• Follow NativePlanet
Share
» »ನಿಮಗೆ ಗೊತ್ತಿಲ್ಲದೆ ಇರಬಹುದಾದ ಮುಂಬೈಯ ಬಗ್ಗೆ ಆಸಕ್ತಿದಾಯಕ ಸಂಗತಿಗಳು

ನಿಮಗೆ ಗೊತ್ತಿಲ್ಲದೆ ಇರಬಹುದಾದ ಮುಂಬೈಯ ಬಗ್ಗೆ ಆಸಕ್ತಿದಾಯಕ ಸಂಗತಿಗಳು

Posted By: Manjula BalarajTantry

ಭಾರತದ ಪ್ರಮುಖ ಮಹಾನಗರಗಳಲ್ಲಿ ಮುಂಬೈ ಕೂಡಾ ಒಂದು. ಮುಂಬೈಯಲ್ಲಿ ಅತುತ್ತಮವಾದ ಅಂಶವನ್ನೂ ಹೊಂದಿದ್ದು ಇದು ಶತಮಾನಗಳಿಂದಲೂ ಮಹತ್ವವನ್ನು ಪಡೆದುದಾಗಿದೆ. ಅದಕ್ಕೆ ಸರಿಸಮನಾಗಿ ಇಲ್ಲಿನ ಮುಂಬೈಗರೂ ಸರಿಸಾಟಿಯಿಲ್ಲ. ಇಲ್ಲಿ ಯಾವ ವಿಷಯಗಳು ಈ ನಗರವನ್ನು ಮಹತ್ವದ್ದು ಹಾಗೂ ಪ್ರೀತಿಸುವಂತೆ ಮಾಡುತ್ತದೆ ಎನ್ನುವುದಕ್ಕೆ ಕೆಲವು ಆಸಕ್ತಿದಾಯಯ ಸತ್ಯಗಳಿವೆ.

ಭಾರತದ ಅತ್ಯಂತ ಪ್ರೀತಿಪಾತ್ರ ನಗರ ಮುಂಬೈ, ಇದು "ಕನಸುಗಳ ನಗರ" ಮತ್ತು "ನಿದ್ರಿಸದೆ ಇರುವ ನಗರ" ಇಂತಹ ಅನೇಕ ಅಡ್ಡಹೆಸರಿನಿಂದ ಕರೆಯಲ್ಪಡುತ್ತದೆ. ಮಹಾರಾಷ್ಟ್ರದಲ್ಲಿರುವ ಈ ಸುಂದರ ನಗರದ ಬಗ್ಗೆ ಅನೇಕ ಕವನಗಳು ಹಾಡಲ್ಪಟ್ಟಿವೆ ಅನೇಕ ಪುಸ್ತಕಗಳು ಬರೆಯಲ್ಪಟ್ಟಿವೆ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಪ್ರಮುಖ ನಿಯಂತ್ರಣಾ ಕೇಂದ್ರಗಳಲ್ಲಿ ಮುಂಬೈಯು ಒಂದಾಗಿತ್ತು. ಇಲ್ಲಿ ವಸಾಹತು ಶಾಹಿ ಅವಶೇಷಗಳು ಬಹಳಷ್ಟಿವೆ.

ಇದನ್ನೂ ಓದಿ
ಮುಂಬೈನ ಕೆಲವು ಗುರುತಿಸ ಜಾಗಗಳು ಮೆಟ್ರೋ ಪಾಲಿಟನ್ ನಗರ ಅಲ್ಲದೇ ಇನ್ನೂ ಅನೇಕ ಸೌಲಭ್ಯಗಳನ್ನು ಹೊಂದಿದ್ದು, ಇವುಗಳು ಸಾಂಪ್ರದಾಯಿಕ ಗುರುತುಗಳು, ಸ್ಮಾರಕಗಳು, ಇವೆಲ್ಲವನ್ನು ಒಳಗೊಂಡ ಈ ನಗರವು ಶ್ರೀಮಂತವಾದ ಪರಂಪರೆಯನ್ನು ಹೊಂದಿದೆ. ಈ ನಗರದ ವೈಭವಗಳನ್ನು ನೋಡಲು ನೀವು ಮುಂಬೈಯನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿಕೊಡಲೇಬೇಕು. ಈ ಲೇಖನವು ನೀವು ತಿಳಿಯದೇ ಇರಬಹುದಾದ ಕೆಲವು ಆಸಕ್ತಿದಾಯಕ ಕೇಂದ್ರಗಳ ಬಗ್ಗೆ ಮಾಹಿತಿ ನೀಡುತ್ತದೆ.

