Search
  • Follow NativePlanet
Share
» »ತಿಮ್ಮಪ್ಪನ ದರ್ಶನ ಯಾರಿಗೆ ಬೇಕಿಲ್ಲ ಹೇಳಿ, ನೀವೂ ಹೋಗಿ

ತಿಮ್ಮಪ್ಪನ ದರ್ಶನ ಯಾರಿಗೆ ಬೇಕಿಲ್ಲ ಹೇಳಿ, ನೀವೂ ಹೋಗಿ

By Vijay

ಏಳು ಬೆಟ್ಟಗಳ ಒಡೆಯನೆಂದೆ ಜನಜನಿತನಾದ ತಿರುಪತಿ ತಿಮ್ಮಪ್ಪನ ದರ್ಶನ ಯಾರಿಗೆ ತಾನೆ ಬೇಕಿಲ್ಲ ಹೇಳಿ? ಹಿಂದುಗಳ ಪ್ರಮುಖ ದೇವರಲ್ಲಿ ಒಬ್ಬನಾದ ವಿಷ್ಣುವಿನ ಅವತಾರವಾದ ವೆಂಕಟೇಶ್ವರ ಅರ್ಥಾತ ತಿಮ್ಮಪ್ಪ ಭದ್ರವಾಗಿ ನೆಲೆಸಿರುವ ಸ್ಥಳವೆ ಇಂದಿನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿ ತಿರುಮಲ ಕ್ಷೇತ್ರ.

ದಿನನಿತ್ಯ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಬಿಸಿಲಿರಲಿ, ಮಳೆಯಿರಲಿ ಎಲ್ಲವನ್ನು ಲೆಕ್ಕಿಸದೆ ವೆಂಕಟೇಶ್ವರನ ದರ್ಶನ ಕೋರಿ ತಿರುಪತಿಗೆ ದೇಶದ ವಿವಿಧ ಮೂಲೆಗಳಿಂದ ಭೇಟಿ ನೀಡುತ್ತಾರೆ. ಇನ್ನೂ ಪಕ್ಕದ ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡಿನ ರಾಜ್ಯಗಳಿಂದ ನಿರಂತರವಾಗಿ ಭಕ್ತರ ದಂಡು ನಿತ್ಯ ತಿರುಪತಿಗೆ ಹರಿದು ಬರುತ್ತಲೆ ಇರುತ್ತದೆ.

ನಿಮಗಿಷ್ಟವಾಗಬಹುದಾದ : ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ ದರ್ಶನ

ಕೇವಲ ಉತ್ಕೃಷ್ಟ ಧಾರ್ಮಿಕ ತಾಣವಾಗಿ ಮಾತ್ರವಲ್ಲದೆ ತಿರುಪತಿಯು ತನ್ನ ಸುತ್ತಮುತ್ತಲಿರುವ ಹಲವು ರೋಚಕವಾದ ಪ್ರವಾಸಿ ವಿಶೇಷತೆಯುಳ್ಳ ಆಕರ್ಷಣೆಗಳಿಂದಾಗಿಯೂ ಜನರ ಮನದಲ್ಲಿ ನೆಲೆಯೂರುತ್ತದೆ ಎಂಬುದರ ಕುರಿತು ಸಾಕಷ್ಟು ಜನರಿಗೆ ಗೊತ್ತಿಲ್ಲ.

ಈ ಒಂದು ವಿಷಯವನ್ನು ಗಮನದಲ್ಲಿರಿಸಿಕೊಂಡು ತಿರುಪತಿ ಹಾಗೂ ತಿರುಮಲದ ಕುರಿತು ಸಾಕಷ್ಟು ಸಂಗತಿಗಳನ್ನು ಈ ಲೇಖನದ ಮೂಲಕ ತಿಳಿಸಲಾಗಿದೆ. ನೀವು ಈಗಾಗಲೆ ತಿರುಪತಿಗೆ ಭೇಟಿ ನೀಡಿದ್ದರೂ ಸರಿ ಅಥವಾ ಮುಂದೆ ನೀಡಲು ಬಯಸಿದ್ದರೂ ಸರಿ ಈ ವಿಷಯಗಲನ್ನು ತಿಳಿದುಕೊಳ್ಳಿ. ನಿಮಗೆ ಮತ್ತಷ್ಟು ಸಂತಸ ಉಂಟಾಗುವುದು ಖಂಡಿತ.

