ಲಿದೆ?

ಈ ಮಹಿಮಾನ್ವಿತವಾದ ದೇವಲಯವು ಕರ್ನಾಟಕ ರಾಜ್ಯದಲ್ಲಿನ ಕೋಲಾರ ಜಿಲ್ಲೆಯ, ಮುಳಬಾಗಿಲುತಾಲೂಕಿನ ಕೊಲದೇವಿ ಎಂಬ ಗ್ರಾಮದಲ್ಲಿ ಇದೆಯಂತೆ. ಸಂತಾನ ಇಲ್ಲದೇ ಇರುವವರು ಒಮ್ಮೆ ಈದೇವಾಲಯಕ್ಕೆ ಭೇಟಿ ನೀಡಿ ಬನ್ನಿ.

7.ಹೇಗೆ ತೆರಳಬೇಕು?

7.ಹೇಗೆ ತೆರಳಬೇಕು?

ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಕೊಲಾದೇವಿ ಗ್ರಾಮಕ್ಕೆ ಸುಮಾರು 2:30ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಬೆಂಗಳೂರಿನಿಂದ ಕೋಲಾರಿಗೆ ಸೇರಿಕೊಳ್ಳುವುದಕ್ಕೆಪ್ರತಿ ನಿತ್ಯವು ಬಸ್ಸುಗಳು ದೊರೆಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X