Search
  • Follow NativePlanet
Share
» »ಈ ಬಾರಿಯಾದ್ರೂ 750 ಕೆ.ಜಿ ತೂಕದ ಚಿನ್ನದ ಅಂಬಾರಿ ನೋಡ್ಲೇ ಬೇಕು

ಈ ಬಾರಿಯಾದ್ರೂ 750 ಕೆ.ಜಿ ತೂಕದ ಚಿನ್ನದ ಅಂಬಾರಿ ನೋಡ್ಲೇ ಬೇಕು

ಈಗಾಗಲೇ ಮೈಸೂರು ದಸರಾಕ್ಕೆ ಚಾಲನೆ ದೊರೆತಿದೆ. ವಿಶ್ವವಿಶ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವುದೇ ಒಂದು ಖುಷಿ. ಅಲ್ಲಿನ ವೈಭವನ್ನು ಕಣ್ತುಂಬಿಸಿಕೊಳ್ಳಲಿ ದಸರಾಕ್ಕಿಂತ ಒಳ್ಳೆಯ ಸಮಯ ದೊರೆಯಲಿಕ್ಕಿಲ್ಲ. ಮೈಸೂರು ದಸರಾವನ್ನು ನೋಡಿಲ್ಲವೆಂದಾರೆ ಈ ಬಾರಿಯ ಮೈಸೂರು ದಸರಾವನ್ನು ನೋಡಲೇ ಬೇಕು. ಈ ಮೈಸೂರು ದಸರಾದ ವಿಶೇಷತೆ ಏನು ಅನ್ನೋದನ್ನು ನಾವಿಂದು ತಿಳಿಸಲಿದ್ದೇವೆ.

ಮೈಸೂರು ದಸರಾ

ಮೈಸೂರು ದಸರಾ

PC: Abhishek Cumbakonam Desikan

ಮೈಸೂರು ಕರ್ನಾಟಕದ ಅತ್ಯಂತ ಸುಂದರವಾದ ಮತ್ತು ಭೇಟಿ ನೀಡಬೇಕಾದ ತಾಣಗಳಲ್ಲಿ ಒಂದಾಗಿದೆ. ಮೈಸೂರು ದಸರಾವು 10 ದಿನಗಳ ಹಬ್ಬವಾಗಿದೆ. ಈ ಉತ್ಸವದ ಸಮಯದಲ್ಲಿ, ಮೈಸೂರಿಗೆ ದೇಶಾದ್ಯಂತದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವುದು ಒಂದು ಲೈಫ್‌ ಟೈಮ್ ಅನುಭವವಾಗಲಿದೆ .

ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ ! ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ !

ವಿಜಯದಶಮಿ

ವಿಜಯದಶಮಿ

PC: Ashwin Kumar

ದಸರಾ ಹಬ್ಬವು ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಬರುತ್ತದೆ . ಹಬ್ಬದ ಕೊನೆಯ, ಅಂದರೆ, 10 ನೇ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಹೆಚ್ಚಿನ ಉತ್ಸಾಹದಿಂದ ಆಚರಿಸಲಾಗುತ್ತದೆ. ಆದರೆ ಮೈಸೂರು ಬಗ್ಗೆ ಹಲವು ಆಸಕ್ತಿದಾಯಕ ಸಂಗತಿಗಳು ಮೈಸೂರು ಪ್ರವಾಸವನ್ನು ಯೋಜಿಸಲು ನಿಮ್ಮನ್ನು ಒತ್ತಾಯಿಸುತ್ತವೆ. ಅದೇನೆಂಬುವುದನ್ನು ತಿಳಿಯೋಣ .