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ತಿರುಮಲ ವೆಂಕಟೇಶ್ವರ ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿರುವ ತಿರುಪತಿ ಪಟ್ಟಣವನ್ನು ಆಂಧ್ರಪ್ರದೇಶದ "ಆಧ್ಯಾತ್ಮಿಕ ರಾಜಧಾನಿ" ಎಂತಲೂ ಕರೆಯುತ್ತಾರೆ.

ಚಿತ್ರಕೃಪೆ: Karthikeyan Manickam

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

2012-13 ರ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ "ಉತ್ತಮ ಪಾರಂಪರಿಕ ನಗರ" ಎಂಬ ಹೆಗ್ಗಳಿಕೆ ಪಡೆದಿದ್ದ ತಿರುಪತಿ, ಪ್ರಸ್ತುತ ಭಾರತ ಸರ್ಕಾರದ ನೂರು "ಸ್ಮಾರ್ಟ್ ಸಿಟಿ" ಗಳ ಪೈಕಿ ಒಂದಾಗಿರುವುದು ವಿಶೇಷ.

ಚಿತ್ರಕೃಪೆ: mr.donb

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಈ ನಗರಕ್ಕೆ ತಿರುಪತಿ ಎಂಬ ಹೆಸರು ಬರಲು ಮೂಲ ಕಾರಣ ತ್ರಿಪತಿ ಎಂದು ಹೇಳಲಾಗಿದೆ. ಸಂಸ್ಕೃತದಲ್ಲಿ ತ್ರಿ ಎನ್ನುವುದು ಪವಿತ್ರತೆಯ ಸಂಕೇತವಾಗಿದ್ದು ಪವಿತ್ರಬೆಟ್ಟಗಳ ಒಡೆಯ ಎಂಬರ್ಥವನ್ನು ಇದು ನೀಡುತ್ತದೆ.

ಚಿತ್ರಕೃಪೆ: mr.donb

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಅಲ್ಲದೆ ಇನ್ನೊಂದು ಮೂಲದ ಪ್ರಕಾರ, ತಿರು ಪದವನ್ನು ತಮಿಳಿನಲ್ಲಿ ಲಕ್ಷ್ಮಿಗೆ ಬಳಸಲಾಗಿದ್ದು ಅದರಂತೆ ತಿರು ವಿನ ಪತಿ ಅರ್ಥಾತ ಲಕ್ಷ್ಮಿ ಪತಿ ವೆಂಕಟೇಶ್ವರ ನೆಲೆಸಿರುವುದರಿಂದ ಇದಕ್ಕೆ ತಿರುಪತಿ ಎಂದು ಕರೆಯಲಾಗಿದೆ ಎನ್ನಲಾಗಿದೆ.

ಚಿತ್ರಕೃಪೆ: mr.donb

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಏಕೆಂದರೆ ಇಲ್ಲಿ ಹಿಂದಿನ ಅನೇಕ ಶಾಸನಗಳು ದೊರೆತಿದ್ದು ಅವುಗಳಲ್ಲಿ ಬಹುತೇಕ ಶಾಸನಗಳು ತಮಿಳಿನಲ್ಲಿದ್ದರೆ ನಂತರ ತೆಲುಗು ಹಾಗೂ ಕನ್ನಡದ ಶಾಸನಗಳಾಗಿವೆ. ಹೀಗಾಗಿ ಹಿಂದಿನಿಂದಲೂ ಈ ಕ್ಷೇತ್ರ ಕನ್ನಡ ಹಾಗು ತಮಿಳಿಗರ ಪಾಲಿಗೆ ಪವಿತ್ರವಾಗಿತ್ತೆಂದು ಹೇಳಬಹುದಾಗಿದೆ.

