Search
  • Follow NativePlanet
Share
» »ಈ ಸ್ಥಳಗಳ ಕುರಿತು ಕೇಳಿಲ್ಲ ಆದರೆ ಭೇಟಿ ನೀಡಿದರೆ ಎಂದೂ ಮರೆಯಲ್ಲ

ಈ ಸ್ಥಳಗಳ ಕುರಿತು ಕೇಳಿಲ್ಲ ಆದರೆ ಭೇಟಿ ನೀಡಿದರೆ ಎಂದೂ ಮರೆಯಲ್ಲ

By Vijay

ಪ್ರವಾಸಿ ದೃಷ್ಟಿಯಿಂದ ಗಮನಿಸಿದಾಗ ಭಾರತ ಜಗತ್ತಿನಲ್ಲೆ ಸಾಕಷ್ಟು ಕುತೂಹಲವನ್ನು ಕೆರಳಿಸುವ ರಾಷ್ಟ್ರವಾಗಿ ಕಂಡುಬರುವುದರಲ್ಲಿ ಯಾವುದೆ ಸಂಶಯವಿಲ್ಲ. ಕಾರಣ ಇಲ್ಲಿರುವ ವಿವಿಧತೆಯಲ್ಲಿ ಏಕತೆ, ಅಂದರೆ ಭಾರತದ ಉದ್ದಗಲವನ್ನು ಸಂಚರಿಸಿದಾಗ ಇದು ಏಕ ರೂಪದ ರಾಷ್ಟ್ರವಲ್ಲದ್ದಾಗಿ ಕಂಡುಬಂದರೂ ಸಹ ಏಕತೆಯಿಂದ ಕೂಡಿರುವುದನ್ನು ಗಮನಿಸಬಹುದು.

ವಿಶೇಷ ಲೇಖನ : 10 ರೋಮಾಂಚಕ ಸ್ಥಳಗಳು

ದೇಶದ ವಿವಿಧ ರಾಜ್ಯಗಳು ವೈವಿಧ್ಯಮಯ ಸಂಸ್ಕೃತಿ ಸಂಪ್ರದಾಯದೊಂದಿಗೆ ತಳುಕು ಹಾಕಿಕೊಂಡಿವೆ. ನಾನಾ ಭಾಷೆ, ವಿಧ ವಿಧದ ಉಡುಗೆ ತೊಡುಗೆಗಳು, ವೇಷ ಭೂಷಣ ಇತ್ಯಾದಿಗಳು ದೇಶದ ಒಂದೊಂದು ರಾಜ್ಯಗಳಲ್ಲಿ ಭಿನ್ನವಾಗಿದ್ದು ಯಾವುದೆ ವಿದೇಶಿ ಪ್ರವಾಸಿಗ ಒಂದೊಮ್ಮೆ ಭೇಟಿ ನೀಡಿದರೆ, ಅವನು ಭೇಟಿ ನೀಡುವ ಪ್ರತಿ ರಾಜ್ಯವನ್ನು ಒಂದು ಭಿನ್ನ ದೇಶ ಎಂದು ಅಂದುಕೊಂಡಿರಲೂಬಹುದು.

ವಿಶೇಷ ಲೇಖನ : ಅಪರಿಚಿತವಾದರೂ ಮರೆಯಲಾಗದ ಗಿರಿಧಾಮಗಳು

ಈ ರೀತಿಯಾಗಿ ಸಂಸ್ಕೃತಿ - ಸಂಪ್ರದಾಯಗಳ ವಿಷಯಗಳಲ್ಲಿ ಭಾರತ ಸಾಕಷ್ಟು ಶ್ರೀಮಂತವಾಗಿರುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ. ಅಷ್ಟೆ ಏಕೆ, ಐತಿಹಾಸಿಕವಾಗಿಯೂ ಭಾರತ ಅತ್ಯದ್ಭುತವಾದ ಕಥೆಗಳನ್ನು ಭೇಟಿ ನೀಡುವ ಪ್ರವಾಸಿಗರಿಗೆ ಸ್ಮಾರಕ, ಕೋಟೆ, ಅರಮನೆಗಳ ಮೂಲಕ ಅನಾವರಣಗೊಳಿಸುತ್ತದೆ. ಇನ್ನೂ ಶಿಲ್ಪಕಲೆಯ ಕುರಿತು ವಿವರಣೆ ನೀಡಬೇಕಾದ ಅಗತ್ಯವೆ ಇಲ್ಲ. ಕೋನಾರ್ಕಿನ ಸೂರ್ಯ ಮಂದಿರವಿರಲಿ, ಮಹಾರಾಷ್ಟ್ರದ ಅಜಂತಾ ಎಲ್ಲೋರಾ ಗುಹೆಗಳಿರಲಿ, ಕರ್ನಟಕದ ಬಾದಾಮಿ, ಹಂಪಿ, ಬೇಲೂರುಗಳಿರಲಿ ಇಲ್ಲವೆ ತಮಿಳುನಾಡಿನ ಮಹಾಬಲಿಪುರಂ ಇರಲಿ ಎಲ್ಲವೂ ಅತ್ಯದ್ಭುತವಾದ ಶಿಲ್ಪ ಕಲೆಗೆ ಹೆಸರುವಾಸಿಯಾಗಿವೆ.