 408 ನೇ ವಾರ್ಷಿಕೋತ್ಸವ

408 ನೇ ವಾರ್ಷಿಕೋತ್ಸವ

PC:Shijiltv

ಈ ಬಾರಿಯ ಮೈಸೂರು ದಸರಾ ತನ್ನ 408 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಲಿದೆ. ಈ ಭವ್ಯ ಉತ್ಸವದ ಇತಿಹಾಸ ಇನ್ನೂ ಚರ್ಚಾಸ್ಪದ ವಿಷಯವಾಗಿದ್ದರೂ, 1610 ರಲ್ಲಿ ಇದನ್ನು ಪ್ರಾರಂಭಿಸಲಾಗಿದೆ ಎಂದು ಹೇಳಲಾಗುತ್ತದೆ. ಅಂದಿನಿಂದ, ಭಾರತದ ದಕ್ಷಿಣ ಭಾಗದ ಪ್ರಮುಖವಾದ ಉತ್ಸವಗಳಲ್ಲಿ ಇದು ವಿಶೇಷವಾಗಿ ಕರ್ನಾಟಕದ ಪ್ರಮುಖ ಭಾಗವಾಗಿದೆ.

ಮೋದಿ ಕೂಡಾ ಪ್ರಶ್ನೆಗೆ ಉತ್ತರ ಕೇಳಲು ಬಂದಿದ್ರಂತೆ ರಾಯಚೂರಿನ ಈ ತಾಯಿಯ ಬಳಿಗೆಮೋದಿ ಕೂಡಾ ಪ್ರಶ್ನೆಗೆ ಉತ್ತರ ಕೇಳಲು ಬಂದಿದ್ರಂತೆ ರಾಯಚೂರಿನ ಈ ತಾಯಿಯ ಬಳಿಗೆ

ಮಹಿಷಾಸುರನನ್ನು ಸಂಹರಿಸಿದ ದುರ್ಗೆ

ಮಹಿಷಾಸುರನನ್ನು ಸಂಹರಿಸಿದ ದುರ್ಗೆ

ದೇಶದಾದ್ಯಂತದ ಜನರು ಈ ಭವ್ಯವಾದ ಘಟನೆಯ ಭವ್ಯತೆಯನ್ನು ವೀಕ್ಷಿಸುವ ಸಲುವಾಗಿ ಮೈಸೂರುಗೆ ಭೇಟಿ ನೀಡುತ್ತಾರೆ. ಮೈಸೂರು ಎಂಬ ಹೆಸರು ಮಹಿಷಾಸುರನಿಂದ ಬಂದಿದೆ. ದುಷ್ಟ ಕಾರ್ಯಗಳಿಂದ ಜನರನ್ನು ಹಿಂಸಿಸುತ್ತಿದ್ದ ಎಮ್ಮೆ ತಲೆಯ ರಾಕ್ಷಸ ಮಹಿಷಾಸುರ ಇಲ್ಲಿ ದುರ್ಗಾ ದೇವಿಯಿಂದ ಕೊಲ್ಲಲ್ಪಟ್ಟನು. ಹಾಗಾಗಿ ಮೈಸೂರು ಎಂಬ ಹೆಸರು ಬಂದಿದೆ.

ರಾವಣ ವಧೆ

ರಾವಣ ವಧೆ

PC:Rohit MDS

ನೀವು ಉತ್ತರದ ಭಾರತದ ಭಾಗಗಳಲ್ಲಿ ನೆಲೆಸಿದ್ದರೆ ರಾವಣನನ್ನು ಕೊಂದು ದುಷ್ಟ ವಿರುದ್ಧ ಜಯಗಳಿಸಿದ ನಂತರ ರಾಮನ ಗೌರವಾರ್ಥವಾಗಿ ದಸರಾವನ್ನು ಆಚರಿಸಲಾಗುತ್ತದೆ ಎಂಬ ಅಂಶ ನಿಮಗೆ ತಿಳಿದಿರಬಹುದು. ಆದರೆ ದಕ್ಷಿಣ ಭಾರತಕ್ಕೆ ಬಂದಾಗ ಇದು ವಿಭಿನ್ನವಾಗಿದೆ.

ಆರೋಗ್ಯವಂತರಾಗಿರಬೇಕಾದ್ರೆ ಈ ನಾಗರಾಜನಿಗೆ ಉಪ್ಪನ್ನು ಅರ್ಪಿಸಬೇಕಂತೆ!ಆರೋಗ್ಯವಂತರಾಗಿರಬೇಕಾದ್ರೆ ಈ ನಾಗರಾಜನಿಗೆ ಉಪ್ಪನ್ನು ಅರ್ಪಿಸಬೇಕಂತೆ!