ಚಿತ್ರಕೃಪೆ: Os Rúpias

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಇದಕ್ಕೆ ಮುಖ್ಯ ಕಾರಣ, ಇಲ್ಲಿ ದೊರೆತ 10 ,11 ನೇಯ ಶತಮಾನದ ಚೋಳರ ಕಾಲದ ಶಾಸನಗಳು ಹಾಗೂ 15 ನೇಯ ಶತಮಾನದ ವಿಜಯನಗರ ಸಾಮ್ರಾಜ್ಯದ ಶಾಸನಗಳು. ಆ ನಂತರ ತೆಲುಗುವಿನಲ್ಲಿ ತೆಲ್ಲಪಾಕ ಅಣ್ಣಮಾಚಾರ್ಯರಿಂದ ರಚಿಸಲಾದ ವೆಂಕಟೇಶ್ವರನನ್ನು ವರ್ಣಿಸುವ ಸಾಕಷ್ಟು ಗೀತೆಗಳು.

ಚಿತ್ರಕೃಪೆ: R E B E L TM®

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ತಿರುಪತಿಗೆ ಸಂಬಂಧಿಸಿದಂತೆ ಇನ್ನೊಂದು ವಿಷಯವೆಂದರೆ ವರಾಹ ಪುರಾಣದ ಪ್ರಕಾರ, ಹಿಂದೆ ರಾಮನು ಲಂಕಾಯುದ್ಧ ಜಯಿಸಿ ಮತ್ತೆ ಅಯೋಧ್ಯೆಗೆ ಮರಳುವ ಸಂದರ್ಭದಲ್ಲಿ ಸೀತೆ ಹಾಗೂ ಲಕ್ಷ್ಮಣರೊಂದಿಗೆ ತಿರುಪತಿಯ ಮೇಲಿನ ಸ್ತರದಲ್ಲಿರುವ ಅಂದರೆ ತಿರುಮಲದಲ್ಲಿ ಕೆಲ ಕಾಲ ಕಳೆದಿದ್ದನಂತೆ. ತಿರುಪತಿಯಿಂದ ತಿರುಮಲಕ್ಕೆ ಹೋಗುವ ಮಾರ್ಗದಲ್ಲಿ.

ಚಿತ್ರಕೃಪೆ: ShashiBellamkonda

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಹೀಗಾಗಿ ತಿರುಪತಿಯನ್ನು ಅಪ್ಪರ್ ತಿರುಪತಿ ಹಾಗೂ ಲೋವರ್ ತಿರುಪತಿ ಎಂದು ಕರೆಯಲಾಗಿದೆ. ಅಪ್ಪರ್ ತಿರುಪತಿ ಪ್ರಸ್ತುತ ತಿರುಪತಿ ಪಟ್ಟಣದ ಉಪಪ್ರದೇಶವಾಗಿದ್ದು ಬೆಟ್ಟದ ಮೇಲೆ ನೆಲೆಸಿದ್ದು ತಿರುಮಲ ಎಂದು ಕರೆಸಿಕೊಳ್ಳುತ್ತದೆ. ವೆಂಕಟೇಶ್ವರನ ಮುಖ್ಯ ದೇವಾಲಯವಿರುವುದು ತಿರುಮಲದಲ್ಲೆ.