ಪ್ರಸ್ತುತ ಲೇಖನವು ಭಾರತದ ಅತಿ ಸುಂದರ, ಮನಮೋಹಕ, ಒಮ್ಮೆಯಾದರೂ ನೋಡಲೇಬೇಕಾದ ಹಾಗೂ ಆಕರ್ಷಕ ಸ್ಥಳಗಳ ಕುರಿತು ತಿಳಿಸುತ್ತದೆ.

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಖಜ್ಜಿಯಾರ್ : "ಹಿಮಾಚಲ ಪ್ರದೇಶದ ಸ್ವಿಟ್ಜರ್ ಲ್ಯಾಂಡ್" ಗೆ ಸ್ವಾಗತ. ಹೌದು, ತನ್ನ ಅಗಾಧ ಹಸಿರು ಬಣ್ಣದ ಪ್ರಕೃತಿ ಸೌಂದರ್ಯದಿಂದಾಗಿ ಹಿಮಾಚಲ ಪ್ರದೇಶದ ಈ ಗಿರಿಧಾಮವು ಜನಪ್ರಿಯವಾಗಿ ಹಾಗೆ ಕರೆಯಲ್ಪಡುತ್ತದೆ. ಹಿಮಾಚಲದ ಡಾಲ್ ಹೌಸಿ ಪಟ್ಟಣದಿಂದ ಸುಮಾರು 24 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಗಿರಿಧಾಮವು ಪಶ್ಚಿಮ ಹಿಮಾಲಯದ ಬುಡದಲ್ಲಿರುವ ಧೌಲಾಧರ್ ಶ್ರೇಣಿಯಲ್ಲಿ ನೆಲೆಸಿದೆ.

ಚಿತ್ರಕೃಪೆ: Sandeep Brar Jat

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಬೆಲಂ ಗುಹೆಗಳು : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಲಿಮಿಗುಂದ್ಲಾ ತಾಲೂಕಿನ ಬೇಲಮ್ ಹಳ್ಳಿಯಲ್ಲಿ ಕಂಡುಬರುವ ಬೇಲಮ್ ಗುಹೆಗಳು ಭಾರತ ಉಪಖಂಡದಲ್ಲೆ ಎರಡನೆಯ ಅತಿ ದೊಡ್ಡದಾದ ಗುಹೆಯಾಗಿದ್ದು, ಅತಿ ಉದ್ದನೆಯ ಗುಹೆ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. ಬೆಂಗಳೂರಿನಿಂದ 320 ಕಿ.ಮೀ ದೂರದಲ್ಲಿರುವ ಈ ಸ್ಥಳವನ್ನು ಅನಂತಪುರ ಮಾರ್ಗವಾಗಿ ಚಲಿಸಿ ಸುಲಭವಾಗಿ ತಲುಪಬಹುದಾಗಿದೆ.

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಚಂದ್ರತಾಲ ಕೆರೆ : ಚಂದ್ರತಾಲ ಎಂಬ ಸರೋವರವು ಹಿಮಾಲಯದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 4,300 ಮೀ ಗಳಷ್ಟು ಎತ್ತರದಲ್ಲಿದೆ. ಹಿಮಾಚಲದ ಲಾಹೌಲ್ - ಸ್ಪಿತಿ ಜಿಲ್ಲೆಯ ಸ್ಪಿತಿ ಭಾಗದಲ್ಲಿ ಈ ಚಂದ್ರಾಕಾರದ ಸರೋವರವಿದೆ. ಆಸಕ್ತಿಕರ ವಿಷಯವೆಂದರೆ ಈ ಸರೋವರಕ್ಕೆ ಯಾವುದೆ ಬಾಹ್ಯ ಮೂಲವಿರಲಾರದೆ ಇದರ ಮೂಲ ಇದರ ತಳಭಾಗವೇ ಆಗಿದೆ. ಚಾರಣಿಗರ ಅತ್ಯಂತ ನೆಚ್ಚಿನ ಸ್ಥಳ ಇದಾಗಿದೆ. ಕುಂಜುಮ್ ರಹದಾರಿಯ ಮೂಲಕ ಕೇವಲ ಕಾಲ್ನಡಿಗೆಯಲ್ಲಿ ಮಾತ್ರವೆ ಈ ಸರೋವರವನ್ನು ತಲುಪಬಹುದಾಗಿದೆ.