1) ನಗರದ ಸರಹದ್ದಿನ ಒಳಗಿರುವ ರಾಷ್ಟ್ರೀ ಉದ್ಯಾನವನದ ನೆಲೆಯಾಗಿದೆ


PC: sujit jagdale

ಮುಂಬೈಯ ಆಸಕ್ತಿದಾಯಕ ಸತ್ಯಗಳು

ಉತ್ತರ ಮುಂಬಯಿಯಲ್ಲಿರುವ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಬೃಹತ್ ಸಂರಕ್ಷಣಾ ಕೇಂದ್ರವಾಗಿದ್ದು, ಅದು ಪ್ರಾಣಿಗಳಿಗೆ ಮಾತ್ರವಲ್ಲದೇ ಶ್ರೀಮಂತ ಜೈವಿಕ ಶಕ್ತಿಗಳಿಗೂ ನೆಲೆಯಾಗಿದೆ. ಇಲ್ಲಿ ನೀವು ಮುಳ್ಳುಹಂದಿ, ಚಿರತೆ, ಸಾಂಬರ್ ಜಿಂಕೆ ಮುಂತಾದ ಪ್ರಾಣಿಗಳು, ಬುಲ್ಬುಲ್ಗಳು, ಹಾರ್ನ್ ಬಿಲ್ಗಳು, ಇಗ್ರೇಟ್ಗಳು ಇತ್ಯಾದಿ ಪ್ರಾಣಿಗಳನ್ನು ವೀಕ್ಷಿಸಬಹುದು.

ಇದು ಜಗತ್ತಿನ ಅತ್ಯಂತ ಭೇಟಿಕೊಡುವ ಉದ್ಯಾನವನಗಳಲ್ಲೊಂದಾಗಿದೆ. ಸಸ್ಯ ಮತ್ತು ಪ್ರಾಣಿಗಳ ಹೊರತಾಗಿ, ಕನ್ಹೆರಿ ಗುಹೆಗಳು, 2400 ವರ್ಷ ವಯಸ್ಸಿನ ಕಲ್ಲಿನ ಗುಹೆಗಳಿಂದ ಮಾಡಿದ ಶಿಲ್ಪವನ್ನು ನೀವು ನೋಡಬಹುದು.

2) ಮುಂಬೈ ಯು ಹಿಂದೆ 7 ದ್ವೀಪಗಳ ಒಂದು ಗುಂಪಾಗಿತ್ತು


17 ನೇ ಶತಮಾನದಲ್ಲಿ, ಬಾಂಬೆಯ 7 ದ್ವೀಪಗಳು ವಾಸ್ತವವಾಗಿ ಬ್ರಿಟಿಷ್ ರಾಜ್ ನ ಒಂದು ಭಾಗವಾಗಿರಲಿಲ್ಲ ರಾಜಕುಮಾರಿ ಬ್ರಗನ್ಜಾ ಅವರು ಇಂಗ್ಲೆಂಡಿನ ಚಾರ್ಲ್ಸ್ II ಗೆ ವಿವಾಹವಾದಾಗ ಪೋರ್ಚುಗೀಸ್ ಆಡಳಿತಗಾರರು ಅವರಿಗೆ ನೀಡಿದ ವರದಕ್ಷಿಣೆಯಾಗಿತ್ತು.ನಂತರ 60 ವರ್ಷಗಳ ಅವಧಯಲ್ಲಿ ಅದು 7 ದ್ವೀಪಗಳು 1784 ರಿಂದ 1845 ರ ನಡುವೆ ಈ ದ್ವೀಪಗಳನ್ನು ಒಂದೇ ಭೂಮಿ ವಿಲೀನಗೊಳಿಸಲಾಯಿತು.

3) ಇದರ ಹೆಸರುಗಳ ಮೂಲ


PC: Skye Vidur

ಮುಂಬೈಯ ಆಸಕ್ತಿದಾಯಕ ಸತ್ಯಗಳು

ಈ ಅವಧಿಯಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಂದ ಈ ನಗರಕ್ಕೆ ಹೆಸರು ನೀಡಿದರು ಎನ್ನಲಾಗುತ್ತದೆ. ಬಾಂಬೆ ಹೆಸರು ಪೋರ್ಚುಗೀಸರಿಂದ ಬಂದಿದೆಯೆಂದು ನಂಬಲಾಗಿದೆ, ಇದು "ಬೊಮ್ ಬಾಹಿಯಾ" ಎಂಬ ಶಬ್ದದಿಂದ ಪದವನ್ನು ಪಡೆದುಕೊಂಡಿತು, ಅದು ಸುಂದರವಾದ ಕೊಲ್ಲಿಯೆಂದು ಅರ್ಥೈಸುತ್ತದೆ.ಮುಂಬೈ ಮೂಲದ ನಿವಾಸಿಗಳು ಕೋಲಿ ಸಮುದಾಯದ ದೇವತೆ ಮುಂಬಾ ದವಿಯನ್ನು ಆರಾಧಿಸುತ್ತಿದ್ದರು, ಅದರಿಂದಾಗಿಯೇ ಮುಂಬೈ ಎಂದು ಬಂದಿದೆ.