ಚಿತ್ರಕೃಪೆ: Raj

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ತಮಿಳು ಸಂತ ಕವಿಗಳಾದ ಅಳ್ವಾರರಿಂದ ಐದನೇಯ ಶತಮಾನದಲ್ಲೆ ತಿರುಪತಿ ಪಟ್ಟಣವು ಪ್ರವರ್ಧಮಾನಕ್ಕೆ ಬಂದಿತ್ತು. ವೆಂಕಟೇಶ್ವರ ನೆಲೆಸಿರುವ ಪವಿತ್ರ ಪಟ್ಟಣವಾಗಿ ತಿರುಪತಿಯನ್ನು ಅಳ್ವಾರರು ತಮ್ಮ ಕವಿತೆಗಳಲ್ಲಿ ಬಣ್ಣಿಸಿರುವರು. ತಿರುಮಲದಲ್ಲಿ ಭಕ್ತೆಯೊಬ್ಬಳು ಮುಡಿ ಕೊಡುತ್ತಿರುವುದು.

ಚಿತ್ರಕೃಪೆ: jamdirt 631

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ನಂತರ ತಿರುಮಲದಲ್ಲಿ ದೇವಸ್ಥಾನದ ಶಾಸ್ತ್ರಬದ್ಧ ವಿಧಿ ವಿಧಾನಗಳನ್ನು ವೈಷ್ಣವ ಸಂತ ಶ್ರೀ ರಾಮಾನುಜಾಚಾರ್ಯರು 11 ನೇಯ ಶತಮಾನದ ಆಸು ಪಾಸಿನಲ್ಲಿ ನೆರವೇರಿಸಿದರು ಎಂದು ಹೇಳಲಾಗಿದೆ. ಹೀಗಾಗಿ ಪುರಾತನ ಕಾಲದಿಂದಲೂ ಈ ಕ್ಷೇತ್ರವು ವೈಷ್ಣವ ತಾಣವಾಗಿ ಪ್ರಸಿದ್ಧವಾಗಿತ್ತೆನ್ನಲಾಗಿದೆ. ಶ್ರೀ ರಾಮಾನುಜಾಚಾರ್ಯರು.

ಚಿತ್ರಕೃಪೆ: Debanjon

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಇನ್ನೊಂದು ರೋಚಕವಾದ ಸಂಗತಿ ಎಂದರೆ ದಕ್ಷಿಣ ಭಾರತದಲ್ಲಿ ಮುಸ್ಲಿಮರ ಹಾಗೂ ಬ್ರಿಟೀಷರ ಆಕ್ರಮಣ ಏರಿದಾಗ ತಿರುಪತಿ ದೇವಸ್ಥಾನವು ಧಾರ್ಮಿಕ ಗಟ್ಟಿ ಕೇಂದ್ರವಾಗಿ ಭದ್ರವಾಗಿ ನೆಲೆಯೂರಿ ತನ್ನ ವರ್ಚಸ್ಸು ಕಿಂಚಿತ್ತೂ ಕಳೆದುಕೊಳ್ಳಲಿಲ್ಲ.

ಚಿತ್ರಕೃಪೆ: ShashiBellamkonda

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ವೆಂಕಟೇಶ್ವರನ ದೇವಾಲಯವನ್ನು ಭದ್ರವಾಗಿಡುವ ಉದ್ದೇಶದಿಂದ ದಕ್ಷಿಣದ ಮತ್ತೊಂದು ಪ್ರಖ್ಯಾತ ವಿಷ್ಣುವಿನ ತಾಣವಾದ ಶ್ರೀರಂಗಂನಿಂದ ಶ್ರೀ ರಂಗನಾಥಸ್ವಾಮಿಯ ವಿಗ್ರಹವನ್ನು ಇಲ್ಲಿ ತಂದಿಡಲಾಗಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ತಮಿಳುನಾಡಿನ ಶ್ರೀರಂಗಂ ದೇವಸ್ಥಾನ.