ಚಿತ್ರಕೃಪೆ: Shiraz Ritwik

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಚಂದ್ರತಾಲ ಕೆರೆಗೆ ಚಾರಣ ಹೊರಡಲು ಮೇ ನಂತರದಿಂದ ಹಿಡಿದು ಅಕ್ಟೋಬರ್ ಪ್ರಾರಂಭದವರೆಗಿನ ಸಮಯವು ಪ್ರಶಸ್ತವಾಗಿದೆ. ಚಾರಣಿಗರ ಅನುಕೂಲಕ್ಕೆ ಕೆರೆಯ ಸುತ್ತಮುತ್ತಲಿನ ಪ್ರದೇಶವು ತಾತ್ಕಾಲಿಕ ವಸತಿ ಕುಟಿರಗಳನ್ನು ಹಾಕಲು ಆದರ್ಶಮಯವಾಗಿದೆ. ಈ ಸಂದರ್ಭದಲ್ಲಿ ಪ್ರದೇಶದಲ್ಲಿ ಸಾಕಷ್ಟು ಕಾಡು ಹೂ ಗಳು ಅರಳಿ ಮನಸ್ಸಿಗೆ ಇಂಪಾದ ಅನುಭವವನ್ನು ಕರುಣಿಸುತ್ತದೆ.

ಚಿತ್ರಕೃಪೆ: Shiraz Ritwik

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಡೊಡಿತಾಲ ಕೆರೆ : ಉತ್ತರಾಖಂಡ ರಾಜ್ಯದ ಉತ್ತರಕಾಶಿ ಪಟ್ಟಣದ ಬಳಿಯಿರುವ ಡೊಡಿ ತಾಲ ಗಣಪ ವಾಸಿಸುವ ಸ್ಥಳ ಎಂದು ನಂಬಲಾಗಿದೆ. ಇದನ್ನು ಢುಂಡಿ ತಾಲ ಎಂತಲೂ ಸಹ ಕರೆಯಲಾಗುತ್ತದೆ. ಇದನ್ನು ತಲುಪಲು ಕಾಲ್ನಡಿಗೆಯಿಂದ ಮಾತ್ರ ಸಾಧ್ಯ. ಉತ್ತರಕಾಶಿಯಿಂದ ಸಂಗಮಚಟ್ಟಿ ಎಂಬ ಪ್ರದೇಶದವರೆಗೆ ಜೀಪುಗಳು ದೊರೆಯುತ್ತವೆ. ನಂತರ ಇಲ್ಲಿಂದ 21 ಕಿ.ಮೀ ದೂರವಿರುವ ಡೊಡಿತಾಲ ಕೆರೆಗೆ ಆರಾಮದಾಯಕ ಚಾರಣ ಮಾಡುತ್ತ ತೆರಳಬಹುದು. ವಸತಿ ಹೂಡಲು ಹಳ್ಳಿಗಳು ಮಧ್ಯದಲ್ಲಿ ದೊರೆಯುತ್ತವೆ. ಡೊಡಿತಾಲ ಒಂದು ಪರಿಶುದ್ಧ ನೀರಿನ ಸರೋವರವಾಗಿದೆ.

ಚಿತ್ರಕೃಪೆ: jedi mouse

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಜುಕೌ ಕಣಿವೆ : ಜುಕೌ (Dzukou) ಕಣಿವೆಯು ಈಶಾನ್ಯ ಭಾರತದ ರಾಜ್ಯಗಳಾದ ಮಣಿಪುರ ಹಾಗೂ ನಾಗಾಲ್ಯಾಂಡ್ ಗಳ ಗಡಿಯಲ್ಲಿ ಸ್ಥಿತವಿದೆ. ಇದು ತನ್ನಲ್ಲಿ ಹರಿಯುವ ತಂಪು ನೀರಿನ ತೊರೆ, ಅತ್ಯದ್ಭುತ ಪ್ರಕೃತಿ ಸೌಂದರ್ಯ ಹಾಗೂ ನಿರ್ದಿಷ್ಟ ಕಾಲಕ್ಕೆ ಅರಳುವ ಹೂವುಗಳಿಗಾಗಿ ಪ್ರಸಿದ್ಧವಾಗಿದೆ. ಇಲ್ಲಿ ಕಂಡುಬರುವ ಜುಕೌ ಎಂದೇ ಕರೆಯಲ್ಪಡುವ ಒಂದು ಜಾತಿಯ ನೈದಿಲೆ ಹೂವುಗಳು ಇಲ್ಲಿ ಬಿಟ್ಟರೆ ಮತ್ತಿನ್ನೆಲ್ಲೂ ಕಂಡುಬರುವುದಿಲ್ಲ.