ಮಹಿಷಾಸುರ ಮರ್ಧಿನಿ

ಮಹಿಷಾಸುರ ಮರ್ಧಿನಿ

PC: Ramesh NG

ಮೈಸೂರು ದಸರಾವನ್ನು ಮಹಿಷಾಸುರನನ್ನು ವಧಿಸಿದ ದುರ್ಗಾ ದೇವಿಯ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಆದ್ದರಿಂದ, ಈ ಉತ್ಸವದ ಸಂದರ್ಭದಲ್ಲಿ ಪ್ರತಿ ವರ್ಷವೂ ದುರ್ಗಾ ದೇವಿಯ ಮಹಾ ಮೆರವಣಿಗೆ ನಡೆಯುತ್ತದೆ.

ಲಕ್ಷ ಬಲ್ಬ್‌ಗಳು

ಲಕ್ಷ ಬಲ್ಬ್‌ಗಳು

PC:Ashwin Kumar

ಈ ಭವ್ಯ ಉತ್ಸವದ ಸಮಯದಲ್ಲಿ ಮೈಸೂರು ಅರಮನೆಯ ಸೌಂದರ್ಯವನ್ನು ನಿಮಗೆ ಚೆನ್ನಾಗಿ ತಿಳಿದಿರಬಹುದು. ಮೈಸೂರು ದಸರಾ ಸಮಯದಲ್ಲಿ ಇಡೀ ಅರಮನೆಯು ಬಲ್ಬ್‌ಗಳು ಮತ್ತು ದೀಪಗಳಿಂದ ಅಲಂಕರಿಸಲ್ಪಟ್ಟಿರುತ್ತದೆ. ಈ ಅರಮನೆಯನ್ನು ಸುಮಾರು 100,000 ಬಲ್ಬ್‌ಗಳಿಂದ ಅಲಂಕರಿಸಲಾಗುತ್ತದೆ.

ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ

PC: Ashwin Kumar

ಮೈಸೂರು ದಸರಾವು 1610 ರಲ್ಲಿ ಆರಂಭಗೊಂಡಿದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಇದು ಹಲವು ಶತಮಾನಗಳ ಹಿಂದಿನ ಇತಿಹಾಸವನ್ನು ಹೊಂದಿದೆ. ಸ್ಥಳೀಯ ಐತಿಹ್ಯಗಳ ಪ್ರಕಾರ, 14 ಮತ್ತು 15 ನೇ ಶತಮಾನಗಳಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಈ ಉತ್ಸವವು ಅತ್ಯಂತ ಪ್ರಮುಖ ಹಬ್ಬವಾಗಿದೆ ಎಂದು ನಂಬಲಾಗಿದೆ.

750 ಕೆ.ಜಿ ತೂಕದ ಅಂಬಾರಿ

750 ಕೆ.ಜಿ ತೂಕದ ಅಂಬಾರಿ

ಮೈಸೂರು ದಸರಾ ಮೆರವಣಿಗೆಯಲ್ಲಿ ಮುಖ್ಯ ಆಕರ್ಷಣೆಯಾದ ದುರ್ಗಾ ದೇವಿಯ ವಿಗ್ರಹವನ್ನು ಸಂಪೂರ್ಣವಾಗಿ ಚಿನ್ನದಿಂದ ತಯಾರಿಸಲಾಗುತ್ತದೆ ಮತ್ತು ಚಿನ್ನದ ಅಂಬಾರಿ ಸುಮಾರು 750 ಕೆ.ಜಿ ತೂಗುತ್ತದೆ. ಅಲ್ಲದೆ, ಉತ್ಕೃಷ್ಟತೆ ಮತ್ತು ಉತ್ಸವದ ಮಹತ್ವವನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ, ಮೈಸೂರು ದಸರಾ ಉತ್ಸವದ ಸಮಯದಲ್ಲಿ ಮೈಸೂರುಗೆ ಭೇಟಿ ನೀಡುವುದು ಯೋಗ್ಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X