ಚಿತ್ರಕೃಪೆ: Ronhjones

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಮೊದ ಮೊದಲು ವೆಂಕಟೇಶ್ವರನ ದೇವಾಲಯದಿಂದಾಗಿ ತಿರುಮಲ ಬೆಟ್ಟ ಪ್ರಖ್ಯಾತವಾಗತೊಡಗಿತು. ಹೆಚ್ಚುತ್ತಿರುವ ಈ ಬೆಟ್ಟದ ಜನಪ್ರೀಯತೆಗನುಗುಣವಾಗಿ ಜನರಿಗೆ ಹೆಚ್ಚಿನ ಅನುಕೂಲ ಉಂಟಾಗಲೆಂದು ಬೆಟ್ಟದ ಕೆಳಸ್ತರದಲ್ಲಿ ಪಟ್ಟಣವೊಂದು ರೂಪಗೊಂಡಿತು. ಅದೆ ಇಂದು ಸುಪ್ರಸಿದ್ಧ ತಿರುಪತಿ ಪಟ್ಟಣವಾಗಿದೆ.

ಚಿತ್ರಕೃಪೆ: Kiran Kollepalli

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಇಂದು ತಿರುಪತಿಯು ತಿರುಮಲಕ್ಕೆ ಭೇಟಿ ನೀಡುವ ಪ್ರವಾಸಿಗರ/ಭಕ್ತಾದಿಗಳ ಮೊದಲ ಭೇಟಿಯ ತಾಣವಾಗಿದ್ದು ತನ್ನಲ್ಲಿರುವ ಗೋವಿಂದರಾಜಸ್ವಾಮಿಯ ದೇವಸ್ಥಾನಕ್ಕಾಗಿಯೂ ಸಹ ಹೆಸರುವಾಸಿಯಾಗಿದೆ. ಗೋವಿಂದರಾಜಸ್ವಾಮಿ ದೇವಸ್ಥಾನ.

ಚಿತ್ರಕೃಪೆ: Arian Zwegers

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಇನ್ನೊಂದು ಕುತೂಹಲಕರ ಸಂಗತಿಯೆಂದರೆ ತಿರುಮಲ-ತಿರುಪತಿ ಘಾಟ್ ರಸ್ತೆಯಲ್ಲಿ ತಿರುಮಲದಿಂದ ಸುಮಾರು 12 ಕಿ.ಮೀ ದೂರದಲ್ಲಿ ಸಾಗಿದರೆ ಎಪಾರ್ಕಿಯನ್ ಅನ್ ಕನ್ಫರ್ಮಿಟಿ (Eparchaean Unconfirmity) ಅಂಶವನ್ನು ಕಾಣಬಹುದು.

ಚಿತ್ರಕೃಪೆ: Nvvchar

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ತಾಂತ್ರಿಕವಾಗಿ ಹೇಳಬೇಕೆಂದರೆ ಎರಡು ಶಿಲಾರಚನೆಗಳ ಮಧ್ಯೆ ಭೂಪದರಗಳು ರೂಪಗೊಳ್ಳಲು ತೆಗೆದುಕೊಳ್ಳಲು ಬೇಕಾದ ಸಮಯ. ಇದು ಕನಿಷ್ಠ 500 ಮಿಲಿಯನ್ ವರ್ಷಗಳಾಗಿರಬೇಕು. ಇಲ್ಲಿ ಎರಡು ರೀತಿಯ ರಚನೆಗಳನ್ನು ನೋಡಬಹುದಾಗಿದ್ದು ಒಂದು ಕಡಪ ಶಿಲಾರಚನೆಗಳಾದರೆ ಇನ್ನೊಂದು ಗ್ರಾನೈಟ್ ಹಾಗೂ ಇತರೆ ಶಿಲಾರಚನೆಗಳು.