ಚಿತ್ರಕೃಪೆ: Mongyamba

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಗುರುದೊಂಗ್ಮಾರ್ ಕೆರೆ : ಹಿಮಾಲಯ ಪರ್ವತ ಶ್ರೇಣಿಗಳಲ್ಲಿರುವ ಈಶಾನ್ಯ ಭಾರತದ ಸಿಕ್ಕಿಂ ರಾಜ್ಯದ ಉತ್ತರ ಭಾಗದಲ್ಲಿ ಸರ್ವ ಧರ್ಮ ಸ್ಥಳ ಎಮ್ಬಲ್ಲಿ ಈ ಶುದ್ಧ ನೀರಿನ ಸರೋವರವಿದೆ. ಭಾರತ - ಚೀನಾ ಗಡಿಯ ದಕ್ಷಿಣಕ್ಕೆ ಸುಮಾರು ಐದು ಕಿಮೀ ದೂರದಲ್ಲಿ ಈ ಸುಂದರ ಕೆರೆಯಿದೆ. ಇದು ಸಮುದ್ರ ಮಟ್ಟದಿಂದ 17,100 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದ್ದು ಜಗತ್ತಿನ ಅತಿ ಎತ್ತರದಲ್ಲಿ ಸ್ಥಿತವಿರುವ ಕೆರೆಗಳ ಪೈಕಿ ಒಂದಾಗಿದೆ. ರಾಜ್ಯದಲ್ಲಿ ಹರಿಯುವ ಪ್ರಮುಖವಾದ ತೀಸ್ತಾ ನದಿಯ ಮೂಲಗಳ ಪೈಕಿ ಇದೂ ಸಹ ಒಂದು. ಲಾಚೆನ್, ಥಂಗು ಪಟ್ಟಣಗಳ ಮೂಲಕ ಈ ಕೆರೆಗೆ ಸುಲಭವಾಗಿ ತಲುಪಬಹುದು. ಚಳಿಗಾಲದ ಸಮಯದಲ್ಲಿ ಈ ಕೆರೆಯು ಸಂಪೂರ್ಣವಾಗಿ ಹಿಮಗಟ್ಟುತ್ತದೆ.

ಚಿತ್ರಕೃಪೆ: soumyajit pramanick

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಕುರಿಂಜಾಲ್ ಶೃಂಗ : ಕರ್ನಾಟಕದ ಕುದುರೆಮುಖದಿಂದ 8 ಕಿ.ಮೀ ದೂರದಲ್ಲಿರುವ ಕುರಿಂಜಲ್ ಶಿಖರ ಶೃಂಗವು ಅತ್ಯದ್ಭುತ ನೋಟವನ್ನು ಕರುಣಿಸುವ, ಟ್ರೆಕ್ ಮಾಡಬಹುದಾದ ಸುಂದರ ತಾಣವಾಗಿದೆ. ಚಾರಣವನ್ನು ಕುದುರೆಮುಖದಿಂದ ಪ್ರಾರಂಭಿಸಬೇಕು ಹಾಗೂ ಸ್ಥಳೀಯ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯ ಬೇಕಾಗಿರುವುದು ಕಡ್ಡಾಯ. ಸುಲಭದಿಂದ ಮಧ್ಯಮ ಗತಿಯ ಚಾರಣ ಮಾರ್ಗ ಇದಾಗಿದ್ದು ಸುಮಾರು ಮೂರು ಘಂಟೆಯಷ್ಟು ಸಮಯ ತೆಗೆದುಕೊಳ್ಳುತ್ತದೆ. ಸಾಕಷ್ಟು ಜಿಗಣೆಗಳಿರುವುದರಿಂದ ಜಾಗರೂಕತೆಯಿಂದ ಟ್ರೆಕ್ ಮಾಡಬೇಕು.