4) ಅತಿದೊಡ್ಡ ಮತ್ತು ದುಬಾರಿಯಾದ ಸ್ಲಂ


ಮುಂಬೈಯಲ್ಲಿರುವ ಧಾರಾವಿ ಏಷ್ಯಾದಲ್ಲಿಯೇ ಅತೀ ದೊಡ್ಡ ಕೊಳಚೆ (ಸ್ಲಂ) ಪ್ರದೇಶವಾಗಿದೆ. ಮುಂಬೈ ನಲ್ಲಿ ಜೀವನ ನಡೆಸುವುದು ದುಬಾರಿಯದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ವಿಷಯವು ಸ್ಲಂ ಪ್ರದೇಶಗಳಿಗೂ ಅನ್ವಯಿಸುತ್ತದೆ. ಕೊಳಚೆ ಪ್ರದೇಶವಾದ ಧಾರಾವಿಯಲ್ಲಿ ಮನೆ ಕಟ್ಟ ಬೇಕೆಂದರೆ ಕನಿಷ್ಟ 3 ಲಕ್ಷ ರೂಪಾಯಿಗಳು ಬೇಕಾಗುವುದು.!

5) ಎಲ್ಲ ಬದಲಾವಣೆಗಳನ್ನೂ ಮೊದಲು ಮುಂಬೈ ಪಡೆಯುತ್ತದೆ


ಬ್ರಿಟಿಷ್ ರಾಜ್ ನ ಪ್ರಧಾನ ಕಛೇರಿಯಾಗಿರುವ ಮುಂಬಯಿ, ಪ್ರತಿಯೊಂದು ಹೊಸ ಅಭಿವೃದ್ಧಿನ್ನೂ ಮೊದಲನೆಯದಾಗಿ ಪಡೆಯುವ ಅವಕಾಶವನ್ನು ಹೊಂದಿತ್ತು ಭಾರತದ ಮೊದಲ ಪಂಚತಾರಾ ಹೋಟೆಲನ್ನು 1903 ರಲ್ಲಿ ಇಲ್ಲಿ ಪ್ರಾರಂಭಿಸಲಾಯಿತು.

ಅಲ್ಲದೆ ಭಾರತದ ಮೊದಲ ವಿಮಾನನಿಲ್ದಾಣವಾದ ಜುಹೂ ಎರೋಡ್ರಮ್ ಅನ್ನು ಇಲ್ಲಿ 1928ರಲ್ಲಿ ಇಲ್ಲಿ ನಿರ್ಮಾಣ ಮಾಡಲಾಯಿತು. ಇವುಗಳಲ್ಲದೆ, ರೈಲ್ವೇ ನಿಲ್ದಾಣ, ವಿದ್ಯುತ್ ರೈಲು ವ್ಯವಸ್ಥೆ, ಸಾರ್ವಜನಿಕ ಬಸ್ ಸೇವೆಗಳು, ಇವುಗಳನ್ನು ಮೊದಲಿಗೆ ಮುಂಬೈಯಲ್ಲಿ ಸ್ಥಾಪಿಸಲಾಯಿತು.

PC: Anoop Ravi

ಮುಂಬೈಯ ಆಸಕ್ತಿದಾಯಕ ಸತ್ಯಗಳು

ಡಬ್ಬಾವಾಲಗಳ ಒಂದು ವ್ಯವಸ್ಥೆಯನ್ನು ಕೇವಲ ಮುಂಬೈ ನಗರದಲ್ಲಿ ಮಾತ್ರ ಕಾಣಬಹುದಾಗಿದೆ. ಇದೇನಂದರೆ ಮಧ್ಯಾಹ್ನದ ಊಟದ ಸರಬರಾಜು ಮಾಡುವ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯು ಸುಸಜ್ಜಿತವಾಗಿ ಇಲ್ಲಿ ನಡೆಸಲಾಗುತ್ತದೆ. ಈ ಸರಬರಾಜಿನ ವ್ಯವಸ್ಥೆಯನ್ನು ಎಷ್ಟು ಕಟ್ಟು ನಿಟ್ಟಿನಿಂದ ನಿರ್ವಹಿಸಾಗುತ್ತದೆ ಎಂದರೆ ಒಂದೇ ಒಂದು ಊಟದ ಸರಬರಾಜು ಈವರೆಗೂ ತಪ್ಪಿಸಿದ್ದಿಲ್ಲ.

ಇಲ್ಲಿ ಕೇಸ್ ಸ್ಟಡೀಸ್ ಮಾಡಲ್ಪಟ್ಟಿದ್ದು ಜಗತ್ತಿಗೆ ಬಹಳ ಪ್ರಸಿದ್ಧವಾಗಿದೆ ಮತ್ತು ಫೋರ್ಬ್ಸ್ ನಿಯತಕಾಲಿಕೆಯು ವಿಶ್ವದ ಅತ್ಯುತ್ತಮ ನಿರ್ವಹಣಾ ಪೂರೈಕೆ ಸರಪಳಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more