ಚಿತ್ರಕೃಪೆ: Nvvchar

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಕಡಪದ ಶಿಲಾರಚನೆಗಳು 1600 ಮಿಲಿಯನ್ ವರ್ಷಗಳಾಗಿದ್ದರೆ, ಇದಕ್ಕೆ ಗಡಿಯಾಗಿರುವ ಇತರೆ ಶಿಲಾರಚನೆಗಳ ಆಯಸ್ಸು 2100 ಮಿಲಿಯನ್ ವರ್ಷಗಳು. ಹೀಗಾಗಿ ಭಾರತ ಭೂವೈಜ್ಞಾನಿಕ ಇಲಾಖೆಯು (ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ) ಇದನ್ನು ಭಾರತದ 26 "ಭೂವೈಜ್ಞಾನಿಕ ಸ್ಮಾರಕಗಳ ಪೈಕಿ" ಒಂದನ್ನಾಗಿ ಪರಿಗಣಿಸಿದೆ.

ಚಿತ್ರಕೃಪೆ: Adityamadhav83

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಈ ಭೂವೈಜ್ಞಾನಿಕ ವಿಸ್ಮಯಕ್ಕೆ ಇನ್ನೊಂದು ಸುಂದರ ಉದಾಹರಣೆ ತಿರುಮಲ ವೆಂಕಟೇಶ್ವರ ದೇವಾಲಯದಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಚಕ್ರತೀರ್ಥದ ಶಿಲಾತೋರಣ. ಶಿಲೆಗಳಿಂದಲೆ ನೈಸರ್ಗಿಕವಗಿ ತೊರಣದ (ಆರ್ಕ್) ಹಾಗೆ ರೂಪಗೊಂಡಿರುವ ಈ ಶಿಲಾ ರಚನೆಯು ನೋಡುಗರನ್ನು ಬೆರಗುಗೊಳಿಸುವುದರಲ್ಲಿ ಸಂದೇಹವಿಲ್ಲ.

ಚಿತ್ರಕೃಪೆ: Tatiraju.rishabh

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

ಹಚ್ಚಹಸಿರಿನಿಂದ ಕೂಡಿದ ಶೇಷಾಚಲ ಬೆಟ್ಟದ ಬುಡದಲ್ಲಿ ನೆಲೆಸಿರುವ ತಿರುಮಲ-ತಿರುಪತಿ ಕ್ಷೇತ್ರವು ತನ್ನಲ್ಲಿರುವ ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನಕ್ಕೂ ಸಹ ಹೆಸರುವಾಸಿಯಾಗಿದೆ. ಶೇಷಾಚಲ ಬೆಟ್ಟದ ನೋಟ ಮೇಲಿನಿಂದ ಹಾಗೂ ಅಲ್ಲಿ ಕಂಡುಬರುವ ತಿರುಪತಿ ತಿರುಮಲ ಕ್ಷೇತ್ರ.

ಚಿತ್ರಕೃಪೆ: swamysk

ತಿರುಪತಿ-ತಿರುಮಲ:

ತಿರುಪತಿ-ತಿರುಮಲ:

353 ಚ.ಕಿ.ಮೀ ವ್ಯಾಪ್ತಿಯಲ್ಲಿ ಹರಡಿರುವ ಈ ರಷ್ಟ್ರೀಯ ಉದ್ಯಾನವು ವೈವಿಧ್ಯಮಯ ಪ್ರಾಣಿ ಪಕ್ಷಿಗಳಿಂದ ಸಂಪದ್ಭರಿತವಾಗಿದ್ದು ಜೈವಿಕ ವನ್ಯಧಾಮವಾಗಿದೆ. ಅಲ್ಲದೆ 1500 ವಿವಿಧ ಬಗೆಯ 174 ಪ್ರಭೇದಗಳ ಸಸ್ಯಗಳನ್ನು ಇಲ್ಲಿ ಕಾಣಬಹುದು. ಕೆಲವು ಇದರಲ್ಲಿ ಬಲು ಅಪರೂಪದ್ದೂ ಸಹ ಆಗಿವೆ.

ಚಿತ್ರಕೃಪೆ: ShashiBellamkonda

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X