ಚಿತ್ರಕೃಪೆ: karnatakatouristguide

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಲಕ್ಷ್ಮಿ ವಿಲಾಸ ಅರಮನೆ : ಗುಜರಾತ್ ರಾಜ್ಯದ ವಡೋದರಾ (ಬರೋಡಾ) ದಲ್ಲಿರುವ ಅತ್ಯದ್ಭುತ ಈ ಅರಮನೆಯು ಜಗತ್ತಿನ ಅತಿ ದೊಡ್ಡ ಖಾಸಗಿ ಅರಮನೆಗಳ ಪೈಕಿ ಒಂದಾಗಿದೆ. ಮೂರನೆಯ ಸಯ್ಯಾಜಿ ರಾವ್ ಗಾಯಕ್ವಾಡ್ ಅವರಿಂದ ನಿರ್ಮಿಸಲ್ಪಟ್ಟ ಈ ಅರಮನೆಯು ಲಂಡನ್ನಿನ ಬಕ್ಕಿಂಗ್ ಹ್ಯಾಮ್ ಅರಮನೆಗಿಂತಲೂ ನಾಲ್ಕು ಪಟ್ಟು ದೊಡ್ಡದಾಗಿದೆ. ಸಾಕಷ್ಟು ವಿದೇಶಿ ಪ್ರವಸಿಗರು ಈ ದೈತ್ಯ ಅರಮ್ನೆಯನ್ನು ನೋಡಿ ಸಂಭ್ರಮಿಸಲು ಇಲ್ಲಿಗೆ ಬರುತ್ತಿರುತ್ತಾರೆ.

ಚಿತ್ರಕೃಪೆ: Natraj Ramangupta

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ನುಬ್ರಾ ಕಣಿವೆ : ಮೈ ಜುಮ್ಮೆನ್ನಿಸುವ ನುಬ್ರಾ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕಂಡುಬರುವ ಹಲವು ಕಣಿವೆಗಳ ಪೈಕಿ ಒಂದು. ಈ ಕಣಿವೆಯನ್ನು ಜಗತ್ತಿನ ಅತಿ ಎತ್ತರದ ರಸ್ತೆಗಳ ಪೈಕಿ ಒಂದಾಗಿರುವ ಖರದುಂಗ್ ಲಾ ಪಾಸ್ (ರಹದಾರಿ) ನಿಂದ ಸಾಗುವ ಮೂಲಕ ತಲುಪಬಹುದಾಗಿದೆ. ಜಮ್ಮು ಕಾಶ್ಮೀರ ರಾಜ್ಯದ ಲಡಾಖ್ ಜಿಲ್ಲೆಯ ರಾಜಧಾನಿ ಪಟ್ಟಣವಾದ ಲೇಹ್ ನ ಉತ್ತರಕ್ಕೆ ಸುಮಾರು 150 ಕಿ.ಮೀ ದೂರದಲ್ಲಿ ನುಬ್ರಾ ಕಣಿವೆ ನೆಲೆಸಿದೆ.

ಚಿತ್ರಕೃಪೆ: alex hanoko

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಚುಂಬಕ ಬೆಟ್ಟ : ಚುಂಬಕ ಬೆಟ್ಟ ಎಂಬುದು ಒಂದು ವಿಸ್ಮಯಕಾರಿ ತಾಣವಾಗಿದ್ದು, ಜಮ್ಮು ಮತ್ತು ಕಾಶ್ಮೀರ ರಾಜ್ಯದ, ಲಡಾಖ್ ಪ್ರದೇಶದ ಲೇಹ್ ಪಟ್ಟಣದ ಬಳಿ ಸ್ಥಿತವಿದೆ. ಇದರ ವಿಶೇಷತೆ ಎಂದರೆ ರಸ್ತೆಯ ಮೇಲ್ಮುಖವಾಗಿರುವ ದಾರಿಯಲ್ಲಿ ಕಾರನ್ನು ಯಾವುದೆ ಚಾಲಕನಿಲ್ಲದೆ ನಿಲ್ಲಿಸಿದಾಗ ಚುಂಬಕ ಶಕ್ತಿಯಿಂದ ಕಾರು ತನ್ನಿಂತಾನೆ ಮೇಲ್ಮುಖವಾಗಿ ಚಲಿಸುವುದನ್ನು ಕಾಣಬಹುದು. ಇದು ವಿಸ್ಮಯ, ಅಪರೂಪವೆಂಬಂತೆ ಕಂಡರೂ ವೈಜ್ಞಾನಿಕವಾಗಿ ಇದೊಂದು ದೃಷ್ಟಿ ಭ್ರಮಣ ಎಂತಲೂ ಕರೆಯಲಾಗುತ್ತದೆ. ಸತ್ಯಾಂಶ ಏನೇ ಇರಲಿ ಪ್ರವಾಸಿಗರಿಗೆ ಮಾತ್ರ ಇದೊಂದು ಸೋಜಿಗದ ಸಂಗತಿ.

ಚಿತ್ರಕೃಪೆ: Gktambe

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ನುರಾನಂಗ್ ಜಲಪಾತ : ಬಾಂಗ್ ಬಾಂಗ್ ಜಲಪಾತ ಎಮ್ತಲೂ ಕರೆಯಲ್ಪಡುವ ಈ ಜಲಪಾತವು ಅರುಣಾಚಲ ಪ್ರದೇಶ ರಾಜ್ಯದ ತವಾಂಗ್ ನಲ್ಲಿದೆ. ದೇಶದ ಈ ಭಾಗದಲ್ಲಿ ಕಂಡು ಬರುವ ಅತ್ಯದ್ಭುತ ಹಾಗೂ ನಯನ ಮನೋಹರ ಜಲಪಾತ ಇದಾದರೂ ಸಾಕಷ್ಟು ಪ್ರವಾಸಿಗರಿಗೆ ಇನ್ನೂ ಈ ಜಲಪಾತದ ಕುರಿತು ತಿಳದಿಲ್ಲದಿರುವುದು ವಿಸ್ಮಯಕರ ಸಂಗತಿ. ಹಿಂದಿ ಚಿತ್ರ ಕೊಯ್ಲಾದ ಒಂದು ಹಾಡಿನ ಸನ್ನಿವೇಶವನ್ನು ಈ ಜಲಪಾತದ ಬಳಿ ಚಿತ್ರೀಕರಿಸಿ ಪ್ರಪ್ರಥಮವಾಗಿ ಈ ರಾಜ್ಯವನ್ನು ಚಿತ್ರದಲ್ಲಿ ಅನಾವರಣಗೊಳಿಸಲಾಯಿತು.

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಮತ್ತೊಂದು ದಂತ ಕಥೆಯೆಂದರೆ, ಇಲ್ಲಿನ ಮೊಂಪಾ ಸಮುದಾಯದ ನುರಾ ಎಂಬ ಮಹಿಳೆಯು 1962 ರಲ್ಲಿ ನಡೆದ ಭಾರತ - ಚೀನಾ ಯುದ್ಧದಲ್ಲಿ ಭಾರತೀಯ ಯೋಧನಾಗಿದ್ದ ಜಸ್ವಂತ್ ಸಿಂಗ್ ರಾವತ್ ಎಂಬುವವರಿಗೆ ಹೋರಾಡಲು ಸಹಾಯ ಮಾಡಿದ್ದಳು ಹಾಗೂ ಅವಳ ಗೌರವಾರ್ಥವಾಗಿ ಇದಕ್ಕೆ ನುರನಂಗ್ ಎಂಬ ಹೆಸರಿಡಲಾಯಿತು ಎಂದು ಹೇಳಲಾಗುತ್ತದೆ. ಜಸ್ವಂತ್ ಸಿಂಗ್ ರಾವತ್ ಅವರು ಮರಣೋತ್ತರವಾಗಿ ಮಹಾವೀರ ಚಕ್ರವನ್ನು ಪಡೆದಿದ್ದಾರೆ.

ಚಿತ್ರಕೃಪೆ: Dhaval Momaya

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಏಷ್ಯಾದ ಅತಿ ಸ್ವಚ್ಛ ಹಳ್ಳಿ ಎಂಬ ನಾಮಾಂಕಿತಕ್ಕೆ ಪಾತ್ರವಾಗಿರುವ ಮಾವ್ಲಿನ್ನಾಂಗ್ ಎಂಬ ಚಿಕ ಹಾಗೂ ಚೊಕ್ಕದಾಗಿರುವ ಹಳ್ಳಿ ಮೇಘಾಲಯ ರಾಜ್ಯದ ಪೂರ್ವ ಖಾಸಿ ಜಿಲ್ಲೆಯಲ್ಲಿದೆ. ಬೇಸಾಯ ಈ ಹಳ್ಳಿ ಜನರ ಪ್ರಮುಖ ಕಸುಬಾಗಿದ್ದು ಇಲ್ಲಿನ ಸಾಕ್ಷರತಾ ಪ್ರಮಾಣ ಶೇಕಡಾ 100 ರಷ್ಟಿದೆ ಎಂದರೆ ಅಚ್ಚರಿ ಆಗದೆ ಇರಲಾರದು.

ಚಿತ್ರಕೃಪೆ: Travelling Slacker

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಸ್ವಚ್ಛವಾಗಿರುವುದು ಅಲ್ಲದೆ ಇಲ್ಲಿನ ಪ್ರಕೃತಿ ಸೌಂದರ್ಯವು ಭೇಟಿ ನೀಡುವವರ ಹೃದಯ ಕದಿಯುವಲ್ಲಿ ಯಾವುದೇ ಸಂಶಯವಿಲ್ಲ. ರಮಣಿಯವಾದ ವಾತಾವರಣ, ಹಿತಕರವಾದ ಪರಿಸರ, ಶುದ್ಧ ಹಾಗೂ ತಂಪಾದ ನೀರಿನ ಜರಿಗಳು ಈ ಹಳ್ಳಿಯ ಸುಂದರತೆಗೆ ಮತ್ತಷ್ಟು ಮೆರುಗನ್ನು ಕರುಣಿಸುತ್ತವೆ.

ಚಿತ್ರಕೃಪೆ: Ashwin Kumar

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಸಾಮಾನ್ಯವಾಗಿ ಇಲ್ಲಿ ಕಸಗಳನ್ನು ಬಿದಿರಿನಿಂದ ಮಾಡಲಾದ ಬುಟ್ಟಿಗಳಲ್ಲಿ ಶೇಖರಿಸಿ, ನಂತರ ಅದನ್ನು ತೆಗ್ಗುಗಳಲ್ಲಿ ಸಂಗ್ರಹಿಸಿ ಗೊಬ್ಬರವನ್ನಾಗಿ ಮಾಡಿ ಮತ್ತೆ ಉಪಯೋಗಿಸಲಾಗುತ್ತದೆ. ಹಳ್ಳಿಯ ಪ್ರತಿಯೊಬ್ಬನು ಸ್ವಚ್ಛತೆಯ ಬಗ್ಗೆ ಅರಿತಿದ್ದು ಅದನ್ನು ಕಾಪಾಡಿಕೊಂಡು ಹೋಗುತ್ತಿರುವುದು ಈ ಹಳ್ಳಿಯ ಸ್ವಚ್ಛತೆಗೆ ಮತ್ತೊಂದು ಪ್ರಮುಖ ಕಾರಣ.

ಚಿತ್ರಕೃಪೆ: Travelling Slacker

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಸಂಡಕ್ಫು : ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಂಡು ಬರುವ ಅತಿ ಎತ್ತರದ ಶಿಖರ ಶೃಂಗ ಸಂಡಕ್ಫು. ದಾರ್ಜೀಲಿಂಗ್ ಜಿಲ್ಲೆಯಲ್ಲಿರುವ ಸಿಂಗಲಿಲಾ ರಾಷ್ಟ್ರೀಯ ಉದ್ಯಾನದಲ್ಲಿ ಈ ಶಿಖರ ಶೃಂಗ ಕಂಡುಬರುತ್ತದೆ. ಸಂಡಕ್ಫು ಶಿಖರ ಶೃಂಗದ ತಪ್ಪಲಿನಲ್ಲಿ ಚಿಕ್ಕದಾದ ಹಳ್ಳಿಯೊಂದಿದ್ದು ಅಲ್ಲಿ ಕೆಲವು ಹಾಸ್ಟೆಲುಗಳನ್ನು ಕಾಣಬಹುದಾಗಿದೆ. ಮುಖ್ಯ ವಿಷಯವೆಂದರೆ ಇಲ್ಲಿನ ಶೃಂಗದಿಂದ ಪ್ರಪಂಚದ ಅತ್ಯಂತ ಎತ್ತರದ ಶಿಖರಗಳಾದ ಎವರೆಸ್ಟ್, ಕಂಚನಜುಂಗಾ, ಲ್ಹೊತ್ಸೆ (ಚೀನಾ ಪ್ರಾಂತ್ಯ) ಹಾಗೂ ಮಕಾಲು (ಚೀನಾ ಪ್ರಾಂತ್ಯ) ಗಳನ್ನು ಸ್ಪಷ್ಟವಾಗಿ ಕಾಣಬಹುದು. ಕಂಚನಜುಂಗಾದ ಅತ್ಯದ್ಭುತ ನೋಟವನ್ನು ಇಲ್ಲಿಂದ ಸವಿಯಬಹುದಾಗಿದ್ದು ಇದನ್ನು ಮಲಗಿರುವ ಬುದ್ಧನೆಂದು ಕರೆಯಲಾಗುತ್ತದೆ.

ಚಿತ್ರಕೃಪೆ: Anirban Biswas

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಸಂಡಕ್ಫು ಅನ್ನು ಜೀಪು ಹಾಗೂ ಟ್ರೆಕ್ ಮಾಡುತ್ತ ತಲುಪಬಹುದಾಗಿದೆ. ಟ್ರೆಕ್ ಮಾಡಲು ಕೆಲವು ಆಯ್ಕೆಗಳೂ ಸಹ ಪ್ರವಾಸಿಗರಿಗೆ ಲಭ್ಯ. ಟ್ರೆಕ್ಕಿಂಗ್ ಮನೆಭಂಜನ್ ಎಂಬ ಪ್ರದೇಶದಿಂದ ಪ್ರಾರಂಭವಾಗುತ್ತದೆ. ಮನೆಭಂಜನ್ ಅನ್ನು ದಾರ್ಜೀಲಿಂಗ್ ನಿಂದ ತಲುಪಬಹುದಾಗಿದೆ. ಟ್ರೆಕ್ ಮಾಡುವಾಗ ಪರಿಸರದ ಗಿಡ ಮರಗಳು ವಿವಿಧ ಬಣ್ಣಗಳಲ್ಲಿ ಕಂಡುಬಂದು ನಿಬ್ಬೆರಗಾಗುವಂತೆ ಮಾಡುತ್ತದೆ.

ಚಿತ್ರಕೃಪೆ: Bappaditya Dasgupta

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಹಿಮಾಚಲ ಪ್ರದೇಶದ ಸ್ಪಿತಿಯಲ್ಲಿರುವ ಕೀ ಆಶ್ರಮ ನೋಡಲು ಮನಮೋಹಕವಾದ ಬೌದ್ಧ ಮಠವಾಗಿದೆ. ಇದು ಕಿ, ಕೇ ಹಾಗೂ ಕೀ ಆಶ್ರಮ ಅಂತೆಲ್ಲಾ ಕರೆಸಿಕೊಳ್ಳುತ್ತದೆ. ಇದು ಸಮುದ್ರ ಮಟ್ಟದಿಂದ 4116 ಮೀಟರ್‌ ಎತ್ತರದಲ್ಲಿದೆ. ಖಾಜಾದಿಂದ 20 ಕಿ.ಮೀ. ದೂರದಲ್ಲಿದೆ. ಇದು ಸ್ಪಿತಿ ಉಪವಿಭಾಗದ ಕೇಂದ್ರ ಸ್ಥಳವಾಗಿದೆ. ನೇರವಾದ ಕಾರಿಡಾರ್‌ ಹಾಗೂ ಕಡಿಮೆ ಎತ್ತರದ ಕೋಣೆಗಳನ್ನು ಒಳಗೊಂಡ ಅಸಮರ್ಪಕ ಆಕಾರದಲ್ಲಿದೆ ಈ ಆಶ್ರಮ. ಇಲ್ಲಿನ ಪ್ರಾರ್ಥನಾ ಕೊಠಡಿಯೂ ಅಸಮರ್ಪಕವಾಗಿದೆ. ವಿಶಾಲವಾದ ಕಣಿವೆಯಲ್ಲಿ ಎತ್ತರದ ಬೆಟ್ಟವೊಂದರ ಮೇಲೆ ಪ್ರಶಾಂತವಾಗಿ ನಿಂತು ಕಂಗೊಳಿಸುತ್ತದೆ ಈ ಆಶ್ರಮ.

ಚಿತ್ರಕೃಪೆ: nevil zaveri

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಪ್ರವಾಸಿಗರನ್ನು ಕಾಯುತ್ತಿರುವ ಅದ್ಭುತ ಸ್ಥಳಗಳು

ಸಾರ್ ಪಾಸ್ : ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಾರ್ವತಿ ಕಣಿವೆ ಪ್ರದೇಶದಲ್ಲಿದೆ ಸಾರ್ ಪಾಸ್ (ರಹದಾರಿ). ಇದೊಂದು ಸಾಹಸಮಯ ಚಾರಣ ಮಾರ್ಗವಾಗಿದ್ದು ಕಸೋಲ್ ಎಂಬ ಆಧಾರ ಅಥವಾ ಮೂಲ ಸ್ಥಳದಿಂದ ಪ್ರಾರಂಭಗೊಳ್ಳುತ್ತದೆ. ಟ್ರೆಕ್ ಮಾಡುವಾಗ ಹಿಮಚ್ಛಾದಿತ ಪರ್ವತಗಳ ವಿಹಂಗಮ ನೋಟವು ರೋಮಾಂಚನವನ್ನುಂಟು ಮಾಡುತ್ತದೆ. ಬೆಳಿಗ್ಗೆ ಆರು ಘಂಟೆಗೆ ಕಂಡು ಬಂದ ದೃಶ್ಯ.

ಚಿತ್ರಕೃಪೆ: J.M.Garg

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X